ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಂದೋ ಮಾಡಿದ ಕಾರ್ಯಕ್ಕೆ ಪ್ರಶಂಸೆ
Daily Horoscope 6 February: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ ಶುಕ್ರವಾರ ಸಹನೆ, ಕೌಶಲ, ಸಾಲದಿಂದ ಮುಕ್ತಿ, ಅಧಿಕ ಕಾರ್ಯ, ಬೋಧನೆ, ಪ್ರಭಾವಿಭೇಟಿ, ವಿಜಯ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ನಿಮಗೆ ಇಂದು ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸಲು ಜೊತೆಗಾರರ ಬೆಂಬಲ ಸಿಗುವುದು. ಭೂಮಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಸುಮ್ಮನೆ ಕುಳಿತಿರುವುದು ನಿಮಗೆ ಆಗದ ಸಂಗತಿ. ಎಲ್ಲರ ಜೊತೆ ಬೆರೆಯುವುದೂ ಆಗದು.
ವೃಷಭ ರಾಶಿ:
ಇಂದು ನಿರ್ಧಾರ ತೆಗೆದುಕೊಳ್ಳುವಾಗ ಆತ್ಮಸಾಕ್ಷಿಯೂ ಅದಕ್ಕೆ ಬೆಂಬಲಿಸಬಹುದು. ಒಡಹುಟ್ಟಿದವರ ಜೊತೆ ಸಂಬಂಧದಲ್ಲಿ ಸವಿಯನ್ನು ಕಾಪಾಡಿಕೊಳ್ಳಿ. ಯಾವುದೇ ರೀತಿಯ ದೂರ ಪ್ರಯಾಣ ಮಾಡುವುದು ಬೇಡ. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದ ಯುವ ಸದಸ್ಯರ ಯಶಸ್ಸಿನಲ್ಲಿ ಹೆಮ್ಮೆ ಪಡುವಿರಿ. ಉದ್ವೇಗದಿಂದ ಕಾರ್ಯಗಳನ್ನು ಮಾಡುವುದಕ್ಕಿಂತ ಏಕಾಗ್ರತೆ ಇರಲಿ.
ಮಿಥುನ ರಾಶಿ:
ಕನಸುಗಳೆಲ್ಲವೂ ನನಸಾಗಿಲ್ಲ ಎಂದು ಹತಾಶರಾಗದೇ ಅದಕ್ಕೆ ಸಮಯವಿದೆ ಎಂದು ಸಕಾರಾತ್ಮಕ ಯೋಚನೆ ಮಾಡಿ. ಸ್ತ್ರೀಯರಿಗೆ ಅನಾರೋಗ್ಯದ ಅಧಿಕವಾಗುವುದು. ಇಂದು ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ನೀವು ಎಲ್ಲರ ಜೊತೆ ಸಭ್ಯತೆಯನ್ನು ಮೀರದೇ ಮಾತನಾಡಬೇಕು. ನಿಮ್ಮದೇ ಕೆಲಸದ ಒತ್ತಡಗಳು ನಿಮಗೆ ಬರುವುದು. ಓಡಾಟವು ಹೆಚ್ಚಾಗಿದ್ದು, ಉತ್ಸಾಹವನ್ನು ಕಳೆದುಕೊಂಡು ಸುಮ್ಮನೆ ಕುಳಿತುಕೊಳ್ಳುವಿರಿ.
ಕರ್ಕಾಟಕ ರಾಶಿ:
ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಎಂತಹ ಸಮಸ್ಯೆಗೂ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಳ ಆಗಬಹುದು. ತಂತ್ರಜ್ಞರಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಖರೀದಿಯ ಉತ್ಸಾಹದಲ್ಲಿ ಮಾತು ಅತಿಯಾಗುವುದು ಬೇಡ. ಕೌಟುಂಬಿಕ ಜೀವನ ಸುಖಕರವಾಗಿರಬಹುದು. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಂಗಾತಿಯಿಂದ ಅನಿರೀಕ್ಷಿತ ಕೊಡುಗೆಯನ್ನು ಪಡೆಯುವಿರಿ.
ಸಿಂಹ ರಾಶಿ:
ಇಂದು ಕೆಲಸದ ಸ್ಥಳದ ಸಮಸ್ಯೆಗಳಿಗೆ ನಿಮ್ಮ ನಿಷ್ಪಕ್ಷಪಾತ ವಿಧಾನವು ನಿಮ್ಮನ್ನು ಜನಪ್ರಿಯಗೊಳಿಸುವುದು. ಇಂದು ಯಾವುದೇ ಕೆಲಸ ಮಾಡುವಾಗ, ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಆಪ್ತರ ಮಾತುಗಳು ನಿಮ್ಮ ತಲೆಯಲ್ಲಿ ಕೊರೆಯಬಹುದು. ಉತ್ತಮ ಕಾರ್ಯಕ್ಕೆ ಎಲ್ಲ ಕಡೆಯಿಂದ ಅಭಿನಂದನೆಗಳು ಹರಿದುಬರಬಹುದು. ಸರ್ಕಾರಿ ಯೋಜನೆಗೆ ಹಣ ಹೂಡುವ ಸಾಧ್ಯತೆಗಳಿವೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ನಿಮ್ಮ ಮಿತವಾದ ಮಾತಿನಿಂದ ಇತರರಿಗೆ ಅಚ್ಚರಿಯಾದೀತು.
ಕನ್ಯಾ ರಾಶಿ:
ಆತುರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ತಪ್ಪು ನಿಮಗೇ ಗೊತ್ತಾದೀತು. ಉದ್ಯೋಗ ಕ್ಷೇತ್ರಗಳಲ್ಲಿ ಕೆಲವು ರೀತಿಯ ರಾಜಕೀಯವನ್ನು ಎದುರಿಸುವಿರಿ. ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹಿತೈಷಿಗಳ ಸಹಾಯದಿಂದ ನಿಮ್ಮ ಯಾವುದೇ ಆಸೆಗಳನ್ನು ಈಡೇರಿಸಲಾಗುವುದು. ಸಣ್ಣ ವ್ಯಾಪಾರಿಗಳು ಅಲ್ಪ ಲಾಭವನ್ನು ಗಳಿಸಿ, ಖುಷಿಪಡುವರು. ನೀವು ಕೆಲವು ವ್ಯವಹಾರ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸು
ತುಲಾ ರಾಶಿ:
ಯಾವುದೇ ಸಮಾಜಕ್ಕೆ ಸಂಬಂಧಿಸಿದ ವಿಷಯಗಳು ನಿಮ್ಮ ಪರವಾಗಿ ಬರಬಹುದು. ವ್ಯವಹಾರದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿರುತ್ತದೆ. ವಾದಗಳ ಕಡೆ ಹೆಚ್ಚು ಗಮನವಿರುವುದು. ನಿಮ್ಮ ವೈಯಕ್ತಿಕ ವಿಚಾರವನ್ನು ಹೊರಗಿನವರಿಗೆ ಹೇಳಬೇಡಿ. ಎಂದೋ ಬರುವ ಸಮಸ್ಯೆಗಳಿಗೆ ಇಂದು ಚಿಂತೆಪಡುವಿರಿ. ವೃತ್ತಿಪರ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಇಟ್ಟುಕೊಳ್ಳಿ.
ವೃಶ್ಚಿಕ ರಾಶಿ:
ಕೆಲವು ಜನರು ನಿಮ್ಮ ಸರಳ ಸ್ವಭಾವವನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆತುರದಲ್ಲಿ ನೀವು ಕೆಲವು ಲಾಭದಾಯಕ ಅವಕಾಶಗಳನ್ನು ಕಳೆದುಕೊಳ್ಳಬಹುದು. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಗಾತಿಯ ಪೂರ್ಣ ಬೆಂಬಲ ಸಿಗುವುದು. ವೃತ್ತಿಪರ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಹಿರಿಯರಿಗೆ ಗೌರವವನ್ನು ಕೊಡುವಿರಿ.
ಧನು ರಾಶಿ:
ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ಯುವಕರು ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಕೆಲವು ರೀತಿಯ ಆತುರ ಉಂಟಾಗಬಹುದು. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯುವುದು ಪ್ರಯೋಜನಕಾರಿಯಾಗಿದೆ.
ಮಕರ ರಾಶಿ:
ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯುತ್ ಉಪಕರಣದಿಂದ ತೊಂದರೆಯಾದೀತು. ಮನೆಯ ಸರಿಯಾದ ಕ್ರಮವನ್ನು ಕಾಪಾಡಿಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆಯಿಂದಿರಿ, ನಿಮ್ಮ ಕೋಪವು ನಿಮಗೆ ಹಾನಿಕಾರಕವಾಗಿರುತ್ತದೆ. ಆದಾಯದಲ್ಲಿಯೂ ನಿಮಗೇ ಪೂರ್ಣತೃಪ್ತಿ ಇರದು. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ.
ಕುಂಭ ರಾಶಿ:
ನಿಮ್ಮ ತಪ್ಪನ್ನು ಯಾರ ಮೇಲೋ ಹಾಕುವಿರಿ. ಅಧ್ಯಾತ್ಮದ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಅತ್ಯುತ್ತಮ ಜ್ಞಾನವನ್ನೂ ಪಡೆಯುವಿರಿ. ಯುವಕರ ವೃತ್ತಿ ಸಂಬಂಧಿತ ಯೋಜನೆಗಳು ದಾರಿ ತಪ್ಪಬಹುದು. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ.
ಮೀನ ರಾಶಿ:
ವೈಯಕ್ತಿಕ ಚಟುವಟಿಕೆಗಳಲ್ಲಿ ಹೆಚ್ಚು ನಿರತರಾಗಿರುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ತೊಂದರೆ ಸಾಧ್ಯತೆಯೂ ಇದೆ. ತಾಳ್ಮೆಯಿಂದ ಸಮಯ ಕಳೆಯಿರಿ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ಹೂಡಿಕೆಯಿಂದ ಲಾಭವು ಸಿಗಲಿದೆ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 24 pm, ಇಂದಿನ ಶುಭಾಶುಭ ಕಾಲ : ರಾಹು 11:12 – 12:39, ಯಮಗಂಡ ಕಾಲ 15:32 – 16:58, ಗುಳಿಕ ಕಾಲ 08:19 – 09:45
-ಲೋಹಿತ ಹೆಬ್ಬಾರ್ – 8762924271 (what’s app only)
