100 ಕೋಟಿ ದಾಟಿದ ‘ಇರುಮುಡಿ’, ರಾಮ್ ಚರಣ್, ರಶ್ಮಿಕಾ ಮೆಚ್ಚುಗೆ
Toxic movie: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುತ್ತಿದೆಯೆಂದು ಹಲವು ಪರ ಭಾಷೆ ಸಿನಿಮಾಗಳು ತಮ್ಮ ಸಿನಿಮಾಗಳ ಬಿಡುಗಡೆ ಮುಂದೂಡಿದ್ದವು. ಆದರೆ ತೆಲುಗಿನಲ್ಲಿ ರವಿತೇಜ ನಟನೆಯ ‘ಇರುಮುಡಿ’ ಸಿನಿಮಾ ಕೆಲವೇ ದಿನಗಳ ಮುಂಚೆ ಅಂದರೆ ಆಗಸ್ಟ್ ಆಗಸ್ಟ್ 21ಕ್ಕೆ ರಿಲೀಸ್ ಆಗಿತ್ತು. ‘ಟಾಕ್ಸಿಕ್’ ಅಬ್ಬರದ ನಡುವೆಯೂ ಸಹ ‘ಇರುಮುಡಿ’ ಒಳ್ಳೆಯ ಪ್ರದರ್ಶನ ತೋರುತ್ತಿದ್ದು, ಸಿನಿಮಾ 100 ಕೋಟಿ ಗಳಿಕೆ ದಾಟಿದೆ.

ಮುಖ್ಯಾಂಶಗಳು
- ರವಿತೇಜ ನಟಿಸಿರುವ ತೆಲುಗು ಸಿನಿಮಾ ‘ಇರುಮುಡಿ’
- ಅಯ್ಯಪ್ಪ ಭಕ್ತನೊಬ್ಬನ ಸರಳವಾದ ಕತೆ ಒಳಗೊಂಡ ಸಿನಿಮಾ
- ಈ ತೆಲುಗು ಸಿನಿಮಾ 100 ಕೋಟಿ ಗಳಿಕೆ ದಾಟಿದೆ.
‘ಟಾಕ್ಸಿಕ್’ (Toxic) ಸಿನಿಮಾ ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿಯೂ ಸಹ ಸಿನಿಮಾ ರಿಲೀಸ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುತ್ತಿದೆಯೆಂದು ಹಲವು ಪರ ಭಾಷೆ ಸಿನಿಮಾಗಳು ತಮ್ಮ ಸಿನಿಮಾಗಳ ಬಿಡುಗಡೆ ಮುಂದೂಡಿದ್ದವು. ಆದರೆ ತೆಲುಗಿನಲ್ಲಿ ರವಿತೇಜ ನಟನೆಯ ‘ಇರುಮುಡಿ’ ಸಿನಿಮಾ ಕೆಲವೇ ದಿನಗಳ ಮುಂಚೆ ಅಂದರೆ ಆಗಸ್ಟ್ ಆಗಸ್ಟ್ 21ಕ್ಕೆ ರಿಲೀಸ್ ಆಗಿತ್ತು. ‘ಟಾಕ್ಸಿಕ್’ ಅಬ್ಬರದ ನಡುವೆಯೂ ಸಹ ‘ಇರುಮುಡಿ’ ಒಳ್ಳೆಯ ಪ್ರದರ್ಶನ ತೋರುತ್ತಿದ್ದು, ಸಿನಿಮಾ 100 ಕೋಟಿ ಗಳಿಕೆ ದಾಟಿದೆ.
ರವಿತೇಜ ನಟನೆಯ ‘ಇರುಮುಡಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಕೆ ದಾಟಿದೆ. ಹೆಸರೇ ಸೂಚಿಸುತ್ತಿರುವಂತೆ ಅಯ್ಯಪ್ಪ ಸ್ವಾಮಿ ಭಕ್ತನ ಕತೆಯನ್ನು ಒಳಗೊಂಡಿರುವ ಈ ಸಿನಿಮಾ, ಭಕ್ತಿಯ ಜೊತೆಗೆ ಸಸ್ಪೆನ್ಸ್, ಆಕ್ಷನ್ ಕತೆಯನ್ನೂ ಸಹ ಒಳಗೊಂಡಿದೆ. ‘ಇರುಮುಡಿ’ ಸಿನಿಮಾ ತೆಲುಗು ರಾಜ್ಯಗಳಲ್ಲಿ ಕುಟುಂಬ ಪ್ರೇಕ್ಷಕರನ್ನು ಸೆಳೆದಿದ್ದು, ತಂಡೋಪತಂಡವಾಗಿ ಕುಟುಂಬಗಳು ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ನೋಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಆಗಿ ವಾರದ ಒಳಗಾಗಿಯೇ 100 ಕೋಟಿ ಗಳಿಕೆ ದಾಟಿದೆ.
ಸಿನಿಮಾಕ್ಕೆ ಕೆಲ ಸಿನಿಮಾ ಸೆಲೆಬ್ರಿಟಿಗಳ ಬೆಂಬಲವೂ ವ್ಯಕ್ತವಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರು ‘ಇರುಮುಡಿ’ ಸಿನಿಮಾ ವೀಕ್ಷಿಸಿ ಕೊಂಡಾಡಿದ್ದಾರೆ. ‘ ‘ಇರುಮುಡಿ’ ಅತ್ಯಂತ ಸುಂದರವಾದ ಸಿನಿಮಾ. ಈ ಚಿತ್ರವು ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು. ಈ ಸಿನಿಮಾ ಸಮಾಜದಲ್ಲಿ ಚರ್ಚೆಯಾಗಬೇಕಾದ ವಿಷಯವನ್ನು ಧೈರ್ಯವಾಗಿ ಹೇಳಿದೆ. ಈ ವಿಷಯವನ್ನು ಪ್ರಸ್ತಾಪಿಸಿದ ಚಿತ್ರತಂಡಕ್ಕೆ ಧನ್ಯವಾದಗಳು. ರವಿ ತೇಜ ಸರ್ ಅವರ ಯಶಸ್ಸಿಗೆ ನನ್ನ ಅಭಿನಂದನೆಗಳು. ನಟಿ ನಕ್ಷತ್ರ ಅವರ ನಟನೆ ಮತ್ತು ನಗು ಅತ್ಯಂತ ಸೌಂದರ್ಯದಿಂದ ಕೂಡಿತ್ತು. ನಿರ್ದೇಶಕ ಶಿವ ನಿರ್ವಾಣ ಅವರಿಗೆ ಈ ಯಶಸ್ಸು ಸಿಗಲೇಬೇಕಿತ್ತು. ಇಡೀ ತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ರಶ್ಮಿಕಾ ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇರುಮುಡಿ; ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಮೆಚ್ಚುಗೆ: ‘ಟಾಕ್ಸಿಕ್’ ಸಿನಿಮಾಗೂ ನಟಿಯಿಂದ ಸಿಗುತ್ತಾ ಹೊಗಳಿಕೆ?
ನಟ ರಾಮ್ ಚರಣ್ ಸಹ ಸಿನಿಮಾ ಅನ್ನು ಕೊಂಡಾಡಿದ್ದಾರೆ. ಖುದ್ದು ಅಯ್ಯಪ್ಪ ಭಕ್ತರಾಗಿರುವ ರಾಮ್ ಚರಣ್, ‘ಇರುಮುಡಿ’ ಸಿನಿಮಾ ವೀಕ್ಷಿಸಿದ್ದು, ‘ರವಿತೇಜ ಹಾಗೂ ಇಡೀ ‘ಇರುಮುಡಿ’ ಸಿನಿಮಾ ತಂಡಕ್ಕೆ ಅಭಿನಂದನೆಗಳು. ಸಿನಿಮಾಕ್ಕೆ ದೊರೆಯುತ್ತಿರುವ ಪ್ರೀತಿಯನ್ನು ನೋಡಿದರೆ ಖುಷಿಯಾಗುತ್ತದೆ. ಚಿತ್ರತಂಡ ಹಾಕಿರುವ ಶ್ರಮಕ್ಕೆ ಫಲ ಸಿಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ, ಅಭಿನಂದನೆಗಳು, ಸ್ವಾಮಿ ಶರಣಂ’ ಎಂದಿದ್ದಾರೆ ರಾಮ್ ಚರಣ್.
ತೆಲುಗು ರಾಜ್ಯಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ‘ಟಾಕ್ಸಿಕ್’ ಸಿನಿಮಾದ ಅಬ್ಬರದ ನಡುವೆ ‘ಇರುಮುಡಿ’ ಸಿನಿಮಾ ಕಳೆದು ಹೋಗುತ್ತದೆ ಎನ್ನಲಾಗುತ್ತಿತ್ತು. ಆದರೆ ಹಾಗಾಗಿಲ್ಲ, ಸಿನಿಮಾ ಭದ್ರವಾಗಿ ನಿಂತಿದ್ದು, ಒಳ್ಳೆಯ ಗಳಿಕೆಯನ್ನು ಮುಂದುವರೆಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




