Horoscope 10 Jan:ಇಂದಿನ ದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ

| Updated By: ರಮೇಶ್ ಬಿ. ಜವಳಗೇರಾ

Updated on: Jan 10, 2024 | 1:19 AM

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.

Horoscope 10 Jan:ಇಂದಿನ ದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ
ಇಂದಿನ ದಿನಭವಿಷ್ಯ
Image Credit source: iStock Photo
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ​​​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಧ್ರುವ, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:26 ರಿಂದ 09:51ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 11:15 ರಿಂದ 12:40ರ ವರೆಗೆ.

ಮೇಷ ರಾಶಿ : ಯಾರ ಮೇಲಾದರೂ ದ್ವೇಷವನ್ನು ಸಾಧಿಸುವ ಮನಸ್ಸಾದೀತು. ಸಂಬಂಧಗಳನ್ನು ಸರಿ ಮಾಡಿಕೊಳ್ಳುವುದು ಮುಖ್ಯ ಕೆಲಸವಾಗಬಹುದು. ವಿದ್ಯಾರ್ಥಿಗಳ ಗುಣಮಟ್ಟವು ಕ್ಷೀಣಿಸುವುದು ನಿಮ್ಮ‌ ಅರಿವಿಗೆ ಬರಲಿದೆ. ಸಾಮಾಜಿಕ ಗೌರವವನ್ನು ಪಡೆಯುವುದರಿಂದ ನಿಮ್ಮ ಸ್ಥೈರ್ಯ ಹೆಚ್ಚಾಗುತ್ತದೆ. ಕುಟುಂಬದ ಜೊತೆ ಹಾಸ್ಯ ಮತ್ತು ಸಂತೋಷ ಕಾಲವನ್ನು ಕಳೆಯುವಿರಿ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ಕೃಷಿಯ ಬಗ್ಗೆ ಸ್ವಲ್ಪ ಆಸಕ್ತಿಯು ಇರುವುದು. ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿಯು ಬರಬಹುದು. ನಿಮ್ಮ ಸ್ಥಿರಮತಿಯಿಂದ ಕಷ್ಟದ ಸಂದರ್ಭವನ್ನು ಹಿಡಿತಕ್ಕೆ ತರುವಿರಿ. ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕಾಗುವುದು.

ವೃಷಭ ರಾಶಿ : ಪುಣ್ಯಕ್ಷೇತ್ರಕ್ಕೆ ಹೋಗುವ ಉತ್ತಮ ಅವಕಾಶವು ನಿಮಗೆ ಅನಿವಾರ್ಯವಾಗಿ ಒದಗಬಹುದು. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ನಿಮ್ಮ ಕುಟುಂಬ ಸದಸ್ಯರಿಗೆ ನೀವು ವಿಶ್ವಾಸದ್ರೋಹಿ ಆಗುವ ಸಾಧ್ಯತೆಯಿದೆ. ಹಳೆಯ ಸ್ನೇಹಿತನನ್ನು ಯಾವುದಾದರೂ ರೀತಿಯಲ್ಲಿ ಭೇಟಿಯಾಗುವಿರಿ. ಕುಟುಂಬ ವ್ಯವಸ್ಥೆ ಸರಿಯಾಗಲು ಕೆಲವನ್ನು ಬಿಟ್ಟುಕೊಡಬೇಕಾದೀತು. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಸ್ನೇಹಿತರು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ದೂರಾಗಬಹುದು. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದ್ದು ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು. ಸ್ವಾಭಿಮಾನವು ನಿಮ್ಮ ಏಳಿಗೆಗೆ ತಡೆಯನ್ನು ಉಂಟು ಮಾಡಬಹುದು.

ಮಿಥುನ ರಾಶಿ :ಜೀವನದ ದೃಷ್ಟಿಯನ್ನು ನೀವು ಬದಲಿಸಿಕೊಳ್ಳುವಿರಿ. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಅನಿವಾರ್ಯವಾದೀತು. ಹಲವು ಕಾರ್ಯಗಳನ್ನು ಮಾಡುವ ಸನ್ನಿವೇಶವು ಬರುವ ಕಾರಣ ಸಮಯವನ್ನು ಸರಿಯಾಗಿ ಮಾಡಿಕೊಳ್ಳಿ. ಇಂದು ಅಮೂಲ್ಯವಾದ ವಸ್ತುವು ನಿಮ್ಮ ಪಾಲಾಗಬಹುದು. ಆದರೆ ಅನಗತ್ಯ ವೆಚ್ಚಗಳು ಸಹ ಬರಲಿವೆ. ನಿಮ್ಮ ವ್ಯವಹಾರದಲ್ಲಿಯೂ ಸಹ ನೀವು ಭಾಗವಹಿಸುವಿರಿ ಮತ್ತು ಕೆಲಸ ಪೂರ್ಣಗೊಳ್ಳುತ್ತದೆ. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು. ಹೂಡಿಕೆ ಮಾಡಲು ಯಾರಿಂದಲಾದರೂ ಒತ್ತಡವು ಬರಬಹುದು. ಈ ದಿನವನ್ನು ಮನೆಯ ಕೆಲಸದ ಜೊತೆ ಕಳೆಯುವಿರಿ. ಕಲಾಕಾರರಿಗೆ ಉತ್ತಮ ಲಾಭವು ಆಗಬಹುದು. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು‌. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ.

ಕಟಕ ರಾಶಿ :ಅಹಂಕಾರದಿಂದ ವರ್ತಿಸುವುದು ಬೇಡ. ಅನಪೇಕ್ಷಿತ ವಿಚಾರದಲ್ಲಿ ಚರ್ಚಿಸುವುದು ಬೇಡ. ವೃತ್ತಿಯನ್ನು ಕರ್ತವ್ಯದಂತೆ ಮಾಡುವಿರಿ. ಯಾರನ್ನೋ ನೋಯಿಸಿ ಖುಷಿಯಾಗಿರುವುದು. ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಸೂಕ್ತ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಟ್ಟೆಯ ಸ್ವಾಸ್ಥ್ಯವು ಕೆಡುವ ಸಾಧ್ಯತೆಯಿದೆ. ಜಾಗರೂಕರಾಗಿರಿ ಮತ್ತು ಆಹಾರದ ಮೇಲೆ ಸಂಯಮವಿರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿಯು ಇರಲಿದ್ದು ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ಕೆಲಸವು ನಿಮಗೇ ಇಷ್ಟವಾಗದು. ಇನ್ನೊಬ್ಬರ ಮಾತಿನಿಂದ ಸಿಟ್ಟಾಗಬಹುದು. ಕೆಲವು ವಿಷಯಕ್ಕೆ ಕುಟುಂಬದಿಂದ ವಿರೋಧವಿರುವುದು. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ.

ಸಿಂಹ ರಾಶಿ :ನಿಮ್ಮ ಇಂದಿನ ವ್ಯವಹಾರ ಮತ್ತು ವ್ಯಾಪಾರಗಳನ್ನು ಶಾಂತಿಯಿಂದ ನಡೆಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಹಣದ ಬಗ್ಗೆ ನಿಮ್ಮ ಚಿಂತೆ ದೂರವಾಗಬಹುದು. ನೀವು ದೇಶದಿಂದ ಹೊರಗೆ ಹೋಗುವ ಬಗ್ಗೆ ಯೋಚಿಸಬಹುದು. ಸೂಕ್ತವಾದ ದಾರಿಯನ್ನೂ ಕಂಡುಕೊಳ್ಳುವುದು ಉತ್ತಮ. ವ್ಯವಹಾರದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಇಂದು ಫಲಪ್ರದವಾಗದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಉಗುರಿನಿಂದ ಹೋಗುವುದಕ್ಕೆ ಕತ್ತಿಯನ್ನು ಬಳಸುವುದು ಬೇಕೆ? ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಯೋಗ್ಯ ಚಿಕಿತ್ಸೆಯನ್ನು ಕೊಡುವಿರಿ.

ಕನ್ಯಾ ರಾಶಿ :ನಿಮ್ಮ ಅದೃಷ್ಟವು ಕೈ ಹಿಡಿಯುವುದು ಕಷ್ಟ. ನಿಮ್ಮ ಗುರಿಯ ಬಗ್ಗೆ ನಿಮಗೆ ಇರಬೇಕಾದ ಬದ್ಧತೆಯ ಕೊರತೆ ಇರಲಿದೆ. ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತದೆ. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಸಂಗಾತಿಯ ಮಾತಿನಿಂದ ಸಾಲವನ್ನು ಮಾಡಬೇಕಾಗುವುದು. ನೀವು ಇತರರ ಒಳ್ಳೆಯದನ್ನು ಯೋಚಿಸುವಿರಿ ಹಾಗೂ ಒಳ್ಲೆಯ ಮನಸ್ಸಿನಿಂದ ಸೇವೆ ಮಾಡುತ್ತೀರಿ. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಮಕ್ಕಳನ್ನು ಸಂತೋಷವಾಗಿ ಇಡುವುದು ಆಗದು. ಬಹಳ ದಿನಗಳಿಂದ ಒತ್ತಡದಲ್ಲಿ ಇದ್ದ ಕಾರಣ ಇಂದು ಎಲ್ಲವನ್ನೂ ಮರೆಯು ದಿನದ ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲಿಯೇ ಕಳೆಯುವಿರಿ. ದಾನದಿಂದ ಪುಣ್ಯವನ್ನು ಗಳಿಸುವಿರಿ.

ತುಲಾ ರಾಶಿ :ವ್ಯಾಪಾರದ ದೃಷ್ಟಿಯಿಂದಲೇ ಎಲ್ಲವನ್ನೂ ನೋಡುವ ಕಾರಣ, ಹಣದ ಉಳಿತಾಯದ ಬಗ್ಗೆ ಬಹಳ ಕಾಳಜಿ ಇರುವುದು. ಸಂಗಾತಿಯ ಈಡೇರಿಕೆಯನ್ನು ನೀವು ಪೂರ್ಣ ಮಾಡುವಿರಿ. ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ವ್ಯವಹಾರದಲ್ಲಿ ಹಣದ ಲಾಭವಾಗಲಿದೆ. ತಂದೆ ತಾಯಿಯರ ಸೇವೆಯನ್ನು ಮಾಡುವ ಅವಕಾಶ ಸಿಗುವುದು. ಮನೆಯ ಕೆಲಸವು ಆಗಿಲ್ಲವೆಂದು ಕೋಪವು ಇರಲಿದ್ದು ಅದನ್ನು ಪ್ರಕಟಿಸುವಿರಿ. ನಿಮ್ಮ‌ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ಉದ್ಯೋಗವನ್ನು ಕೊಡಿಸಲು ನಿಮಗೆ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಹೇಳದೇ ಮುಚ್ಚಿಡುವಿರಿ. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಪಾಪಪ್ರಜ್ಞೆಯಿಂದ ಹೊರಬರಲು ನಿಮಗೆ ಆಗದು.

ವೃಶ್ಚಿಕ ರಾಶಿ :ಸಾಮಾಜಿಕ ವಲಯದಿಂದ ನಿಮಗೆ ಉತ್ತಮ ಸ್ಪಂದನೆ ಸಿಗಬಹುದು. ನಿಮ್ಮ ವ್ಯಾಪಾರವು ಗುಣಮಟ್ಟದಿಂದ ಕೂಡಿರಲಿದೆ. ನಿರ್ಮಾಣದ ಕಾರ್ಯಗಳನ್ನು ನೀವು ವಹಿಸಿಕೊಳ್ಳುವ ಸಾಧ್ಯತೆ ಇದೆ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ಪೋಷಕರ ಬೆಂಬಲವು ಆತಂಕವನ್ನು ಕಡಿಮೆ ಮಾಡಬಹುದು. ಮಾತಿನಲ್ಲಿ ಮಾಧುರ್ಯ ಇಲ್ಲದಿದ್ದರೆ ಸಂಬಂಧದಲ್ಲಿ ಕಹಿಯಾದೀತು. ವಿವಿಧ ಮೂಲಗಳಿಂದ ನಿಮಗೆ ಆದಾಯವು ಬರಲಿದ್ದು ಹೂಡಿಕೆಯ ಕಡೆ ನಿಮ್ಮ ಗಮನ ಇರುವುದು. ಕೃಷಿಯ ಉತ್ಪಾಸನೆಯು ಕುಂಠಿತವಾದಂತೆ ಅನ್ನಿಸೀತು. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ಬೇಡಬೆಂದು ಬಿಟ್ಟಿದ್ದನ್ನು ಮತ್ತೆ ಎತ್ತಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು.

ಧನು ರಾಶಿ :ಉತ್ತಮ ಹವ್ಯಾಸಗಳು ನಿಮ್ಮ ಬದುಕಿನ ದಿಕ್ಕನ್ನು ಬದಲಿಸೀತು. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ನಿರುದ್ಯೋಗಿಗಳು ಬಯಸಿದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ.
ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಆದಾಯದಲ್ಲಿ ಪೂರ್ಣತೃಪ್ತಿಯು ನಿಮಗೆ ಇರದು. ಬಂಧುಗಳ ವಿಯೋಗವೂ ಆಗಬಹುದು. ಸ್ನೇಹಿತರು ಕೇಳಿದರೂ ಸಹಾಯ ಮಾಡದೇ ಇರುವುದು, ನಿಮಗೆ ಅನುಮಾನವು ಬರುವಂತೆ ಮಾಡುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು, ನಿಮಗೆ ಖುಷಿ ಕೊಡುವುದು.

ಮಕರ ರಾಶಿ :ಅಪರೂಪದ ಜನರನ್ನು ಭೇಟಿಯಾದ ಕಾರಣ ನಿಮ್ಮ ಜೀವನಕ್ಕೆ ಹೊಸ ದಿಕ್ಕು ಸಿಗಬಹುದು. ರಾಜಕೀಯವು ನಿಮ್ಮನ್ನು ಪ್ರಭಾವಿಸುವ ಸಾಧ್ಯತೆಯೂ ಇದೆ. ನಿಮ್ಮ ವ್ಯವಹಾರವನ್ನು ಮುನ್ನಡೆಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತೀರಿ. ಕಠಿಣ ಪರಿಶ್ರಮವು ನಿಷ್ಫಲವೆಂದು ಬೇಸರಿಸುವುದು ಬೇಡ.‌ ಯಾವುದೂ ನಿಷ್ಪ್ರಯೋನವಾಗದು. ಸಮಯ ಬೇಕಷ್ಟೇ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು. ಬಂಗಾರದ ಮೇಲೆ‌ ಹೂಡಿಕೆ ಮಾಡುವಿರಿ.

ಕುಂಭ ರಾಶಿ :ನಿಮ್ಮ ಪ್ರತಿಭೆಯಿಂದ ಎಲ್ಲರಿಗೂ ಮೆಚ್ಚಿಗೆಯಾಗುವುದು. ನಿಮ್ಮೊಳಗೆ ಅಡಗಿರುವ ಶಕ್ತಿಯನ್ನು ಹೊರತಂದು ಪೂರ್ಣವಾಗಿ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಒಂದು ಯೋಜನೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡುವ ಅವಶ್ಯಕತೆ ಇದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಇಂದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇಂದು ಮಾಡಿದ ಕಾರ್ಯವು ನೀರಿನಲ್ಲಿ ಹೋಮ ಮಾಡಿದಂತೆ. ಎಂದೋ ಸ್ಥಗಿತಗೊಂಡ ಕೆಲಸವನ್ನು ಪೂರ್ಣ ಮಾಡುವಿರಿ. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ. ಮನೆಯ ಕೆಲಸದಲ್ಲಿ ಸಮಯವನ್ನು ಕಳೆಯುವಿರಿ.

ಮೀನ ರಾಶಿ :ಇಂದು ನಿಮಗೆ ಸುವರ್ಣ ಕ್ಷಣಗಳಂತಹ ಕೆಲವು ಉತ್ತಮ‌ ಅವಕಾಶಗಳು ಬರಲಿದ್ದು, ಅದನ್ನು ನಿಮ್ಮದಾಗಿಸಿಕೊಳ್ಳಿ. ನಿಮಗೆ ಅರಿವಿಲ್ಲದೇ ಪರರಿಗೆ ಹಿತವನ್ನು ಬಯಸುತ್ತಿರುತ್ತೀರಿ. ಇಂದು ನೀವು ಸರ್ಕಾರದಿಂದ ಬರುವ ಹಣವನ್ನು ಪಡೆದುಕೊಳ್ಳಬಹುದು. ನಿಮ್ಮ ಸಂಗಾತಿಯಿಂದ ಕೆಲವು ಕಾರ್ಯಗಳಿಗೆ ಬೆಂಬಲವನ್ನು ಪಡೆಯಬಹುದು. ಅನಪೇಕ್ಷಿತ ಮಾತುಗಳನ್ನು ನೀವು ಯಾರ ಜೊತೆಯೂ ಆಡುವುದು ಬೇಡ. ಇಂದಿನ ಕಾರ್ಯವನ್ನು ಸಾಧನೆ ಮಾಡಲು ಹೆಚ್ಚಿನ ಓಡಾಟವು ಬರಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ. ಆರೋಗ್ಯವೂ ಕೆಡಬಹುದು. ನಿಮಗೆ ಬರುವ ಆಸ್ತಿಯಲ್ಲಿ ಹೆಚ್ಚಿನ ಲಾಭವನ್ನು ಅಪೇಕ್ಷಿಸುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)