Horoscope: ಅನಾರೋಗ್ಯ ನಿಮ್ಮನ್ನು ಬಾಧಿಸುವುದು, ದಿನಚರಿಯಲ್ಲಿ ಬದಲಾವಣೆ
ಸೆಪ್ಟೆಂಬರ್ 24, 2024ರ ನಿಮ್ಮ ರಾಶಿಭವಿಷ್ಯ: ದುಂದುವೆಚ್ಚವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮವರ ಪ್ರೀತಿಯು ನಿಮ್ಮ ಮೇಲೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಲಾಭಗಳಿಸುವ ಯೋಜನೆಯನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನೀವು ಹೆಚ್ಚಿನ ಆದಾಯವನ್ನು ನಿರೀಕ್ಷಿಸುವಿರಿ. ಹಾಗಾದರೆ ಸೆಪ್ಟೆಂಬರ್ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯ ನಕ್ಷತ್ರ: ಮೃಗಶಿರಾ, ಯೋಗ: ವ್ಯತಿಪಾತ್, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:56, ಯಮಘಂಡ ಕಾಲ ಬೆಳಿಗ್ಗೆ 09:24ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:24 ರಿಂದ 01:55 ರ ವರೆಗೆ.
ಮೇಷ ರಾಶಿ: ಮಕ್ಕಳಿಗೆ ಸಿಗುವ ಗೌರವದಿಂದ ನಿಮಗೆ ಹೆಮ್ಮೆ. ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಕಾನೂನಿಗೆ ವಿರುದ್ಧವಾದ ವ್ಯವಹಾರವು ನಿಮಗೆ ತೊಡಕನ್ನು ಉಂಟುಮಾಡುವುದು. ನಿದ್ರಾಯಲ್ಲಿ ನಿಮಗೆ ಸಮಾಧಾನವಿರದು. ಆಪ್ತರು ನಿಮ್ಮಿಂದ ದೂರವಾಗಲಿದ್ದು ಆ ವೇದನೆಯನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳು ಅಡ್ಡದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಮಾರ್ಗದರ್ಶನದ ಅವಶ್ಯಕತೆ ಹೆಚ್ಚು ಇರಲಿದೆ. ಸ್ವಾವಂಬಿಯಾಗಲು ನೀವು ಬಹುವಾಗಿ ಇಚ್ಛಿಸುವಿರಿ. ಸ್ಥಾನಮಾನಗಳೂ ನಿಮ್ಮನ್ನು ಹುಡುಕಿಕೊಂಡು ಬಂದಾವು. ಹಿರಿಯರು ಯಾರಾದರೂ ನಿಮ್ಮ ಕೆಟ್ಟ ಸ್ವಭಾವದ ಬಗ್ಗೆ ಹೇಳಿದರೆ ಅದನ್ನು ಬಿಡುವ ಬಗ್ಗೆ ಯೋಚಿಸಿ. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಬಾರದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುವಿರಿ. ನಿಮ್ಮ ಸ್ಥಿರಾಸ್ತಿಯ ಮೇಲೆ ಅಧಿಕಾರ ಚಲಾಯಿಸಬಹುದು.
ವೃಷಭ ರಾಶಿ: ಯಾವುದನ್ನಾದರೂ ಆಗಾಗ ಹೊಸತನ್ನಾಗಿಸಬೇಕು. ಸಂಸಾರದ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಅನಾರೋಗ್ಯದ ಕಾರಣದಿಂದ ನೀವು ಪ್ರಯಾಣವನ್ನು ಬದಲಾಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮಗೆ ಸಮಯ ಸಾಲದೆಂಬ ಆತಂಕವಿರುವುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವನ್ನು ದೂರ ಮಾಡಿಕೊಳ್ಳುವಿರಿ. ಕಲಿಕೆಯಲ್ಲಿ ಹೊಸತನವನ್ನು ತಂದುಕೊಳ್ಳುವಿರಿ. ಮಕ್ಕಳಕಾರಣದಿಂದ ನಿಮಗೆ ವಿದೇಶ ಪ್ರವಾಸ ಆಗಬಹುದು. ಪ್ರಾಮಾಣಿಕ ಪ್ರಯತ್ನವನ್ನು ನೀವು ಮಾಡಲಿದ್ದೀರಿ. ತೀರ್ಥಕ್ಷೇತ್ರಗಳ ಕಡೆಗೆ ಹೋಗಬೇಕೆನಿಸುವುದು. ಮಾತಿನಲ್ಲಿ ಸಿಕ್ಕಿಕೊಳ್ಳಬಹುದು. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು. ನಿಮ್ಮ ವೃತ್ತಿಯನ್ನು ಪ್ರೀತಿಸಿ.
ಮಿಥುನ ರಾಶಿ: ಅಕಾರಣವಾದ ಪ್ರೀತಿಯು ಅಕಾರಣವಾಗಿಯೇ ಮುಕ್ತಾಯವಾಗುವುದು. ಇಂದು ಹೆಚ್ಚು ಆದಾಯದ ಯೋಜನೆಗಳು ನಿಮ್ಮ ಪಾಲಿಗೆ ಸಿಗಲಿದೆ. ದುಂದುವೆಚ್ಚವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮವರ ಪ್ರೀತಿಯು ನಿಮ್ಮ ಮೇಲೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಲಾಭಗಳಿಸುವ ಯೋಜನೆಯನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನೀವು ಹೆಚ್ಚಿನ ಆದಾಯವನ್ನು ನಿರೀಕ್ಷಿಸುವಿರಿ. ಸಹೋದರರ ನಡುವಿನ ಬಾಂಧವ್ಯವು ಸಡಿಲಾಗಬಹುದು. ಆಗಾಗ ಮಾತನಾಡುತ್ತ ಸಂಬಂಧವನ್ನು ಗಟ್ಟಿಮಾಡಿಕೊಳ್ಳಿ. ಕೆಲಸವನ್ನು ಸಮಯದ ಮಿತಿಯಲ್ಲಿ ಮಾಡುವುದು ಕಷ್ಟವಾದೀತು. ಮನಸ್ಸಿನ ಹತ್ತಾರು ಭಾವನೆಗಳು ನಿಮ್ಮನ್ನು ಕಾಡಿಸಬಹುದು. ಮಾನಸಿಕ ಅಸಮತೋಲನವು ನಿಮ್ಮ ಏಕಾಗ್ರತೆಯನ್ನು ಭಂಗ ಮಾಡೀತು. ಯಾರನ್ನೋ ಮುಖಭಂಗ ಮಾಡಿ, ಅನಂತರ ಪಶ್ಚಾತ್ತಾಪಪಡುವಿರಿ. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು.
ಕರ್ಕಾಟಕ ರಾಶಿ: ಬೇಕೆಂದಾಗ ಬೇಕಾದ ವಸ್ತುವನ್ನು ಪಡೆಯುವ ಅನುಕೂಲವಿದ್ದರೂ ಅದನ್ನು ಬಳಸಿಕೊಳ್ಳಬೇಕೆ ಎನ್ನುವ ಬಗ್ಗೆ ವಿವೇಚನೆ ಇರಲಿ. ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ಅನಾರೋಗ್ಯದ ಕಾರಣ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಆಡಿಕೊಂಡಾರು. ನಿಮ್ಮ ಶ್ರಮವು ಯುಕ್ತಿಯಿಂದ ಇರಲಿ. ಹತ್ತಿರವರೂ ನಿಮ್ಮ ವರ್ತನೆಯಿಂದ ದೂರಾಗಬಹುದು. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳುವಿರಿ. ನಿದ್ರೆಯನ್ನು ಮಾಡಲಾಗದೇ ಕಷ್ಟಪಡುವಿರಿ. ಮನೆತನದ ಗೌರವವನ್ನು ಹೆಚ್ಚಿಸುವಿರಿ. ಕಳೆದುಕೊಂಡದ್ದು ನಿಮಗೆ ಬಹಳ ಬೇಸರವನ್ನು ತರಿಸಬಹುದು. ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ಕಾರಣವನ್ನು ಕೇಳುವುದು ಬೇಡ. ಗೊಂದಲವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯವು ಹದ ತಪ್ಪುವುದು.