AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ: ಪ್ರಮುಖ ಡ್ಯಾಂಗಳಿಗೆ ಹೆಚ್ಚಿದ ನೀರಿನ ಒಳಹರಿವು

ಕಾವೇರಿ ಜಲಾನಯನ ಪ್ರದೇಶ ಹಾಗೂ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಆರ್‌ಎಸ್, ಕಬಿನಿ ಸೇರಿದಂತೆ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ತಮಿಳುನಾಡಿಗೆ ನೀರು ಹರಿಸುವ ವಿವಾದದ ನಡುವೆ ಡ್ಯಾಂಗಳು ಭರ್ತಿಯಾಗುತ್ತಿರುವುದು ರಾಜ್ಯ ಸರ್ಕಾರಕ್ಕೆ ತಾತ್ಕಾಲಿಕ ಸಮಾಧಾನ ತಂದಿದೆ. ರಾಜ್ಯದ ಪ್ರಮುಖ ಅಣೆಕಟ್ಟುಗಳ ಇಂದಿನ ಸಂಪೂರ್ಣ ಸ್ಥಿತಿಗತಿ ವಿವರಗಳು ಇಲ್ಲಿವೆ.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ: ಪ್ರಮುಖ ಡ್ಯಾಂಗಳಿಗೆ ಹೆಚ್ಚಿದ ನೀರಿನ ಒಳಹರಿವು
ಕಬಿನಿ ಜಲಾಶಯದ ನೀರಿನ ಪ್ರಮಾಣImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Aug 02, 2026 | 10:16 AM

Share

ಮೈಸೂರು, ಆಗಸ್ಟ್​​ 02: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣರಾಜಸಾಗರ (KRS) ಹಾಗೂ ಕಬಿನಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ಸಂಕಷ್ಟದಲ್ಲಿದ್ದ ಕರ್ನಾಟಕ ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಕಳೆದ 24 ಗಂಟೆಗಳಲ್ಲಿ ಕೊಡಗು, ಕೇರಳದ ವಯನಾಡು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಿದೆ. ಕಬಿನಿಯಿಂದ ಸುಮಾರು 25,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಪ್ರವಾಹ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ.

ಜುಲೈ 28ರಂದು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನಿರ್ದೇಶಿಸಿತ್ತು. ಈ ಆದೇಶ ಸಂಬಂಧ ಕರ್ನಾಟಕ ಸರ್ಕಾರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಬಳಿ ಮನವಿ ಸಲ್ಲಿಸಿದ್ದರೂ, ಜುಲೈ 30ರಂದು ಪ್ರಾಧಿಕಾರ ಸಮಿತಿಯೂ ನೀರು ಹರಿಸುವಂತೆ ಆದೇಶಿಸಿತ್ತು. ಡ್ಯಾಂಗಳಲ್ಲಿ ಹೆಚ್ಚಿದ ಒಳಹರಿವಿನಿಂದ CWRC ಮತ್ತು CWMA ಆದೇಶಗಳನ್ನು ಪಾಲಿಸುವುದು ಸರ್ಕಾರಕ್ಕೆ ಈಗ ಸುಲಭವಾಗಿದ್ದು, ರೈತರ ಆಕ್ರೋಶವೂ ತಾತ್ಕಾಲಿಕವಾಗಿ ತಗ್ಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲದಲ್ಲಿ ಸ್ನಾನಘಟ್ಟ, ತ್ರಿವೇಣಿ ಸಂಗಮ, ಉದ್ಯಾನವನ ಮುಳುಗಡೆ

ರಾಜ್ಯದ ಡ್ಯಾಂಗಳ ಇಂದಿನ ನೀರಿನ ಮಟ್ಟ

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯ ಹೆಚ್ಚಳವಾಗಿದ್ದು, ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. 25 ಸಾವಿರ ಕ್ಯೂಸೆಕ್‌ನಿಂದ 30 ಸಾವಿರ ಕ್ಯೂಸೆಕ್‌ಗೆ ಒಳಹರಿವು ಹೆಚ್ಚಿದ್ದು, ಹೊರಹರಿವಿನ ಪ್ರಮಾಣ 12 ಸಾವಿರದಿಂದ 25ಸಾವಿರ ಕ್ಯೂಸೆಕ್‌ಗೆ ಏರಿಕೆ ಕಂಡಿದೆ.

ಕೆಆರ್​​ಎಸ್​​ ಡ್ಯಾಂ

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್​​ಸೆಸ್​​ ಡ್ಯಾಂನ ನೀರು 97 ಅಡಿಗೆ ತಲುಪಿದೆ. 22,055 ಕ್ಯೂಸೆಕ್ ಒಳಹರಿವು ಮತ್ತು 1,766 ಕ್ಯೂಸೆಕ್ ಹೊರ ಹರಿವನ್ನು ಜಲಾಶಯ ಹೊಂದಿದೆ.

ಆಲಮಟ್ಟಿ ಅಣೆಕಟ್ಟೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ 518.96 ಮೀಟರ್ ನೀರಿದ್ದು, ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ. 1,03,773 ಕ್ಯೂಸೆಕ್ ಒಳಹರಿವು ಮತ್ತು 1,11,308 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.

ಹೇಮಾವತಿ ಜಲಾಶಯ

ಗರಿಷ್ಠ 2922 ಅಡಿ ಸಾಮರ್ಥ್ಯ ಹೊಂದಿರುವ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ 2910.37 ಅಡಿ ನೀರಿದೆ. ಡ್ಯಾಂನಲ್ಲಿ 11884 ಕ್ಯೂಸೆಕ್ ಒಳಹರಿವು ಮತ್ತು 500 ಕ್ಯೂಸೆಕ್ ಹೊರ ಹರಿವಿದೆ.

ಹಾರಂಗಿ ಡ್ಯಾಂ

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹಾರಂಗಿಯಲ್ಲಿರೋ ಜಲಾಶಯ ಗರಿಷ್ಟ 2859 ಅಡಿ ಮಟ್ಟ ಹೊಂದಿದ್ದು, ಹಾಲಿ 2856.79 ಅಡಿ ನೀರಿದೆ. ಜಲಾಶಯಕ್ಕೆ ಒಳಹರಿವು 10430 ಕ್ಯೂಸೆಕ್ ಇದ್ದರೆ, ಹೊರ ಹರಿವು 14470 ಕ್ಯೂಸೆಕ್ ಇದೆ.

ತುಂಗಭದ್ರಾ ಜಲಾಶ

ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 40.805 ಟಿಎಂಸಿಯಷ್ಟಿದೆ. ಡ್ಯಾಂಗೆ ಒಳಹರಿವು 24,468 ಕ್ಯೂಸೆಕ್ ಇದ್ದರೆ, ಹೊರ ಹರಿವು 3,003 ಕ್ಯೂಸೆಕ್ ಇದೆ.

ನವಿಲು ತೀರ್ಥ ಮತ್ತು ಹಿಡಕಲ್​​ ಡ್ಯಾಂಗಳು

37.7 ಟಿಎಂಸಿ ನೀರಿನ ಸಾಮರ್ಥ್ಯವಿರುವ ನವಿಲು ತೀರ್ಥ ಜಲಾಶಯದಲ್ಲಿ ಇಂದು 16.170 ಟಿಎಂಸಿ ನೀರಿನ ಸಂಗ್ರಹವಿದೆ. ಹಾಗೆಯೇ 51 ಟಿಎಂಸಿ ಗರಿಷ್ಠ ಹೊಂದಿರುವ ಹಿಡಕಲ್ (ರಾಜಾ ಲಖಮಗೌಡ) ಡ್ಯಾಂನಲ್ಲಿ 35 ಟಿಎಂಸಿ ನೀರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:06 am, Sun, 2 August 26

Follow Us