AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಭಾರತದ ವಿರುದ್ಧ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಸೋನಲ್ ದಿನುಷಾ

Sonal Dinusha: ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಯುವ ಆಟಗಾರ ಸೋನಲ್ ದಿನುಷಾ ತಮ್ಮ ಸ್ಥಿರ ಮತ್ತು ತಾಳ್ಮೆಯ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಮಧ್ಯಮ ಕ್ರಮಾಂಕದ ಈ ಬ್ಯಾಟ್ಸ್‌ಮನ್ ಗಾಲೆಯಲ್ಲಿ ಶತಕ ಹಾಗೂ 84 ರನ್ ಗಳಿಸಿದ್ದು, ಕೊಲಂಬೊದಲ್ಲಿ ಮತ್ತೊಂದು ಶತಕ ದಾಖಲಿಸಿದ್ದಾರೆ. ಈ ಸರಣಿಯಲ್ಲಿ ಭಾರತದ ವಿರುದ್ಧ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 80ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ದಿನುಷಾ ಪಾತ್ರರಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 26, 2026 | 9:06 PM

Share
ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ, ಕೆಲವು ಯುವ ಆಟಗಾರರು ತಮ್ಮ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಅದರಂತೆ ಶ್ರೀಲಂಕಾ ತಂಡದ ಪರ ಸ್ಥಿರ ಪ್ರದರ್ಶನ ನೀಡಿರುವ ಏಕೈಕ ಆಟಗಾರನೆಂದರೆ ಅದು 25 ವರ್ಷದ ಬ್ಯಾಟ್ಸ್‌ಮನ್ ಸೋನಲ್ ದಿನುಷಾ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ದಿನುಷಾ ತಮ್ಮ ಅತ್ಯುತ್ತಮ ತಂತ್ರ ಮತ್ತು ತಾಳ್ಮೆಯ ಬ್ಯಾಟಿಂಗ್‌ ಮೂಲಕ ಪರಿಣಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ(PC-PTI).

1 / 5
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ್ದ ಸೋನಲ್ ದಿನುಷಾ ಸ್ಮರಣೀಯ ಶತಕ ಬಾರಿಸಿದ್ದರು. ಆ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ 84 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಪ್ರದರ್ಶನದ ಹೊರತಾಗಿಯೂ ದಿನುಷಾಗೆ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿರಲಿಲ್ಲ(PC-PTI).

2 / 5
ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ದಿನುಷಾ ಮತ್ತೊಂದು ಅದ್ಭುತ ಶತಕ ಬಾರಿಸಿ 103 ರನ್​ಗಳ ಇನ್ನಿಂಗ್ಸ್ ಆಡಿದರು. ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ, ನಾಲ್ಕನೇ ದಿನದಾಟದಂತ್ಯಕ್ಕೆ  37 ಎಸೆತಗಳಲ್ಲಿ 7 ರನ್ ಗಳಿಸಿ ಅಜೇಯರಾಗಿ ಉಳಿದಿರುವ ದಿನುಷಾ 5ನೇ ದಿನದಂದು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ(PC-PTI).

3 / 5
ಪ್ರಸ್ತುತ ಸರಣಿಯಲ್ಲಿ ದಿನುಷಾ ಮೊದಲ ಮೂರು ಟೆಸ್ಟ್ ಇನ್ನಿಂಗ್ಸ್​ಗಲ್ಲಿ 100, 84 ಮತ್ತು 103 ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಮೂರು ಇನ್ನಿಂಗ್ಸ್‌ಗಳಲ್ಲಿ 80 ಕ್ಕೂ ಹೆಚ್ಚು ರನ್ ಬಾರಿಸುವ ಮೂಲಕ, ದಿನುಷಾ ಭಾರತದ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ(PC-PTI).

4 / 5
ಇದಕ್ಕೂ ಮೊದಲು, ಪಾಕಿಸ್ತಾನದ ಜಹೀರ್ ಅಬ್ಬಾಸ್ ಮತ್ತು ಇಂಗ್ಲೆಂಡ್‌ನ ಎವರ್ಟನ್ ವೀಕ್ಸ್ ಈ ಸಾಧನೆ ಮಾಡಿದರು. ಅಬ್ಬಾಸ್ 176, 96 ಮತ್ತು 235* ರನ್ ಬಾರಿಸಿದ್ದರೆ, ವೀಕ್ಸ್ 128, 194 ಮತ್ತು 162 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ದಿನುಷಾ ಈ ಸಾಧನೆ ಮಾಡುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ(PC-PTI).

5 / 5
Follow Us
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು

6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?

ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ

‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ

125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ

ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?

ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ

ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!

ಈದ್ ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ

ನಾಗೇಂದ್ರ ರಾಜೀನಾಮೆ ಕೊಟ್ರೆ ಬಿಜೆಪಿ ಪಾದಯಾತ್ರೆ ಮಾಡುತ್ತೋ ಇಲ್ವೋ?