Horoscope: ಈ ರಾಶಿಯವರು ಇಂದು ಅಮೂಲ್ಯವಾದ ವಸ್ತುವನ್ನು ಖರೀದಿಸಿ ಸಂತೋಷಪಡುವರು
ಅಕ್ಟೋಬರ್ 13 2024:ರವಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಗ್ರಹಗಳ ಸಂಚಾರದಿಂದ ಪರಿಣಾಮ ಬೀರಲಿದೆಯೇ? ರವಿವಾರ ಇಡೀ ದಿನ ಶುಭವಾಗಿರಬೇಕೆಂದರೇ ಏನು ಮಾಡಬೇಕು ಎಂಬುವುದನ್ನು ತಿಳಿಯಿರಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೂಲಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:44 ರಿಂದ 06:13, ಯಮಘಂಡ ಕಾಲ ಮಧ್ಯಾಹ್ನ 12:19ರಿಂದ 01:47ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:16 ರಿಂದ 04:44 ರವರೆಗೆ.
ಮೇಷ ರಾಶಿ: ಶಾಂತವಸದ ಮನಸ್ಸು ಇಂದು ಕದಡಬಹುದು. ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದರೂ ಕೊನೆಯಲ್ಲಿ ಏನಾದರೂ ಮಾಡಿಕೊಳ್ಳುವಿರಿ. ಇಂದು ನಿಮಗೆ ಸಹಾಯದ ಮನೋಭಾವವು ಅಧಿಕವಾಗಿ ಇರಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ಪ್ರೇಮವು ನಿಮಗೆ ಸಾಕೆನಿಸಬಹುದು. ವಾಹನದಿಂದ ಅಪಘಾತವಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು. ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಕಾಣಿಸುವುದು. ಎಲ್ಲ ಕಾರ್ಯಗಳಲ್ಲಿಯೂ ಹೆಜ್ಜೆಯನ್ನು ಹಿಂದಿಡುವಿರಿ. ನಿಮ್ಮ ನಿರೀಕ್ಷೆಗೆ ವಿರುದ್ಧವಾದ ಮಾತುಗಳು ಬರಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಮೃದು ಮಾತಿನಿಂದ ಹೆಚ್ಚು ಪ್ರಯೋಜನ ಆಗಬಹುದು. ಹೊಸ ಉದ್ಯೋಗವು ಸುಲಭಕ್ಕೆ ಸಿಕ್ಕುವುದು. ಕ್ರೋಧಕ್ಕೆ ವಶವಾಗಬೇಕಾಗುವುದು. ಯಾವುದೇ ಅನಾಹುತಗಳು ಸಂಭವಿಸಿದಂತೆ ಎಚ್ಚರಿಕೆಯೂ ಬೇಕು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ಬೇಡ ಅಭ್ಯಾಸವು ರೂಡಿಯಾಗುವ ಸಂಭವವಿದೆ.
ವೃಷಭ ರಾಶಿ: ನಂಬಿಕೆಗೆ ದ್ರೋಹವನ್ನು ನೀವೇ ಮಾಡಿಕೊಳ್ಳುವಿರಿ. ನಿಮ್ಮನ್ನು ನಂಬಿ ಬಂದವರಿಗೆ ಬೇಸರಕೊಡುವುದು ಬೇಡ. ಬಂಧುಗಳ ನಾನಾ ಪ್ರಶ್ನೆ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕೆನಿಸುವುದು. ಎಷ್ಟೇ ಪ್ರಯತ್ನಿಸದರೂ ಕೆಲಸವು ಅಡೆತಡೆಗಳಿಂದ ಇದ್ದರೆ ಅದನ್ನು ಬಿಡುವುದು ಉತ್ತಮ. ಮನೆಯ ಕೆಲಸಗಳನ್ನು ನಿರಾಸಕ್ತಿಯು ಇರುವುದು. ಇಂದಿನ ನಿಮ್ಮ ಮಾತು ಅಗೌರವವನ್ನು ಕೊಡುವಂತಹದ್ದೇ ಆಗಿದೆ. ಈ ದಿನವನ್ನು ನೀವು ಆರಾಮವಾಗಿ ಕಳೆಯಲು ನಮ್ಮನ್ನು ಮೊದಲೇ ಸಿದ್ಧಪಡಿಸಿಕೊಂಡಿರುವಿರಿ. ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳಿ. ಅಮೂಲ್ಯವಾದ ವಸ್ತುವನ್ನು ಖರೀದಿಸಿ ಸಂತೋಷಪಡುವಿರಿ. ಬಂದಷ್ಟು ಆದಾಯವನ್ನು ಪ್ರೀತಿಯಿಂದ ಸ್ವೀಕರಿಸಿ. ನಿಮ್ಮವರಿಗಾಗಿ ಅಲ್ಪ ಸಮಯವನ್ನಾದರೂ ಕೊಡಬೇಕು ಅನಿಸಬಹುದು. ನಿಮ್ಮ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು.
ಮಿಥುನ ರಾಶಿ: ಮೊದಲು ನೀವು ಗಟ್ಟಿಯಾಗಿ ನಿಂತು, ಮತ್ತೊಬ್ಬರನ್ನು ನಿಲ್ಲಿಸಬೇಕು. ನೀವು ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದು ಬೇಡ. ದಾಂಪತ್ಯದ ವಿರಸವು ಸಾಮರಸ್ಯವಾಗಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದು. ಸ್ವಪ್ರತಿಷ್ಠೆಯನ್ನು ಬಿಟ್ಟು ಬಿಡಿವುದು ಉತ್ತಮ. ವ್ಯಾಪಾರದಲ್ಲಿ ಯಾರ ಹಸ್ತಕ್ಷೇಪವನ್ನು ಸಹಿಸಲಾರಿರಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ರಾಜಕೀಯದಲ್ಲಿ ನಿಮ್ಮ ವರ್ಚಸ್ಸು ಹೆಚ್ಚುವುದು. ಸಣ್ಣ ಮನಸ್ಸಿನಿಂದ ಯೋಚಿಸುವುದನ್ನು ಬಿಡಿ. ಕೆಲಸದ ಒತ್ತಡವು ಇಂದು ಅಧಿಕವಾಗುವುದು. ಸಹೋದರನಿಗೆ ಕಾರ್ಯದ ಅನ್ವೇಷಣೆಯನ್ನು ಮಾಡಲಿದ್ದೀರಿ. ನೀವು ನಿರೀಕ್ಷಿಸಿದ ಕೆಲಸದಿಂದ ಯಶಸ್ಸು ಸಿಗಲಿದೆ. ಮಾತನ್ನು ಸರಿಯಾಗಿ ಆಡಿದರೆ ಗೌರವವು ಪ್ರಾಪ್ತವಾಗಬಹುದು. ಭೋಗದ ಕಾರಣಕ್ಕೆ ಹಣವು ಖರ್ಚಾಗುವುದು. ವಿವಾಹಕ್ಕೆ ನಿಮ್ಮೆ ದೃಢವಾದ ಮನಸ್ಸು ಇರದು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ.
ಕರ್ಕಾಟಕ ರಾಶಿ: ನಿಮ್ಮ ಅನನುಕೂಲವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮಗೆ ಇಂದು ಅಭದ್ರತೆಯ ಅನುಭವವಾಗಲಿದೆ. ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗಲಿದೆ. ದುರಭ್ಯಾಸವನ್ನು ಬಿಡಲು ಒಬ್ಬೊಬ್ಬರಾಗಿ ಹೇಳಬಹುದು. ಅಪಮಾನವಾಗುವ ಸಂದರ್ಭದಲ್ಲಿ ನೀವು ಇರಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಮಾದರಿಯಾಗುವುದು. ನಿರ್ಲಕ್ಷ್ಯದಿಂದ ಉತ್ತಮ ಅವಕಾಶಗಳಿಂದ ವಂಚಿತರಾಗುವಿರಿ. ಕುಟುಂಬ ಮಹತ್ವವು ತಿಳಿಯುವುದು. ಮನೆಯ ಹಿರಿಯ ಆರೋಗ್ಯವು ದುರ್ಬಲವಾಗಿದ್ದು ಇದೇ ನಿಮಗೆ ಚಿಂತೆಯು ಆಗಬಹುದು. ಸಣ್ಣ ವ್ಯಾಪಾರದಲ್ಲಿ ಬಹುಮಟ್ಟಿನ ಲಾಭವು ಬರಬಹುದು. ಆತ್ಮಾಭಿಮಾನವು ಅಧಿಕವಾಗಿ ತೋರುವುದು. ಸಹೋದರಿಯ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವಿರಿ. ಸಾಲವಾಗಿ ಪಡೆದ ಹಣವನ್ನು ತೀರಿಸುವಿರಿ. ಮಕ್ಕಳಿಂದ ನಿಮಗೆ ಸಂತೃಪ್ತಿಯು ಸಿಗಲಿದೆ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಹೊಸ ಯೋಜನೆಯು ನಿಮಗೆ ಬರಲಿದೆ.