ಬೆಂಗಳೂರಿನಲ್ಲಿ ವಾಹನ ಓಡಾಡುವ ರಸ್ತೆಗಳು ಮಾತ್ರವಲ್ಲ, ಮನಷ್ಯರು ತಿರುಗಾಡುವ ಫುಟ್ಬಾತ್ಗಳು ಸರಿ ಇಲ್ಲ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಾಹನ ಓಡಾಡಲು ರಸ್ತೆಗಳು ಸರಿ ಇಲ್ಲ, ಇನ್ನೊಂದೆಡೆ ಮನಷ್ಯರು ಓಡಾಡುವ ಫುಟ್ಪಾತ್ಗಳು ಸಹ ಸರಿ ಇಲ್ಲ. ಹೀಗಾಗಿ ಸಾರ್ವಜನಿಕರು ಫುಟ್ಪಾತ್ ಮೇಲೆ ಓಡಾಡುವಾಗ ಹುಷಾರಾಗಿರಬೇಕು. ಯಾಕಂದ್ರೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೋರ್ವ ದಿಢೀರ್ ಚರಂಡಿಗೆ ಬಿದ್ದಿದ್ದಾನೆ. ಬೆಂಗಳೂರಿನ ಸರ್ವಜ್ಞನಗರದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು, (ಫೆಬ್ರವರಿ 06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಾಹನ ಓಡಾಡಲು ರಸ್ತೆಗಳು ಸರಿ ಇಲ್ಲ, ಇನ್ನೊಂದೆಡೆ ಮನಷ್ಯರು ಓಡಾಡುವ ಫುಟ್ಪಾತ್ಗಳು ಸಹ ಸರಿ ಇಲ್ಲ. ಹೀಗಾಗಿ ಸಾರ್ವಜನಿಕರು ಫುಟ್ಪಾತ್ ಮೇಲೆ ಓಡಾಡುವಾಗ ಹುಷಾರಾಗಿರಬೇಕು. ಯಾಕಂದ್ರೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೋರ್ವ ದಿಢೀರ್ ಚರಂಡಿಗೆ ಬಿದ್ದಿದ್ದಾನೆ. ಬೆಂಗಳೂರಿನ ಸರ್ವಜ್ಞನಗರದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಶಾಲೆಯ ಮುಂದೆ ಕಾಮಗಾರಿ ಕೈಗೊಂಡಿದ್ದು, ಅದೆ ಮಾರ್ಗದಲ್ಲಿ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾಗ 1ನೇ ತರಗತಿ ವಿದ್ಯಾರ್ಥಿ ಚರಂಡಿಗೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಬಾಲಕನ್ನು ಮೇಲೆ ಎತ್ತಿದ್ದು, ಅದೃಷ್ಟವಶಾತ್ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚರಂಡಿ ಸ್ಲ್ಯಾಬ್ ಕ್ಲೋಸ್ ಮಾಡದೇ ಹಾಗೇ ಬಿಡಲಾಗಿದೆ. ಜಲಮಂಡಳಿ ನಿರ್ಲಕ್ಷ್ಯದ ಬೆನ್ನಲ್ಲೇ ಜಿಬಿಎದಿಂದಲೂ ನಿರ್ಲಕ್ಷ್ಯತನದಿಂದ ಈ ದುರ್ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Feb 06, 2026 05:45 PM
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು

