ದಿನ ಭವಿಷ್ಯ: ಇಂದು ಈ ರಾಶಿಯವರು ದೌರ್ಭಾಗ್ಯದಿಂದ ಹಿಂಸೆಪಡುವರು…
Horoscope Today 27 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಗುರುವಾರದಂದು ಹೂಡಿಕೆಗೆ ಕುತೂಹಲ, ಆಪ್ತರಿಂದ ದೂರ, ವಿದ್ಯಾಭ್ಯಾಸಕ್ಕೆ ಸ್ಥಾನ, ದೂರ ವಾಸ, ಮಹಾತ್ಮ ಭೇಟಿ, ದೈವಾನುಗ್ರಹ ಇವೆಲ್ಲ ಇಂದಿನ ಭವಿಷ್ಯ.

ಮೇಷ ರಾಶಿ:
ವಾದ ಮಾಡಿ ಗೆಲ್ಲುವುದಕ್ಕಿಂತ ವಾಸ್ತವವನ್ನು ಅರಿತು ಸುಮ್ಮನಾಗುವುದು ಉತ್ತಮ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮಿಂದಾಗದ ಕಾರ್ಯವನ್ನು ಯಾರಿಂದಲಾದರೂ ಮಾಡಿಸುವಿರಿ. ವ್ಯಕ್ತಿಗಳ ಮೇಲೆನಂಬಿಕೆಯನ್ನು ನೀವು ಕಳೆದುಕೊಳ್ಳುವಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ.
ವೃಷಭ ರಾಶಿ:
ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು. ಆಕಸ್ಮಿಕ ಪ್ರಯಾಣವು ಬಂದಿದ್ದು, ಇದರಿಂದ ನಿಮಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು. ಎಲ್ಲಿಗಾದರೂ ಪ್ರಯಾಣ ಮಾಡುವ ಉತ್ಸಾಹವಿರುವುದು. ಹಸಿದ ಹೊಟ್ಟೆಯನ್ನು ತಣಿಸಬಹುದು. ನಿಮ್ಮ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ನಿಮ್ಮದಲ್ಲದ್ದನ್ನು ಇಷ್ಟಪಡುವುದು ಬೇಡ. ಪರರ ಭಾವನೆಗೆ ಅನಾದರ ತೋರುವುದು ಬೇಡ.
ಮಿಥುನ ರಾಶಿ:
ಇಂದು ಲೆಕ್ಕ ಶೋಧಕರಿಗೆ ಒತ್ತಡ ಹೆಚ್ಚು. ನಿಮ್ಮ ಪ್ರಯಾಣದಲ್ಲಿ ಕೆಲವು ತೊಂದರೆಗಳು ಆಗಬಹುದು. ನಿಮ್ಮವರ ಅನಾರೋಗ್ಯವನ್ನು ಸರಿಮಾಡಿಕೊಳ್ಳಲು ಓಡಾಟ ಮಾಡಬೇಕಾದೀತು. ಮಿತಿಯರಿತು ನೀವು ವ್ಯವಹರಿಸುವುದು ಮುಖ್ಯ. ಸಾಲ ಮಾಡವ ಸ್ಥಿತಿಯೂ ಬರಬಹುದು. ಶಿಸ್ತಿನ ಕೆಲಸಕ್ಕೆ ನಿಮ್ಮನ್ನು ಪ್ರಶಂಸಿಸಬಹುದು. ಯಾವುದೋ ಯೋಚನೆಯಲ್ಲಿ ನೀವು ಮಗ್ನರಾಗಿ ಚಿಂತೆಪಡುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ:
ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಸಂಪೂರ್ಣ ವಿಶ್ವಾಸ ಬರಬಹುದು. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ತಪ್ಪಿಗೆ ಪಶ್ಚಾತ್ತಾಪವು ಸಣ್ಣ ಪ್ರಾಯಶ್ಚಿತ್ತವಾಗುವುದು. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಅನಿರೀಕ್ಷಿತ ವಾರ್ತೆಯನ್ನು ನೀವು ಕೇಳುವಿರಿ. ನಿಮ್ಮ ಆತಂಕವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಕಾರ್ಯದ ಒತ್ತಡದಿಂದ ಮನಸ್ಸು ಭಾರವಾಗಲಿದೆ.
ಸಿಂಹ ರಾಶಿ:
ದೊಡ್ಡ ಸ್ಥಾನದಲ್ಲಿದ್ದು ಸಣ್ಣ ಮನಸ್ಸು ಮಾಡುವುದು ಬೇಡ. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಎನಿಸಬಹುದು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಅವರ ಜೊತೆ ಕಲಹವಾಡಿ ಬರುವಿರಿ. ಹಳೆಯ ಸ್ನೇಹಿತರು ಅಕಸ್ಮಾತ್ ಸಿಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ.
ಕನ್ಯಾ ರಾಶಿ:
ಗ್ರಾಹಕರ ಬೇಡಿಕೆಯನ್ನು ಈಡೇರಿಸುವಿರಿ. ನಿಮ್ಮ ಪ್ರಯತ್ನಕ್ಕೆ ಪ್ರತಿಫಲವು ಸಿಗಬೇಕೆಂದು ನೀವು ಅಂದುಕೊಳ್ಳುವುದು ಸರಿಯಾಗದು. ನಿಮ್ಮವರಲ್ಲದವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುವುದು ಬೇಡ. ಯಾರಿಂದಲಾದರೂ ನಿಮಗೆ ಜಟಿಲ ಸಮಸ್ಯೆಗೆ ಪರಿಹಾರ ಲಭ್ಯವಾಗುವುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ.
ತುಲಾ ರಾಶಿ:
ಇಂದಿನ ಯಥೇಚ್ಛ ಸುತ್ತಾಟವು ನಿಮಗೆ ಆಯಾಸವನ್ನು ತಂದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡುವಿರಿ. ಇಂದು ಗುಂಪಿನಲ್ಲಿ ಕೆಲಸಮಾಡುವುದು ನಿಮಗೆ ಕಿರಿಕಿರಿಯಾದೀತು. ಹಿರಿಯರ ಆಶೀರ್ವಾದ ಪ್ರಾಪ್ತವಾಗುವುದು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸೂಚನೆ ಸಿಗುವುದು. ಹಿಂದಿನ ಘಟನೆಯೇ ಪುನರಾವರ್ತನೆ ಆಗುವುದು.
ವೃಶ್ಚಿಕ ರಾಶಿ:
ಬೇಡದ ಸಲಹೆಗಳು ನಿಮ್ಮ ಮನಸ್ಸನ್ನು ಹಾಳುಮಾಡುವುದು. ಇಂದು ನೀವು ಅಧಿಕವಾಗಿ ಮಾತನಾಡದೇ ಸುಮ್ಮನಿರುವುದು ಉತ್ತಮ. ತಂಪಾದ ಪರಿಸರ ನಿಮಗೆ ಹಿತವನ್ನು ನೀಡುವುದು. ಕಾಲಹರಣಕ್ಕೆ ನಿಮಗೆ ಇನ್ನೊಬ್ಬರ ವಿಚಾರವನ್ನು ಆಡಿಕೊಳ್ಳುವಿರಿ. ಭೂವ್ಯವಹಾರವು ಸುಖಾಂತ್ಯ ಮಾಡಿಕೊಳ್ಳಿ. ನಿಮ್ಮ ಒಳ್ಳೆಯ ಸ್ವಭಾವದ ಬಗ್ಗೆ ಮಾತನಾಡುವರು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ವೇಗದಲ್ಲಿ ಸಿಗುವ ಯಶಸ್ಸು ಶಾಶ್ವತವಲ್ಲ.
ಧನು ರಾಶಿ:
ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಟವಾದೀತು. ಏನೇನೋ ಯೋಚನೆಗಳು ಬರಬಹುದು. ಮನೆಯಿಂದ ದೂರದಲ್ಲಿ ನೀವು ವಾಸಮಾಡುವ ಸಂದರ್ಭವು ಬರಬಹುದು. ನಿಮ್ಮ ಕೋಪ ಮತ್ತು ಉದ್ವೇಗವನ್ನು ಕೆಲವು ಕಾಲಗಳವರೆಗೆ ನಿಯಂತ್ರಣದಲ್ಲಿ ಇರಿಸಬೇಕಾಗುವುದು. ದೇಹಕ್ಕೆ ಪೆಟ್ಟುಮಾಡಿಕೊಳ್ಳಲು ನೀವು ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳಬಹುದು. ನಿಮ್ಮ ನೈಪುಣ್ಯತೆಯನ್ನು ಕೆಲಸದಲ್ಲಿ ತೋರಿಸಿ.
ಮಕರ ರಾಶಿ:
ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ನಿಮ್ಮ ಆಸ್ತಿಯ ಬಗ್ಗೆ ನಿಮಗೇ ಸಂಪೂರ್ಣವಾದ ಮಾಹಿತಿ ಕೊರತೆಯಾಗುವುದು. ಅಧಿಕಾರದಿಂದ ನಿಮ್ಮ ಆಸೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಮನಸ್ಸಿನಲ್ಲಿ ಇರುವುದನ್ನು ಯಾರ ಜೊತೆಗಾದರೂ ಹೇಳಿಕೊಳ್ಳುವಿರಿ. ನಿಮ್ಮ ನೋವಿಗೆ ಸ್ಪಂದಿಸಲು ಯಾರಾದರೂ ಸಿಕ್ಕಾರು. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ.
ಕುಂಭ ರಾಶಿ:
ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ವ್ಯಾಪಾರದ ಸಂಚು ನಿಮಗೆ ಗೊತ್ತಾಗದೇ ಹೋಗಬಹುದು. ಇಂದಿನ ನಿಮ್ಮ ಆರಂಭವು ಬಹಳ ಸಂತೋಷದಿಂದ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ಯಾವುದನ್ನೂ ಮಾಡಲಾರಿರಿ. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ಸಾಗಿದ ದಾರಿಯನ್ನು ನೀವು ನೆನಪಿಸಿಕೊಳ್ಳುವಿರಿ. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು.
ಮೀನ ರಾಶಿ:
ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ಉತ್ಸಾಹಕ್ಕೆ ದೃಷ್ಟಿ ಬೀಳಬಹುದು. ನೀವು ಇಟ್ಟ ನಂಬಿಕೆಗೆ ಮೋಸವಾಗುವ ಸಾಧ್ಯತೆ ಇದೆ. ಹಣಕಾಸಿನ ಮೌಲ್ಯವನ್ನು ನೀವು ಇಂದು ತಿಳಿದುಕೊಳ್ಳುವಿರಿ. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ನಿಮ್ಮ ಖರ್ಚಿನಿಂದ ಸ್ನೇಹಿತರಿಗೆ ಭೋಜನ ಹಾಕಿಸುವಿರಿ. ಸ್ನೇಹಿತರ ಸಂತೋಷದಲ್ಲಿ ಪಾಲ್ಗೊಳ್ಳುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸೌಭಾಗ್ಯ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:54 – 15:27, ಯಮಗಂಡ ಕಾಲ 06:09 – 07:42, ಗುಳಿಕ ಕಾಲ 09:15 – 10:48
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




