AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ನಿಮ್ಮ ಪ್ರತಿಭೆಗೆ ತಕ್ಕ ವೇದಿಕೆ ಸಿಗುವುದು, ತಾಳ್ಮೆ ಕಳೆದುಕೊಳ್ಳಬೇಡಿ

ರಾಶಿ ಭವಿಷ್ಯ ಮಂಗಳವಾರ(ಸೆ.24): ಕುಟುಂದ ಜೊತೆ ಸಮಯವನ್ನು ಕೊಡುವುದು ಇಂದು ಕಷ್ಟವಾದೀತು. ನಿಮ್ಮ ಸಿಟ್ಟನ್ನು ಎಲ್ಲ ಕಡೆಗಳಲ್ಲಿ ತೋರಿಸುವುದು ಬೇಡ. ಸುಮ್ಮನೇ ವ್ಯರ್ಥವಾದೀತು. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳುವುದು ಉತ್ತಮ. ಹಾಗಾದರೆ ಸೆಪ್ಟೆಂಬರ್​ 24ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ನಿಮ್ಮ ಪ್ರತಿಭೆಗೆ ತಕ್ಕ ವೇದಿಕೆ ಸಿಗುವುದು, ತಾಳ್ಮೆ ಕಳೆದುಕೊಳ್ಳಬೇಡಿ
ನಿಮ್ಮ ಪ್ರತಿಭೆಗೆ ತಕ್ಕ ವೇದಿಕೆ ಸಿಗುವುದು, ತಾಳ್ಮೆ ಕಳೆದುಕೊಳ್ಳಬೇಡಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 24, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯ ನಕ್ಷತ್ರ: ಮೃಗಶಿರಾ, ಯೋಗ: ವ್ಯತಿಪಾತ್, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:56, ಯಮಘಂಡ ಕಾಲ ಬೆಳಿಗ್ಗೆ 09:24ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:24 ರಿಂದ 01:55 ರ ವರೆಗೆ.

ಧನು ರಾಶಿ: ಯಾರನ್ನೂ ಕೇಳದೇ ಮಾಡಿದ ಕಾರ್ಯದಿಂದ ನಷ್ಟವನ್ನು ನೀವೊಬ್ಬರೇ ಅನುಭವಿಸುವಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು‌ ಮಾಡಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಮನೋಬಲವನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ತಿಳಿಯುವುದು ಒಳ್ಳೆಯದು. ಸುಮ್ಮನೇ ಮಾತನಾಡುವುದು ವ್ಯರ್ಥ ಎಂದು ನಿಮಗೆ ಅನ್ನಿಸಬಹುದು. ನಿಮಗೆ ಬೇಡದ ವಸ್ತುವಿನ ಮೇಲೆ ನಿಮಗೆ ಆಸೆ ಬರುವುದು. ನಿಮ್ಮ‌ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ಪ್ರತಿಭೆಗೆ ಅವಕಾಶಗಳು ಕಡಿಮೆ ಸಿಗಬಹುದು. ವೃತ್ತಿಯಲ್ಲಿ ನೀವು ಸ್ವಸ್ಥಾನವನ್ನು ಭದ್ರವಾಗಿರಿಸಿಕೊಳ್ಳಲು ಪ್ರಯತ್ನಿಸಿ. ಇನ್ನೊಬ್ಬರನ್ನು ನೋಡಿ ಖುಷಿಯಿಂದ ಇರುವುದನ್ನು ಕಲಿಯುವ ಅವಶ್ಯಕತೆ ಇದೆ. ಯಾವುದಾದರೂ ಕಳ್ಳತನದ ಅಪವಾದ ನಿಮಗೆ ಅಂಟುವುದು. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ನೀವು ಸಹಿಸಲಾರಿರಿ. ವ್ಯಾಪಾರದಲ್ಲಿ ನೀವು ಹಿಂದುಳಿಯುವಿರಿ.

ಮಕರ ರಾಶಿ: ಇಂದು ವ್ಯವಹಾರದಲ್ಲಿ ಸ್ಥೈರ್ಯವು ಬೇಕಾಗುವುದು. ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಹಣಕಾಸಿನ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹವುಂಟಾಗಿ ಕೊನೆಗೆ ಮೌನದಲ್ಲಿ ಮುಕ್ತಾಯವಾಗಬಹುದು. ವ್ಯಾಪಾರದ ಲಾಭದಿಂದ ನಿಮ್ಮಲ್ಲಿ ಹೆಚ್ಚು ಉತ್ಸಾಹವಿರುವುದು. ಕುಟುಂದ ಜೊತೆ ಸಮಯವನ್ನು ಕೊಡುವುದು ಇಂದು ಕಷ್ಟವಾದೀತು. ನಿಮ್ಮ ಸಿಟ್ಟನ್ನು ಎಲ್ಲ ಕಡೆಗಳಲ್ಲಿ ತೋರಿಸುವುದು ಬೇಡ. ಸುಮ್ಮನೇ ವ್ಯರ್ಥವಾದೀತು. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳುವುದು ಉತ್ತಮ. ಕೃಷಿಕರು ಸಿಗುವ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವರು. ಇಂದು ನಿಮಗೆ ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ನಿಮಗೆ ಇಷ್ಟವಾಗದು. ಆಸ್ತಿ ಖರೀದಿಯ ಬಗ್ಗೆ ನಿಮಗೆ ಸ್ಪಷ್ಟತೆ ಸಾಕಾಗದು. ಮಾಧ್ಯಮದಲ್ಲಿ ಇರುವವರು ಹೆಚ್ಚು ಪ್ರಚಾರವನ್ನು ಪಡೆಯುವರು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಪ್ರಯಾಣವನ್ನು ಆನಂದಿಸುವಿರಿ. ನಿಮಗೆ ಬೇಕಾದವರಿಂದ ಸಹಾಯ ಸಿಗದೇಹೋಗಬಹುದು.

ಕುಂಭ ರಾಶಿ: ಜೊತೆಗಾರರನ್ನು ನೀವು ವಿರೋಧ ಮಾಡಿಕೊಳ್ಳದೇ ಇರಬೇಕು‌. ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ಕರ್ತವ್ಯದಲ್ಲಿ ನಿರಾಸಕ್ತಿ ಬರಬಹುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರಲ ಬಯಸುವಿರಿ. ನಿಮ್ಮದಲ್ಲದ ವಿಚಾರಕ್ಕೆ ಹೆಚ್ಚು ಓಡಾಟ ಮಾಡುವಿರಿ. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ಹೆಚ್ಚಾಗಲಿದೆ. ಪ್ರವಾಸವನ್ನು ಹೆಚ್ಚು ಮಾಡುವ ಆಸಕ್ತಿಯನ್ನು ಹೊಂದಿರುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರಲಿದೆ. ಹಣವನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳಿ. ಉದ್ಯೋಗದ ಕಾರಣದಿಂದ ಮನೆಯನ್ನು ಬದಲಿಸಬೇಕಾಗುವುದು. ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಲಿದೆ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು‌. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಯಾವುದಾದರೂ ಸರಳ ವೃತ್ತಿಯಲ್ಲಿ ಕೆಲಸ ಮಾಡುವಿರಿ. ಸ್ನೇಹಿತರಿಗೆ ನೀವು ಸಮಯವನ್ನು ಕೊಡಬೇಕಾಗಬಹುದು.

ಮೀನ ರಾಶಿ: ಇಂದು ವಿದ್ಯಾಭ್ಯಾಸದಲ್ಲಿ ಬುದ್ಧಿಪೂರ್ವಕವಾಗಿ ಪ್ರಯತ್ನವನ್ನು ಮಾಡಬೇಕು. ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಉಪಾಯದಿಂದ ನಿಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿಯು ನಿಮಗೆ ಹೆಚ್ಚಾಗಲಿದೆ. ಇನ್ನೊಬ್ಬರ ಬಗ್ಗೆ ಸದ್ಭಾವನೆ ಇರಲಿ. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಮಿತ್ರರು ನಿಮಗೆ ಏನಾದರೂ ತೊಂದರೆ ಕೊಡಬಹುದು. ಇಷ್ಟವಾದುದನ್ನು ಬಿಟ್ಟುಕೊಡಬೇಕಾದೀತು. ಎಲ್ಲದಕ್ಕೂ ಇನ್ನೊಬ್ಬರನ್ನು ದೂರುವಿರಿ. ನಿಮಗೆ ಖರ್ಚಿನ‌ ಮೇಲೆ‌ ಹಿಡಿತವಿರಲಿ. ವ್ಯಕ್ತಿತ್ವವನ್ನು ನೀವು ಸುಧಾರಿಸಿಕೊಳ್ಳುವತ್ತ ಗಮನ ಇರಲಿ. ನಿಮ್ಮ ಬಗ್ಗೆ ಆಡಿಕೊಳ್ಳುವವರಿಗೆ ಉತ್ತರಿಸಲು ಹೋಗುವುದು ಬೇಡ. ಸರ್ಕಾರಿ ಕೆಲಸದ ವೇಗವನ್ನು ನೀವು ಹೆಚ್ಚಿಸಿ ಆಗಬೇಕಾದುದನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು.

Published On - 12:12 am, Tue, 24 September 24

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು