AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಈಜಲು ಹೋದ ಐವರು ನೀರುಪಾಲು

ಮಂತ್ರಾಲಯ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆಂದು ಬಂದಿದ್ದವರು, ಕಾರ್ಯಕ್ರಮದ ಬಳಿಕ ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ನದಿಯ ನೀರಿನ ಆ ತಿಳಿಯದೆ ಈಜಲು ಹೋಗಿ ಜಲಸಮಾಧಿಯಾಗಿದ್ದಾರೆ. ಅದೃಷ್ಟವಶಾತ್​​ ಓರ್ವ ಯುವತಿ ಪ್ರಾಣಾಪಾಯದಿಂದ ಬಚಾವ್​​ ಆಗಿದ್ದಾರೆ.

ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಈಜಲು ಹೋದ ಐವರು ನೀರುಪಾಲು
ಮೃತದೇಹಗಳಿಗಾಗಿ ಶೋಧImage Credit source: Tv9 Kannada
ಭೀಮೇಶ್​​ ಪೂಜಾರ್
| Edited By: |

Updated on:May 31, 2026 | 10:27 AM

Share

ರಾಯಚೂರು, ಮೇ 31: ರಾಜ್ಯದಲ್ಲಿ ಜಲ ದುರಂತಗಳು ಮುಂದುವರಿದಿದ್ದು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಘಟನೆ ಮಂತ್ರಾಲಯ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ. ಮೃತರನ್ನು ಹೈದರಾಬಾದ್‌ ಮೂಲದ ಯುವನ ಚಂದ್ರ(5), ಸತೀಶ್(35), ಮಂತ್ರಾಲಯ ಗ್ರಾಮದ ರಾಘವೇಂದ್ರ(25), ಧನುಷ್(23) ಉರವಕೊಂಡದ ಸಂಧ್ಯಾ(22) ಎಂದು ಗುರುತಿಸಲಾಗಿದೆ. ಮತ್ತೋರ್ವ ಯುವತಿ ಅಪರ್ಣಾ ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಖ್ಯಾಂಶಗಳು

  • ಮಂತ್ರಾಲಯ ಬಳಿಯ ನದಿಯಲ್ಲಿ ಘೋರ ದುರಂತ
  • ಈಜಲು ತೆರಳಿದ್ದ ಐವರು ತುಂಗಭದ್ರಾ ನದಿ ಪಾಲು
  • ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾದ ಯುವತಿ

ಮಂತ್ರಾಲಯದ ಸಂಬಂಧಿಕರ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆಂದು ಬಂದಿದ್ದವರು, ಕಾರ್ಯಕ್ರಮದ ಬಳಿಕ ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ನದಿಯ ನೀರಿನ ಆ ತಿಳಿಯದೆ ಈಜಲು ಹೋಗಿ ಐವರು ಜಲ ಸಮಾಧಿಯಾಗಿದ್ದಾರೆ. ಮೃತದೇಹಗಳಿಗಾಗಿ ಮೀನುಗಾರರು ಹುಡುಕಾಟ ನಡೆಸುತ್ತಿದ್ದು ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಧಾರವಾಡದಲ್ಲಿ ಘೋರ ದುರಂತ; ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿ

ಸಾಲು ಸಾಲು ದುರಂತ

ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮೀಪ ಮೊನ್ನೆ ಮೊನ್ನೆಯಷ್ಟೇ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಹೆಚ್ಚಾದ ಪರಿಣಾಮ ಮಹಿಳೆಯರೂ ಸೇರಿ ಹಲವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ದುರಂತ ಸಂಭವಿಸಿತ್ತು. ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಲ್ಲಿ ಮುಳುಗಿ ನಿನ್ನೆಯಷ್ಟೇ ಪ್ರಾಣ ಬಿಟ್ಟಿದ್ದರು. ಈ ಘಟನೆಗಳು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:07 am, Sun, 31 May 26

Follow Us
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ