ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 8ರ ದಿನಭವಿಷ್ಯ

Daily Numerology February 08: 8ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 8ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 8ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Feb 08, 2026 | 12:15 AM

ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅಡೆತಡೆ ಎದುರಾಗುತ್ತದೆ, ಅಂದುಕೊಂಡ ವೇಗದಲ್ಲಿ ವ್ಯವಹಾರ ಮುಂದುವರಿಯುತ್ತಾ ಇಲ್ಲ ಎಂದಾದಲ್ಲಿ ಕಾರ್ನೇಲಿಯನ್ ಸ್ಟೋನ್ ಉಂಗುರ ಬಳಸುವುದರಿಂದ ಅನುಕೂಲಗಳು ಆಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಒಂದು ವೇಳೆ ಆಸ್ತಿ ಅಥವಾ ವಾಹನ ಮಾರಾಟಕ್ಕೆ ಇಟ್ಟಿದ್ದಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನು ಇದೊಂದು ದಿನದ ಮಟ್ಟಿಗೆ ಮಾಡಬೇಡಿ. ನಿಮ್ಮ ಬಳಿ ಇರುವ ಹಣಕ್ಕೆ ತಕ್ಕಂತೆ ಪ್ರಾಜೆಕ್ಟ್ ವೊಂದು ಹುಡುಕಿಕೊಂಡು ಬರುವಂಥ ಸಾಧ್ಯತೆಗಳಿವೆ. ಉದಾಹರಣೆಗೆ, ಇಷ್ಟೇ ಮೊತ್ತಕ್ಕೆ ಅಪಾರ್ಟ್ ಮೆಂಟ್ ಅಥವಾ ಸೈಟು ಅಥವಾ ವಾಹನ ಹೀಗೆ ನಿಮಗೆ ದೊರೆಯುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಬಹು ಪ್ರಮಾಣದಲ್ಲಿ ನಂಬಿಕೆ ನಿಮಗೆ ಇದ್ದರೂ ಕೆಲವು ಬಾಹ್ಯ ಕಾರಣಗಳಿಂದಾಗಿ ಈ ದಿನ ನಿಮಗೆ ಯಾವುದೇ ವಿಚಾರದಲ್ಲಿ ಅಥವಾ ಕೆಲಸದಲ್ಲಿ ಪೂರ್ಣ ವಿಶ್ವಾಸ ಮೂಡದಿದ್ದರೆ ಅದನ್ನು ಮಾಡದಿರುವುದು ಕ್ಷೇಮ. ಏಕೆಂದರೆ ನಿಮ್ಮದಲ್ಲದ ತಪ್ಪಿಗೆ ದಂಡ ಕಟ್ಟುವಂಥ ಸನ್ನಿವೇಶ ಎದುರಾಗಲಿದೆ. ಎಂಥ ಅನಿವಾರ್ಯ ಸ್ಥಿತಿಯೇ ಇದ್ದರೂ ಇತರರ ವಾಹನಗಳು ಅಥವಾ ವಸ್ತುಗಳನ್ನು ಬಳಸುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಯಾರು ರಾಜಕೀಯ ಕ್ಷೇತ್ರದಲ್ಲಿ ಇದ್ದಾರೋ ಅಂಥವರಿಗೆ ನಿರೀಕ್ಷೆ ಕೂಡ ಮಾಡಿರದಂಥ ಅವಕಾಶವೊಂದು ದೊರೆಯವ ಸಾಧ್ಯತೆಗಳಿವೆ. ಇದನ್ನು ನೀವು ನಂಬುವುದಕ್ಕೆ ಸಹ ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿದರೆ ಒಳ್ಳೆಯದು. ಕೋರ್ಟ್- ಕಚೇರಿ ವ್ಯಾಜ್ಯಗಳಲ್ಲಿ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಕೆಲವರು ಸಹಾಯ ಮಾಡುವುದಾಗಿ ಹೇಳಲಿದ್ದಾರೆ.

ಲೇಖನ- ಸ್ವಾತಿ ಎನ್.ಕೆ.