
ಈ ದಿನ ಅಶಕ್ತರಿಗೆ ಹೊದಿಕೆ, ಸ್ವೆಟರ್, ಶಾಲು ಇಂಥವುಗಳನ್ನು ನೀಡುವುದರಿಂದ ಆರೋಗ್ಯ ಸಮಸ್ಯೆಗಳು ದೂರ ಆಗುತ್ತವೆ. ಒಂದು ವೇಳೆ ಬಹಳ ಸಮಯದಿಂದ ಸಾಲ ವಸೂಲಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಲ್ಲಿ ನಿಮಗೆ ಸಾಧಕ ಆಗುವ ಬೆಳವಣಿಗೆಗಳು ಆಗಲಿವೆ.
ಕಾರ್ಪೊರೇಟ್ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ತಂಡವನ್ನು ರೆಸಾರ್ಟ್, ರೆಸ್ಟೋರೆಂಟ್ ಅಥವಾ ಇನ್ಯಾವುದೇ ಚಟುವಟಿಕೆಗಾಗಿ ಕರೆದುಕೊಂಡು ಹೋಗುವುದಕ್ಕೆ ಯೋಜನೆ ರೂಪಿಸುವುದಕ್ಕೆ ನಿಮಗೇ ಜವಾಬ್ದಾರಿಯನ್ನು ವಹಿಸಬಹುದು. ಇನ್ನು ಮುಂದೆ ನಿಮಗೆ ಸಿಗಬಹುದಾದ ಬಡ್ತಿ ಅಥವಾ ಹುದ್ದೆಯ ಬಗ್ಗೆ ಸುಳಿವನ್ನು ಸಹ ಬಿಟ್ಟುಕೊಡಬಹುದು. ಆದ್ದರಿಂದ ಮಾತುಕತೆಯ ವೇಳೆ ಎಚ್ಚರ ವಹಿಸಿ
ಈ ದಿನ ಏನನ್ನು ಕೇಳುವುದಕ್ಕೂ ಹಿಂಜರಿಕೆ ಇಟ್ಟುಕೊಳ್ಳಬೇಡಿ. ನಿರ್ದಿಷ್ಟ ವ್ಯಕ್ತಿಯಿಂದ ಇಂಥದ್ದೊಂದು ನೆರವು ದೊರೆಯಬಹುದು ಎಂದೆನಿಸಿದಲ್ಲಿ ಅದನ್ನು ಬಾಯಿ ಬಿಟ್ಟು ಕೇಳಿ. ಮಕ್ಕಳ ಶಿಕ್ಷಣದ ಸಲುವಾಗಿ ನಿಮ್ಮಲ್ಲಿ ಕೆಲವರು ಹೂಡಿಕೆ ಅಥವಾ ಉಳಿತಾಯವನ್ನು ಆರಂಭಿಸುವ ಸಾಧ್ಯತೆಗಳಿವೆ. ಇನ್ನು ನಿಮ್ಮ ತಂದೆ- ತಾಯಿ ಅಥವಾ ಮನೆಯಲ್ಲಿ ಹಿರಿಯರು ಯಾರಾದರೂ ಇರಬಹುದು, ಅವರಿಗಾಗಿಯೇ ಆರೋಗ್ಯ ವಿಮೆ ಖರೀದಿಸಬೇಕು ಎಂದು ನಿರ್ಧಾರವನ್ನು ಮಾಡಲಿದ್ದೀರಿ.
ನಿಮ್ಮ ಒಳಗೆ ಒಂದು ಯೋಚನೆ ಇದ್ದು, ಅದನ್ನು ಬಹಳ ಸಮಯದಿಂದ ಸಂಬಂಧಪಟ್ಟವರ ಎದುರಿಗೆ ಚರ್ಚೆಯನ್ನೇ ಮಾಡಿಲ್ಲ ಅಂತಾದಲ್ಲಿ ಈ ದಿನ ಅದಕ್ಕೊಂದು ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರಾದರೂ ಫ್ರಾಂಚೈಸಿ ಅಥವಾ ಡಿಸ್ಟ್ರಿಬ್ಯೂಷನ್ ಪಡೆದುಕೊಳ್ಳುವ ಸಲುವಾಗಿ ಯೋಚನೆ ಮಾಡುತ್ತಿದ್ದಲ್ಲಿ ಅದಕ್ಕೆ ಬೇಕಾದಂಥ ಬೆಂಬಲ, ಹಣಕಾಸಿನ ಅನುಕೂಲ ಮೊದಲಾದವು ದೊರೆಯುವ ಸಾಧ್ಯತೆ ಹೆಚ್ಚಿದೆ.
ಲೇಖನ- ಸ್ವಾತಿ ಎನ್.ಕೆ.