ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 8) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಮಧ್ಯಾಹ್ನ 05:06 ರಿಂದ ಸಂಜೆ 06:38, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:34 ರಿಂದ 05:06ರ ವರೆಗೆ.
ಮೇಷ ರಾಶಿ: ಹೂಡಿಕೆಯಿಂದ ಆರ್ಥಿಕವಾದ ಸಮಾಧಾನ ಸಿಗಲಿದೆ. ಇಂದು ನೀವು ಪರರ ಇಂಗಿತವನ್ನು ಅರ್ಥಮಾಡಿಕೊಂಡು ಮಾತನಾಡುವಿರಿ. ಇಂದು ನೀವು ಅಂದುಕೊಂಡಂತೆ ಆಗಲಿದ್ದು ಅನುಕೂಲವೆನಿಸುವುದು. ಕುಟುಂಬದ ಜೊತೆ ಸಂತೋಷದಿಂದ ದಿನ ಕಳೆಯುವಿರಿ. ವಾಹನ ಖರೀದಿಯನ್ನು ಮಾಡಲು ತೆರಳುವಿರಿ. ಸ್ತ್ರೀಯರಿಂದ ನಿಮಗೆ ಅನೇಕ ಸಹಾಯವು ಆಗಬಹುದು. ನಿಮಗೆ ಬರಬೇಕಾದ ಹಣವನ್ನು ಇಂದು ನೀವೇ ಖುದ್ದಾಗಿ ಹೋಗಿ ಪಡೆಯುವಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವುದು ಉತ್ತಮ. ವ್ಯಾಪಾರದಲ್ಲಿ ಬೇಡಿಕೆ ಇದ್ದು ಪೂರೈಕೆ ಕಷ್ಟವಾಗಬಹುದು. ಬಂಧುಗಳ ಮನೆಯಲ್ಲಿ ಉಳಿಯುವುದು ಅನಿವಾರ್ಯ ಆದೀತು. ಪತ್ನಿಯನ್ನು ದ್ವೇಷಿಸುವ ಮಾನಸಿಕತೆ ಉಂಟಾಗಲಿದೆ. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸೂಕ್ಷ್ಮ ವ್ಯವಹಾರವನ್ನು ನಿರ್ವಹಿಸಲು ಸುಲಭವಾಗಿ ಸಾಧ್ಯವಾಗದು. ಒಪ್ಪಿಕೊಂಡ ಸಮಯಕ್ಕೆ ನಿಮ್ಮ ಕೆಲಸವನ್ನು ಮಾಡಿಕೊಡುವಿರಿ.
ವೃಷಭ ರಾಶಿ: ನಿಮ್ಮ ಆದಾಯವು ಇನ್ನೊಬ್ಬರ ಕಣ್ಣುಕುಕ್ಕಬಹುದಿ. ಇಂದು ನಿಮಗೆ ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಆಹಾರದ ವ್ಯತ್ಯಾಸವು ಅನಾರೋಗ್ಯಕ್ಕೆ ಕಾರಣವಾಗಬಹುದು. ಮಾತಿನ ಮೇಲೆ ನಿಮಗೆ ಹಿಡಿತವಿರಲಿ. ಕಲಾವಿದರು ಅವಕಾಶಗಳನ್ನು ಕೇಳಿ ಪಡೆಯಬೇಕಾದೀತು. ಶತ್ರುಗಳ ಕಾಟವು ಬೇರೆ ಕೆಲಸವನ್ನು ನಿಧಾನ ಮಾಡಬಹುದು. ನಿಮ್ಮ ಯೋಜಿತ ಖರ್ಚು ಮೊದಲೇ ಆಗಿದ್ದು ನಿಮಗೆ ಸ್ವಲ್ಪ ಆತಂಕವಾಗಬಹುದು. ಇಂದು ನಿಮಗೆ ಕಛೇರಿಯ ಘಟನೆಗಳೂ ನೆನಪಾಗಬಹುದು. ಅತಿಯಾದ ಕೆಲಸದಿಂದ ಆರೋಗ್ಯವು ಕೆಡಬಹುದು. ನಿಮ್ಮ ಮಾತನ್ನು ನಂಬಲು ಅಸಾಧ್ಯವಾಗಬಹುದು. ನಿಮ್ಮವರೇ ನಿಮ್ಮ ಬಗ್ಗೆ ಆಪಾದನೆಯನ್ನು ಮಾಡುವರು. ನಿಮ್ಮ ಮಾತಿನಲ್ಲಿ ಇರುವ ಸುಳ್ಳು ಇತರರಿಗೂ ಗೊತ್ತಾಗುವುದು. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಇಂದು ಸಾಲವಾಗಿ ಹಣವನ್ನು ಕೊಡುವಿರಿ. ನಿಮ್ಮ ಮಾತು ಸರಿಯಾಗಿ ಅರ್ಥವಾಗದೇ ಕಲಹವಾಗಬಹುದು.
ಮಿಥುನ ರಾಶಿ: ಹಲವು ವೈಷಮ್ಯಗಳಿಂದ ನಿಮಗೆ ಮಾನಸಿಕವಾಗಿ ಕಷ್ಟವಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಆರ್ಥಿಕತೆಯಿಂದ ಬೀಗುವುದು ಬೇಡ. ಮನಸ್ಸಿನಲ್ಲಿ ನಾನಾತರಹದ ಆಲೋಚನೆಗಳು ಬರಬಹುದು. ದೂರ ಪ್ರಯಾಣ ಮಾಡಲಿದ್ದು ಇಷ್ಟದೇವರನ್ನು ಸ್ಮರಿಸಿಕೊಂಡು ಹೋಗುವುದು ಉತ್ತಮ. ವಾಹನವನ್ನು ಚಲಾಯಿಸಲು ಮನಸ್ಸು ಮಾಡುವಿರಿ. ಪರಸ್ಪರ ವಿರುದ್ಧ ಆಹಾರದಿಂದ ನಿಮ್ಮ ಆರೋಗ್ಯವು ಕೆಡಬಹುದು. ನೀವು ಬಿದ್ದಾಗ ಯಾರೂ ಮೇಲೆತ್ತಲೆ ಬಾರರು. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಅಸಹಜ ನಡೆಯಿಂದ ಬೇರೆಯವರಿಗೆ ಬೇಸರವಾದೀತು. ಕೆಲಸ ಕೊಡಿಸುವುವಲದಾಗಿ ನಿಮ್ಮನ್ನು ನಂಬಿಸುವರು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಅನಗತ್ಯ ಮಾತುಗಳಿಗಿಂತ ಮೌನವೇ ಲೇಸೆನಿಸಬಹುದು. ನೀವು ಇಂದು ನಿಮಗೆ ಆಗುವಷ್ಟು ಮಾತ್ರ ಕೆಲಸವನ್ನು ಮಾಡಿ.
ಕಟಕ ರಾಶಿ: ಸಹನೆಯ ಕಟ್ಟೆಯನ್ನು ಒಡೆಯಲು ನಿಮಗೆ ಹೆಚ್ಚು ಸಮಯ ಬೇಕಿಲ್ಲ. ಯಾರದೋ ಕೆಳಗೆ ಕೆಲಸ ಮಾಡುವ ಮನಸ್ಸು ಹೋಗುವುದು. ಭೂಮಿಯಿಂದ ಲಾಭ ಪಡೆಯುವ ತಂತ್ರವನ್ನು ಮಾಡುವಿರಿ. ಒಳಗೆ ಕ್ರೂರ ಹೊರಗೆ ಸೌಮ್ಯವಾದ ಮುಖವಾಡ ಧರಿಸುವಿರಿ. ಮಕ್ಕಳ ವಿವಾಹದ ಚಿಂತೆ ನಿಮಗಿರಲಿದೆ. ಪ್ರೀತಿಯಿಂದ ಕೊಟ್ಟಿದ್ದನ್ನು ಮರಳಿ ಕೇಳುವುದು ಬೇಡ. ಸಂಗಾತಿಯ ಜೊತೆ ಕಾಲು ಕೆರದುಕೊಂಡು ಜಗಳಕ್ಕೆ ಹೋಗುವುದು ಬೇಡ. ನಿಮ್ಮನ್ನು ಇನ್ನೊಬ್ಬರ ಸ್ಥಳದಲ್ಲಿ ಕಲ್ಪನೆ ಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಸಂತೋಷವಾಗುವುದು. ನಿಮ್ಮವರ ಜೊತೆಯೇ ಎಲ್ಲ ವ್ಯವಹಾರವನ್ನು ಮಾಡಿ. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ತಮಾಷೆಯು ಅತಿರೇಕವಾದೀತು. ಎಲ್ಲವನ್ನೂ ಬದಲಿಸುತ್ತೇನೆ ಎಂಬ ಅಧಿಕಾರದ ಮಾತು ವ್ಯರ್ಥವಾಗಬಹುದು. ಯಾರನ್ನೂ ನೀವು ನಿಮಗಿಂತ ಕೇವಲವಾಗಿ ನೋಡುವುದು ಬೇಡ. ಅವರದ್ದೇ ಆದ ಸ್ಥಾನವು ಅವರಿಗೆ ಇರುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಸಾಕು.