AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನನ್ನ ಜಾಗ; ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ

ಇದು ನನ್ನ ಜಾಗ; ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ

ಸುಷ್ಮಾ ಚಕ್ರೆ
|

Updated on: Feb 06, 2026 | 10:16 PM

Share

ಕಾಡಾನೆಯೊಂದು ಅರಣ್ಯದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಆಕ್ರೋಶದಿಂದ ವರ್ತಿಸಿದೆ. ಒಡಿಶಾದ ಧೆಂಕನಲ್‌ನಲ್ಲಿ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ವಾಹನವನ್ನು ಎತ್ತಲು ಪ್ರಯತ್ನಿಸಿದೆ. ಈ ವೇಳೆ ಆಚೀಚೆ ರಸ್ತೆಗಳಲ್ಲಿ ಇದ್ದವರು ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆನೆ ಆ ಕಾರನ್ನು ಬಿಟ್ಟು ಜನರತ್ತ ಧಾವಿಸಿದೆ. ಅರಣ್ಯ ಕಾರಿಡಾರ್‌ಗಳ ಬಳಿ ಸಂಚಾರ ಹೆಚ್ಚುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಯಾವ ಮಟ್ಟಿಗೆ ಆತಂಕಕಾರಿಯಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ಭುವನೇಶ್ವರ, ಫೆಬ್ರವರಿ 6: ಕಾಂಕ್ರೀಟ್ ಕಾಡು ಹೆಚ್ಚಾಗುತ್ತಿದ್ದಂತೆ ಅರಣ್ಯ ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳು ಆಹಾರಕ್ಕಾಗಿ ಊರಿನೊಳಗೆ ಬರುವಂತಾಗಿದೆ. ಕಾಡಾನೆಯೊಂದು (Elephant) ಅರಣ್ಯದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಆಕ್ರೋಶದಿಂದ ವರ್ತಿಸಿದೆ. ಒಡಿಶಾದ ಧೆಂಕನಲ್‌ನಲ್ಲಿ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ವಾಹನವನ್ನು ಎತ್ತಲು ಪ್ರಯತ್ನಿಸಿದೆ. ಈ ವೇಳೆ ಆಚೀಚೆ ರಸ್ತೆಗಳಲ್ಲಿ ಇದ್ದವರು ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆನೆ ಆ ಕಾರನ್ನು ಬಿಟ್ಟು ಜನರತ್ತ ಧಾವಿಸಿದೆ. ಅರಣ್ಯ ಕಾರಿಡಾರ್‌ಗಳ ಬಳಿ ಸಂಚಾರ ಹೆಚ್ಚುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಯಾವ ಮಟ್ಟಿಗೆ ಆತಂಕಕಾರಿಯಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More