Horoscope: ಸುಮ್ಮನಿರಲಾಗದೇ ಏನನ್ನಾದರೂ ಮೈಮೇಲೆ ಎಳೆದುಕೊಳ್ಳುವಿರಿ
ಸೆಪ್ಟೆಂಬರ್ 7, 2024ರ ನಿಮ್ಮ ರಾಶಿಭವಿಷ್ಯ: ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಸುಮ್ಮನಿರಲಾಗದೇ ಏನನ್ನಾದರೂ ಮೈಮೇಲೆ ಎಳೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಮನೆಯಲ್ಲಿ ಶುಭಕಾರ್ಯವನ್ನು ಮಾಡಲು ಇಚ್ಛಿಸುವಿರಿ. ಹಾಗಾದರೆ ಸೆಪ್ಟೆಂಬರ್ 7ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಚಿತ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಬೆಳಿಗ್ಗೆ 09:26 ರಿಂದ ಸಂಜೆ 10:58, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:35ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ.
ಮೇಷ ರಾಶಿ: ಇನ್ಮೊಬ್ಬರ ಮಾತಿಗೆ ನೋವಿಗೆ ಸ್ಪಂದಿಸುವ ಗುಣ ಒಳ್ಳೆಯದು. ಸ್ವಾವಲಂಬಿಯಾಗುವ ಬಗ್ಗೆ ಚಿಂತನೆ ನಡೆಸುವಿರಿ. ಪ್ರಕ್ಷುಬ್ಧವಾಗಿದ್ದ ಮನಸ್ಸು ಇಂದು ಪ್ರಶಾಂತವಾಗಬಹುದು. ಇಂದು ಎಲ್ಲ ಕಡೆಯಿಂದ ಸ್ವಾರ್ಥವನ್ನು ನಿರೀಕ್ಷಿಸುವುದು ಸರಿಯಲ್ಲ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಜಗಳವಾಗಿ ಮಾರ್ಪಾಡಾಗುವುದು. ಸಂತೋಷದ ಸಮಯವನ್ನು ನೆನಪಿಸಿಕೊಂಡು ಬೇಸರಿಸುವಿರಿ. ನಿಮಗೆ ಖ್ಯಾತಿಯ ಬಯಕೆ ಇರಲಿದೆ. ದುರ್ಘಟನೆಗಳೇ ನಿಮ್ಮ ಸ್ಮರಣೆಗೆ ಬರಬಹುದು. ದಾಂಪತ್ಯದಲ್ಲಿ ಖುಷಿಯ ವಾತಾವರಣ ಇರಲಿದೆ. ಅಲ್ಪ ಲಾಭಕ್ಕೆ ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಮೋಸ ಹೋಗುವ ಸಾಧ್ಯತೆ ಇದೆ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ. ನಿಮ್ಮನ್ನು ನಂಬಿದವರಿಗೆ ಕಿಂಚಿತ್ ಸಹಾಯವನ್ನು ಮಾಡಬೇಕಾಗುವುದು. ಮನೆಯ ಕಾರ್ಯದಲ್ಲಿ ಮಗ್ನರಾಗಿ ಆಯಾಸಗೊಳ್ಳುವರು.
ವೃಷಭ ರಾಶಿ; ನಿಮ್ಮ ಗೌಪ್ಯ ವಿಚಾರವನ್ನು ಯಾರಾದರೂ ಆಗದವರು ಸ್ಫೋಟಿಸಬಹುದು. ಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗಲಿದೆ. ನಿಮ್ಮ ವಾಸ ಸ್ಥಳವನ್ನು ಬದಲು ಮಾಡಬೇಕಾಗಬಹುದು. ಸರ್ಕಾರಿ ಕೆಲಸವು ಮುಂದೆಕ್ಕೆ ಹೋಗಲಿದೆ. ಇರುವ ಅವಕಾಶವನ್ನು ಕಳೆದುಕೊಂಡು ಸಂಕಟಪಡಬೇಕಾಗಹುದು. ಹಣಕಾಸಿನ ಅಭಾವಕ್ಕೆ ಕೆಲವು ಮಿತ್ರರ ಸಹಾಯವನ್ನು ಪಡೆಯುವಿರಿ. ಗೆಳೆತನಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಬರಬಹುದು. ಸಂಗಾತಿಗೆ ಸಮಯವನ್ನು ಕೊಡಲಾಗದೇ ವೈಮನಸ್ಯವು ಉಂಟಾಗಬಹುದು. ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗವನ್ನು ಅರಸುವಿರಿ. ಧಾರ್ಮಿಕ ಕಾರ್ಯವನ್ನು ಒತ್ತಾಯದಿಂದ ಮಾಡಿದರೂ ಅಲ್ಪ ಪ್ರಯೋಜನ ಸಿಗುವುದು. ಅಂತರ್ಜಾಲದ ಉದ್ಯೋಗಕ್ಕೆ ಮಾರುಹೋಗಬಹುದು. ಅತಿಯಾದ ಮರೆವು ಉಂಟಾಗಲಿದೆ ಇಂದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ನಿಮ್ಮ ಕಾರ್ಯಗಳಲ್ಲಿ ಸಾವಧಾನತೆ ಇರಲಿದೆ.
ಮಿಥುನ ರಾಶಿ: ಸ್ತ್ರೀಯರಿಗೆ ಈ ದಿನ ಒತ್ತಡ ಹೆಚ್ಚಾಗುವುದು. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಹರುಷದ ನಡುವೆಯೂ ದುಃಖವನ್ನು ಹುಡುಕುವಿರಿ. ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿದೆ. ಬರಬೇಕಾದ ಹಣವೂ ಸ್ವಲ್ಪ ಬರಲಿದೆ. ಕೃಷಿಯ ಕಾರ್ಯದಲ್ಲಿ ಹಿನ್ನಡೆ ಮತ್ತು ಆದಾಯದ ಹೊಸ ದಾರಿಯೂ ಕಾಣದಾಗದು. ನಿಮ್ಮವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿರುವುದನ್ನು ಅವರು ಮಾನಸಿಕವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಕ್ಷಮೆ ಕೇಳಿ ಪಶ್ಚಾತ್ತಾಪಪಡಿ. ಸಂಗಾತಿಯಿಂದ ನಿಮ್ಮ ಬೇಡಿಕೆಯನ್ನು ಪೂರ್ಣಮಾಡಿಕೊಳ್ಳುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಬಂಧುಗಳ ಆಗಮನದಿಂದ ನಿಮಗೆ ಕಷ್ಟವಾದೀತು.
ಕರ್ಕಾಟಕ ರಾಶಿ: ನಿಮ್ಮ ಪ್ರಾಮಣಿಕತೆಯೇ ನಿಮಗೆ ಮುಳುವಾದೀತು. ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಸುಮ್ಮನಿರಲಾಗದೇ ಏನನ್ನಾದರೂ ಮೈಮೇಲೆ ಎಳೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಮನೆಯಲ್ಲಿ ಶುಭಕಾರ್ಯವನ್ನು ಮಾಡಲು ಇಚ್ಛಿಸುವಿರಿ. ಸಣ್ಣ ವಿಚಾರಕ್ಕೂ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನಿಮ್ಮ ಮಾತು ವಿವಾದಕ್ಕೆ ಗುರಿಯಾಗಲಿದೆ. ಒಳ್ಳೆಯದನ್ನು ನಿರೀಕ್ಷಿಸಿದರೆ ಒಳ್ಳೆಯದನ್ನೇ ಮಾಡಬೇಕಾಗುತ್ತದೆ. ಋಣಮುಕ್ತರಾಗಲು ನಿಮ್ಮ ಪ್ರಯತ್ನ ಇಂದು ಬಹಳ ಇರಲಿದೆ. ವಾಹನ ಖರೀದಿಗೆ ಆಪ್ತರ ಸಲಹೆಯನ್ನು ಪಡೆಯಿರಿ. ದೂರದಲ್ಲಿ ಇದ್ದರಷ್ಟೇ ಚೆನ್ನ ಎಲ್ಲವೂ ಎನ್ನುವ ಅರಿವು ಬರಬಹುದು. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಎಲ್ಲವುದನ್ನೂ ತಾನೇ ಮಾಡುವುದು ಎಂಬ ಮನೋಭಾವವಿರುವುದು.