Daily Horoscope 08 September 2024: ಈ ರಾಶಿಯವರು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ-ಎಚ್ಚರ

ಸೆಪ್ಟೆಂಬರ್​ 8,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಬಗ್ಗೆ ಆಲೋಚಿಸುವಿರಿ. ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಅನಿರೀಕ್ಷಿತ ದ್ರವ್ಯದ ಲಾಭದಿಂದ ನಿಮಗೆ ಸಂತೋಷವಾಗಲಿದೆ. ಫಲಿತಾಂಶಕ್ಕೆ ಮೊದಲೇ ನಿಮಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 08 September 2024: ಈ ರಾಶಿಯವರು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ-ಎಚ್ಚರ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2024 | 12:01 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಮಧ್ಯಾಹ್ನ 05:06 ರಿಂದ ಸಂಜೆ 06:38, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:34 ರಿಂದ 05:06ರ ವರೆಗೆ.

ಮೇಷ ರಾಶಿ : ಹೂಡಿಕೆಯಿಂದ ಆರ್ಥಿಕವಾದ ಸಮಾಧಾನ‌ ಸಿಗಲಿದೆ. ಇಂದು ನೀವು ಪರರ ಇಂಗಿತವನ್ನು ಅರ್ಥಮಾಡಿಕೊಂಡು ಮಾತನಾಡುವಿರಿ. ಇಂದು ನೀವು ಅಂದುಕೊಂಡಂತೆ ಆಗಲಿದ್ದು ಅನುಕೂಲವೆನಿಸುವುದು. ಕುಟುಂಬದ ಜೊತೆ ಸಂತೋಷದಿಂದ ದಿನ ಕಳೆಯುವಿರಿ. ವಾಹನ ಖರೀದಿಯನ್ನು ಮಾಡಲು ತೆರಳುವಿರಿ. ಸ್ತ್ರೀಯರಿಂದ ನಿಮಗೆ ಅನೇಕ ಸಹಾಯವು ಆಗಬಹುದು. ನಿಮಗೆ ಬರಬೇಕಾದ ಹಣವನ್ನು ಇಂದು ನೀವೇ ಖುದ್ದಾಗಿ ಹೋಗಿ ಪಡೆಯುವಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವುದು ಉತ್ತಮ. ವ್ಯಾಪಾರದಲ್ಲಿ ಬೇಡಿಕೆ ಇದ್ದು ಪೂರೈಕೆ ಕಷ್ಟವಾಗಬಹುದು. ಬಂಧುಗಳ‌ ಮನೆಯಲ್ಲಿ ಉಳಿಯುವುದು ಅನಿವಾರ್ಯ ಆದೀತು. ಪತ್ನಿಯನ್ನು ದ್ವೇಷಿಸುವ ಮಾನಸಿಕತೆ ಉಂಟಾಗಲಿದೆ. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸೂಕ್ಷ್ಮ ವ್ಯವಹಾರವನ್ನು ನಿರ್ವಹಿಸಲು ಸುಲಭವಾಗಿ ಸಾಧ್ಯವಾಗದು. ಒಪ್ಪಿಕೊಂಡ ಸಮಯಕ್ಕೆ ನಿಮ್ಮ ಕೆಲಸವನ್ನು ಮಾಡಿಕೊಡುವಿರಿ.

ವೃಷಭ ರಾಶಿ : ನಿಮ್ಮ ಆದಾಯವು ಇನ್ನೊಬ್ಬರ ಕಣ್ಣುಕುಕ್ಕಬಹುದಿ. ಇಂದು ನಿಮಗೆ ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಆಹಾರದ ವ್ಯತ್ಯಾಸವು ಅನಾರೋಗ್ಯಕ್ಕೆ ಕಾರಣವಾಗಬಹುದು. ಮಾತಿನ ಮೇಲೆ ನಿಮಗೆ ಹಿಡಿತವಿರಲಿ. ಕಲಾವಿದರು ಅವಕಾಶಗಳನ್ನು ಕೇಳಿ ಪಡೆಯಬೇಕಾದೀತು. ಶತ್ರುಗಳ ಕಾಟವು ಬೇರೆ ಕೆಲಸವನ್ನು ನಿಧಾನ ಮಾಡಬಹುದು. ನಿಮ್ಮ ಯೋಜಿತ ಖರ್ಚು ಮೊದಲೇ ಆಗಿದ್ದು ನಿಮಗೆ ಸ್ವಲ್ಪ ಆತಂಕವಾಗಬಹುದು. ಇಂದು ನಿಮಗೆ ಕಛೇರಿಯ ಘಟನೆಗಳೂ ನೆನಪಾಗಬಹುದು. ಅತಿಯಾದ ಕೆಲಸದಿಂದ ಆರೋಗ್ಯವು ಕೆಡಬಹುದು. ನಿಮ್ಮ ಮಾತನ್ನು ನಂಬಲು ಅಸಾಧ್ಯವಾಗಬಹುದು. ನಿಮ್ಮವರೇ ನಿಮ್ಮ‌ ಬಗ್ಗೆ ಆಪಾದನೆಯನ್ನು ಮಾಡುವರು. ನಿಮ್ಮ ಮಾತಿನಲ್ಲಿ ಇರುವ ಸುಳ್ಳು ಇತರರಿಗೂ ಗೊತ್ತಾಗುವುದು. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಇಂದು ಸಾಲವಾಗಿ ಹಣವನ್ನು ಕೊಡುವಿರಿ. ನಿಮ್ಮ ಮಾತು ಸರಿಯಾಗಿ ಅರ್ಥವಾಗದೇ ಕಲಹವಾಗಬಹುದು.

ಮಿಥುನ ರಾಶಿ : ಹಲವು ವೈಷಮ್ಯಗಳಿಂದ ನಿಮಗೆ ಮಾನಸಿಕವಾಗಿ ಕಷ್ಟವಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಆರ್ಥಿಕತೆಯಿಂದ ಬೀಗುವುದು ಬೇಡ. ಮನಸ್ಸಿನಲ್ಲಿ ನಾನಾತರಹದ ಆಲೋಚನೆಗಳು ಬರಬಹುದು. ದೂರ ಪ್ರಯಾಣ ಮಾಡಲಿದ್ದು ಇಷ್ಟದೇವರನ್ನು ಸ್ಮರಿಸಿಕೊಂಡು ಹೋಗುವುದು ಉತ್ತಮ. ವಾಹನವನ್ನು ಚಲಾಯಿಸಲು ಮನಸ್ಸು ಮಾಡುವಿರಿ. ಪರಸ್ಪರ ವಿರುದ್ಧ ಆಹಾರದಿಂದ ನಿಮ್ಮ ಆರೋಗ್ಯವು ಕೆಡಬಹುದು. ನೀವು ಬಿದ್ದಾಗ ಯಾರೂ ಮೇಲೆತ್ತಲೆ ಬಾರರು. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಅಸಹಜ ನಡೆಯಿಂದ ಬೇರೆಯವರಿಗೆ ಬೇಸರವಾದೀತು. ಕೆಲಸ ಕೊಡಿಸುವುವಲದಾಗಿ ನಿಮ್ಮನ್ನು ನಂಬಿಸುವರು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಅನಗತ್ಯ ಮಾತುಗಳಿಗಿಂತ ಮೌನವೇ ಲೇಸೆನಿಸಬಹುದು. ನೀವು ಇಂದು ನಿಮಗೆ ಆಗುವಷ್ಟು ಮಾತ್ರ ಕೆಲಸವನ್ನು ಮಾಡಿ.

ಕಟಕ ರಾಶಿ : ಸಹನೆಯ ಕಟ್ಟೆಯನ್ನು ಒಡೆಯಲು ನಿಮಗೆ ಹೆಚ್ಚು ಸಮಯ ಬೇಕಿಲ್ಲ. ಯಾರದೋ ಕೆಳಗೆ ಕೆಲಸ ಮಾಡುವ ಮನಸ್ಸು ಹೋಗುವುದು. ಭೂಮಿಯಿಂದ ಲಾಭ ಪಡೆಯುವ ತಂತ್ರವನ್ನು ಮಾಡುವಿರಿ. ಒಳಗೆ ಕ್ರೂರ ಹೊರಗೆ ಸೌಮ್ಯವಾದ ಮುಖವಾಡ ಧರಿಸುವಿರಿ. ಮಕ್ಕಳ ವಿವಾಹದ ಚಿಂತೆ ನಿಮಗಿರಲಿದೆ. ಪ್ರೀತಿಯಿಂದ ಕೊಟ್ಟಿದ್ದನ್ನು ಮರಳಿ ಕೇಳುವುದು ಬೇಡ. ಸಂಗಾತಿಯ ಜೊತೆ ಕಾಲು ಕೆರದುಕೊಂಡು ಜಗಳಕ್ಕೆ ಹೋಗುವುದು ಬೇಡ. ನಿಮ್ಮನ್ನು ಇನ್ನೊಬ್ಬರ ಸ್ಥಳದಲ್ಲಿ ಕಲ್ಪನೆ ಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಸಂತೋಷವಾಗುವುದು. ನಿಮ್ಮವರ ಜೊತೆಯೇ ಎಲ್ಲ ವ್ಯವಹಾರವನ್ನು ಮಾಡಿ. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ತಮಾಷೆಯು ಅತಿರೇಕವಾದೀತು. ಎಲ್ಲವನ್ನೂ ಬದಲಿಸುತ್ತೇನೆ ಎಂಬ ಅಧಿಕಾರದ ಮಾತು ವ್ಯರ್ಥವಾಗಬಹುದು. ಯಾರನ್ನೂ ನೀವು ನಿಮಗಿಂತ ಕೇವಲವಾಗಿ ನೋಡುವುದು ಬೇಡ. ಅವರದ್ದೇ ಆದ ಸ್ಥಾನವು ಅವರಿಗೆ ಇರುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಸಾಕು.

ಸಿಂಹ ರಾಶಿ : ನಂಬಲರ್ಹರಾದವರಿಂದ ಮಾತ್ರ ಸತ್ಯಾಸತ್ಯತೆಯನ್ನು ತಿಳಿಯಿರಿ. ನೀವು ಇಂದು ಆಪ್ತರಿಂದ ಅಲ್ಪ ಹಣವನ್ನು ಸಾಲವಾಗಿ ಪಡೆಯುವಿರಿ. ಇಂದಿನ‌ ಕೆಲಸದಲ್ಲಿ ಹೆಚ್ಚಿನ ಮುನ್ನಡೆಯಾಗಲಿದ್ದು ನಿಮ್ಮ ಪ್ರಯತ್ನದ ಬಗ್ಗೆ ವಿಶ್ವಾಸವು ಮೂಡುವುದು. ಯಾರಾದರೂ ಸುಳ್ಳು ಹೇಳಿ ಸರಳವಾಗಿ ನಿಮ್ಮನ್ನು ನಂಬಿಸುವರು. ಆಕಸ್ಮಿಕವಾದ ವಿಷಯಗಳು ನಿಮಗೆ ಕ್ಲೇಶವನ್ನು ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಅಸಮಾಧನಾವನ್ನು ಕೊಡಬಹುದು. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆತ್ಮೀಯರ ಭೇಟಿಯು ಆಕಸ್ಮಿಕವಾಗುವುದು. ಅಲ್ಪದರಲ್ಲಿ ತೃಪ್ತಿಪಡಬೇಕಾದೀತು. ನೀವು ಸಂತೋಷವಾಗಿರಲು ನಾನಾ ಕಾರಣಗಳನ್ನು ಹುಡುಕಬಹುದು. ಅನ್ಯರಿಂದ ಸಂತೋಷವನ್ನು ಪಡೆಯುವಿರಿ. ಉದ್ಯೋಗಕ್ಕೆ ವಿದೇಶದತ್ತ ಗಮನವಿರುವುದು. ಇನ್ನೊಬ್ಬರ ಮೇಲಿನ ದ್ವೇಷವನ್ನು ನಿಲ್ಲಿಸಲಾಗದು. ಒಳ್ಳೆಯ ಗುರಿಯ ಕಡೆಗೆ ಇರುವ ನಿಮ್ಮ ಪ್ರಾಮಾಣಿಕ ಪ್ರಯತ್ನವನ್ನು ಬಿಡದೇ ಮುಂದುವರಿಯಲಿ.

ಕನ್ಯಾ ರಾಶಿ : ಆತ್ಮಬಲವಿದ್ದರೆ ಯಾವುದಕ್ಕೂ ಪಲಾಯನ ಮಾಡಬೇಕಿಲ್ಲ. ಆರೋಪವನ್ನೂ ಅಪವಾದವನ್ನೂ ಧೈರ್ಯದಿಂದ ಎದುರಿಸುವಿರಿ. ನಿಮ್ಮ ಉದ್ಯಮಕ್ಕೆ ಸಲಹೆಗಾರರನ್ನು ನಿಯಮಿಸಿಕೊಳ್ಳುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ಲಾಭವನ್ನು ನೀವು ನಿರೀಕ್ಷಿಸುವಿರಿ. ಯಾರಾದರೂ ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಬಹುದು. ನೂತನ ವಸ್ತ್ರಗಳನ್ನು ಖರೀದಿ ಮಾಡುವಿರಿ. ನಿಮ್ಮ ಆದಾಯದ ಮೂಲವು ಅಧಿಕವಾಗಬಹುದು. ಕೆಲಸದಲ್ಲಿ ಎಂದಿನ ಪ್ರಾಮಾಣಿಕತೆ ಇರಲಿ. ಪಾಲುದಾರಿಕೆಯಿಂದ ಹೊರಬರಲು ಬಯಸುವಿರಿ. ಅನ್ಯಮನಃಸ್ಥಿತಿಯಿಂದ ಏಕಾಗ್ರತೆಗೆ ಭಂಗಬರುವುದು. ಸ್ನೇಹಿತರ ವಿಚಾರದಲ್ಲಿ ನೀವು ಮೃದು‌ಮನಸ್ಸನ್ನು ಹೊಂದಿರುವಿರಿ. ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಎಲ್ಲವನ್ನೂ ಬಲ್ಲವರಂತೆ ತೋರಿಸಿಕೊಳ್ಳುವಿರಿ. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗ ಮಾಡಬಹುದು. ನಿಮ್ಮ ಸುತ್ತಾಟವು ಆಯಾಸದಲ್ಲಿ ಕೊನೆಯಾಗುವುದು.

ತುಲಾ ರಾಶಿ : ನಿಮಗೆ ಬರಲಿರುವ ಕಾರ್ಯದಿಂದ ನೀವು ದೂರಸರಿಯುವಿರಿ. ಇಂದು ವ್ಯಾಪಾರದ ಪೈಪೋಟಿಯು ನಿಮ್ಮ ನೆಮ್ಮದಿಯನ್ನು ಕೆಣಕಬಹುದು. ನಿಮ್ಮ ಮನಸ್ಸಿನಲ್ಲಿ ಅವ್ಯಕ್ತವಾಗಿ ಆತಂಕವು ಮನೆ ಮಾಡಬಹುದು. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ಅಸಮಾಧನ ಇರಲಿದೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಮುಂದಕ್ಕೆ ಹೋಗಬಹುದು. ಸಹನೆಯಿಂದ ಆಗುವ ಲಾಭವು ಅನುಭವವೇದ್ಯವಾಗಿರಲಿದೆ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ನಡೆದುಕೊಳ್ಳುವರು.‌ ಪದೋನ್ನತಿಯನ್ನು ನೀವು ಬಯಸಲಿದ್ದೀರಿ. ಕೆಲವರಿಂದ ಅನಿರೀಕ್ಷಿತವಾದುದು ಜರುಗಬಹುದು. ಭೂಮಿಯ ವ್ಯವಹಾರವು ಲಾಭದಾಯಕವಾಗಿಲ್ಲ. ಅಲ್ಪ ಸುಖಕ್ಕಾಗಿ ನೀವು ಹೆಚ್ಚು ಶ್ರಮಿಸುವಿರಿ. ನಿಮ್ಮ ಆಡಿದ ಮಾತಿಗೆ ಅರ್ಥವಿರಲಿ. ಕಲಾವಿದರು ವಿದೇಶಗಳಿಗೆ ಹೋಗುವ ಅವಕಾಶ ಇರುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಯಾರದೋ ಕಾರ್ಯಕ್ಕೆ ನೀವು ಸಮಯಕೊಡಬೇಕಾದೀತು.

ವೃಶ್ಚಿಕ ರಾಶಿ : ವೃತ್ತಿಯ ಬಗ್ಗೆ ನಿಮಗೆ ಕಲ್ಪನೆ ಸರಿಯಾಗಿ ಇರದು. ನೀವು ಎಲ್ಲವೂ ದೈವಾನುಗ್ರದಂತೆ ಆಗುತ್ತದೆ ಎಂದು ಸುಮ್ಮನಿರದೇ ಪ್ರಯತ್ನವನ್ನೂ ಮಾಡಿ. ಪ್ರಯೋಜನಕ್ಕೆ ಬಾರದ ಸಂಗತಿಗಳನ್ನು ಮಾತನಾಡಿ ಸಮಯ ಹಾಳು ಮಾಡುವಿರಿ. ಸಂಗಾತಿಯ ಮೌನವು ನಿಮ್ಮಲ್ಲಿ ಆತಂಕವನ್ನು ಹುಟ್ಟಿಸಬಹುದು. ನಿಯಮ ಉಲ್ಲಂಘನೆಯನ್ನು ಮಾಡಿ ದಂಡ ಕಟ್ಟಬಹುದು. ಇಷ್ಟವಾದ ವಸ್ತುವು ನಷ್ಟವಾಗಿ ಸಂಕಟ ಪಡುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ. ಧಾರ್ಮಿಕ ಕಾರ್ಯದಲ್ಲಿ ತೊಡಗಿದವರಲ್ಲಿ ಶ್ರದ್ಧೆ ಕಾಣಿಸುವುದು. ಸುತ್ತಾಟದಲ್ಲಿ ಸುಖವನ್ನು ಕಾಣುವಿರಿ. ಮನಸ್ಸಿನಲ್ಲಿ ಅಧಿಕ ಚಿಂತೆಗಳು ಸುಳಿದಾಡುವುದು. ನಿಮ್ಮನ್ನು ಅಪರಿಚಿತರು ಭೇಟಿ ಮಾಡಬಹುದು. ಅವಶ್ಯಕತೆಗೆ ಇದ್ದಷ್ಟನ್ನು ಮಾತ್ರ ಹೇಳಿ. ಉದ್ಯೋಗದಲ್ಲಿ ಸರಿಯಾದ ಮಿತ್ರರು ಸಿಗಬಹುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ನಿಮ್ಮ ನಿರ್ಧಾರಕ್ಕೆ ಸಂಗಾತಿಯ ಬೆಂಬಲವು ಸಿಗದು. ನಿಮ್ಮವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ.

ಧನು ರಾಶಿ : ಕೌಟುಂಬಿಕ ವಿಚಾರವು ಗೌಪ್ಯವಾಗಿರುವುದು. ಉದ್ಯಮಿಗಳು ಬಹಳ ಓಡಾಟದಿಂದ ಲಾಭವನ್ನು ಮಾಡಿಕೊಳ್ಳಬೇಕು. ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸಿದರೂ ನೀವು ಅದನ್ನು ಬಿಡಲಾರಿರಿ. ನಿಮಗೆ ಶತ್ರುಗಳು ಪಾಠಕಲಿಸುವರು. ನಿಮ್ಮನ್ನು ವ್ಯಕ್ತಪಡಿಸಲಾಗದ ಸಮಸ್ಯೆಯೊಂದು ಕಾಡುತ್ತಿದ್ದು ಅದನ್ನು ಪರಿಹಾರ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಸಣ್ಣ ಕಿರಿಕಿರಿ ಆರಂಭವಾಗುವುದು. ನಿಮ್ಮ ಇಷ್ಟದವರನ್ನು ಭೇಟಿಯಾಗುವಿರಿ. ದ್ವೇಷಭಾವವನ್ನು ಬಿಟ್ಟು ಮುಂದುವರಿಯುವುದು ಉತ್ತಮ. ಒತ್ತಡದಿಂದ ನಿಮಗೆ ಕೆಲಸಗಳು ಸೂಚಿಸದೇ ಹೋಗಬಹುದು. ಬಂಧುಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವಿರಿ. ಹಿರಿಯರಿಂದ ನಿಮಗೆ ಸರಿಯಾದ ಮಾರ್ಗದರ್ಶನ ಸಿಗದು. ನಿಮ್ಮವರ ವರ್ತನೆಯು ನಿಮ್ಮ‌ ದುಃಖಕ್ಕೆ ಕಾರಣವಾಗಬಹುದು. ನಿಮ್ಮಿಂದ ಹೆಚ್ಚು ಉಪಯುಕ್ತವಾದ ಕೆಲಸಗಳು ಆಗಬಹುದು. ನಿಮ್ಮ ಒಳಮನಸ್ಸು ಹೇಳಿದಂತೆ ಆಗುವುದು. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುವುದು.

ಮಕರ ರಾಶಿ : ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಬಗ್ಗೆ ಆಲೋಚಿಸುವಿರಿ. ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಅನಿರೀಕ್ಷಿತ ದ್ರವ್ಯದ ಲಾಭದಿಂದ ನಿಮಗೆ ಸಂತೋಷವಾಗಲಿದೆ. ಫಲಿತಾಂಶಕ್ಕೆ ಮೊದಲೇ ನಿಮಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ನಿಷ್ಠುರದ ನಿಮ್ಮ ಮಾತಗಳನ್ನು ಕೇಳಿ ನಿಮ್ಮ ಬಗ್ಗೆ ಭಾವವು ಬದಲಾಗಬಹುದು. ಕಳೆದುಕೊಂಡಿದ್ದನ್ನು ಹೆಚ್ಚು ನೆನಪಿಸಿಕೊಳ್ಳುವಿರಿ. ಪುತ್ರೋತ್ಸವದ ಸಂತೋಷವು ಇರಲಿದೆ. ಸಾಮನ್ಯಜ್ಞಾನದ ಕೊರತೆಯು ನಿಮಗೆ ತಿಳಿಯಬಹುದು. ಸಂತೋಷಕ್ಕಾಗಿ ಯಾರನ್ನೋ ಅವಲಂಬಿಸಬೇಕಿಲ್ಲ. ದಾಂಪತ್ಯದಲ್ಲಿ ಪರಸ್ಪರ‌ ವೈರಿಗಳಂತೆ ಕಚ್ಚಾಡುವುದು ಬೇಡ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಿ ಹುಡುಕಾಟ ಮಾಡುವಿರಿ. ಪ್ರೀತಿಪಾತ್ರರಿಂದ ನೋವಾಗಬಹುದು.

ಕುಂಭ ರಾಶಿ : ಉನ್ನತ ಸ್ಥಾನಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಣ್ಣ ಪ್ರಯತ್ನವಾದರೂ ಅನುಕೂಲಕರವಾಗುವುದು. ಇಂದು ನಿಮ್ಮ ಪರಿಧಿಯನ್ನು ಮೀರಿ ವರ್ತಿಸುವಿರಿ. ಮನಸ್ಸಿನ ನೆಮ್ಮದಿಯನ್ನು ನೀವು ಹಾಳುಮಾಡಿಕೊಳ್ಳಲಿದ್ದೀರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗಬಹುದು. ನಿಮ್ಮ ನಿರೀಕ್ಷೆಯು ಹುಸಿಯಾಗಬಹುದು. ಉತ್ತಮವಾದ ಆಯ್ಕೆಯಲ್ಲಿ ನೀವು ಸೋಲುವಿರಿ. ನೀವು ಇಂದು ಅಸಹಜವಾಗಿ ವರ್ತಿಸುವಿರಿ. ಆಲಸ್ಯದ ಕಾರಣ ಕಾರ್ಯಕ್ಕೆ ನೆಪವನ್ನು ಕೊಡುವಿರಿ. ನಿಮ್ಮ ಬೆಳವಣಿಗೆಗೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸಿ. ಸಂಬಂಧಗಳು ನಿಮ್ಮ ಜೊತೆ ಶಾಶ್ವತವಾಗಿ ಇರಲಾರದು ಎಂಬ ಬೇಸರವೂ ಇರಲಿದೆ. ಮನಸ್ಸನ್ನು ಖಾಲಿ ಬಿಡದೇ ಏನನ್ನಾದರೂ ಆಲೋಚಿಸಿ. ಕುಟುಂಬದ ಭೇದವನ್ನು ಬಹಿರಂಗಪಡಿಸುವುದು ಬೇಡ. ಎಲ್ಲರೂ ಒಂದೇ ಎಂಬ ಭಾವನೆ ಇರಲಿ. ವೃತ್ತಿಯಲ್ಲಿ ಭಡ್ತಿಯನ್ನು ನೀವು ಅಪೇಕ್ಷಿಸುವಿರಿ.

ಮೀನ ರಾಶಿ : ಸಾಮಾಜಿಕ ಕಾರ್ಯದಲ್ಲಿ ಬೆಂಬಲ ಪಡೆಯುವಿರಿ. ನಿಮ್ಮ ವ್ಯಾಪಾರದಲ್ಲಿ ಇಂದು ವೆಚ್ಚಗಳು ಕಡಿಮೆಯಾಗಿ ಆದಾಯವೂ ಎಣಿಕೆಗಿಂತ ಅಧಿಕವಾಗಲಿದೆ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವೈವಾಹಿಕ ಜೀವನಕ್ಕೆ ಬಂಧುಗಳಿಂದ ಒತ್ತಡ ಬರಬಹುದು. ಆತುರದಿಂದ ಏನ್ನಾದರೂ ಮಾಡಿಕೊಳ್ಳಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳಲು ಹೋಗಬೇಡಿ. ದೂರ ಪ್ರಯಾಣದಲ್ಲಿ ದಾರಿ ತಪ್ಪಬಹುದು. ನಿಮ್ಮ ದಾರಿಯು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ವಸ್ತುಗಳ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಖರೀದಿಯನ್ನು ಬಹಳ ಸಂತೋಷದಿಂದ ಮಾಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ಕೊಡುವಿರಿ. ಇನ್ನೊಬ್ಬರ ಬಗ್ಗೆ ಇಂದು ನಿಮಗೆ ಹೆಚ್ಚು ಕುತೂಹಲ ಇರಲಿದೆ. ಅನಪೇಕ್ಷಿತ ಚರ್ಚೆಯಿಂದ ನೀವು ದೂರವಿರುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)