ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಫ್ಯಾನ್ಸ್ ಸಂಭ್ರಮ
ಬೆಂಗಳೂರು ಮಾತ್ರವಲ್ಲದೇ ಎಲ್ಲ ಜಿಲ್ಲೆಗಳಲ್ಲಿ ಜನರು ‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ತುಮಕೂರಿನ ಚಿತ್ರಮಂದಿರಗಳಲ್ಲಿ ಸಹ ಅಭಿಮಾನಿಗಳು ಸಂಭ್ರಮಿಸಿದರು. ಗಾಯತ್ರಿ, ಮಾರುತಿ ಚಿತ್ರಮಂದಿರಗಳಲ್ಲಿ ಮುಂಜಾನೆ ಶೋ ಆರಂಭ ಆಯಿತು. ಅಭಿಮಾನಿಗಳ ಸಂಭ್ರಮ ಯಾವ ರೀತಿ ಇತ್ತು ಎಂಬುದರ ವಿವರ ಈ ವಿಡಿಯೋದಲ್ಲಿದೆ ನೋಡಿ..
ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಇಂದು (ಆಗಸ್ಟ್ 26) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಈ ಚಿತ್ರವನ್ನು ನೋಡಲು ಯಶ್ ಅಭಿಮಾನಿಗಳು ಕಾದಿದ್ದರು. ಮೊದಲ ದಿನವೇ ಚಿತ್ರಕ್ಕೆ ಜನಸಾಗರ ಹರಿದುಬಂದಿದೆ. ಎಲ್ಲ ಕಡೆಗಳಲ್ಲೂ ಶೋ ಹೌಸ್ಫುಲ್ ಆಗಿದೆ. ಬೆಂಗಳೂರು ಮಾತ್ರವಲ್ಲದೇ ಎಲ್ಲ ಜಿಲ್ಲೆಗಳಲ್ಲಿ ಕೂಡ ಜನರು ‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ತುಮಕೂರಿನ ಚಿತ್ರಮಂದಿರಗಳಲ್ಲಿ ಸಹ ಅಭಿಮಾನಿಗಳು ಸಂಭ್ರಮಿಸಿದರು. ಗಾಯತ್ರಿ, ಮಾರುತಿ ಚಿತ್ರಮಂದಿರಗಳಲ್ಲಿ ಮುಂಜಾನೆ ಶೋ ಆರಂಭ ಆಯಿತು. ಅದಕ್ಕೂ ಮುನ್ನ ಸಾಕಷ್ಟು ಅಭಿಮಾನಿಗಳು ಬಂದು ಕಾದು ಕುಳಿತಿದ್ದರು. ಪಟಾಕಿ ಹೊಡೆದು, ಯಶ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಖುಷಿಪಟ್ಟರು. ಬೆಳಗ್ಗೆ 9 ಗಂಟೆ ವೇಳೆಗೆ ಜನರ ಸಂಭ್ರಮ ಇನ್ನಷ್ಟು ಹೆಚ್ಚಾಯಿತು. ಎಲ್ಲದರ ವಿವರ ಈ ವಿಡಿಯೋದಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

