Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 11ರ ದಿನಭವಿಷ್ಯ

ಮನೆಯಿಂದ ಹೊರಗೆ ಹೊರಡುವಾಗ ಹಸಿರು ಬಣ್ಣದ ಕರ್ಚೀಫ್ ಅಳತೆಯ ಬಟ್ಟೆಯೊಂದನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ನಿರ್ದಿಷ್ಟ ವಿಷಯ, ಪ್ರಾಜೆಕ್ಟ್, ವ್ಯಾಪಾರ- ವ್ಯವಹಾರದ ವಿಚಾರದ ಬಗ್ಗೆ ನಿಮಗೆ ಆತಂಕ ಕಾಡುತ್ತಾ ಇದ್ದಲ್ಲಿ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಬೇಕಾದ ಕಾಂಟ್ಯಾಕ್ಟ್ ನಿಮಗೆ ಸಿಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 11ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Feb 11, 2026 | 3:24 AM

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 11ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮಹಿಳೆಯರಿಗೆ ತವರು ಮನೆಯಲ್ಲಿನ ಕೆಲವು ಬೆಳವಣಿಗೆಗಳಿಂದ ಸಂತೋಷ ಆಗಲಿದೆ. ಸಮಾರಂಭಕ್ಕೆ ನಿಮ್ಮ ಉಪಸ್ಥಿತಿಯನ್ನು ಖಾತ್ರಿ ಪಡಿಸಬೇಕು ಎಂದು ಸ್ನೇಹಿತರು- ಸಂಬಂಧಿಗಳು ಒತ್ತಡ ಹಾಕಲಿದ್ದು, ಒಂದಲ್ಲಾ ಒಂದು ಕೆಲಸದ ಕಾರಣಕ್ಕೆ ಈ ಬಗ್ಗೆ ಏನೂ ಹೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಹೊಸ ಬಟ್ಟೆ, ಒಡವೆಗಳನ್ನು ಖರೀದಿ ಮಾಡುವುದಕ್ಕೆ ಹೆಚ್ಚು ಹಣವನ್ನು ಖರ್ಚು ಮಾಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚು ಮಾಡಲಿದ್ದೀರಿ. ನಿಮ್ಮದೇ ಇಬ್ಬರು ಸ್ನೇಹಿತರ ಮಧ್ಯೆ ಏರ್ಪಟ್ಟ ಮನಸ್ತಾಪ ದೂರ ಮಾಡುವುದಕ್ಕೆ ರಾಜೀ- ಸಂಧಾನಕ್ಕೆ ಪ್ರಯತ್ನ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಕುಟುಂಬ ಸದಸ್ಯರ ಜೊತೆಗೆ ಹತ್ತಿರದ ಸ್ಥಳಕ್ಕೆ ಕಿರುಪ್ರವಾಸವಾದರೂ ಮಾಡುವ ಯೋಗ ಇದ್ದು, ಹೋಟೆಲ್- ರೆಸ್ಟೋರೆಂಟ್ ಅಥವಾ ರೆಸಾರ್ಟ್ ಗೆ ಹೋಗುವ ಮತ್ತು ಒಟ್ಟಿಗೆ ಸಮಯ ಕಳೆಯುವ ಅವಕಾಶ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ತಂದೆ- ತಾಯಿಯ ಆರೋಗ್ಯದ ವಿಚಾರಕ್ಕೆ ಆತಂಕಕ್ಕೆ ಗುರಿ ಆಗಬೇಕಾಗುತ್ತದೆ. ಕೆಲವು ಔಷಧ- ಮಾತ್ರೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ಕ್ರಮ ತಪ್ಪುವುದರಿಂದ ಅಥವಾ ಆಯಾ ಔಷಧದ ಕಂಪನಿ ಬದಲಾಗಿ, ಆರೋಗ್ಯದಲ್ಲಿ ಏರಿಳಿತ ಆಗಬಹುದು. ನಿಮ್ಮ ಪರಿಚಿತರ ಮನೆಯಲ್ಲಿ ಆಗುವ ಕೌಟುಂಬಿಕ ಬೆಳವಣಿಗೆಗಳಿಂದಾಗಿ ನಿಮಗೆ ಬರಬೇಕಾದ ಹಣಕಾಸಿನ ಬಾಕಿ ವಸೂಲಾತಿಗೆ ತಡೆ ಆಗಿ ಪರಿಣಮಿಸಬಹುದು.

ಲೇಖನ- ಸ್ವಾತಿ ಎನ್.ಕೆ.