Horoscope 12 Dec: ದಿನಭವಿಷ್ಯ, ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 12, 2023 | 12:02 AM

ರಾಶಿ ಭವಿಷ್ಯ: ಇಂದಿನ (2023 ಡಿಸೆಂಬರ್​​​​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope 12 Dec: ದಿನಭವಿಷ್ಯ, ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿರುತ್ತದೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನಿಮ್ಮ ಕೆಲಸ, ವ್ಯವಹಾರ, ವಹಿವಾಟುಗಳು, ಕುಟುಂಬ, ಸ್ನೇಹಿತರೊಂದಿಗಿನ ಸಂಬಂಧ, ಆರೋಗ್ಯ ಮತ್ತು ದಿನವಿಡೀ ನಡೆಯುವ ಮಂಗಳಕರ ಮತ್ತು ಅಶುಭ ಘಟನೆಗಳ ಬಗ್ಗೆ ಇಂದಿನ (2023 ಡಿಸೆಂಬರ್​​​​ 12) ಭವಿಷ್ಯದಲ್ಲಿ ತಿಳಿಯಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಧೃತಿ, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 06 ಗಂಟೆ 48 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:15 ರಿಂದ 04:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:38 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:26 ರಿಂದ 01:51ರ ವರೆಗೆ.

ಮೇಷ ರಾಶಿ: ನಿಮ್ಮ ಅಚಾತುರ್ಯದ ನಡೆಯು ಸಹಜ ನಡೆಯಂತೆ ತೊರುವುದು. ನಿಮಗೆ ಬರಬೇಕಾದುದನ್ನು ಹಿಂಸಾತ್ಮಕವಾಗಿ ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಕೆಲವರ ಸಹಕಾರವನ್ನು ಕೇಳುವಿರಿ. ಉದ್ಯೋಗದಲ್ಲಿ ನೌಕರರಿಗೆ ತಾರತಮ್ಯ ತೋರಿಸುವುದು ಬೇಡ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸಂಗಾತಿಯ ಮಾನಸಿಕತೆಯು ನಿಮಗೆ ಗೊತ್ತಾಗದು. ಬಂಧುಗಳನ್ನು ಭೇಟಿಯಾಗಿ ಸ್ವಲ್ಪ ಹಗುರಾಗುವಿರಿ. ವರ್ತಮಾನದ ಘಟನೆಗಳು ತಿಳಿದಿದ್ದರೂ ಗೊತ್ತಿಲ್ಲದವರಂತೆ ಇರುವಿರಿ. ನಿರ್ಮಾಣದ ಕಾರ್ಯದಲ್ಲಿ ದುಡುಕುವಿರಿ.

ವೃಷಭ ರಾಶಿ: ತಾರ್ಕಿಕವಾಗಿ ನೀವು ಸೋತರೂ ಪ್ರಾಯೋಗಿಕ ವಿಚಾರದಲ್ಲಿ ನಿಮ್ಮದೇ ಮೇಲುಗೈ ಆಗಲಿದೆ. ಸಂಗಾತಿಯ ಮಾತುಗಳು ನಿಮ್ಮನ್ನು ಹಿಂಜರಿಯುವಂತೆ ಮಾಡುವುದು. ಅನಾದರದಿಂದ ನಿಮಗೆ ಬೇಸರವಾದೀತು. ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ. ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯತೆಯು ಇದೆ. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಸಂಗಾತಿಯ ಮಾತಿನಲ್ಲಿ ನಿಮಗೆ ನಂಬಿಕೆ ಬರದು. ಎಲ್ಲರಂತೆ ಒಂದಾಗುವ ಇಚ್ಛೆ ನಿಮ್ಮೊಳಗೆ ಬಾರದು. ಅಸಮಾಧಾನವನ್ನು ಯಾವುದಾದರೊಂದು ರೀತಿಯಲ್ಲಿ ಹೊರಹಾಕಿ. ಕಳೆದು ಹೋದುದರ ಬಗ್ಗೆ ಅತಿಯಾಗಿ ಆಲೋಚಿಸಿ ಫಲವಿಲ್ಲ. ಹಠಮಾರಿ ಸ್ವಭಾವದಿಂದ ಮನೆಯಲ್ಲಿ ತೊಂದರೆ ಆದೀತು.

ಮಿಥುನ ರಾಶಿ: ಎಲ್ಲ ತಪ್ಪುಗಳೂ ತನ್ನಿಂದಲೇ ಆಗಿದ್ದು ಎನ್ನುವ ತಪ್ಪು ಕಲ್ಪನೆ ಬೇಡ. ಸೃಜನಾತ್ಮಕವಾಗಿ ಏನನ್ನಾದರೂ ಮಾಡುವುದು ಒಳ್ಳೆಯದು. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಅತಿಯಾದ ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ಎಡವುವಿರಿ. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ನಿಮ್ಮ ವ್ಯವಹಾರವು ಇಂದು ಪೂರ್ಣವಾಗಲಾರದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸಬೇಕಾಗುವುದು. ನಿಮಗೆ ಉಂಟಾದ ಅನುಕೂಲ ಸ್ಥಿತಿಯನ್ನು ನೀವು ಪುಣ್ಯವೆಂದು ತಿಳಿಯುವಿರಿ. ಬೇರೆಯವರನ್ನು ಆಶ್ರಯಿಸುವುದು ನಿಮಗೆ ಇಷ್ಟವಾಗದ ವಿಚಾರವಾಗಿದೆ.

ಕಟಕ ರಾಶಿ: ನೀವು ನಿಮ್ಮ ಉತ್ತರಕ್ಕೆ ಸಮಜಾಯಿಷಿ ಕೊಡಲು ಹೋಗಿ ಸಿಕ್ಕಿಕೊಳ್ಳುವಿರಿ. ಎಲ್ಲ ವಿಚಾರವೂ ನಿಮ್ಮಿಂದಲೇ ಹೋಗಬೇಕು ಎನ್ನುವ ಮಾನಸಿಕತೆಯನ್ನು ಬೆಳೆಸಿಕೊಳ್ಳುವಿರಿ. ಶುಭಸಂದೇಶದ ಆಗಮನವು ನೆಮ್ಮದಿಯನ್ನು ಕೊಡುವುದು. ಕೆಲವು ವ್ಯಕ್ತಿಗಳ ಬೆಂಬಲವೂ ಕೂಡ ನಿಮಗೆ ಸಿಗುತ್ತದೆ. ಅವಸರದ ನಿರ್ಧಾರವನ್ನು ಮಾಡಲುಹೋಗುವುದು ಬೇಡ. ಸಮಯವನ್ನು ತೆಗೆದುಕೊಳ್ಳಿ. ನಿಮ್ಮ ಕಾರ್ಯವು ವಿಳಂಬವಾಗಲು ಕಾರ್ಮಿಕರು ಕಾರಣವಾಗುವರು. ಅವರ ಮೇಲೆ ಸಿಟ್ಟಗುವಿರಿ. ಮಾತಿನ ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು. ಇನ್ನೊಬ್ಬರ ನೋವನ್ನು ಕಂಡೂ ನೀವು ಸುಮ್ಮನಿರುವುದು ಬೇಡ. ಮನೆಯ ಜವಾಬ್ದಾರಿಯನ್ನೂ ನಿವು ತೆಗೆದುಕೊಳ್ಳಲು ಇಷ್ಟಪಡಲಾರಿರಿ. ಸ್ನೇಹಿತರು ಹಳೆಯ ಹಣಕಾಸಿನ ವಿಚಾರಕ್ಕೆ ಜಗಳವಾಡುವರು.

ಸಿಂಹ ರಾಶಿ: ಸಂಕೀರ್ಣ ಕಾರ್ಯವು ನಿಮಗೆ ಪೂರ್ಣವಾಗಿ ಅರ್ಥವಾಗದು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರಿರಿ. ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಇಂದು ನಿಮ್ಮ ಆರ್ಥಿಕತೆಯ ಸ್ಥಿತಿಯು ದರಿಯಾ ಗೊತ್ತಾಗಲಿದೆ. ಆಕಸ್ಮಿಕವಾಗಿ ಬರುವ ಹಣವನ್ನು ಭವಿಷ್ಯಕ್ಕಾಗಿ ಕೂಡಿ ಇಡುವಿರಿ. ಖಾಸಗಿ ಸಂಸ್ಥೆಯಲ್ಲಿ ನಿಮ್ಮ ಸ್ಥಾನವು ಏರಲಿದೆ. ಅಧಿಕಾರ ಇದೆ ಎಂದು ಏನನ್ನಾದರೂ ಹೇಳುವುದು ಬೇಡ. ಪರ ಊರಿನಲ್ಲಿರುವ ನಿಮಗೆ ಆರೋಗ್ಯವು ಹದ ತಪ್ಪುವ ಚಿಂತೆ ಇರುವುದು. ಉದ್ಯಮದಲ್ಲಿ ಊಹಿಸಲಾಗದ ಸಮಸ್ಯೆಯನ್ನು ತಂದು ಕೊಳ್ಳುವಿರಿ. ತಜ್ಞರಿಂದ ಅದನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಯಾರನ್ನೋ ಅನುಕರಿಸುತ್ತ ನೀವು ಸಂತೋಷವನ್ನು ಪಡುವಿರಿ.

ಕನ್ಯಾ ರಾಶಿ: ನಿರಂತರ ಸೋಲಿನಿಂದ ನೀವು ಹತಾಶರಾಗುವಿರಿ. ಕೆಲವು ಸಂಗತಿಗಳನ್ನು ನಿಮ್ಮನ್ನೇ ಹುಡುಕಿಕೊಂಡು ಬಂದು ನಿಮ್ಮ ಮನಸ್ಸನ್ನು ಮತ್ತಷ್ಟು ದುರ್ಬಲಗೊಳಿಸೀತು. ಮಾರುಕಟ್ಟೆಯ ವ್ಯವಹಾರವನ್ನು ಅರಿತು ಹೂಡಿಕೆ ಮಾಡಿ. ಒಳ್ಳೆಯ ಸಮಯವನ್ನು ಕಳೆದುಕೊಳ್ಳಬೇಕಾಗುವುದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ನೌಕರರ ಮೇಲೆ ಸಿಟ್ಟಾಗುವಿರಿ. ಸಂಗಾತಿಯ ಮಾತಿಗೆ ಸ್ಪಂದನೆಯೂ ಇರದು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು. ಚಿಂತೆಗಳೇ ಇರುವ ಮನಸ್ಸಿನಲ್ಲಿ ದೇವರ ಭಕ್ತಿಯನ್ನು ತುಂಬಿಕೊಂಡು ಸಮಾಧಾನದಿಂದ ಇರಿ. ನಿಮ್ಮ ಶುಷ್ಕ ಮಾತು ಇತರರಿಗೆ ಇಷ್ಡವಾಗದು. ಮಾತನ್ನು ಹರಿಬಿಟ್ಟು ಎಲ್ಲರ ಸಿಟ್ಟಿಗೆ ಗುರಿಯಾಗುವಿರಿ.

ತುಲಾ ರಾಶಿ: ನಿಮಗೆ ಸಿಗುವ ಬೆಂಬಲವನ್ನು ಸರಿಯಾಗಿ ಇಟ್ಟುಕೊಳ್ಳಿ. ಇನ್ನೊಬ್ಬರ ಮನೋಗತವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ನಿಮ್ಮ ವಿದ್ಯಾಭ್ಯಾಸದ ಕನಸನ್ನು ಕುಟುಂಬದಲ್ಲಿ ಹಂಚಿಕೊಳ್ಳುವಿರಿ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಪಾಪಪ್ರಜ್ಞೆಯು ನಿಮ್ಮನ್ನು ಖಿನ್ನವಾಗಿಸಬಹುದು. ಸಕಾರಾತ್ಮಕ ಆಲೋಚನೆಯನ್ನು ಪ್ರಯತ್ನಪೂರ್ವಕವಾಗಿ ಮಾಡುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ವಿದ್ಯುತ್ ಉಪಕರಣಗಳ ಖರೀದಿಯನ್ನು ಮಾಡುವಿರಿ. ಯಾರದೋ ಕೈಗೊಂಬೆಯಾಗಿ ವರ್ತಿಸಬೇಕಗುವುದು. ವೃತ್ತಿಯಲ್ಲಿ ನಿಮ್ಮ ತಿಳಿವಳಿಕೆಯನ್ನು ಪ್ರದರ್ಶಿಸಿ ನಿಮ್ಮ ಸಾಮರ್ಥ್ಯವನ್ನು ಪರಿಚಯಿಸುವಿರಿ. ಬಹಳ ಕಾಲದ ಹಿಂದೇ ಆಲೋಚಿಸಿದ್ದ ಕಾರ್ಯವು ಇಂದು ಆರಂಭಿಸಬೇಕು ಎಂದೆನಿಸುವುದು.

ವೃಶ್ಚಿಕ ರಾಶಿ: ಒತ್ತಡವಿಲ್ಲದೇ ಇಂದಿನ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಒಂದಿಷ್ಟು ವಿಶ್ರಾಂತಿಗೆ ಸಮಯವು ಸಿಗುವುದು. ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ವ್ಯಾಪಾರದ ಹೊಸ ಅನುಭವವು ನಿಮಗೆ ಅಚ್ಚರಿಯಾದೀತು. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವುದು ಕಷ್ಟವಾದೀತು. ಆಡಂಬರಕ್ಕೆ ಹೆಚ್ಚು ಒತ್ತು ನೀಡುವಿರಿ. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು. ಏಕಾಗ್ರ ಮನಸ್ಸಿನಿಂದ ನೀವು ಇಂದಿನ ಕೆಲಸದಲ್ಲಿ ತೊಡಗುವಿರಿ. ಇನ್ನೊಬ್ಬರ ಮಾತಿನ ಬಾಣವು ನಿಮ್ಮನ್ನು ತಿವಿಯಬಹುದು. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಯನ್ನು ಹೆಚ್ಚು ಮಾಡುವುದು. ಜಾಣ್ಮೆಯ ವ್ಯವಹಾರವನ್ನು ಇಂದು ಮಾಡಬೇಕಾದೀತು. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯುವಿರಿ. ಉದ್ಯೋಗದ ಸ್ಥಳದಲ್ಲಿ ಸಿಕ್ಕ ಪ್ರಶಂಸೆಯಿಂದ ಸಂತೋಷವು ಇಮ್ಮಡಿಯಾಗುವುದು.

ಧನು ರಾಶಿ: ಯಶಸ್ಸು ನಿಮ್ಮಿಂದ ಕಠಿಣ ಶ್ರಮವನ್ನು ಅಪೇಕ್ಷಿಸುವುದು. ನೀವು ಉದ್ಯೋಗಕ್ಕಾಗಿ ದೂರ ಪ್ರಯಾಣವನ್ನು ಮಾಡುವಿರಿ. ಭೂಮಿಯ ಲಾಭಕ್ಕಾಗಿ ಓಡಾಟವನ್ನು ಮಾಡಬೇಕಾದೀತು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿವಸವೂ ಆಗಬಹುದು. ಸಾಹಿತ್ಯಾಸಕ್ತರು ತಮ್ಮ ಬಳಗದ ಜೊತೆ ಹೆಚ್ಚು ಸಮಯ ಇರುವರು. ಎಲ್ಲರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲಿದ್ದು ನೀವು ಹತಾಶೆಯ ಭಾವ ಜಾಗೃತವಾಗಿ ಖಿನ್ನತೆಗೂ ಹೋಗಬಹುದು. ನೀವು ಕೆಲವು ಅಪೂರ್ಣ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ದೈವದ ಬಗ್ಗೆ ನಿಮಗೆ ಅಪನಂಬಿಕೆ ಬರಬಹುದು. ಮಕ್ಕಳ ಹಠಸ್ವಭಾವವು ಇಮಗೆ ಇಷ್ಟವಾಗದು. ನೀವು ಸಹನೆಯನ್ನು ಮೀರಿ ವರ್ತಿಸುವಿರಿ. ಹಿತವಾದ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಿಕೊಳ್ಳುವಿರಿ.

ಮಕರ ರಾಶಿ: ಕೌಟುಂಬಿಕ ಭಿನ್ನಾಭಿಪ್ರಾಯಗಳು ಇತರ ಕೆಲಸಗಳನ್ನು ಹಾಳುಮಾಡಬಹುದು. ಆರ್ಥಿಕ ವಹಿವಾಟಿನಲ್ಲಿ ಎಚ್ಚರಿಕೆ ಲಕ್ಷ್ಯವು ಹೆಚ್ಚಿರಲಿ. ನಿಮ್ಮ ಯೋಜನೆಗಳನ್ನು ವಿರೋಧಿಸುವರು. ಕುಟುಂಬದ ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಸಲಹೆಯು ಬೇಕಾಗುವುದು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ನಿಮ್ಮ ಪ್ರೀತಿಗೆ ಇಂದು ಅಧಿಕೃತ ಮುದ್ರೆಯು ಬೀಳಲಿದ್ದು ನಿಮಗೆ ಖುಷಿಯಾಗಲಿದೆ. ನಿಮ್ಮ ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು. ಉನ್ನತ ವಿದ್ಯಾಭ್ಯಾಸವು ಯಶಸ್ವಿಯಾಗಿ ಪೂರೈಸುವಿರಿ. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬರದು. ಹೊಸ ಉದ್ಯೋಗಕ್ಕೆ ಸೇರಿದ ನಿಮಗೆ ಸಂಕೋಚದಿಂದ ಇರುವಿರಿ. ಆಗದಿರುವವರ ಬಗ್ಗೆ ಗೊಣಗುತ್ತ ಇರುವಿರಿ. ಇದರಿಂದ ಯಾವ ಪ್ರಯೋಜನವೂ ಆಗದು.

ಕುಂಭ ರಾಶಿ: ಅತಿಯಾದ ಉತ್ಸಾಹವನ್ನು ಸಣ್ಣ ಮಾತು ಹಾಳು ಮಾಡುವುದು. ಸ್ನೇಹಿತರು ನಿಮಗೆ ಶುಭ ವಾರ್ತೆಯನ್ನು ಹೇಳುವರು. ಯಾರ ಮೇಲೂ ಸಂದೇಹವನ್ನು ಇಟ್ಟುಕೊಳ್ಳುವುದು ಬೇಡ. ವ್ಯಾಪಾರವನ್ನು ಮಾಡುವಾಗ ಜಾಗರೂಕತೆ ಇರಲಿ. ಗ್ರಾಹಕರಿಂದ ಮೋಸ ಹೋಗಬೇಕಾದೀತು. ನಿಮ್ಮ ಸಣ್ಣ ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ನಿಮ್ಮನ್ನು ಕೇಳಿಕೊಂಡು ಯಾರಾದರೂ ಅಪರಿಚಿತರು ಬರಬಹುದು. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮಗೇ ನೆರವು ಬೇಕಾಗಿದ್ದರೂ ಇನ್ನೊಬ್ಬರ ಸಹಾಯಕ್ಕೆ ಹೋಗುವಿರಿ. ನಿಮ್ಮ ವಿರೋಧಿಗಳ ಸಂಖ್ಯೆ ಕಡಿಮೆಯಾಗುವುದು. ನಿಮ್ಮ ದುಡಿಮೆ ನ್ಯಾಯದ ಹಾದಿಯಲ್ಲಿರಲಿ. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯವಾಗಿ ಇರಬೇಕೆಂದು ಹೆಚ್ಚು ನಿದ್ರೆ ಮಾಡುವಿರಿ. ಕಲಿತ ವಿದ್ಯೆಗಳನ್ನು ಎಲ್ಲಿಯಾದರೂ ಬಳಸಲು ನೋಡುವಿರಿ.

ಮೀನ ರಾಶಿ: ಅನಪೇಕ್ಷಿತ ಹಸ್ತಕ್ಷೇಪದಿಂದ ಲಾಭಕ್ಕೆ ಹೊಡೆತ ಬಿದ್ದೀತು. ಅಪರಿಚಿತರಿಂದ ಬೆಂಬಲವು ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಶ್ರದ್ಧೆಯು ಹೆಚ್ಚು ಬೇಕಾಗುವುದು. ನಿರ್ಮಾಣ ಕಾರ್ಯದ ಅಗತ್ಯವನ್ನು ನೀವು ಅನುಭವಿಸುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಮನೆಯ ಬಗ್ಗೆ ಚಿಂತಿಸಬೇಕಾಗುವುದು. ನಿಮ್ಮನ್ನು ಸೋಲನ್ನು ನಿರೀಕ್ಷಿಸುವವರಿಗೆ ಆಹಾರವಾಗುವಿರಿ. ಮನಸ್ಸನ್ನು ಕಾರ್ಯದಲ್ಲಿ ನಿಲ್ಲಿಸಲು ಕಷ್ಟವಾದೀತು. ಮನೆಯ ಜವಾಬ್ದಾರಿಯು ನಿಮಗೆ ಅನಿರೀಕ್ಷಿತವಾಗಿ ಬರಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)