AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಈ ರೀತಿಯಾಗಿ ವೃತ್ತಿಜೀವನ ಆರಂಭಿಸಿದ ವಿಶ್ವದ 15ನೇ ಆಟಗಾರ ಸರಾಂಶ್ ಜೈನ್

Saransh Jain's Unique Test Debut: ಕುಲ್ದೀಪ್ ಬದಲಿಗೆ ಟೆಸ್ಟ್ ಪದಾರ್ಪಣೆ ಮಾಡಿದ ಸರಾಂಶ್ ಜೈನ್, ತಮ್ಮ ಮೊದಲ ಎಸೆತವನ್ನೇ ನೋ-ಬಾಲ್ ಎಸೆದು ಇತಿಹಾಸ ನಿರ್ಮಿಸಿದರು. ಕಪಿಲ್ ದೇವ್ ಪಟ್ಟಿಗೆ ಸೇರಿದ ಇವರು, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎನಿಸಿಕೊಂಡರು. 33ನೇ ವಯಸ್ಸಿನಲ್ಲಿ ಚೊಚ್ಚಲ ಪಂದ್ಯವನ್ನಾಡಿ, ಸಬಾ ಕರೀಮ್ ಅವರ 26 ವರ್ಷಗಳ ದಾಖಲೆಯನ್ನು ಮುರಿದು ಅನನ್ಯ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 25, 2026 | 5:05 PM

Share
ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಎರಡನೇ ಟೆಸ್ಟ್​ನಲ್ಲಿ ಕುಲ್ದೀಪ್​ಗೆ ಆಡುವ ಅವಕಾಶ ಸಿಕ್ಕಿಲ್ಲ. ಅವರ ಬದಲಿಗೆ ಸರಾಂಶ್ ಜೈನ್​ಗೆ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ನೀಡಲಾಗಿದೆ(PC-PTI).

1 / 5
ಈ ಪಂದ್ಯದಲ್ಲಿ ಮೊದಲು ಬ್ಯಾಂಟಿಗ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ತನ್ನ ಅಂತರರಾಷ್ಟ್ರೀಯ ರನ್​ಗಳ ಖಾತೆ ತೆರೆದಿದ್ದ ಸರಾಂಶ್ ಜೈನ್ ಕೇವಲ 6 ರನ್ ಬಾರಿಸಿ ಔಟಾಗಿದ್ದರು. ಅದಾದ ಬಳಿಕ ಬೌಲಿಂಗ್‌ ಆರಂಭಿಸಿದ ಸರಾಂಶ್ ಜೈನ್ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಎಸೆದ ಮೊದಲ ಚೆಂಡು ನೋ-ಬಾಲ್ ಆಗಿತ್ತು. ಈ ರೀತಿಯಾಗಿ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಆಯ್ದ ಆಟಗಾರರ ಪಟ್ಟಿಗೆ ಸರಾಂಶ್ ಜೈನ್ ಕೂಡ ಸೇರ್ಪಡೆಗೊಂಡರು(PC-PTI).

2 / 5
ಅಂಕಿಅಂಶಗಳ ಪ್ರಕಾರ, ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ವಿಶ್ವದ 15 ನೇ ಆಟಗಾರ ಸರಾಂಶ್ ಜೈನ್. ಹಾಗೆಯೇ ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ನಾಲ್ಕನೇ ಭಾರತೀಯ ಎಂಬ ದಾಖಲೆಯೂ ಸರಾಂಶ್ ಜೈನ್ ಪಾಲಾಗಿದೆ. ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ಮೊದಲ ಭಾರತೀಯ ಸ್ಪಿನ್ನರ್ ಕೂಡ ಇವರು(PC-PTI).

3 / 5
ಸರಾಂಶ್ ಜೈನ್​ಗಿಂತ ಮೊದಲು, ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಮೂವರು ಭಾರತೀಯ ಬೌಲರ್‌ಗಳಲ್ಲಿ ಕಪಿಲ್ ದೇವ್, ಇಶಾಂತ್ ಶರ್ಮಾ ಮತ್ತು ಟಿ. ನಟರಾಜನ್ ಸೇರಿದ್ದಾರೆ. ಇದೀಗ ಅವರ ಪಟ್ಟಿಗೆ ಸ್ಪಿನ್ನರ್ ಸರಾಂಶ್ ಜೈನ್ ಸೇರಿಕೊಂಡಿದ್ದಾರೆ(PC-PTI).

4 / 5
ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಸರಾಂಶ್ ಜೈನ್. ಈ ಮೂಲಕ ಸರಾಂಶ್, ಸಬಾ ಕರೀಮ್ ಅವರ 26 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಸಬಾ ಕರೀಮ್ 32 ವರ್ಷ, 11 ತಿಂಗಳು ಮತ್ತು 28 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಸರಾಂಶ್ ಜೈನ್ 33 ವರ್ಷ, 4 ತಿಂಗಳು ಮತ್ತು 24 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR

ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ

ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ

ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ

ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ

ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು

ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು