AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತೆ: ನೀರು ಬರುವ ಮೊದಲೇ ಹನಿ ನೀರಾವರಿ ಸಾಮಗ್ರಿ ಅಳವಡಿಕೆ

ಜಗಳೂರು ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಇನ್ನೂ ತಲುಪಿಲ್ಲ, ಆದರೂ ಹನಿ ನೀರಾವರಿ ಸಾಮಗ್ರಿಗಳು ಅಳವಡಿಕೆಯಾಗಿವೆ. ಮುಖ್ಯ ಪೈಪ್‌ಲೈನ್ ನಿರ್ಮಾಣಕ್ಕೂ ಮುನ್ನವೇ ಡ್ರಿಪ್ ಪೈಪ್ ಹಾಕಿರುವುದು ಅವೈಜ್ಞಾನಿಕವಾಗಿದೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ತುಕ್ಕು ಹಿಡಿಯುತ್ತಿದ್ದು, ಕಾಮಗಾರಿ ವಿಳಂಬದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತೆ: ನೀರು ಬರುವ ಮೊದಲೇ ಹನಿ ನೀರಾವರಿ ಸಾಮಗ್ರಿ ಅಳವಡಿಕೆ
ಭದ್ರಾ ಮೇಲ್ದಂಡೆ ಯೋಜನೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Nov 19, 2026 | 7:46 PM

Share

ದಾವಣಗೆರೆ, ನವೆಂಬರ್​​ 19: ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ತಲುಪುತ್ತಿದ್ದು, ಭದ್ರಾ ಡ್ಯಾಂನಿಂದ ನಾಲ್ಕು ಟಿಎಂಸಿ ನೀರು ಹರಿಸಲಾಗಿದೆ. ಆದರೆ, ಇದೇ ಯೋಜನೆಯ ವ್ಯಾಪ್ತಿಗೆ ಸೇರುವ ದಾವಣಗೆರೆ ಜಿಲ್ಲೆಯ ಏಕೈಕ ತಾಲೂಕು ಜಗಳೂರಿಗೆ ಮಾತ್ರ ಇನ್ನೂ ಭದ್ರಾ ನೀರು ತಲುಪಿಲ್ಲ. ಕಾಮಗಾರಿಯೇ ಪೂರ್ಣಗೊಳ್ಳದಿದ್ದರೂ ಹನಿ ನೀರಾವರಿ ಯೋಜನೆಯ ಸಾಮಗ್ರಿಗಳನ್ನು ಅಳವಡಿಸಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ರೀತಿಯಲ್ಲಿ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತಾಗಿದೆ ಜಗಳೂರಿನ ಪರಿಸ್ಥಿತಿ.

57 ಕೆರೆಗಳಿಗೆ ನೀರು ಬಂದರೂ ನೀರಾವರಿಗೆ ಭದ್ರೆಯೇ ಆಸರೆ!

ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿದ ದಾವಣಗೆರೆ ಜಿಲ್ಲೆಯ ಏಕೈಕ ತಾಲೂಕು ಜಗಳೂರು. ಇದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿಗೆ ಹನಿ ನೀರಾವರಿ ಒದಗಿಸುವ ಯೋಜನೆ. ಜಗಳೂರು ತಾಲ್ಲೂಕಿನ ಬಿದರಕೆರೆ, ನಿಬ್ಬಗೂರು, ಸಂಗೇನಹಳ್ಳಿ ಸೇರಿದಂತೆ ಹಲವು ಕೆರೆಗಳಿಗೆ ಭದ್ರ ನೀರು ಹರಿಸಬೇಕಿತ್ತು. ಆದರೆ ಹಲವು ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣವಾಗಿಲ್ಲ. ಮುಖ್ಯ ಪೈಪ್ ಲೈನ್​ಗೂ ಮೊದಲೇ ಡ್ರಿಪ್ ಪೈಪ್ ಹಾಕಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದಾರೆ ಗುತ್ತಿಗೆದಾರರು. ಕೇವಲ ಬಿಲ್ ಪಡೆಯಲು ನೀರು ಬಾರದೇ ಇದ್ದರೂ ಡ್ರಿಪ್​ ವೈರ್ ಹಾಕಿದ್ದಾರೆ ಎಂಬುದು ರೈತರ ಆರೋಪ. ಪಕ್ಕದ ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ನೀರು ಹರಿಸಲಾಗಿದೆ. ಆದರೆ ಜಗಳೂರಿಗೆ ಭದ್ರಾ ನೀರಿಲ್ಲ, ಭದ್ರಾ ಮೇಲ್ಡಂಡೆ ಹನಿ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಅವೈಜ್ಞಾನಿಕ ಕಾಮಗಾರಿಗೆ ರೈತರ ಆಕ್ರೋಶ

ಜಗಳೂರು ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು. ಭೌಗೋಳಿಕವಾಗಿಯೂ ಚಿತ್ರದುರ್ಗ ಜಿಲ್ಲೆಯ ವಾತಾವರಣ. ಇಲ್ಲಿ ನೀರಿನ ಮೂಲವಿಲ್ಲ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇತ್ತು. ಈಗ ತುಂಗಾಭದ್ರಾ ನದಿಯಿಂದ ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ಬಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಬಹುದು. ಆದರೆ ನೀರಾವರಿ ಕಷ್ಟ. ಇದೇ ಕಾರಣಕ್ಕೆ ಭದ್ರಾ ಮೇಲ್ಡಂಡೆ ಯೋಜನೆಗೆ ಸರ್ಕಾರ ಜಗಳೂರು ತಾಲೂಕು ಸೇರ್ಪಡೆ ಮಾಡಿದೆ. ಇಲ್ಲಿ ಹನಿ ನೀರಾವರಿ ಯೋಜನೆಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಬೇಕು ಎಂಬುದು ರೈತರ ಆಗ್ರಹ. ಸೂಕ್ತ ಪೈಪ್ ಲೈನ್ ಇಲ್ಲದೆ ಹನಿ ನೀರಾವರಿ ಯೋಜನೆ ಕಾಮಗಾರಿ ಮಾಡಿದ್ದು, ಆ ಪೈಪ್ ಲೈನ್ ಆಗುವಷ್ಟರಲ್ಲಿ ಹನಿ ನೀರಿನ ಸಾಮಗ್ರಿಗಳು ಹಾಳಾಗಿ ಹೋಗುತ್ತವೆ.

ಇದನ್ನೂ ಓದಿ: ಯಲ್ಲಮ್ಮಗೆ ಸರ್ಪ ದೋಷ ವದಂತಿ ಪೂಜೆಯಿಂದ ಮಲಿನಗೊಂಡಿದ್ದ ಭೀಮಾನದಿ ಕ್ಲೀನ್

ಚಿತ್ರದುರ್ಗದಿಂದ ಜಗಳೂರು ತಾಲೂಕಿಗೆ ಮೊದಲು ಮುಖ್ಯ ಪೈಪ್ ಲೈನ್ ಆಗಬೇಕು. ಆ ನೀರು ಕೆರೆಗಳಿಗೆ ಬರಬೇಕು. ಹೀಗೆ ಕೆರೆಗಳಿಗೆ ನೀರು ಬಂದ ಬಳಿಕ ಹನಿ ನೀರಾವರಿ ಮೂಲಕ ರೈತರ ಜಮೀನಿಗೆ ನೀರು ಹೋಗಬೇಕು. ಆದರೆ ಇಲ್ಲಿ ಮಾತ್ರ ಯಾವುದೇ ಕಾಮಗಾರಿ ಮುಕ್ತಾಯ ಆಗಿಲ್ಲ. ತಮ್ಮ ಪಾಡಿಗೆ ತಾವು ಹನಿ ನೀರಾವರಿ ಸಮಗ್ರಿ ಜೋಡಣೆ ಮಾಡಿ ಸುಮ್ಮನಿದ್ದಾರೆ ಗುತ್ತಿಗೆದಾರರು. ಈ ವಿಚಾರವಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Thu, 19 November 26

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ