Horoscope: ಇನ್ನೊಬ್ಬರೊಂದಿಗೆ ಹೋಲಿಕೆ ಸಲ್ಲದು, ನಿಮ್ಮ ಯೋಗ್ಯತೆ ತಕ್ಕ ಕೆಲಸ ಸಿಗಲಿದೆ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಡಿಸೆಂಬರ್ 27, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಇನ್ನೊಬ್ಬರೊಂದಿಗೆ ಹೋಲಿಕೆ ಸಲ್ಲದು, ನಿಮ್ಮ ಯೋಗ್ಯತೆ ತಕ್ಕ ಕೆಲಸ ಸಿಗಲಿದೆ
ಪ್ರಾತಿನಿಧಿಕ ಚಿತ್ರImage Credit source: iStock Photo
Follow us
ಗಂಗಾಧರ​ ಬ. ಸಾಬೋಜಿ
|

Updated on: Dec 27, 2023 | 12:10 AM

ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 27) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 01:58 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:21 ರಿಂದ 09:45ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:09 ರಿಂದ 12:34ರ ವರೆಗೆ.

ಮೇಷ ರಾಶಿ: ನಿಮ್ಮ ಆರ್ಥಿಕ ಸಮಸ್ಯೆಯು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹೊಸ ಉದ್ಯಮಕ್ಕೆ ಸೇರಿಕೊಳ್ಳುವ ಆಸೆಯು ಬರಬಹುದು. ದೂರದಿಂದ ನೋಡಲು ಎಲ್ಲವೂ ಸುಂದರವೇ. ಹತ್ತಿರವಿದ್ದಾಗ ಮಾತ್ರ ಗೊತ್ತಾಗುತ್ತದೆ. ನಿಮ್ಮ ಯೋಗ್ಯತೆ ತಕ್ಕ ಕೆಲಸವು ಸಿಗಲಿದ್ದು ಇನ್ನೊಬ್ಬರನ್ನು ಹೋಲಿಕೆ ಮಾಡುತ್ತ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ಒಂದೇ ವಿಚಾರವನ್ನು ನಿಮಗೆ ಮತ್ತೆ ಮತ್ತೆ ನೆನಪಿಸಬೇಕಾದೀತು. ಮಾತಿನಲ್ಲಿ ನಿಖರತೆ ಇರಲಿ. ಅಸಭ್ಯವಾಗಿ ನಿಮ್ಮ ಬಗ್ಗೆ ಮಾತನಾಡಬಹುದು.

ವೃಷಭ ರಾಶಿ: ನಿಮಗೆ ಪ್ರೀತಿಕೊಟ್ಟವರ ಬಗ್ಗೆ ಕಾಳಜಿ ಇರಲಿ. ಹಠದ ಸ್ವಭಾವವು ನಿಮಗಷ್ಟೇ ಸಂತೋಷವನ್ನು ಕೊಟ್ಟೀತು. ಇಂದಿನ ನಿಮ್ಮ ವ್ಯವಹಾರವು ಗೌಪ್ಯತೆಯಿಂದ ಇರುವುದು. ಆರ್ಥಿಕ ಸಂಕಷ್ಟವನ್ನು ಯಾರ ಸಮೀಪವೂ ಹೇಳಿಕೊಳ್ಳುವುದು ಬೇಡ. ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ಸಿಟ್ಟನ್ನು ಅಲ್ಪ ಸಮಯದಲ್ಲಿ ಶಮನ ಮಾಡಿಕೊಂಡು ಯಥಾಸ್ಥಿತಿಗೆ ಬರುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು. ದಿನದ ಆರಂಭವು ಬಹಳ ಪ್ರಶಾಂತವಾಗಿ ಇರಲಿದೆ. ಆತ್ಮಗೌರವವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಗಂಭೀರವಾದ ಚರ್ಚೆಯನ್ನು ನೀವು ಹಾಸ್ಯ ಮಾಡಿ ಮುಗಿಸುವಿರಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಸದ್ಯದ ಪರಿಹಾರ.

ಮಿಥುನ ರಾಶಿ: ಇಂದು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಆತ್ಮವಿಶ್ವಾಸದಿಂದ ಇರಬೇಕಾಗುವುದು. ಸಹೋದರರು ನಿಮ್ಮಿಂದ ಹಣವನ್ನು ಸಾಲವಾಗಿ ಪಡೆಯಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವು ಸಿಗಲಿದ್ದು ರಹಸ್ಯವಾಗಿ ಇಟ್ಟುಕೊಳ್ಳುವಿರಿ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಅನಾರೋಗ್ಯದ ಭೀತಿಯು ಇರಲಿದೆ. ಮನಸ್ಸು ನಕಾರಾತ್ಮಕವಾಗಿ ಹರಡಬಹುದು. ನಿಮ್ಮ ಕ್ರಿಯಾಶೀಲ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಕಳ್ಳರ ಭೀತಿಯು ಕಾಡಬಹುದು.

ಕಟಕ ರಾಶಿ: ಆತ್ಮವಿಶ್ವಾಸದ ಕೊರತೆಯು ಅತಿಯಾಗಿ ಕಾಡುವುದು. ನಿಮ್ಮ ಸಂಕಟವನ್ನು ಯಾರ ಬಳಿಯೂ ಹೇಳಿಕೊಲ್ಳದೇ ಸುಮ್ಮನಾಗುವಿರಿ. ತಂದೆಯ ಕಡೆಯಿಂದ ಸಂಪತ್ತು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ ಮಕ್ಕಳ ಆಸೆಗಳನ್ನು ಪೂರೈಸುವತ್ತ ನಿಮ್ಮ ಗಮನ ಇರಲಿದೆ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುವರು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು. ಹಿರಿಯರಿಂದ ಸಮಾಧಾನ ಸಿಗಲಿದೆ. ಬೇಡದ ವ್ಯಕ್ತಿಗಳ ಮಾತುಗಳನ್ನು ಕೇಳಲು ನಿಮಗೆ ಇಷ್ಟವಾಗದು. ಸಾವಧಾನದ ಚಿಂತನೆಗಳು ಪ್ರಯೋಜನಕ್ಕೆ ಬಾರದು.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು