AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಿಯೇಟರ್ vs ನಿರ್ಮಾಪಕ: ಫಿಲಂ ಚೇಂಬರ್ ಮಹತ್ವದ ನಿರ್ಧಾರ

ನಿರ್ಮಾಪಕರು ಅಥವಾ ವಿತರಕರು ಚಿತ್ರಮಂದಿರವನ್ನು ಇಂತಿಷ್ಟು ದಿನಗಳಿಗೆಂದು ಬಾಡಿಗೆ ಪಡೆದು ಸಿನಿಮಾ ಪ್ರದರ್ಶಿಸುತ್ತಾರೆ. ಆದರೆ ಮಲ್ಟಿಪ್ಲೆಕ್ಸ್​​ನಲ್ಲಿ ಅದೇ ನಿರ್ಮಾಪಕರು ಲಾಭ ಹಂಚಿಕೆ ವಿಧಾನದಲ್ಲಿ ಸಿನಿಮಾ ಪ್ರದರ್ಶಿಸುತ್ತಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಮಾಲೀಕರು ಸಹ ತಮಗೂ ಲಾಭ ಹಂಚಿಕೆ ವಿಧಾನವೇ ಬೇಕೆಂದು ಆಗ್ರಹಿಸಿದ್ದರು. ಅದರ ಬಗ್ಗೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಥಿಯೇಟರ್ vs ನಿರ್ಮಾಪಕ: ಫಿಲಂ ಚೇಂಬರ್ ಮಹತ್ವದ ನಿರ್ಧಾರ
Single Screen Theater
ಮಂಜುನಾಥ ಸಿ.
|

Updated on: Nov 19, 2026 | 6:38 PM

Share

ಮುಖ್ಯಾಂಶಗಳು

  • ಫಿಲಂ ಚೇಂಬರ್ ಮಹತ್ವದ ನಿರ್ಧಾರ
  • ಸಿನಿಮಾ ಲಾಭ ಹಂಚಿಕೆ ವಿಧಾನದಲ್ಲಿ ಬದಲಾವಣೆ
  • ಬಾಡಿಗೆ ಬದಲು ಶೇಕಡವಾರು ಬದಲಾವಣೆ

ಚಿತ್ರಮಂದಿರ ಮಾಲೀಕರು ಮತ್ತು ನಿರ್ಮಾಪಕರ ನಡುವೆ ಭಾರತದ ಬಹುತೇಕ ಎಲ್ಲ ಪ್ರಮುಖ ಚಿತ್ರರಂಗಗಳಲ್ಲೂ ಭಿನ್ನಾಭಿಪ್ರಾಯ ಚಾಲ್ತಿಯಲ್ಲಿದೆ. ವಿಶೇಷವಾಗಿ ಸಿನಿಮಾದ ಲಾಭ ಹಂಚಿಕೆ ವಿಚಾರದಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ. ಕರ್ನಾಟಕದಲ್ಲಿ ಬಹುತೇಕ ಸಿಂಗಲ್ ಚಿತ್ರಮಂದಿರಗಳಲ್ಲಿ ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ನಿರ್ಮಾಪಕರು ಅಥವಾ ವಿತರಕರು ಚಿತ್ರಮಂದಿರವನ್ನು ಇಂತಿಷ್ಟು ದಿನಗಳಿಗೆಂದು ಬಾಡಿಗೆ ಪಡೆದು ಸಿನಿಮಾ ಪ್ರದರ್ಶಿಸುತ್ತಾರೆ. ಆದರೆ ಮಲ್ಟಿಪ್ಲೆಕ್ಸ್​​ನಲ್ಲಿ ಅದೇ ನಿರ್ಮಾಪಕರು ಲಾಭ ಹಂಚಿಕೆ ವಿಧಾನದಲ್ಲಿ ಸಿನಿಮಾ ಪ್ರದರ್ಶಿಸುತ್ತಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಮಾಲೀಕರು ಸಹ ತಮಗೂ ಲಾಭ ಹಂಚಿಕೆ ವಿಧಾನವೇ ಬೇಕೆಂದು ಆಗ್ರಹಿಸಿದ್ದರು. ಅದರ ಬಗ್ಗೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಹಲವು ಸಂಘ ಸಂಸ್ಥೆಗಳೊಟ್ಟಿಗೆ ಇಂದು ಸಭೆ ನಡೆಸಿದ ಬಳಿಕ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ, ‘ಪ್ರದರ್ಶಕ ವಲಯದ ಅಧ್ಯಕ್ಷರು ಫಿಲಂ ಚೇಂಬರ್​​ಗೆ ಪತ್ರ ನೀಡಿ ಬದಲಾವಣೆಗೆ ಕೋರಿದ್ದರು. ಹಾಗಾಗಿ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ಧತಿಯಲ್ಲಿ ಸಿನಿಮಾ ಪ್ರದರ್ಶನ ಮಾಡುವ ಬಗ್ಗೆ ಸಂಘ ಸಂಸ್ಥೆಗಳ ಪ್ರಮುಖರನ್ನು ಕರೆಸಿ ಸಭೆ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಜಯಮಾಲಾ ಹೇಳಿದರು.

‘ಕನ್ನಡ ಚಿತ್ರ ರಂಗದಲ್ಲಿ ವರ್ಷಕ್ಕೆ 250 ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅವುಗಳಲ್ಲಿ 200 ಹೊಸಬರ ಸಿನಿಮಾಗಳೇ ಇರುತ್ತವೆ. ಹೀಗಾಗಿ ಎಲ್ಲರಿಗೂ ಸಹಾಯ ಆಗಬೇಕು. ಅದರಲ್ಲೂ ಹೊಸ ನಿರ್ಮಾಪಕರಿಗೆ ಹಾಗೂ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಒಳ್ಳೇದು ಆಗಬೇಕು ಅನ್ನುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಧಾರ ಮಾಡಿದೀವಿ. ಇನ್ನು ಮುಂದೆ ಚಿತ್ರಮಂದಿರಗಳು ಬಾಡಿಗೆ ಮಾದರಿ ಕೈಬಿಟ್ಟು ಶೇಕಡವಾರು ಪದ್ಧತಿಯಲ್ಲಿ ಸಿನಿಮಾ ಪ್ರದರ್ಶಿಸಬೇಕು. ಮುಂದಿನ ಶುಕ್ರವಾರದಿಂದ ಇದು ಜಾರಿ ಆಗಬೇಕು’ ಎಂದರು.

ಇದನ್ನೂ ಓದಿ:ಆಸ್ಕರ್​​ಗೆ ಆಯ್ಕೆಯಾದ ಮರಾಠಿ ಸಿನಿಮಾ ‘ಗೋಂಧಳ್’ ಈಗ ಚಿತ್ರಮಂದಿರಕ್ಕೆ

ಇಷ್ಟು ದಿನ ಚಿತ್ರಮಂದಿರಗಳನ್ನು ಬಾಡಿಗೆ ಪಡೆದು ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಸಿನಿಮಾದ ಕಲೆಕ್ಷನ್​​ಗೂ ಚಿತ್ರಮಂದಿರಗಳಿಗೂ ಸಂಬಂಧ ಇರಲಿಲ್ಲ. ಆದರೆ ಈಗ ಲಾಭ ಹಂಚಿಕೆ ಮಾದರಿಯಲ್ಲಿ ಯಾವುದೇ ಸಿನಿಮಾ, ನಿರ್ದಿಷ್ಟ ಚಿತ್ರಮಂದಿರದಲ್ಲಿ ಮಾಡುವ ಗಳಿಕೆಯ ನಿರ್ದಿಷ್ಟ ಭಾಗ ಚಿತ್ರಮಂದಿರಗಳ ಮಾಲೀಕರಿಗೆ ಹೋಗುತ್ತದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಈಗಾಗಲೇ ಈ ಮಾದರಿ ಚಾಲ್ತಿಯಲ್ಲಿದೆ. ನೆರೆಯ ರಾಜ್ಯಗಳಲ್ಲಿಯೂ ಪ್ರದರ್ಶಕರು ಇದೇ ಶೇಕಡವಾರು ಮಾದರಿಯಲ್ಲೇ ಲಾಭ ಹಂಚಿಕೆ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಕರ್ನಾಟಕದಲ್ಲೂ ಇದೇ ಮಾದರಿ ಅನುಸರಿಯಲು ಫಿಲಂ ಚೇಂಬರ್ ಒತ್ತಾಯಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು