AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 10 February 2025 : ಇನ್ನೊಬ್ಬರಿಗೆ ದೋಷವೆಣಿಸಿ, ನಿಮಗೇ ಕುತ್ತು

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ, ಸೋಮವಾರ ಹೊಟ್ಟೆ ಕಿಚ್ಚು, ಇತರ ದೃಷ್ಟಿದೋಷ, ಕಛೇರಿಯಲ್ಲಿ ನೆಮ್ಮದಿ, ಉದ್ಯೋಗದ ಉನ್ನತೀಕರಣ, ನೀವು ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಂಡಾಗ ಸಾಧ್ಯ ಇವುಗಳನ್ನು ತಿಳಿಯಿರಿ ಇಂದಿನ ಭವಿಷ್ಯದಿಂದ.

Horoscope Today 10 February 2025 : ಇನ್ನೊಬ್ಬರಿಗೆ ದೋಷವೆಣಿಸಿ, ನಿಮಗೇ ಕುತ್ತು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on:Feb 10, 2025 | 9:21 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ತ್ರಯೋದಶೀ ನಿತ್ಯನಕ್ಷತ್ರ : ಪುಷ್ಯಾ ಯೋಗ : ವಿಷ್ಕಂಭ, ಕರಣ : ಬಾಲವ, ಸೂರ್ಯೋದಯ 06:59 ನಿಮಿಷಕ್ಕೆ, ಸೂರ್ಯಾಸ್ತ 06:34 ನಿಮಿಷಕ್ಕೆ ಇಂದಿನ ಶುಭಾಶುಭಕಾಲ : ರಾಹು ಕಾಲ ಬೆಳಗ್ಗೆ 08:27 ರಿಂದ 09:53ರತನಕ, ಯಮಘಂಡ ಕಾಲ ಬೆಳಗ್ಗೆ 11:20 ಮಧ್ಯಾಹ್ನ 12:47ರತನಕ, ಗುಳಿಕ ಕಾಲ ಮಧ್ಯಾಹ್ನ 2:14 ರಿಂದ 03:41ರ ತನಕ ಇರುತ್ತದೆ.

ಮೇಷ ರಾಶಿ: ನಿಮ್ಮ ನಿಯಮಿತ ವ್ಯವಹಾರವು ನಿಮ್ಮನ್ನು ಬಂಧಿಸಿಡುವುದು. ಅಕಸ್ಮಾತ್ ಆದ ಘಟನೆಗೆ ನಿಮಗೆ ಪ್ರತಿಕ್ರಿಯೆ ಕೊಡುವುದು ಅಸಾಧ್ಯವಾಗಬಹುದು. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಿ. ಮನಸ್ತಾಪದ ನಡೆವೆಯೂ ನೀವು ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುವಿರಿ. ಪ್ರಾಪಂಚಿಕ ಸುಖದ ಮೇಲೆ ಆಸಕ್ತಿಯು ಕಡಿಮೆ ಆದೀತು. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದೆ. ದ್ವೇಷಿಸುವವರನ್ನು ಇಷ್ಟಪಡುವಿರಿ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಮಾತನ್ನು ಕೇಳಿಲ್ಲ ಎಂದ ಮಾತ್ರಕ್ಕೆ ನಿಷ್ಠುರವಾಗಿ ಸಂಬಂಧವನ್ನು ಹಾಳುಮಾಡಿಕೊಳ್ಳುವುದು ಬೇಡ. ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಿಯನ್ನು ಉಂಟುಮಾಡುವುದು. ಯಾರದೋ ಒತ್ತಡದಿಂದ ದಿನಚರಿಯನ್ನು ವ್ಯತ್ಯಾಸ ಮಾಡಿಕೊಳ್ಳಬೇಕಾಗುವುದು. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಇಂದು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಯಾವ ಸಂದರ್ಭವನ್ನೂ ಎದುರಿಸುವ ಮಾನಸಿಕತೆ ಇರಲಿದೆ. ಆಗಬೇಕಾಗಿರುವ ಕಾರ್ಯವನ್ನು ಮೊದಲು ನಿರ್ಧರಿಸಿಕೊಳ್ಳಿ.

ವೃಷಭ ರಾಶಿ: ನಿಮ್ಮ ಪಕ್ಷಪಾತ ಧೋರಣೆಯು ಇತರರಿಗೆ ಇಷ್ಟವಾಗದೇ ಹೋದೀತು. ಗೊತ್ತಿಲ್ಲದ ಕೆಲಸವನ್ನು ಮಾಡಿ ಕೈಸುಟ್ಟುಕೊಳ್ಳುವಿರಿ. ಇದು ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡು ಆಗುವ ಕಲಹವೂ ತಪ್ಪಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಗುರಿಗೆ ಹಾದಿಯು ಸ್ಪಷ್ಟವಾಗಿ ಇರದೇ ಹೋಗಬಹುದು. ಇಂದು ನೀವು ಮಾಡಲು ಹೊರಟ ಕಾರ್ಯವು ನಿರ್ವಿಘ್ನವಾಗಿ ಮುಗಿಯುವುದು. ನಿಮ್ಮ ಜಾಣ್ಮೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡಿ. ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಆತ್ಮೀಯರಿಂದ ನೀವು ಕೆಲವು ಸಲಹೆಯನ್ನು ಪಡೆಯುವಿರಿ. ಸಂಸಾರದ ಖರ್ಚನ್ನು ಸರಿದೂಗಿಸಿಕೊಳ್ಳಲು ಆಗದು. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದೇ ಹೋದೀತು.

ಮಿಥುನ ರಾಶಿ: ನಿಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ವೇದಿಕೆ ಸಿಗಲಿದೆ. ವಿವಾಹಕ್ಕೆ ಬರುವ ಉತ್ತಮ ಸಂಬಂಧಗಳನ್ನು ನಿರಾಕರಿಸಲು ಮನಸ್ಸು ಮಾಡುವಿರಿ. ಸ್ನೇಹಿತರು ನಿಮ್ಮಿಂದ ಅಲ್ಪ ಧನಸಹಾಯವನ್ನು ನಿರೀಕ್ಷಿಸುವರು. ಜೊತಡಗಿರುವವರು ಹುದ್ದೆಯಿಂದ ಕೆಳಗೆ ಹಾಕಲು ನೋಡಬಹದು. ಎಲ್ಲರ ಜೊತೆ ವಿನಾಕಾರಣ ಸಿಟ್ಟಾಗುವಿರಿ. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಜಾಣತನದಿಂದ ಮಾಡಿಸಿಕೊಳ್ಳುವಿರಿ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ. ನೀವು ಪ್ರಭಾವೀ ವ್ಯಕ್ತಿಗಳಂತೆ ತೋರುವಿರಿ. ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ನಿಮ್ಮ ಲಾಭವನ್ನು ಹೆಚ್ಚಿಸುವುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದರೆ, ಪ್ರಯತ್ನ ಮುಂದುವರಿಯಲಿ. ಹಣದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಪ್ತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದದ ಕಾರಣ ಸಂತೋಷದ ಕ್ಷಣವನ್ನು ನಷ್ಟ ಮಾಡಿಕೊಳ್ಳುವಿರಿ.

ಕರ್ಕಾಟಕ ರಾಶಿ: ಹಿತಶತ್ರುಗಳು ನಿಮ್ಮ ವಿಶ್ವಾಸವನ್ನು ಹಾಳುಮಾಡಬಹುದು. ಸಂಗಾತಿಯ ಜೊತೆ ಸರಿ ತಪ್ಪುಗಳ ವಿವೇಚನೆಗೆ ಹೋಗುವುದು ಬೇಡ. ಕಚೇರಿಯಲ್ಲಿ ತುಂಬಾ ಕಾರ್ಯನಿರತ ವೇಳಾಪಟ್ಟಿ ಇರುತ್ತದೆ. ಕೆಲಸಕ್ಕೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುವುದು. ಇನ್ನೊಬ್ಬರ ವಸ್ತುಗಳನ್ನು ಬಳಸಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಶ್ರಮದಿಂದ ಆದಾಯವನ್ನು ಗಳಿಸುವರು. ನಿಮ್ಮದಾದ ಗೌಪ್ಯ ಸಂಗತಿಗಳನ್ನು ಇತರರು ತಿಳಿದುಕೊಂಡಾರು. ಮನೋಭಿಲಾಷೆಯನ್ನು ಸರಿಯಾದ ಜನರ ಜೊತೆ ಹೇಳಿ. ಸಾಮಾಜಿಕ ವಲಯಗಳಲ್ಲಿ ಸ್ಥಾನಮಾನವು ಲಭ್ಯವಾಗುವುದು. ವಾಹನ ಸಂಚಾರದಲ್ಲಿ ಮಂದಗತಿ ಇರಲಿ. ನಿಮ್ಮ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಕಣ್ಣಿನ ತೊಂದರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ವಿವಾಹ ಸಂಬಂಧದಿಂದ ಕಿರಿಕಿರಿ ಆಗಬಹುದು. ಕಛೇರಿಯಲ್ಲಿ ಕೆಲಸವು ಮಂದಗತಿಯಲ್ಲಿ ಇರುವುದು.

ಸಿಂಹ ರಾಶಿ: ಕೆಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಮರೆತು ಅಥವಾ ಸಮಸ್ಯೆಯ ಜೊತೆಯೇ ಇರಬೇಕಾದೀತು. ನಿಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿಷಯಗಳನ್ನು ಕ್ರಮವಾಗಿ ಇರಿಸಿ. ಅಪರಿಚಿತರಿಂದ ಕಪಾಲಮೋಕ್ಷವಾಗಬಹುದು. ಅತಿ‌ಜಾಣತನವನ್ನು ತೋರಿಸುವುದು ಬೇಡ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಮೌಲ್ಯಮಾಪನ ಸಿಗಬಹುದು. ನಿಮ್ಮ ವೃತ್ತಿಜೀವನದಲ್ಲಿ ನೀವು ಅದ್ಭುತ ಯಶಸ್ಸನ್ನು ಪಡೆಯುತ್ತೀರಿ. ನೇರ ಮಾತಿನಿಂದ ನಿಮ್ಮವರು ದೂರಾಗಬಹುದು. ಅನಿವಾರ್ಯವಾದ ಪ್ರಯಾಣವನ್ನು ಮಾಡುವುದು ಸೂಕ್ತ. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರೇಮಿಗಳಿಗೆ ಇಂದು ಶುಭವಾಗಿಲ್ಲ. ಸಂಗಾತಿಯ ಮಾತುಗಳು ನಿಮಗೆ ಬಲವನ್ನು ಕೊಡಬಹುದು.

ಕನ್ಯಾ ರಾಶಿ: ಇಂದು ಕುಟುಂಬ ಜೊತೆ ಕಾಲ ಕಳೆಯುವ ಅವಕಾಶವನ್ನು ಕಳೆದುಕೊಳ್ಳುವಿರಿ. ಮನಶ್ಚಾಂಚಲ್ಯಕ್ಕೆ ಸೂಕ್ತ ಕ್ರಮವನ್ನು ಇತರರಿಂದ ಪಡೆಯುವಿರಿ. ಬಂಧುಗಳ ಒಡನಾಟದಿಂದ ನೋವನ್ನು ಕಳೆಯುವಿರಿ. ಮನೆಯ ಬದಲಾವಣೆಯಿಂದ ನೆಮ್ಮದಿ ಇಲ್ಲದಂತೆ ಅನುಭವಕ್ಕೆ ಬರುವುದು. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ನಿರುದ್ಯೋಗಿಗಳಿಗೆ ಎಲ್ಲರಿಂದ ಮಾನಸಿಕ ಹಿಂಸೆ ಆಗಬಹುದು. ಏನಾದರೂ ಮಾಡಬೇಕು ಎಂಬ ಇಚ್ಛೆಯು ಅಧಿಕವಾಗುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಎಲ್ಲ ಕಾರ್ಯಗಳಿಗೂ ಉತ್ಸಾಹ ಭಂಗವಾಗುವುದು. ಚೆನ್ನಾಗಿ ಯೋಚಿಸಿದ ಮಾಡಿದ ಕಾರ್ಯವು ದೀರ್ಘಕಾಲದವರೆಗೆ ಪರಿಣಾಮಕಾರಿ. ಯಾರ ಬಗ್ಗೆಯೂ ತಾರತಮ್ಯ ಭಾವವನ್ನು ತೋರಿಸುವುದು ಬೇಡ. ಆಸ್ತಿ ವ್ಯವಹಾರಗಳಿಂದ ನಿಮಗೆ ಲಾಭವು ಇರುವುದು. ಇತರರ ತಪ್ಪಿಗೆ ನಿಮ್ಮನ್ನು ಗುರಿಮಾಡುವರು. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವರು. ಆರ್ಥಿಕ ವಿಚಾರದಲ್ಲಿ ಸಖ್ಯವು ಏರ್ಪಡುವುದು. ಕಛೇರಿಯ ಕೆಲಸಗಳು ಸಾಕೆನಿಸಬಹುದು. ಮಕ್ಕಳ ಜೊತೆ ಪ್ರೀತಿಯಿಂದ ಇರುವುದು ಒಳ್ಳೆಯದೇ.

ತುಲಾ ರಾಶಿ: ನಿಮ್ಮ ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಜೊತೆಗಾರರು ನಿಮ್ಮನ್ನು ನಗಣ್ಯ ಮಾಡಬಹುದು. ಪ್ರೇಮ ಜೀವನದಲ್ಲಿ ಹೊಸ ರೋಮಾಂಚಕಾರಿ ತಿರುವುಗಳು ಕಂಡುಬರುತ್ತವೆ. ಸಂಬಂಧದ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿ. ನಿರುಪಯೋಗ ವಸ್ತುಗಳನ್ನು ಮನೆಯಿಂದ ಹೊರಗುಡುವಿರಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಪ್ರೀತಿಯಲ್ಲಿ ತೊಡಗಿರುವವವರು ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವಿರಿ. ಬೇಸರಕ್ಕೆ ಕಾರಣವನ್ನು ಹುಡುಕುತ್ತ ಇರುವುದಕ್ಕಿಂತ ಬೇರೆಯ ಕಾರ್ಯದಲ್ಲಿ ಮಗ್ನರಾಗಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು. ನಿಮ್ಮ ನಂಬಿಕೆಗೆ ಆಪ್ತರಿಂದ ಘಾಸಿಯಾಗಬಹುದು. ನಿಮ್ಮ ವ್ಯಾವಹಾರಿಕ ಓಡಾಟವು ವ್ಯರ್ಥವಾದೀತು. ಸಾಲ ಮಾಡಲು ಇಷ್ಟವಿಲ್ಲದಿದ್ದರೂ ಮಾಡಬೇಕಾಗಬಹುದು.

ವೃಶ್ಚಿಕ ರಾಶಿ: ನಿಮ್ಮ ಸಾಮರ್ಥ್ಯವು ಇತರರಿಗೆ ತೋರ್ಪಡಿಸುವಂತೆ ಮಾಡುವಿರಿ. ನಿಮಗೆ ಇಷ್ಟವಾಗದ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ಇಂದು ನೀವು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ವೃತ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹೊಸ ಆದಾಯದ ಮೂಲಗಳನ್ನು ಹುಡುಕಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನೋಯಿಸಬೇಡಿ. ಪರರ ಬೇಡಿಕೆಗೆ ಸ್ಪಂದ‌ನೆ ಇರಲಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅವರಿಂದ ಏನಾದರೂ ತೊಂದರೆ ಆದೀತು. ಅಪಾಯದ ಮುನ್ಸೂಚನೆ ಸಿಕ್ಕಾಗ ಅದನ್ನು ಉಪಾಯದಿಂದ ಸರಿಮಾಡಿಕೊಳ್ಳಲು ಪ್ರಯತ್ನಿಸಿ. ಕೆಲಸವನ್ನು ಮಾಡಿಸಿಕೊಳ್ಳಲು ನೀವು ಹೆಚ್ಚು ಸಮಯವನ್ನು ನೀಡುವಿರಿ. ಸ್ತ್ರೀಯರ ಸಹಕಾರ ಪಡೆದು ನೀವು ಕಛೇರಿಯ ಕೆಲಸವನ್ನು ಬೇಗ ಮಾಡುವಿರಿ.

ಧನು ರಾಶಿ: ಆರ್ಥಿಕತೆಯ ದೌರ್ಬಲ್ಯವು ನಿಮ್ಮ ಎಲ್ಲ ಬಲವನ್ನು ಕುಗ್ಗಿಸುವುದು. ಶುಭಸೂಚನೆಯನ್ನು ಅಲಕ್ಷಿಸಿ ಆಪತ್ತನ್ನು ತಂದುಕೊಳ್ಳುವಿರಿ. ಜೀವನದಲ್ಲಿ ಬರುವ ಸವಾಲುಗಳನ್ನು ಜಯಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ನಿಮ್ಮ ಸಮಯಕ್ಕೆ ಸಿಗಬೇಕಾದುದು ಸಿಗದು, ಮನಸ್ತಾಪ ಹೆಚ್ಚು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಯಾವ ಕಾರ್ಯವನ್ನೂ ಮಾಡುವುದು ಸರಿಯಾಗದು. ಉದ್ಯಮವನ್ನು ಬೆಳೆಸುವ ಚಿಂತನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ನಡೆಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂದೆ ಹೆಜ್ಜೆ ಹಾಕುವಿರಿ. ನಾಯಕತ್ವದ ಗುಣವನ್ನು ನೀವು ಗೊತ್ತಿಲ್ಲದಂತೆ ಬೆಳೆಸಿಕೊಳ್ಳುವಿರಿ. ನಿಮ್ಮ ಜೀವನದ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ.

ಮಕರ ರಾಶಿ: ನೀವು ಪೂರ್ವನಿರ್ಧಾರಿತ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಿರಿ. ನಿಮ್ಮ ಕ್ರಿಯಾತ್ಮಕತೆಯನ್ನು ಇತರರಿಗೂ ನೋಡಿ ಆನಂದಿಸುವರು. ಬಾಕಿ ಸಾಲದ ಮೊತ್ತವನ್ನು ತುಂಬಲು ಸ್ನೇಹಿಯರ ಸಹಾಯವನ್ನು ಕೇಳಬೇಕಾಗುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಉದ್ವೇಗಕ್ಕೆ ಸಿಗದೇ ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಇದರಿಂದ ನಿಮ್ಮ ಸಂಬಂಧವೂ ಸಹ ಬಲವಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪರಿಸರ ಅನುಕೂಲವಿರುವುದು. ಹಣದ ಹೂಡಿಕೆಗೆ ನಿಮಗೆ ಆಸಕ್ತಿಯು ಹೆಚ್ಚಿರಲಿದೆ. ಕುಟುಂಬದ ಮನಸ್ತಾಪವನ್ನು ಶಾಂತ ರೀತಿಯಿಂದ ಬಗೆಹರಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಗುವುದು. ಇಂದು, ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು.

ಕುಂಭ ರಾಶಿ: ನಿಮ್ಮ ಬಯಕೆಗಳನ್ನು ಯಾರದೋ ಜೊತೆ ಹೇಳಿಕೊಳ್ಳಬೇಡಿ. ಅದಕ್ಕೆ ದೃಷ್ಟಿದೋಷವಾಗಬಹುದು. ಅಪಹಾಸ್ಯವನ್ನೂ ಮಾಡಬಹುದು. ಮನೆಯ ಕಾರ್ಯದಲ್ಲಿ ನೀವು ತನ್ಮಯತೆಯಿಂದ ಇರುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಇರುತ್ತಾರೆ. ಇಂದು ಅಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಕೆಲವು ಜನರು ಕುಟುಂಬ ಪ್ರವಾಸವನ್ನು ಯೋಜಿಸಬಹುದು ಮತ್ತು ಕುಟುಂಬದೊಂದಿಗೆ ಮೋಜು ತುಂಬಿದ ಕ್ಷಣಗಳನ್ನು ಆನಂದಿಸಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಆರ್ಥಿಕ ವ್ಯವಹಾರದಲ್ಲಿ ಇಂದು ಜಾಗರೂಕತೆ ಬೇಕು. ವಿವಾಹಕ್ಕೆ ಸಂಬಂಧಿಸಿದಂತೆ ಕುತೂಹಲವು ಇರಲಿದೆ. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು. ಹಳೆಯ ವಸ್ತುಗಳನ್ನು ಮಾರಾಟ ಮಾಡಬೇಕಾಗುವುದು.

ಮೀನ ರಾಶಿ: ಇಂದು ನಿಮ್ಮ ದೇಹದಂಡನೆಯನ್ನು ಕಂಡು ಎಂತಹವರಿಗೂ ಕನಿಕರ ಬಂದೀತು. ಇತರರಿಂದ ಸಿಗುವ ಪ್ರೀತಿಯು ನಿಮಗೆ ಉತ್ತೇಜನವನ್ನು ನೀಡುವುದು. ನೀವು ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಂಡಾಗ ಸಾಧ್ಯ. ಯಂತ್ರೋಪಕರಣದ ಮಾರಾಟದಿಂದ ಲಾಭ ಕಡಿಮೆ. ಸ್ನೇಹಿತರ ಸಹಾಯದಿಂದ, ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು. ಸ್ವಾವಲಂಬನೆಯೇ ನಿಮ್ಮನ್ನು ಬೆಳೆಸಲು ಸಹಕಾರಿ. ಕೆಲಸ ಕಾರ್ಯಗಳು ಸಣ್ಣ ಅಡೆತಡೆಗಳಿಂದ ನಿಲ್ಲಬಹುದು. ಮಾಡಬೇಕು ಎಂದುಕೊಂಡ ಕೆಲಸವು ನಿಮಗೆ ಸಮಾಧಾನ ತರದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ಅತಿಯಾದ ವ್ಯಾಯಾಮದಿಂದ ದೇಹಕ್ಕೆ ತೊಂದರೆಯನ್ನು ತಂದುಕೊಳ್ಳುವಿರಿ.

Published On - 9:19 am, Mon, 10 February 25