AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಆ.9ರಿಂದ 15ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ

ಆಗಸ್ಟ್ 9 ರಿಂದ 15 ರ ವಾರದ ಪ್ರೇಮ ಭವಿಷ್ಯ ಇಲ್ಲಿದೆ. ಪ್ರತಿಯೊಂದು ರಾಶಿ ಚಿಹ್ನೆಯೂ ಪ್ರೇಮ ಜೀವನದಲ್ಲಿ ವಿಭಿನ್ನ ಅನುಭವಗಳನ್ನು ಎದುರಿಸಲಿದೆ. ಕೆಲವರಿಗೆ ಪ್ರಣಯಮಯ ವಾತಾವರಣವಿದ್ದರೆ, ಇನ್ನು ಕೆಲವರಿಗೆ ತಾಳ್ಮೆ ಮತ್ತು ಹೊಂದಾಣಿಕೆ ಅಗತ್ಯವಾಗಬಹುದು. ಈ ವಾರ ನಿಮ್ಮ ಪ್ರೇಮ ಸಂಬಂಧಗಳನ್ನು ಬಲಪಡಿಸಲು ಜ್ಯೋತಿಷ್ಯ ಸಲಹೆಗಳನ್ನು ಇಲ್ಲಿ ಪಡೆಯಿರಿ.

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಆ.9ರಿಂದ 15ರ ವರೆಗಿನ ವಾರದ ಪ್ರೇಮ - ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ
ವಾರದ ಪ್ರೇಮ ಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 07, 2026 | 10:34 AM

Share

​ಆಗಸ್ಟ್​​ 09ರಿಂದ 15ರ ತನಕದ ಎರಡನೇ ವಾರದಲ್ಲಿ ಪ್ರೀತಿಯ ರೀತಿಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಪೂರ್ವಭಾವೀ ಆಲೋಚ‌ನೆಯಿಲ್ಲದೇ ಮುಂದೆಹೋಗಿ ದುಃಖಿಸಬೇಕಾಗುವುದು. ಪ್ರಯಾಣದಿಂದ ಪ್ರಯಾಸ ಸಾಧ್ಯತೆ ಇದೆ. ಎಲ್ಲರ ಪ್ರೇಮವೂ ಸಫಲವಾಗಲಿ.

​ಮೇಷ ರಾಶಿ :

ನಿಮ್ಮ ರಾಶ್ಯಧಿಪತಿ ಮಂಗಳ ಮಿಥುನದಲ್ಲಿದ್ದರೆ, ಶನಿ ಮೀನದಲ್ಲಿದ್ದಾನೆ. ಇದರಿಂದ ಪ್ರೇಮ ಸಂಬಂಧದಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಭಾವನೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತುಕತೆ ನಡೆಸಿದರೆ ಬಾಂಧವ್ಯ ಗಟ್ಟಿಯಾಗುತ್ತದೆ.

​ವೃಷಭ ರಾಶಿ :

ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರು ಒಟ್ಟಾಗಿರುವುದರಿಂದ ನಿಮ್ಮ ಪ್ರೇಮ ಜೀವನ ಅತ್ಯಂತ ಸುಂದರವಾಗಿರಲಿದೆ. ನಿಮ್ಮ ಆಕರ್ಷಣೆ ಹೆಚ್ಚುತ್ತದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಒದಗಿಬರಲಿವೆ. ಪ್ರೇಮಿಗಳ ನಡುವೆ ಪರಸ್ಪರ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತದೆ.

​ಮಿಥುನ ರಾಶಿ :

ಮಂಗಳ ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಸ್ವಭಾವದಲ್ಲಿ ಕೊಂಚ ಉಗ್ರತೆ ಅಥವಾ ಚಂಚಲತೆ ಕಾಣಿಸಬಹುದು. ಪ್ರೇಮ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಸಂಶಯ ಮತ್ತು ಮನಸ್ತಾಪಗಳನ್ನು ದೂರ ಮಾಡುತ್ತದೆ.

​ಕರ್ಕಾಟಕ ರಾಶಿ :

ಗುರು, ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲಿ ಒಟ್ಟಾಗಿರುವುದರಿಂದ ಪ್ರೇಮ ಮತ್ತು ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸಂಬಂಧದಲ್ಲಿ ಪರಸ್ಪರ ಬೆಂಬಲ ಸಿಗಲಿದೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ.

​ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಇರುವುದರಿಂದ ಮನಸ್ಸಿನಲ್ಲಿ ಕಾರಣವಿಲ್ಲದೆ ಆತಂಕ ಅಥವಾ ಗೊಂದಲ ಮೂಡಬಹುದು. ಪ್ರೇಮ ಜೀವನದಲ್ಲಿ ಸ್ಪಷ್ಟತೆ ಕೊರತೆಯಾಗದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಪ್ರೀತಿಯಲ್ಲಿ ಆಪ್ತತೆ ಹೆಚ್ಚಾಗುತ್ತದೆ.

​ಕನ್ಯಾ ರಾಶಿ :

ನಿಮ್ಮ ರಾಶಿಯಲ್ಲಿ ಶುಕ್ರ ಹಾಗೂ ಚಂದ್ರರ ಶುಭ ಸಂಯೋಜನೆ ಇದೆ. ಪ್ರೇಮಿಗಳಿಗೆ ಇದು ಅತ್ಯಂತ ರೋಮಾಂಚನಕಾರಿ ಸಮಯ. ನವ ಜೋಡಿಗಳ ನಡುವೆ ಮಧುರವಾದ ಕ್ಷಣಗಳು ಸೃಷ್ಟಿಯಾಗಲಿವೆ. ಹಳೆಯ ಮನಸ್ತಾಪಗಳು ಕಳೆದು ಪ್ರೀತಿ ಚಿಗುರೊಡೆಯುತ್ತದೆ.

​ತುಲಾ ರಾಶಿ :

ನಿಮ್ಮ ರಾಶ್ಯಧಿಪತಿ ಶುಕ್ರ ೧೨ನೇ ಮನೆಯಲ್ಲಿ ಚಂದ್ರನೊಂದಿಗೆ ಇರುವುದರಿಂದ ಪ್ರೇಮ ವಿಷಯದಲ್ಲಿ ಕೊಂಚ ಭಾವನಾತ್ಮಕ ಒತ್ತಡವಿರಬಹುದು. ಸಂಗಾತಿಯ ಆರೋಗ್ಯ ಅಥವಾ ಅವರ ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಬಹುದು. ಕಾಳಜಿ ವಹಿಸುವುದು ಒಳಿತು.

​ವೃಶ್ಚಿಕ ರಾಶಿ :

ಕರ್ಕಾಟಕದ ಗುರು ಹಾಗೂ ಕನ್ಯೆಯ ಶುಕ್ರನ ಶುಭ ದೃಷ್ಟಿಯಿಂದ ಪ್ರೇಮ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರೀತಿಯಲ್ಲಿರುವವರಿಗೆ ಮನೆಯವರಿಂದ ಸಮ್ಮತಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳಲು ಇದು ಅನುಕೂಲಕರ ಸಮಯ.

​ಧನು ರಾಶಿ :

ವೃತ್ತಿ ಜೀವನದ ಒತ್ತಡದಿಂದಾಗಿ ಪ್ರೇಮ ಜೀವನಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದಿರಬಹುದು. ಆದಾಗ್ಯೂ, ಸಂಗಾತಿಯು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲವಾಗಿ ನಿಲ್ಲುತ್ತಾರೆ. ಸಣ್ಣ ಸಣ್ಣ ಗಿಫ್ಟ್‌ಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ :

ಪ್ರೇಮ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗೆ ಆಧ್ಯಾತ್ಮಿಕ ಅಥವಾ ದೂರದ ಪ್ರಯಾಣ ಬೆಳೆಸುವ ಯೋಗವಿದೆ. ದೂರದಲ್ಲಿದ್ದ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಹಾಗೂ ಸಂಬಂಧವನ್ನು ಗಟ್ಟಿಗೊಳಿಸಲು ಉತ್ತಮ ಅವಕಾಶ ಸಿಗಲಿದೆ.

​ಕುಂಭ ರಾಶಿ :

ನಿಮ್ಮ ರಾಶಿಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಶುಕ್ರ-ಚಂದ್ರರ ಪ್ರಭಾವವಿರುವುದರಿಂದ ಸಂಬಂಧದಲ್ಲಿ ಅನಗತ್ಯ ಅನುಮಾನಗಳಿಗೆ ಆಸ್ಪದ ನೀಡಬೇಡಿ. ಮೂರನೇ ವ್ಯಕ್ತಿಯ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಒಳಿತಲ್ಲ. ಪಾರದರ್ಶಕತೆ ಕಾಯ್ದುಕೊಳ್ಳಿ.

​ಮೀನ ರಾಶಿ :

ಇದೇ ರಾಶಿಯಲ್ಲಿ ಶನಿ ಹಾಗೂ ಸಪ್ತಮ ರಾಶಿಯಲ್ಲಿ ಶುಕ್ರ, ಚಂದ್ರರ ಸಂಚಾರವಿರುವುದರಿಂದ ದಾಂಪತ್ಯ ಮತ್ತು ಪ್ರೇಮ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಬಂದರೂ ಪ್ರೀತಿಯ ಗಾಂಭೀರ್ಯ ಕಡಿಮೆಯಾಗುವುದಿಲ್ಲ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು!
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು!
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ವಿಡಿಯೋ ನೋಡಿ
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ವಿಡಿಯೋ ನೋಡಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ