Weekly Horoscope in Kannada: ವಾರ ಭವಿಷ್ಯ: ಸಪ್ಟೆಂಬರ್ ತಿಂಗಳ ಎರಡನೇ ವಾರವು ಶುಭವಿದ್ದರೂ ಅದನ್ನು ಪಡೆದುಕೊಳ್ಳುವುದು ಕಷ್ಟ

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವು 08 ರಿಂದ 14ರವರೆಗೆ ಇರಲಿದೆ. ಗ್ರಹಗಳಲ್ಲಿ ಅಲ್ಪ ಬದಲಾವಣೆ ಕಾಣುವುದು. ವಿಶೇಷವಾಗಿ ಸೂರ್ಯನು ಸ್ವಕ್ಷೇತ್ರ, ಶುಕ್ರನು ನೀಚ, ಶನಿ ಸ್ವಕ್ಷೇತ್ರದಲ್ಲಿ ಹಾಗೂ ವರ್ಗೋತ್ತಮದಲ್ಲಿ, ಬುಧನು ಉಚ್ಚಗಾಮಿಯಾಗಿ ಇರುವುದು ಅನೇಕ ಅನುಕೂಲ‌ ಹಾಗು ಅಲ್ಪ ಪ್ರತಿಕೂಲಕ್ಕೆ ಕಾರಣವಾಗಿದೆ.

Weekly Horoscope in Kannada: ವಾರ ಭವಿಷ್ಯ: ಸಪ್ಟೆಂಬರ್ ತಿಂಗಳ ಎರಡನೇ ವಾರವು ಶುಭವಿದ್ದರೂ ಅದನ್ನು ಪಡೆದುಕೊಳ್ಳುವುದು ಕಷ್ಟ
ವಾರ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 07, 2024 | 12:04 AM

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವು 08 ರಿಂದ 14 ರವರೆಗೆ ಇರಲಿದೆ. ಗ್ರಹಗಳಲ್ಲಿ ಅಲ್ಪ ಬದಲಾವಣೆ ಕಾಣುವುದು. ವಿಶೇಷವಾಗಿ ಸೂರ್ಯನು ಸ್ವಕ್ಷೇತ್ರ, ಶುಕ್ರನು ನೀಚ, ಶನಿ ಸ್ವಕ್ಷೇತ್ರದಲ್ಲಿ ಹಾಗೂ ವರ್ಗೋತ್ತಮದಲ್ಲಿ, ಬುಧನು ಉಚ್ಚಗಾಮಿಯಾಗಿ ಇರುವುದು ಅನೇಕ ಅನುಕೂಲ‌ ಹಾಗು ಅಲ್ಪ ಪ್ರತಿಕೂಲಕ್ಕೆ ಕಾರಣವಾಗಿದೆ. ಅನುಕೂಲ ಗ್ರಹಗಳು ಶುಭ ಏಕಾದಶ ಸ್ಥಾನದ ಫಲವನ್ನು ನೀಡಲಿ.

ಮೇಷ ರಾಶಿ : ಇದು ಸಪ್ಟೆಂಬರ್ ತಿಂಗಳ‌ ಎರಡನೇ ವಾರವಾಗಿ, ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಶುಭವು ಹೆಚ್ಚು ಗೋಚರಿಸುವುದು. ದ್ವಿತೀಯದಲ್ಲಿ ಗುರುವು ನಿಮಗೆ ಎಲ್ಲ ಕಡೆಯಿಂದ ಸುಖದ ಸ್ಥಾನವನ್ನು ಪರಿಚಯಿಸುವನು. ಭೋಗ ವಸ್ತುಗಳ ನಷ್ಟ ಅಥವಾ ದುರಸ್ತಿ ಮಾಡಬೇಕಾಗುವುದು. ಮಾಡುವ ಕಾರ್ಯವನ್ನು ಆದಾಯದ ಮೂಲವಾಗಿ ಮಾಡಿಕೊಳ್ಳುವಿರಿ. ಸಾಮರ್ಥ್ಯವನ್ನು ತೋರಿಸುವ ನಿಮ್ಮ ತಂತ್ರ ವಿಫಲವಾಗುವುದು. ಕಾರ್ತಿಕೇಯನ ಸ್ಮರಣೆ ಮಾಡಿ ಮಾಡಬೇಕಾದ ಕೆಲಸವನ್ನು ಮಾಡಿ.

ವೃಷಭ ರಾಶಿ : ಈ ವಾರ ನಿಮಗೆ ಶುಭವಿದ್ದರೂ ಅದನ್ನು ಪಡೆದುಕೊಳ್ಳುವುದು ಕಷ್ಟ. ನಿಮ್ಮ ಸಕಾರಾತ್ಮಕ ಆಲೋಚನಗಳು ವಿಪರೀತವಾಗಿ ಕಾಣಿಸುವುದು. ಸಂಗಾತಿಯ ಬಗ್ಗೆ ಸದಭಿಪ್ರಾಯದ ಕೊರತೆ ಕಾಣಿಸುವುದು. ಕುಟುಂಬದ ಜೊತೆ ಅನ್ಯೋನ್ಯತೆಯಿಂದ ಇರುವಿರಿ. ಮಕ್ಕಳ ವಿಚಾರದಲ್ಲಿ ಸಂತೋಷವು ಇರದು. ಉದ್ಯೋಗದಲ್ಲಿ ಸ್ಥಿರತೆಯಿಂದ ನೆಮ್ಮದಿ ನಿಮ್ಮದಾಗಲಿದೆ. ಕಾಲಿನಲ್ಲಿ ಆದ ಗಾಯವು ನಿಮಗೆ ಹಿಂಸೆ ಕೊಡುವುದು‌. ಕಡಿಮೆ ಆದಂತೆ ಕಂಡರೂ ಮತ್ತೆ ಅಧಿಕವಾಗುವುದು. ಧನ್ವಂತರಿಯ ಪ್ರಾರ್ಥನೆ‌ ಮಾಡಿ ಔಷಧಿ ಸೇವಿಸಿ.

ಮಿಥುನ ರಾಶಿ : ರಾಶಿ ಚಕ್ರದ ಮೂರನೆಯ ರಾಶಿಯವರಿಗೆ ಈ ವಾರ ಅಶುಭ.‌ ಗುರುವು ದ್ವಾದಶದಲ್ಲಿ ಇದ್ದು ಬಲಹೀನನಾಗಿ ಶುಭವನ್ನು ಕೊಡಲು ಅಶಕ್ತ. ರಾಶಿಯ ಅಧಿಪತಿ ಬುಧ ತೃತೀಯದಲ್ಲಿ ಇದ್ದಾನೆ. ತಕ್ಕಮಟ್ಟಿನ‌ ಸಾಮರ್ಥ್ಯ ಸ್ವಭಾವಗಳು ಇತರರಿಗೆ ಗೊತ್ತಾಗುವುದು. ಸಂಗಾತಿಯ ವಿರೋಧವನ್ನು ಕಟ್ಟಕೊಳ್ಳಬೇಕು. ಹೊಂದಾಣಿಕೆ ಕಷ್ಟವಾಗುವುದು. ತಂದೆಯಿಂದ ದೂರವಿರುವಿರಿ. ಕುಟುಂಬದ ಮಮತೆ ನಿಮಗೆ ಸಿಗದು. ಕುಜನು ನಿಮ್ಮ ರಾಶಿಯಲ್ಲಿ ಇರುವ ಕಾರಣ, ಒಂದೊಂದೇ ನಕಾರಾತ್ಮಕ ಆಲೋಚನೆಯನ್ನು ಹೆಚ್ಚಿಸುವನು. ರಾಮತಾರಕ ಮಂತ್ರವನ್ನು ಪಠಿಸಿ.

ಕರ್ಕಾಟಕ ರಾಶಿ : ಈ ವಾರ ನಿಮಗೆ ಉತ್ತಮ ಫಲಗಳು ಹೆಚ್ಚು ಕಾಣಿಸುವುದು. ಯಂತ್ರಗಳಿಂದ‌ ನಷ್ಟ‌ ಕಂಡರೂ ಅನಂತರ ಅದನ್ನು ಸರಿಮಾಡಿಕೊಂಡು ಹೋಗುವಿರಿ. ವಿವಾಹ ವಿಳಂಬಕ್ಕೆ ಬೇಸರವಾಗಲಿದೆ. ಉದ್ಯೋಗದಲ್ಲಿ ಶತ್ರುಗಳು ಹುಟ್ಟಿಕೊಳ್ಳುವರು. ಪ್ರತಿಭೆಯ ಅನಾವರಣಕ್ಕೆ ತಡೆಯಾಗಲಿದೆ. ಕಲಾವಿದರು ತೆರೆಯ ಮರೆಯಲ್ಲಿ ಈ ವಾರ ಇರಬೇಕಾದೀತು. ಕೃತಘ್ನತೆಯನ್ನು ಹೆಚ್ಚು ತೋರಿಸುವಿರಿ. ಕುಲದೇವರ ಆರಾಧನೆಯಿಂದ ತೊಂದರೆಯನ್ನು ಪರಿಹರಿಸಿಕೊಳ್ಳುವ ಮಾರ್ಗವು ಸಿಗಲಿದೆ.

ಸಿಂಹ ರಾಶಿ : ಇದು ಸಪ್ಟೆಂಬರ್ ತಿಂಗಳ ಮೂರನೇ ವಾರವಾಗಿದ್ದು ರಾಶಿ ಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲವಿದೆ. ಸೂರ್ಯನೇ ಸ್ವರಾಶಿಯಲ್ಲಿ ಇರುವಾಗ ಆರೋಗ್ಯವು ಕೆಟ್ಟರೂ ಅನಂತರ ಸರಿಯಾಗುವುದು. ಮುಖದ ಮೇಲೆ ಏನಾದರೂ ಚರ್ಮರೋಗವು ಕಾಣಿಸುವುದು. ಉದ್ಯೋಗದ ಹುಡುಕಾಟ ನಿಮಗೆ ಬೇಸರ ತರಿಸುವುದು. ಆಡಳಿತ ವರ್ಗದಲ್ಲಿ ಇರುವವರಿಗೆ ಒಳ್ಳೆಯ ವಾರ. ಸಂಗಾತಿಯಿಂದ ದೂರವಿರಬೇಕಾಗುವುದು. ನಾಗರ ಬಿಂಬಕ್ಕೆ‌ ಕ್ಷೀರ ಅಭಿಷೇಕ ಮಾಡಿ.

ಕನ್ಯಾ ರಾಶಿ : ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಶುಭವಿದೆ. ಸೊಂಟಕ್ಕೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುವುದು. ವೈವಾಹಿಕ ಅಡೆತಡೆಗಳನ್ನು ನೀವು ಯಾರದ್ದೋ ಮೂಲಕ ಮೀರಬೇಕಾಗುವುದು. ಔಷಧ ವ್ಯಾಪಾರವು ಕಳೆಗುಂದುವುದು. ಮಾನ ಸನ್ಮಾನಗಳು ನಡೆದರೂ ನಿಮಗೆ ಇದರಿಂದ ಖುಷಿ ಸಿಗದು. ಶತ್ರುಗಳು ನಿಮ್ಮಿಂದ ದೂರಸರಿಯುವರು. ಬಂಧುಗಳನ್ನು ಕಳೆದುಕೊಳ್ಳುವ ಸ್ಥಿತಿ ಬರುವುದು. ಇಷ್ಟದೇವರಲ್ಲಿ ಅನನ್ಯ ಭಕ್ತಿಯಿಂದ ಅಭೀಷ್ಟವನ್ನು ಪ್ರಾರ್ಥಿಸಿ.

ತುಲಾ ರಾಶಿ : ಸಪ್ಟೆಂಬರ್ ತಿಂಗಳ ಈ ವಾರದಲ್ಲಿ ನಿಮಗೆ ಸಂಕಟದ ದಿನಗಳೇ ಹೆಚ್ಚು ಗೊತ್ತಾಗುವುದು. ಕೈ ಹಾಕಿದ ಕಾರ್ಯವನ್ನು ನೀವು ಅಂದುಕೊಂಡಂತೆ ಆಗದು ಎಂಬ ಬೇಸರ ಇರಲಿದೆ. ದೈಹಿಕ‌ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಸದೀತು. ಒಂದು ರೋಗಕ್ಕೆ ಮಾಡಿದ ಔಷಧಿ ಇನ್ನೊಂದು ರೋಗಕ್ಕೆ ಬಾರದು. ಈ ವಾರ ವ್ಯಾವಹಾರಿಕ ವಿಚಾರದಲ್ಲಿ ಸೋಲು. ನಿಮ್ಮ ಆಯ್ಕೆಗಳು ತಪ್ಪಾಗಿ ನಷ್ಟವೂ ಆಗುವುದು. ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ಪ್ರಾರ್ಥಿಸಿ.

ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಹೆಚ್ಚು ಶುಭವು ಸಿಗಲಿದೆ. ಅನುಭವಿಸಿದ ಸಂಕಷ್ಟಗಳು ಒಂದೊಂದಾಗಿ‌ ಕಳೆಯುವುದು. ಮಕ್ಕಳ ವಿಚಾರದಲ್ಲಿ ನಿಮಗೆ ತೃಪ್ತಿ ಇರದು. ಭೋಗ ವಸ್ತುಗಳನ್ನು ಹೆಚ್ಚು ಬಳಸುವಿರಿ. ಅದಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಸಹಾಸ ಕಾರ್ಯದಲ್ಲಿ ತೊಡಗುವವರಿಗೆ ಎಚ್ಚರಿಕೆ ಬೇಕು. ಈ ವಾರ ವಿದೇಶ ಸಂಚಾರದ ಯೋಜನೆಯನ್ನು ತಯಾರಿಸುವಿರಿ. ಸರ್ಕಾರದ ಕೆಲಸವನ್ನು ಈ ವಾರದಲ್ಲಿ ಮಾಡಬೇಕಾಗುವುದು. ವಲ್ಲೀಸಹಿತನಾದ ಸುಬ್ರಹ್ಮಣ್ಯನ್ನು‌ ಸ್ತುತಿಸಿ ಅನುಗ್ರಹ ಪಡೆಯಿರಿ.

ಧನಸ್ಸು ರಾಶಿ : ಸಪ್ಟೆಂಬರ್ ತಿಂಗಳ ಎರಡನೇ ವಾರ ಅಶುಭವೇ ಅಧಿಕವಾಗಿ ಕಾಣಿಸುವುದು. ಯಾವುದೂ ಬೇಡ ಎಂಬ ತೀರ್ಮಾನಕ್ಕೆ ನೀವು ಬರುವಿರಿ. ಹಣಕಾಸಿಗೆ ಸಂಬಂಧಿಸಿದ ಒಂದೊಂದೆ ಸಮಸ್ಯೆಗಳು ಬರುವುದು. ಯಾವುದು ಮುಖ್ಯ ಅಮುಖ್ಯ ಎಂಬ ಗೊಂದಲದಲ್ಲಿ ನೀವಿರುಬಿರಿ. ಕೌಟುಂಬಿಕ ಶಾಂತಿಯು ಹಾಳಾಗಿ ನೀವೇ ಮನೆಯಿಂದ ದೂರವಿರಬೇಕಾದೀತು. ರಾಜಕೀಯದ ವ್ಯಕ್ತಿಗಳು ಯಥಾಸ್ಥಿತಿಯನ್ನು ಕಾಪಾಡಿಕೊಂಡರಷ್ಟೇ ಒಳ್ಳೆಯದೇ. ನಕಾರಾತ್ಮಕ ಹೇಳಿಕೆಗಳಿಂದ ನಿಮಗೆ ಕುತ್ತುಬರಬಹುದು. ಅಲೆದಾಟದಿಂದ ಮಾನಸಿಕವಾಗಿ ಕುಗ್ಗುವಿರಿ. ಗುರುದರ್ಶನ ಅಥವಾ ಗುರುವಿನ ಸಹವಾಸದಲ್ಲಿ ನೀವಿರುವುದು ಒಳ್ಳೆಯದು.

ಮಕರ ರಾಶಿ : ಈ ವಾರದಲ್ಲಿ ಹತ್ತನೇ ರಾಶಿಯವರಿಗೆ ಪ್ರಗತಿ ಇದ್ದರೂ ಅಲ್ಲಲ್ಲಿ ತೊಡಕುಗಳು ಕಾಣಿಸಿಕೊಳ್ಳುವುವು. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವ ಕಾರಣ ಕುಟುಂಬದಲ್ಲಿ ಸಮಾಧಾನ ಇರದು. ಮನಸ್ಸಿಗೆ ಜಾಡ್ಯ ಬರುವುದು. ಆಗಾಗ ಉತ್ಸಾಹ ಕಾಣಿಸಿಕೊಳ್ಳುವುದು. ವೈವಾಹಿಕ ಮಾತುಕತೆಗಳು ಒಮ್ಮೆ ಬಂದುಹೋಗುವುದು. ಆಸ್ತಿ ಖರೀದಿಯನ್ನು ಮಾಡದೇ ಕೇವಲ ವ್ಯವಹಾರವನ್ನಷ್ಟನ್ನೇ ಮಾಡಿ. ತೃತೀಯದಲ್ಲಿ ರಾಹು ಪಂಚಮದಲ್ಲಿ ಗುರು ಇರುವುದು ಉತ್ತಮ‌ ಸಮಯದಲ್ಲಿ ನೀವಿರುವಿರಿ. ಆದರೆ ಎಲ್ಲ ಸಮಯವೂ ಅಲ್ಲ. ಶಿವ ಪಂಚಾಕ್ಷರವನ್ನು ಪಠಿಸಿ.

ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಶುಭಾಶುಭಫಲ ಇರುವುದು. ವಾಹನ ಖರೀದಿ ಹಾಗೂ ಸಂಚಾರದಲ್ಲಿ ಜಾಗರೂಕರಾಗಿರಿ.‌ ಶುಕ್ರನು ನವಮದಲ್ಲಿ ಇದ್ದು ನೀಚನಾಗಿದ್ದಾನೆ. ಕಲಾವಿದರಿಗೆ ಚಿಂತಾಜನಕ ಸ್ಥಿತಿ. ಕೈಗೆ ಬಂದದ್ದು ಸಿಗದೇ ಹೋಗುವುದು. ಈ ವಾರ ನಡೆಯುವ ಉದ್ವೇಗದ ಸಂದರ್ಭವನ್ನು ಸಮಭಾವದಿಂದ ತೆಗೆದುಕೊಳ್ಳಿ. ಅನಾರೋಗ್ಯದ ಕಾರಣ ನೀವೇ ವೈದ್ಯರ ಸಲಹೆಯನ್ನು ಪಡೆದು ಮುಂದುವರಿಯಬೇಕು. ಕುಟುಂಬದ ಅಸೌಖ್ಯವು ಈ ವಾರ ನಿವಾರಣೆಯಾಗಲಿದೆ. ರಾಜಕೀಯ ನಾಯಕರಿಗೆ ಪದವಿಯಲ್ಲಿ ಸುಖವಿರದು.‌ ನಿಮ್ಮವರಿಂದ ನಿಮ್ಮ ತೇಜೋವಧೆ ಆಗುವುದು. ಶನೈಶ್ಚರಿನಿಗೆ ದೀಪವನ್ನು ಬೆಳಗಿ.

ಮೀನ ರಾಶಿ : ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವಾಗಿದ್ದು ಮಿಶ್ರಫಲವು ನಿಮಗಿರಲಿದೆ. ಪ್ರತಿದಿನ ಆಗುವ ಕಾರ್ಯವೇ ಆದರೂ ಈ ವಾರದಲ್ಲಿ ಅದನ್ನು ಬೇರೆ ರೀತಿಯಲ್ಲಿ ಮಾಡಲು ಆಲೋಚಿಸುವಿರಿ. ಈ ವಾರ ಆಪ್ತರಿಂದ ಅವಮಾನಗಳು ಇರುತ್ತದೆ. ಹಣಕಾಸಿಗೆ ತೊಂದರೆಯನ್ನು ನೀಗಿಸಿಕೊಳ್ಳಲು ಬೇಕಾದ ಪ್ರಯತ್ನ ಇರುತ್ತದೆ. ತೊಂದರೆ ಎದುರಾದರೆ ಎದೆಗುಂದದೆ ಸತ್ಯದ ದಾರಿಯಲ್ಲಿ ನಡೆಯಿರಿ. ಪ್ರಾಮಾಣಿಕತೆಯ ಬಗೆಗೆ ನಿಮಗೆ ಗೊಂದಲವಿರುವುದು. ಕುಲಗುರುವಿನ ಆಶೀರ್ವಾದ ನಿಮಗೆ ಅಗತ್ಯ.

ಲೋಹಿತ ಹೆಬ್ಬಾರ್-8762924271 (what’s app only)

ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ