Gemini Yearly Horoscope 2024: ಮಿಥುನ ರಾಶಿ ವರ್ಷ ಭವಿಷ್ಯ: ಆರೋಗ್ಯ ಕೆಡಬಹುದು; ಧನ್ವಂತರಿಯ ಉಪಾಸನೆಯೇ ಪರಿಹಾರ

| Updated By: Digi Tech Desk

Updated on: Dec 11, 2023 | 4:22 PM

ಮಿಥುನ ರಾಶಿ ವರ್ಷ ಭವಿಷ್ಯ 2024: ಮಿಥುನ ರಾಶಿಯು ರಾಶಿ ಚಕ್ರದ ಮೂರನೆ ರಾಶಿಯಾಗಿದೆ.‌ ಬುಧ ರಾಶ್ಯಾಧಿಪತಿ. ವರ್ಷಾರಂಭದಲ್ಲಿ ಆರೋಗ್ಯ ಕೆಡಬಹುದು, ಧನ್ವಂತರಿಯ ಉಪಾಸನೆ ಮಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.

Gemini Yearly Horoscope 2024: ಮಿಥುನ ರಾಶಿ ವರ್ಷ ಭವಿಷ್ಯ: ಆರೋಗ್ಯ ಕೆಡಬಹುದು; ಧನ್ವಂತರಿಯ ಉಪಾಸನೆಯೇ ಪರಿಹಾರ
Gemini Yearly Horoscope 2024
Follow us on

ಮಿಥುನ ರಾಶಿಯು ರಾಶಿ ಚಕ್ರದ ಮೂರನೆ ರಾಶಿಯಾಗಿದೆ.‌ ಇದರ ಅಧಿಪತಿ ಬುಧನಾಗಿದ್ದಾನೆ. ವರ್ಷಾರಂಭದಲ್ಲಿ ಬುಧನು ಷಷ್ಠದಲ್ಲಿ ಇದ್ದು ನಿಮ್ಮ ಆರೋಗ್ಯವನ್ನು ಕೆಡಿಸುವನು. ಧನ್ವಂತರಿಯ ಉಪಾಸನೆಯನ್ನು ಹೆಚ್ಚು ಮಾಡುವುದು ಸೂಕ್ತ. ಈ ವರ್ಷ ಎಲ್ಲ ಗ್ರಹರೂ ಶುಭವಾದ ಏಕಾದಶ ಸ್ಥಾನದ ಫಲವನ್ನೇ ಕೊಡಲಿದ್ದಾರೆ.

2024ರಲ್ಲಿ ಮಿಥುನ ರಾಶಿಯವರ ಫಲ

ಈ ವರ್ಷ ಮಧ್ಯವಾಧಿಯ ವರೆಗೆ ಸುಖ, ನೆಮ್ಮದಿ, ಸಂಪತ್ತು, ಅಧಿಕಾರಗಳನ್ನು ಪಡೆದುಕೊಳ್ಳುವ ಅವಕಾಶವು ಇರಲಿದೆ. ಅನಂತರ ಇದು ಕಷ್ಟವಾಗುವುದು. ಸೋಮವಾರದಿಂದ ಆರಂಭವಾಗಲಿದೆ ಈ ವರ್ಷ. ಚಂದ್ರನಿಗೆ ಬುಧನು ಮಿತ್ರನಾದರೂ ಬೋಧನಿಗೆ ಚಂದ್ರನು ಶತ್ರು. ಹಾಗಾಗಿ ಈ ರಾಶಿಯಲ್ಲಿ ಪರಸ್ಪರ ವೈಮನಸ್ಯವು ಆಗಾಗ ಕಾಣಿಸಿಕೊಳ್ಳುವುದು.

ಮಿಥುನ ರಾಶಿಯವರ ಧನಾಗಮನ:

ಧನಸ್ಥಾನಾಧಿಪತಿಯು ಚಂದ್ರನಾಗಿದ್ದು ಸ್ತ್ರೀಯರಿಂದ ಸಂಪತ್ತು ಸಿಗುವ ಸಾಧ್ಯತೆ ಇದೆ. ಇದು ನಿಮಗೆ ಇಷ್ಟವಾಗದೇ ಇರಬಹುದು. ಇನ್ನು ಏಕಾದಶಾಧಿಪತಿಯಾದ ಕುಜನು ವರ್ಷಾರಂಭದಲ್ಲಿ ಉತ್ತಮ ಸ್ಥಾನದಲ್ಲಿ ಇರುವ ಕಾರಣ ಹಣಕಾಸಿಗೆ ಏಪ್ರಿಲ್‌ವರೆಗೆ ತೊಂದರೆಯಾಗದು.

ಮಿಥುನ ರಾಶಿಯವರ ಪ್ರೀತಿ ಮತ್ತು ವಿವಾಹ:

ಸಪ್ತಮದ ಅಧಿಪತಿ ಗುರುವು ಏಕಾದಶದಲ್ಲಿ ಇರುವ ಕಾರಣ ಆದಷ್ಟು ಶೀಘ್ರವಾಗಿ ವಿವಾಹವನ್ನು ಮುಗಿಸಿಕೊಳ್ಳಿ. ಪ್ರೀತಿಯನ್ನು ಮಾಡುತ್ತಿರುವವರೂ ಆಪ್ತರ ಬಳಿ ಹೇಳಿ ಒಪ್ಪಿಗೆ ಪಡೆದು ವಿವಾಹವಾಗುವುದು ಸೂಕ್ತ. ಮುಂದೂಡಿದರೆ ನಿಮಗೇ ಕಷ್ಟವಾಗಬಹುದು. ಮತ್ತು ಉತ್ತಮ ಸಮಯವೂ ಸದ್ಯಕ್ಕೆ ಇರದು.

ಮಿಥುನ ರಾಶಿಯವರ ವೃತ್ತಿ:

ವೃತ್ತಿಯಲ್ಲಿ ಸದ್ಯಕ್ಕೆ ಯಾವುದೇ ತೊಂದರೆ ಕಾಣಿಸದು.‌ ಆದರೆ ದಶಮದಲ್ಲಿ ರಾಹುವಿರುವ ಕಾರಣ ತಂತ್ರಜ್ಞರಿಗೆ, ಶಿಕ್ಷಣಕ್ಷೇತ್ರಲ್ಲಿ ಇರುವವರಿಗೆ ಮಾನಸಿಕ‌ ಕಿರಿಕಿರಿ, ವಾರ್ಗಾವಣೆ, ಓಡಾಟ, ಒತ್ತಡಗಳು ಅಧಿಕವಾಗುವುದು. ಹೆಚ್ಚು ಕೆಲಸ, ಆದರೆ ಸಂಪಾದನೆ ಕಡಿಮೆ ಎನಿಸಬಹುದು.

ಮಿಥುನ ರಾಶಿಯವರ ಆರೋಗ್ಯ ಸ್ಥಿತಿ:

ರಾಶಿಯ ಅಧಿಪತಿ ಷಷ್ಠದಲ್ಲಿ ಇರುವ ಕಾರಣ ದೇಹಕ್ಕೆ ಆಗಾಗ ಒಂದೊಂದೇ ಪೀಡೆಗಳು ಬರಬಹುದು. ಉತ್ತಮ‌ ಚಿಕಿತ್ಸೆಯ ಜೊತೆ, ದೇವತಾರಾಧನೆಯನ್ನು ಹೆಚ್ಚು ಮಾಡುವುದು ಒಳ್ಳೆಯದು. ಬುಧನು ಮೀನರಾಶಿಗೆ ಬಂದಾಗ ದೇಹ ಪೀಡೆಯು ಹೆಚ್ಚಾಗುವುದು. ಸರಿಯಾದ ಚಿಕಿತ್ಸೆಯ ಕಡೆಗೆ ಗಮನವಿರಲಿ.

ಮಿಥುನ ರಾಶಿಯವರ ವಿದೇಶ ಪ್ರಯಾಣ:

ವಿದೇಶಕ್ಕೆ ಹೋಗುವ ಯೋಜನೆ ಇದ್ದರೆ, ಮುಂದೂಡದೇ ಬೇಗ ಹೋಗಿಬನ್ನಿ. ಸಂಶೋಧಕರು, ಕಲಾವಿದರು, ಸಾಧಕರಿಗೆ ವಿದೇಶ ಪ್ರಯಾಣದ ಯೋಗವು ಬರುವುದು. ಮೇ ಒಳಗೆ ಇದೆಲ್ಲವನ್ನು ಪಡೆದು ಸಂತೋಷದಿಂದ ಇರುವಿರಿ.

-ಲೋಹಿತ ಹೆಬ್ಬಾರ್​, ಇಡುವಾಣಿ