AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರು ಸಂಗಾತಿಯ ಸಲಹೆ ಪಡೆಯುವರು, ವ್ಯವಹಾರದಲ್ಲಿ ಒತ್ತಡ

ರಾಶಿ ಭವಿಷ್ಯ ಶನಿವಾರ(ಸೆ. 7): ಮನಸ್ಸಿನಲ್ಲಿ ನಾನಾ ಬಗೆಯ ಚಿಂತೆಗಳು ಹುಟ್ಟಿಕೊಳ್ಳಬಹುದು. ಆತ್ಮಬಲವಿಲ್ಲದೇ ಸುಮ್ಮನೇ ತೋರಿಕೆಗೆ ಒಪ್ಪಿಕೊಳ್ಳುವುದು ಬೇಡ. ಭವಿಷ್ಯದ ಬಗ್ಗೆ ಆಲೋಚನೆಗಳನ್ನು ಮಾಡುವುದು ಸೂಕ್ತವಾದರೂ ಸರಿಯಾದ ಚೌಕಟ್ಟು ಇರಲಿ. ಹಾಗಾದರೆ ಸೆಪ್ಟೆಂಬರ್​ 7ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಸಂಗಾತಿಯ ಸಲಹೆ ಪಡೆಯುವರು, ವ್ಯವಹಾರದಲ್ಲಿ ಒತ್ತಡ
ಈ ರಾಶಿಯವರು ಸಂಗಾತಿಯ ಸಲಹೆ ಪಡೆಯುವರು, ವ್ಯವಹಾರದಲ್ಲಿ ಒತ್ತಡ
TV9 Web
| Edited By: |

Updated on: Sep 07, 2024 | 12:15 AM

Share

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಚಿತ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಬೆಳಿಗ್ಗೆ 09:26 ರಿಂದ ಸಂಜೆ 10:58, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:35ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ.

ಧನು ರಾಶಿ: ಸರಳ ಎಂದುಕೊಂಡ ಕೆಲಸವೇ ಇಂದು ಕಷ್ಟವಾಗುವುದು. ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮಷ್ಟಕ್ಕೆ ನೀವು ಇರಿ. ಮನಸ್ಸಿನಲ್ಲಿ ನಾನಾ ಬಗೆಯ ಚಿಂತೆಗಳು ಹುಟ್ಟಿಕೊಳ್ಳಬಹುದು. ಆತ್ಮಬಲವಿಲ್ಲದೇ ಸುಮ್ಮನೇ ತೋರಿಕೆಗೆ ಒಪ್ಪಿಕೊಳ್ಳುವುದು ಬೇಡ. ಭವಿಷ್ಯದ ಬಗ್ಗೆ ಆಲೋಚನೆಗಳನ್ನು ಮಾಡುವುದು ಸೂಕ್ತವಾದರೂ ಸರಿಯಾದ ಚೌಕಟ್ಟು ಇರಲಿ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಸ್ತ್ರೀಯರು ಸೌಂದರ್ಯಪ್ರಜ್ಞೆಯನ್ನು ಅಧಿಕವಾಗಿ ಬೆಳೆಸಿಕೊಳ್ಳುವರು. ಮನೆಯವರ ಜೊತೆ ಎಲ್ಲವನ್ನೂ ಹೇಳಿಕೊಳ್ಳುವಿರಿ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ. ಹೂಡಿಕೆಯತ್ತ ನಿಮ್ಮ ಗಮನವಿರಲಿದೆ. ಸರಿಯಾದ ಮಾಹಿತಿ ಇರಲಿ. ಕಟ್ಟಿಕೊಂಡ ಬುತ್ತಿ ಎಲ್ಲಿಯವರಗೆ ಬರಲು ಸಾಧ್ಯ? ಅತಿಯಾದ ವೇಗ ಬೇಡ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು.

ಮಕರ ರಾಶಿ: ನಾಚಿಕೆಯ ಸ್ವಭಾವವು ಯಸರ ಜೊತೆಯೂ ಬೆರೆಯಲಾಗದು. ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಕಳ್ಳರ ಭೀತಿಯು ನಿಮ್ಮನ್ನು ಕ್ಷಣವೂ ಕಾಡಬಹುದು. ಪ್ರತಿಭೆಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವಿರಿ. ಅತಿಯಾದ ನಿದ್ರೆಯಲ್ಲಿ ಮೈ ಮರೆಯುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಅಗತ್ಯ ಕಾರ್ಯಗಳು ವಿಳಂಬವಾಗಬಹುದು. ಮನೆಯನ್ನು ನೀವು ಖರೀದಿಸುವ ಅಲೋಚನೆ ಮಾಡುವಿರಿ. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬರಲಿದೆ. ಸರ್ಕಾರಿ ನೌಕರರು ಬಡ್ತಿಯ ನಿರೀಕ್ಷೆಯಲ್ಲಿ ಇರುವರು. ಶರೀರವು ನಿಮ್ಮ ಮಾತನ್ನು ಕೇಳದೇಹೋಗಬಹುದು. ವಿಶ್ರಾಂತಿಯನ್ನು ಪಡೆದು ಕಾರ್ಯದಲ್ಲಿ ಮುನ್ಮಡೆಯಿರಿ. ಅದನ್ನು ಉಳಿಸಿಕೊಳ್ಳಲು ನೀವು ಇಷ್ಟಪಡುವಿರಿ. ನಿಮ್ಮ ಸಂತೋಷವನ್ನು ಕಸಿದುಕೊಳ್ಳಲು ಯಾರಾದರೂ ಇರುತ್ತಾರೆ. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು.

ಕುಂಭ ರಾಶಿ: ಬಂಧುಗಳ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಬರದು. ಇಂದು ನಿಮಗೆ ಆತ್ಮೀಯರ‌ ಒಡನಾಡ ಅಧಿಕವಾಗಲಿದೆ. ಮನೆಯಿಂದ ಹಣವನ್ನು ನೀವು ಪಡೆಯುವಿರಿ. ನೀವು ಸಮಾರಂಭಕ್ಕೆ ಹೋಗಿ ಸಂತೋಷಪಡುವ ಸಾಧ್ಯತೆ ಇದೆ. ನಿಮಗೆ ಬರುವ ಆಪತ್ತನ್ನು ದೈವವೇ ಪರಿಹರಿಸುವುದು. ಕೆಲವರನ್ನು ನೀವು ವಿನಾಕಾರಣ ದ್ವೇಷಿಸುವಿರಿ. ನಿಮ್ಮ‌ ಮಾತು ಮನಸ್ಸನ್ನು ಘಾಸಿಗೊಳಿಸೀತು. ಕಿವಿಯ ನೋವಿನಿಂದ ಸಂಕಟ ಪಡುವಿರಿ. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸುವುದು ಬೇಡ. ನಿಮ್ಮ ದಾಖಲೆಯನ್ನು ಯಾರಾದರೂ ಮುರಿಯಬಹುದು.‌ ನಿರ್ಲಕ್ಷ್ಯದ ಕಾರಣ ನಿಮಗೇ ಬೇಸರವಾದೀತು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಸ್ಪರ್ಧೆಗೆ ಸರಿಯಾದ ಪೈಪೋಟಿ ನೀಡುವಿರಿ. ನಿಮ್ಮ ಇಷ್ಟದವರ ಭೇಟಿಯಾಗಲಿದೆ. ಒಂಟಿ ಜನರು ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ಸರಿಯಾದುದನ್ನು ಸರಿ ಎನ್ನಲು ಹಿಂದೇಟು ಬೇಡ.

ಮೀನ ರಾಶಿ: ಸೋಲು ಗೆಲುವನ್ನು ನೀವು ಸಮಾನವಾಗಿ ಸ್ವೀಕರಿಸುವುದು ಮುಖ್ಯ. ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಮನೆಮದ್ದನ್ನು ಮಾಡಿ. ಉದ್ಯೋಗದಲ್ಲಿ ಸ್ಥಿರತೆ‌ಯು ಕಾಣದ ಕಾರಣ ಬದಲಿಸುವ ಅಲೋಚನೆಯೂ ಇರಲಿದೆ. ಯಾರಿಗಾಗಿಯೋ ಸರಿದಾರಿಯನ್ನು ಬದಲಿಸಬೇಕೆಂದಿಲ್ಲ. ಇತರರ ದೃಷ್ಟಿಯಲ್ಲಿ ನೀವು ದೊಡ್ಡವರಾಗಿ ಕಾಣುವಿರಿ. ಬಂದಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಸಂಬಂಧಗಳನ್ನು ಉಳಿಸಿಕೊಳ್ಳಲು ನೀವು ಹೆಚ್ಚು ಇಷ್ಟಪಡುವಿರಿ. ನಿಮ್ಮ ಕಡೆಯಿಂದ ಮಾಡುವ ಒಳ್ಳೆಯದನ್ನು ಮಾಡಿ. ಕೆಲವು ಬದಲಾವಣೆಯನ್ನು ನಿರೀಕ್ಷಿಸುವಿರಿ ಮತ್ತು ನೀವು ಬದಲಾಗುವಿರಿ.‌ ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ.

ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು