Daily Horoscope 07 September 2024: ಗಣೇಶ ಚತುರ್ಥಿಯಂದು ಯಾವ ರಾಶಿಗೆ ಯಾವ ಫಲ; ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ
ಇಂದು ಗಣೇಶ ಚತುರ್ಥಿ. ಗಣೇಶನೆಂದರೆ ವಿಘ್ನನಿವಾರಕ, ಈ ರಾಶಿಯವರಿಗೆ ಹೊಸ ಮನೆಯಲ್ಲಿ ನಿಮಗೆ ಬೇಕಾದ ಅನುಕೂಲತೆಗಳ ಮನೆಯವರಲ್ಲಿ ಹೇಳುವಿರಿ. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಮನಸ್ಸು ಚಂಚಲವಾಗಲಿದ್ದು ಯಾವುದರ ಬಗ್ಗೆಯೂ ಏಕಾಗ್ರತೆಯಿಂದ ಇರಲು ಸಾಧ್ಯವಾಗದು. ಹಾಗಾದರೆ, ಗಣೇಶ ಚತುರ್ಥಿಯಂದು ಯಾವ ರಾಶಿಗೆ ಯಾವ ಫಲ, ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ.
ಇಂದು ಗಣೇಶ ಚತುರ್ಥೀ. ಗಣೇಶನೆಂದರೆ ವಿಘ್ನನಿವಾರಕ, ಶುಭಪ್ರದಾಯಕ. ಚಾಮರದಂತಹ ಕರ್ಣ, ವಕ್ರವಾದ ದಂತ, ಉದ್ದ ಸೊಂಡಿಲು, ದೊಡ್ಡ ಹೊಟ್ಟೆಯನ್ನು ಹೊತ್ತು, ಹೊಟ್ಟೆಗೆ ಹಾವು ಸುತ್ತಿ ಬರುವ ಮೂಷಕವಾಹನನು ಎಲ್ಲರ ಬಾಳನ್ನು ಹಸನಾಗಿಸಲಿ. ಕೆಂಪು ಹೂವು ದೂರ್ವಾಪತ್ರದಿಂದ ಭಕ್ತಿಯಿಂದ ಆರಾಧಿಸಿ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಚಿತ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಬೆಳಿಗ್ಗೆ 09:26 ರಿಂದ ಸಂಜೆ 10:58, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:35ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ.
ಮೇಷ ರಾಶಿ : ಇನ್ಮೊಬ್ಬರ ಮಾತಿಗೆ ನೋವಿಗೆ ಸ್ಪಂದಿಸುವ ಗುಣ ಒಳ್ಳೆಯದು. ಸ್ವಾವಲಂಬಿಯಾಗುವ ಬಗ್ಗೆ ಚಿಂತನೆ ನಡೆಸುವಿರಿ. ಪ್ರಕ್ಷುಬ್ಧವಾಗಿದ್ದ ಮನಸ್ಸು ಇಂದು ಪ್ರಶಾಂತವಾಗಬಹುದು. ಇಂದು ಎಲ್ಲ ಕಡೆಯಿಂದ ಸ್ವಾರ್ಥವನ್ನು ನಿರೀಕ್ಷಿಸುವುದು ಸರಿಯಲ್ಲ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಜಗಳವಾಗಿ ಮಾರ್ಪಾಡಾಗುವುದು. ಸಂತೋಷದ ಸಮಯವನ್ನು ನೆನಪಿಸಿಕೊಂಡು ಬೇಸರಿಸುವಿರಿ. ನಿಮಗೆ ಖ್ಯಾತಿಯ ಬಯಕೆ ಇರಲಿದೆ. ದುರ್ಘಟನೆಗಳೇ ನಿಮ್ಮ ಸ್ಮರಣೆಗೆ ಬರಬಹುದು. ದಾಂಪತ್ಯದಲ್ಲಿ ಖುಷಿಯ ವಾತಾವರಣ ಇರಲಿದೆ. ಅಲ್ಪ ಲಾಭಕ್ಕೆ ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಮೋಸ ಹೋಗುವ ಸಾಧ್ಯತೆ ಇದೆ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ. ನಿಮ್ಮನ್ನು ನಂಬಿದವರಿಗೆ ಕಿಂಚಿತ್ ಸಹಾಯವನ್ನು ಮಾಡಬೇಕಾಗುವುದು. ಮನೆಯ ಕಾರ್ಯದಲ್ಲಿ ಮಗ್ನರಾಗಿ ಆಯಾಸಗೊಳ್ಳುವರು.
ವೃಷಭ ರಾಶಿ : ನಿಮ್ಮ ಗೌಪ್ಯ ವಿಚಾರವನ್ನು ಯಾರಾದರೂ ಆಗದವರು ಸ್ಫೋಟಿಸಬಹುದು. ಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗಲಿದೆ. ನಿಮ್ಮ ವಾಸ ಸ್ಥಳವನ್ನು ಬದಲು ಮಾಡಬೇಕಾಗಬಹುದು. ಸರ್ಕಾರಿ ಕೆಲಸವು ಮುಂದೆಕ್ಕೆ ಹೋಗಲಿದೆ. ಇರುವ ಅವಕಾಶವನ್ನು ಕಳೆದುಕೊಂಡು ಸಂಕಟಪಡಬೇಕಾಗಹುದು. ಹಣಕಾಸಿನ ಅಭಾವಕ್ಕೆ ಕೆಲವು ಮಿತ್ರರ ಸಹಾಯವನ್ನು ಪಡೆಯುವಿರಿ. ಗೆಳೆತನಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಬರಬಹುದು. ಸಂಗಾತಿಗೆ ಸಮಯವನ್ನು ಕೊಡಲಾಗದೇ ವೈಮನಸ್ಯವು ಉಂಟಾಗಬಹುದು. ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗವನ್ನು ಅರಸುವಿರಿ. ಧಾರ್ಮಿಕ ಕಾರ್ಯವನ್ನು ಒತ್ತಾಯದಿಂದ ಮಾಡಿದರೂ ಅಲ್ಪ ಪ್ರಯೋಜನ ಸಿಗುವುದು. ಅಂತರ್ಜಾಲದ ಉದ್ಯೋಗಕ್ಕೆ ಮಾರುಹೋಗಬಹುದು. ಅತಿಯಾದ ಮರೆವು ಉಂಟಾಗಲಿದೆ ಇಂದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ನಿಮ್ಮ ಕಾರ್ಯಗಳಲ್ಲಿ ಸಾವಧಾನತೆ ಇರಲಿದೆ.
ಮಿಥುನ ರಾಶಿ : ಸ್ತ್ರೀಯರಿಗೆ ಈ ದಿನ ಒತ್ತಡ ಹೆಚ್ಚಾಗುವುದು. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಹರುಷದ ನಡುವೆಯೂ ದುಃಖವನ್ನು ಹುಡುಕುವಿರಿ. ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿದೆ. ಬರಬೇಕಾದ ಹಣವೂ ಸ್ವಲ್ಪ ಬರಲಿದೆ. ಕೃಷಿಯ ಕಾರ್ಯದಲ್ಲಿ ಹಿನ್ನಡೆ ಮತ್ತು ಆದಾಯದ ಹೊಸ ದಾರಿಯೂ ಕಾಣದಾಗದು. ನಿಮ್ಮವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿರುವುದನ್ನು ಅವರು ಮಾನಸಿಕವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಕ್ಷಮೆ ಕೇಳಿ ಪಶ್ಚಾತ್ತಾಪಪಡಿ. ಸಂಗಾತಿಯಿಂದ ನಿಮ್ಮ ಬೇಡಿಕೆಯನ್ನು ಪೂರ್ಣಮಾಡಿಕೊಳ್ಳುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಬಂಧುಗಳ ಆಗಮನದಿಂದ ನಿಮಗೆ ಕಷ್ಟವಾದೀತು.
ಕರ್ಕಾಟಕ ರಾಶಿ : ನಿಮ್ಮ ಪ್ರಾಮಣಿಕತೆಯೇ ನಿಮಗೆ ಮುಳುವಾದೀತು. ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಸುಮ್ಮನಿರಲಾಗದೇ ಏನನ್ನಾದರೂ ಮೈಮೇಲೆ ಎಳೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಮನೆಯಲ್ಲಿ ಶುಭಕಾರ್ಯವನ್ನು ಮಾಡಲು ಇಚ್ಛಿಸುವಿರಿ. ಸಣ್ಣ ವಿಚಾರಕ್ಕೂ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನಿಮ್ಮ ಮಾತು ವಿವಾದಕ್ಕೆ ಗುರಿಯಾಗಲಿದೆ. ಒಳ್ಳೆಯದನ್ನು ನಿರೀಕ್ಷಿಸಿದರೆ ಒಳ್ಳೆಯದನ್ನೇ ಮಾಡಬೇಕಾಗುತ್ತದೆ. ಋಣಮುಕ್ತರಾಗಲು ನಿಮ್ಮ ಪ್ರಯತ್ನ ಇಂದು ಬಹಳ ಇರಲಿದೆ. ವಾಹನ ಖರೀದಿಗೆ ಆಪ್ತರ ಸಲಹೆಯನ್ನು ಪಡೆಯಿರಿ. ದೂರದಲ್ಲಿ ಇದ್ದರಷ್ಟೇ ಚೆನ್ನ ಎಲ್ಲವೂ ಎನ್ನುವ ಅರಿವು ಬರಬಹುದು. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಎಲ್ಲವುದನ್ನೂ ತಾನೇ ಮಾಡುವುದು ಎಂಬ ಮನೋಭಾವವಿರುವುದು.
ಸಿಂಹ ರಾಶಿ : ಸಮಯ ಕಳೆದ ಅನಂತರ ಸಹವಾಸವು ದೋಷ ಎನಿಸಬಹುದು. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ನಡೆಯು ಎಲ್ಲರಿಗೂ ಇಷ್ಡವಾಗಬಹುದು. ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸಲು ಆಲೋಚಿಸುವಿರಿ. ಹೂಡಿಕೆಯ ಪ್ರಯತ್ನ ವಿಫಲವಾಗಬಹುದು. ಇದು ವಿವಾದವಾಗಿ ಪರಿವರ್ತನೆ ಆಗಬಹುದು. ಎಚ್ಚರಿಕೆಯಿಂದ ವ್ಯವಹಾರವನ್ನು ಮಾಡುವಿರಿ. ದಯೆಯ ವಿಚಾರದಲ್ಲಿ ನೀವು ಹಿಂದೆ. ಗೌಪ್ಯತೆಯ ಸಂಪಾದನೆಯು ಅನ್ಯಮಾರ್ಗಕ್ಕೆ ದಾರಿಮಾಡಿಕೊಡುವುದು. ಮಕ್ಕಳಿಗೆ ಹಿತವಚನವನ್ನು ಹೇಳಿ ತಿದ್ದುವ ಪ್ರಯತ್ನವನ್ನು ಮಾಡುವಿರಿ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನಿಮಗೆ ಯಾರದ್ದಾದರೂ ಮಾತು ಅಧಿಕಾರದಂತೆ ತೋರೀತು.
ಕನ್ಯಾ ರಾಶಿ : ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಹಿತಶತ್ರುಗಳಿಂದ ಇಂದಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಹಿರಿಯರಿಂದ ಬೈಗುಳವು ಸಿಗಬಹುದು. ಅತಿಯಾದ ಮಾತಿನಿಂದ ನಿಮಗೆ ಸಂಕಷ್ಟ ಬರಬಹುದು. ಖಾಸಗಿ ಸಂಸ್ಥೆಯು ನಿಮಗೆ ಒಂದು ಜವಾಬ್ದಾರಿಯುತ ಸ್ಥಾನವನ್ನು ಕೊಡಬಹುದು. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಾಹಸದಿಂದ ಏನನ್ನಾದರೂ ಮಾಡಲು ಹೋಗಬಹುದು. ಖಾಸಗಿ ಸಂಸ್ಥೆಗಳು ನಿಮ್ಮ ಕಾರ್ಯವನ್ನು ಗೌರವಿಸುವರು. ಪೂರ್ವಾಪರ ಯೋಚನೆ ಇದ್ದರೆ ಒಳ್ಳೆಯದು. ವಿದ್ಯಾಭ್ಯಾಸಕ್ಕೆ ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ. ಸುಳ್ಳಿನಿಂದ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ.
ತುಲಾ ರಾಶಿ : ಬೇರೆಯವರು ತಪ್ಪು ಮಾಡಿದ್ದಾರೆ ಎಂದು ನೀವೂ ಮಾಡಲು ಹೋದರೆ ಸಿಕ್ಕಿಬೀಳುವಿರಿ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಹೆಚ್ಚುವುದು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುವುದು. ಶತ್ರುಗಳು ಏನಾದರೂ ಮಾನಸಿಕ ಕಿರುಕುಳವನ್ನು ಉಂಟುಮಾಡಿಯಾರು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಲ್ಲಿ ಇರುವರು. ಸಂಗಾತಿಯನ್ನು ನೀವು ಕಡೆಗಣಿಸುವಿರಿ. ತಾಯಿಯ ಕಡೆಯಿಂದ ಉದ್ಯೋಗಕ್ಕೆ ಬೇಕಾದ ಸಹಾಯ ಸಿಗಬಹುದು. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ಯಾರಾದರೂ ನಿಮ್ಮ ಕಿವಿ ಕಚ್ಚಿ ಸಂಬಂಧವನ್ನು ಹಾಳುಮಾಡುವರು. ಭೋಗವಸ್ತುಗಳನ್ನು ಖರೀದಿಸಿ ಹಣವನ್ನು ವ್ಯರ್ಥಮಾಡುವಿರಿ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸುಮ್ಮನೆ ಇದ್ದರೆ ನಿಮ್ಮನ್ನು ಹಂಗಿಸಬಹುದು.
ವೃಶ್ಚಿಕ ರಾಶಿ : ಹೊಸ ಮನೆಯಲ್ಲಿ ನಿಮಗೆ ಬೇಕಾದ ಅನುಕೂಲತೆಗಳ ಮನೆಯವರಲ್ಲಿ ಹೇಳುವಿರಿ. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಮನಸ್ಸು ಚಂಚಲವಾಗಲಿದ್ದು ಯಾವುದರ ಬಗ್ಗೆಯೂ ಏಕಾಗ್ರತೆಯಿಂದ ಇರಲು ಸಾಧ್ಯವಾಗದು. ಲಾಭವಿಲ್ಲದ ಕೆಲಸವನ್ನು ನೀವು ಮಾಡಲು ಇಚ್ಛಿಸುವುದಿಲ್ಲ. ಇಂದು ಸಮಯ ಸಿಗದೇ ಗಡಿಬಿಡಿಯಿಂದ ಕೆಲಸವನ್ನು ಮುಗಿಸುವಿರಿ. ಸಂಭ್ರಮದಲ್ಲಿ ಮನೆಯ ವಸ್ತುಗಳು ಕಾಣೆಯಾಗಬಹುದು. ನಿಮಗೆ ಗೊತ್ತಿಲ್ಲದ ವಿಚಾರಗಳನ್ನು ಯಾರಿಂದಲಾದರೂ ಕೇಳಿ ಪಡೆಯಿರಿ. ಉನ್ನತ ವ್ಯಾಸಂಗದ ಬಯಕೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಒಳ್ಳೆಯ ಕಾರ್ಯಕ್ಕೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಯಾರೊಂದಿಗಾದರೂ ಸಲುಗೆಯು ಅತಿಯಾಗಬಹುದು.
ಧನು ರಾಶಿ : ಸರಳ ಎಂದುಕೊಂಡ ಕೆಲಸವೇ ಇಂದು ಕಷ್ಟವಾಗುವುದು. ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮಷ್ಟಕ್ಕೆ ನೀವು ಇರಿ. ಮನಸ್ಸಿನಲ್ಲಿ ನಾನಾ ಬಗೆಯ ಚಿಂತೆಗಳು ಹುಟ್ಟಿಕೊಳ್ಳಬಹುದು. ಆತ್ಮಬಲವಿಲ್ಲದೇ ಸುಮ್ಮನೇ ತೋರಿಕೆಗೆ ಒಪ್ಪಿಕೊಳ್ಳುವುದು ಬೇಡ. ಭವಿಷ್ಯದ ಬಗ್ಗೆ ಆಲೋಚನೆಗಳನ್ನು ಮಾಡುವುದು ಸೂಕ್ತವಾದರೂ ಸರಿಯಾದ ಚೌಕಟ್ಟು ಇರಲಿ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಸ್ತ್ರೀಯರು ಸೌಂದರ್ಯಪ್ರಜ್ಞೆಯನ್ನು ಅಧಿಕವಾಗಿ ಬೆಳೆಸಿಕೊಳ್ಳುವರು. ಮನೆಯವರ ಜೊತೆ ಎಲ್ಲವನ್ನೂ ಹೇಳಿಕೊಳ್ಳುವಿರಿ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ. ಹೂಡಿಕೆಯತ್ತ ನಿಮ್ಮ ಗಮನವಿರಲಿದೆ. ಸರಿಯಾದ ಮಾಹಿತಿ ಇರಲಿ. ಕಟ್ಟಿಕೊಂಡ ಬುತ್ತಿ ಎಲ್ಲಿಯವರಗೆ ಬರಲು ಸಾಧ್ಯ? ಅತಿಯಾದ ವೇಗ ಬೇಡ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು.
ಮಕರ ರಾಶಿ : ನಾಚಿಕೆಯ ಸ್ವಭಾವವು ಯಸರ ಜೊತೆಯೂ ಬೆರೆಯಲಾಗದು. ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಕಳ್ಳರ ಭೀತಿಯು ನಿಮ್ಮನ್ನು ಕ್ಷಣವೂ ಕಾಡಬಹುದು. ಪ್ರತಿಭೆಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವಿರಿ. ಅತಿಯಾದ ನಿದ್ರೆಯಲ್ಲಿ ಮೈ ಮರೆಯುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಅಗತ್ಯ ಕಾರ್ಯಗಳು ವಿಳಂಬವಾಗಬಹುದು. ಮನೆಯನ್ನು ನೀವು ಖರೀದಿಸುವ ಅಲೋಚನೆ ಮಾಡುವಿರಿ. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬರಲಿದೆ. ಸರ್ಕಾರಿ ನೌಕರರು ಬಡ್ತಿಯ ನಿರೀಕ್ಷೆಯಲ್ಲಿ ಇರುವರು. ಶರೀರವು ನಿಮ್ಮ ಮಾತನ್ನು ಕೇಳದೇಹೋಗಬಹುದು. ವಿಶ್ರಾಂತಿಯನ್ನು ಪಡೆದು ಕಾರ್ಯದಲ್ಲಿ ಮುನ್ಮಡೆಯಿರಿ. ಅದನ್ನು ಉಳಿಸಿಕೊಳ್ಳಲು ನೀವು ಇಷ್ಟಪಡುವಿರಿ. ನಿಮ್ಮ ಸಂತೋಷವನ್ನು ಕಸಿದುಕೊಳ್ಳಲು ಯಾರಾದರೂ ಇರುತ್ತಾರೆ. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು.
ಕುಂಭ ರಾಶಿ : ಬಂಧುಗಳ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಬರದು. ಇಂದು ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ಮನೆಯಿಂದ ಹಣವನ್ನು ನೀವು ಪಡೆಯುವಿರಿ. ನೀವು ಸಮಾರಂಭಕ್ಕೆ ಹೋಗಿ ಸಂತೋಷಪಡುವ ಸಾಧ್ಯತೆ ಇದೆ. ನಿಮಗೆ ಬರುವ ಆಪತ್ತನ್ನು ದೈವವೇ ಪರಿಹರಿಸುವುದು. ಕೆಲವರನ್ನು ನೀವು ವಿನಾಕಾರಣ ದ್ವೇಷಿಸುವಿರಿ. ನಿಮ್ಮ ಮಾತು ಮನಸ್ಸನ್ನು ಘಾಸಿಗೊಳಿಸೀತು. ಕಿವಿಯ ನೋವಿನಿಂದ ಸಂಕಟ ಪಡುವಿರಿ. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸುವುದು ಬೇಡ. ನಿಮ್ಮ ದಾಖಲೆಯನ್ನು ಯಾರಾದರೂ ಮುರಿಯಬಹುದು. ನಿರ್ಲಕ್ಷ್ಯದ ಕಾರಣ ನಿಮಗೇ ಬೇಸರವಾದೀತು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಸ್ಪರ್ಧೆಗೆ ಸರಿಯಾದ ಪೈಪೋಟಿ ನೀಡುವಿರಿ. ನಿಮ್ಮ ಇಷ್ಟದವರ ಭೇಟಿಯಾಗಲಿದೆ. ಒಂಟಿ ಜನರು ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ಸರಿಯಾದುದನ್ನು ಸರಿ ಎನ್ನಲು ಹಿಂದೇಟು ಬೇಡ.
ಮೀನ ರಾಶಿ : ಸೋಲು ಗೆಲುವನ್ನು ನೀವು ಸಮಾನವಾಗಿ ಸ್ವೀಕರಿಸುವುದು ಮುಖ್ಯ. ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಮನೆಮದ್ದನ್ನು ಮಾಡಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವ ಅಲೋಚನೆಯೂ ಇರಲಿದೆ. ಯಾರಿಗಾಗಿಯೋ ಸರಿದಾರಿಯನ್ನು ಬದಲಿಸಬೇಕೆಂದಿಲ್ಲ. ಇತರರ ದೃಷ್ಟಿಯಲ್ಲಿ ನೀವು ದೊಡ್ಡವರಾಗಿ ಕಾಣುವಿರಿ. ಬಂದಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಸಂಬಂಧಗಳನ್ನು ಉಳಿಸಿಕೊಳ್ಳಲು ನೀವು ಹೆಚ್ಚು ಇಷ್ಟಪಡುವಿರಿ. ನಿಮ್ಮ ಕಡೆಯಿಂದ ಮಾಡುವ ಒಳ್ಳೆಯದನ್ನು ಮಾಡಿ. ಕೆಲವು ಬದಲಾವಣೆಯನ್ನು ನಿರೀಕ್ಷಿಸುವಿರಿ ಮತ್ತು ನೀವು ಬದಲಾಗುವಿರಿ. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ.
-ಲೋಹಿತ ಹೆಬ್ಬಾರ್-8762924271 (what’s app only)