AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಅನ್ಯರಿಂದ ಗೆಲುವಿನ ಸಂಭ್ರಮ

Daily Horoscope 07 February: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಶನಿವಾರ ಕಲಹ, ಅಪ್ರಯೋಜಕ ಕಾರ್ಯ, ಬಂಧುಗಳ ಜೊತೆ ಮಾತು, ಅಮೂಲ್ಯ ವಸ್ತು ಖರೀದಿ, ಪ್ರಭಾವಿಗಳ ಸಹವಾಸ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಅನ್ಯರಿಂದ ಗೆಲುವಿನ ಸಂಭ್ರಮ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 07, 2026 | 12:48 AM

Share

ಮೇಷ ರಾಶಿ :

ಉದ್ಯೋಗದ ಕಾರಣಕ್ಕೆ ಪ್ರಯಾಣ ಮಾಡುವ ಅವಕಾಶವಿರುತ್ತದೆ. ವ್ಯಾಪಾರವನ್ನು ಹೆಚ್ಚಿಸಲು ಹೊಸ ಸ್ಥಳದ ಪರಿಶೀಲನೆ ನಡೆಸುವಿರಿ.‌ ಇಂದು ವೃತ್ತಿಗೆ ಸೇರಿದ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಕಛೇರಿಯ ಕೆಲಸದಲ್ಲಿ ನೌಕರರ ಕಾರ್ಯದಕ್ಷತೆತ ಕಾರಣಗಳಿಂದ ನಿಧಾನವಾಗಲಿದೆ. ನಿಮ್ಮಿಂದಾಗಿ ಮನೆಯಲ್ಲಿ‌ ಇಂದು ಸಂತೋಷವು ಇರಲಿದೆ. ‌ಅನುಕಂಪದಿಂದ ಏನನ್ನಾದರೂ ಸಾಧಿಸಿಕೊಳ್ಳುವಿರಿ.

ವೃಷಭ ರಾಶಿ :

ಇಂದಿನ ಪರಿಸ್ಥಿಗೆ ತಕ್ಕಹಾಗೆ ಮನಃಸ್ಥಿತಿಯಲ್ಲಿ ಏರಿಳಿತಗಳಿರಬಹುದು. ಉದ್ಯೋಗ ಸಂದರ್ಶನದಿಂದ ಆತಂಕ ದೂರಾಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ರಾಜಕೀಯದಿಂದ ನಿಮಗೆ ಬೇರೆ ಯಾವ ಸೌಕರ್ಯಗಳೂ ಇರಲಾರವು. ಸ್ವಾರ್ಥವನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಅಭದ್ರತೆಯನ್ನು ನೀವು ದೂರಮಾಡಿಕೊಳ್ಳುವುದು ಉತ್ತಮ.

ಮಿಥುನ ರಾಶಿ:

ಹಿರಿಯರು ಆಡಿದ ನಿಮ್ಮ ವಿವಾಹದ ಮಾತುಕತೆಯಿಂದ‌ ಸಂತೋಷ. ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಕಳೆದುಕೊಂಡ ವಸ್ತುಗಳನ್ನು ಪುನಃ ಸಂಪಾದಿಸುವ ಮಾನಸಿಕ ಸ್ಥಿತಿಯನ್ನು ಹೊಂದಿರುವಿರಿ. ಕೆಲವು ಒಳ್ಳೆಯ ಅಭ್ಯಾಸಗಳು ಕೈತಪ್ಪಿಹೋಗಬಹುದು. ವಿಷಮಸ್ಥಿತಿಯನ್ನು ಸಮಸ್ಥಿಯನ್ನಾಗಿ ಮಾಡಿಕೊಳ್ಳುವ ವಿಧಾನವು ಗೊತ್ತಿದೆ.

ಕರ್ಕಾಟಕ ರಾಶಿ:

ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಗೌಪ್ಯ ಸಂಗತಿಗಳನ್ನು ಹೊರಹಾಕುವಿರಿ. ಮನೆಯ ಸ್ವಚ್ಛತೆಗೆ ಗಮನ ಕೊಡಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ‌ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ‌ ನಿಮಗೆ ಬೇಸರ ಬರಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು.

ಸಿಂಹ ರಾಶಿ:

ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ನಿಮಗೆ ಸ್ಥಾನವಿಲ್ಲದ ಕಡೆ ಇರಲು ಇಷ್ಟವಾಗದು. ಸಿಟ್ಟಿನಿಂದ ಎಲ್ಲರನ್ನೂ ದೂರಮಾಡಿಕೊಳ್ಳುವಿರಿ. ಮನೆಯಲ್ಲಿನ ಅಶಾಂತಿಯ ವಾತಾವರಣವು ಸರಿಮಾಡಿಕೊಳ್ಳಿ. ಆತ್ಮವಿಶ್ವಾಸದ‌ ಕೊರತೆಯನ್ನು ಸ್ನೇಹಿತರು ತುಂಬುವರು. ಸಂಶೋಧಕರು ಒತ್ತಡದಲ್ಲಿ‌ ಕಾರ್ಯವನ್ನು ಕಾರ್ಯವನ್ನು ಮಾಡುವರು.

ಕನ್ಯಾ ರಾಶಿ:

ಇಂದು ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ಸಾಲ ಕೊಟ್ಟವರ ಎದುರು ತಲೆ ಮೆರೆಸಿಕೊಂಡು ಓಡಾಡುವಿರಿ. ರಾಜಕೀಯವಾಗಿ ಹಿನ್ನಡೆಯಾಗಬಹುದು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ. ಹಳೆಯ ನೋವುಗಳು ನಿಮ್ಮನ್ನು ಕಾಡುವುಸು. ಶುಭ ಸುದ್ದಿಯ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರುವುದು.

ತುಲಾ ರಾಶಿ:

ಸಕಾರಾತ್ಮಕ ಮನಃಸ್ಥಿತಿಯೊಂದಿಗೆ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಿರಿ. ಆನಾರೋಗ್ಯವನ್ನು ನಿರ್ಲಕ್ಷಿಸುವಿರಿ. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡುವುದಿಲ್ಲ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.

ವೃಶ್ಚಿಕ ರಾಶಿ:

ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದು.‌ ಮಹಿಳೆಯರು ಸಮಾರಂಭಗಳಿಗೆ ಮನೆಗೆ ಹೋಗುವ ಸಾಧ್ಯತೆ ಇದೆ. ಇಂದಿನ ಆತಂಕವನ್ನು ನೀವು ಸುಲಭವಾಗಿ ಎದುರಿಸುವಿರಿ. ಅಲ್ಪ ಹಣವನ್ನೂ ಸಾಲವಾಗಿ ಪಡೆಯುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ. ಆಪ್ತರ ಬಗೆಗಿನ ಊಹೆಯು ವ್ಯತ್ಯಾಸವಾದೀತು. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ.

ಧನು ರಾಶಿ:

ನಿಮ್ಮ ಕಂಡು ಅಸೂಯೆ ಪಡುವವರಿಗೆ ಇನ್ನಷ್ಟು ತುಪ್ಪ ಸುರಿಯುವಿರಿ. ಕಛೇರಿಯಲ್ಲಿ ದಿನದಂತೆ ಎಲ್ಲವೂ ಇರದು. ಸಂದರ್ಭಗಳು ಪ್ರತಿಕೂಲವಾಗಿರಲಿವೆ. ಸಮಯವನ್ನು ನೋಡಿ ಕಾರ್ಯವನ್ನು ಮಾಡಿಸಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಒತ್ತಡದ ಕಾರ್ಯದಿಂದ ನೀವು ದೂರ ಉಳಿಯುವಿರಿ. ಇಂದು ಯಾರ ಮಾತನ್ನೂ ಪೂರ್ಣವಾಗಿ ನಂಬಲು ಆಗದು.

ಮಕರ ರಾಶಿ:

ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ. ತಪ್ಪನ್ನು ಮರೆಮಾಚುವಿರಿ. ಆದರೂ ಗೊತ್ತಾಗುವುದು. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗುವುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ.‌ ಉದ್ಯೋಗದ ಮಿತ್ರರು ಇಂದು ಸಿಗವರು.

ಕುಂಭ ರಾಶಿ:

ಅತಿಯಾದ ಕೋಪ ಬೇಡ, ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಿದೇಶೀ ವ್ಯವಹಾರದಿಂದ ನಿಮಗೆ ಲಾಭವಿದೆ. ಕುಟುಂಬದಲ್ಲಿ ನೆಮ್ಮದಿಯ ತಂದುಕೊಳ್ಳುವಿರಿ. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ಬಹಳ ದಿನಗಳ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವುದು.‌ ಸಾಹಸದ‌ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕ.

ಮೀನ ರಾಶಿ:

ಸಹೋದರ ನಡುವೆ ನಡೆಯುತ್ತಿರುವ ಹಣಕಾಸಿನ ವಿವಾದಗಳನ್ನು ಪರಿಹರಿಸಲು ಸಾಧ್ಯ. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಟದಿಂದ ನೀವು ಸಿಟ್ಟಾಗುವಿರಿ. ಬಂಧುಗಳ ಸಲಹೆಯು ನಿಮ್ಮನ್ನು ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರವನ್ನು ಮೊದಲೇ ಸರಿಮಾಡಿಕೊಳ್ಳುವುದು ಉತ್ತಮ. ಪ್ರೇಮದಲ್ಲಿ ದುಡುಕಿ, ಒಂಟಿಯಾಗುವಿರಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಸುಕರ್ಮ, ಕರಣ : ಕೌಲವ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು 09:45- 11:12, ಯಮಗಂಡ ಕಾಲ 14:05 – 15:32, ಗುಳಿಕ ಕಾಲ 06:52 – 08:19

-ಲೋಹಿತ ಹೆಬ್ಬಾರ್ – 8762924271 (what’s app only)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು