ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:43 ಗಂಟೆ, ರಾಹು ಕಾಲ ಬೆಳಿಗ್ಗೆ 09:27 ರಿಂದ 10:59, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ.
ಮೇಷ ರಾಶಿ: ಇಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ಉಪಯೋಗಕ್ಕೆ ಬಾರದ ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು. ಚಿಂತೆಯಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ನಂಬಿಕೆ ಬರುವಂತೆ ಕೆಲಸವನ್ನು ಮಾಡುವಿರಿ. ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ನಿಮ್ಮ ಆಯ್ಕೆಯ ವಿಚಾರದಲ್ಲಿ ಆಪ್ತರನ್ನು ಕೇಳಿ ಸರಿ ಮಾಡಿಕೊಳ್ಳುವಿರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅತಿಯಾದ ಚಿಂತೆಯಲ್ಲಿ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ ಮಾಡಿಸಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಅಂತಃಕರಣದ ಒಪ್ಪಿಗೆಯಿಂದ ಕಾರ್ಯವನ್ನು ಮಾಡುವಿರಿ.
ವೃಷಭ ರಾಶಿ: ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ನೀವು ಸೇವನೋಭಾವದಿಂದ ಹೊರಬರುವಿರಿ. ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗದು. ನಿಮ್ಮ ಸಂತೋಷಕ್ಕೆ ಕಾರಣದ ಅವಶ್ಯಕತೆ ಇಲ್ಲ. ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ. ನಿಮ್ಮ ಮಾತನ್ನು ಯಾರೂ ಪಾಲಿಸರು ಎಂಬ ಬೇಸರ ಇರಲಿದೆ. ನಿಮ್ಮ ಅವಲೋಕನ ಅತ್ಯಗತ್ಯ. ನಿಮ್ಮವರಲ್ಲಿಯೇ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಬರಬಹುದು. ಸ್ಪರ್ಧೆಯಲ್ಲಿ ನಿಮ್ಮ ತೊಡಗುವಿಕೆ ಕಡಿಮೆಯಾಗಿ ಸೋಲುವಿರಿ. ಜನರ ಜೊತೆ ಬೆರೆಯುವಿಕೆ ಕಡಿಮೆ ಆಗಬಹುದು. ಸಂಗಾತಿಯ ಮಾತನ್ನು ಪೂರ್ಣವಾಗಿ ಬೆಂಬಲಿಸಲಾರಿರಿ. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ದೂರ ಪ್ರಯಾಣದ ಮನಸ್ಸಿದ್ದರೂ ಅನನುಕೂಲತೆಯಿಂದ ಅದು ಕಷ್ಟವಾದೀತು.
ಮಿಥುನ ರಾಶಿ: ರಾಜಕೀಯದಲ್ಲಿ ಹೊಸದಾಗಿ ಪ್ರವೇಶವನ್ನು ಪಡೆಯುವವರಿಗೆ ಮೇಲಧಿಕಾರಿಗಳು ತೋರಿಸುವ ಪಕ್ಷಪಾತದ ಧೋರಣೆಯು ನೀವು ಸಹಿಸಲಾರಿರಿ. ಹಿರಿಯರಿಂದ ನಿಮಗೆ ಪ್ರಶಂಸೆ ಸಿಗಲಿದೆ. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮಗೆ ಸಿಕ್ಕ ಪ್ರೇರಣೆ ಕೊನೆಯ ತನಕ ಬಾರದು. ನಿಮ್ಮ ದಿನಚರ್ಯೆಯಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಬಹುದು. ಆಪ್ತರನ್ನು ನೀವು ಕಳೆದೊಳ್ಳುವ ಸಂಭವವಿದೆ. ಅಧಿಕ ಒತ್ತಡವು ಕಂಡು ಬಂದಲ್ಲಿ ಸ್ವಲ್ಪಕಾಲ ಏಕಾಂತದಲ್ಲಿ ಇರಿ. ಆರ್ಥಿಕವಾಗಿ ದುರ್ಬಲವಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಹಣವಂತೂ ಸಿಗದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ. ನಿಮ್ಮವರನ್ನು ನೀವು ಬಿಟ್ಟಕೊಡಲಾರಿರಿ.
ಕರ್ಕಾಟಕ ರಾಶಿ: ಉದ್ಯಮದ ಕಾರಣಕ್ಕೆ ಮಾಡಿದ ಪ್ರಯಾಣವು ಸಫಲವಾಗುವುದು. ಎಲ್ಲ ಸಂದರ್ಭವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಕಷ್ಟವೇ ಆದೀತು. ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು. ನೀವು ಎಲ್ಲವನ್ನೂ ಹೇಳಬೇಕು ಎಂದು ಅಂದುಕೊಂಡರೂ ನಿಮಗೆ ಹೇಳಲಾಗದೇ ದುಃಖವು ಬರಬಹುದು. ವಾಹನದ ದುರಸ್ತಿಯು ಅನಿವಾರ್ಯವಸದೀತು. ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಮೇಲಿಟ್ಟ ವಿಶ್ವಾಸವು ಭಂಗವಾಗುವುದು ಬೇಡ. ವ್ಯಾಪಾರವನ್ನು ನಿಮ್ಮ ಮಿತಿಯಲ್ಲಿ ಮಾಡಿ. ದೈವಭಕ್ತಿಯು ನಿಮಗೆ ದಾರಿ ತೋರಿಸುವುದು. ಆರ್ಥಿಕವಾಗಿ ಸುಧಾರಣೆ ಮಾಡಿಕೊಳ್ಳಲು ನಿಮಗೆ ದಾರಿಗಳು ಸಿಗಬಹುದು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಮುಖ್ಯ. ಕೈ ಬಂದ ಉದ್ಯೋಗವನ್ನು ಅಹಂಕಾರದಿಂದ ಕಳೆದುಕೊಳ್ಳುವಿರಿ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು. ಸ್ವಂತ ಉದ್ಯೋಗವಿದ್ದರೆ ಹೆಚ್ಚು ಶ್ರಮ ಆದೀತು. ನಿಮ್ಮ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ.