Daily Horoscope: ಈ ರಾಶಿಯವರು ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಆಗಸ್ಟ್ 31: ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ವಾಹನವನ್ನು ಯಾರದೋ ಕಾರ್ಯಕ್ಕೆ ಕೊಡಬೇಕಾಗುವುದು. ನಿಮಗೆ ಹೆಚ್ಚಿನ ಆದಾಯದ ಅವಶ್ಯಕತೆ ಇರಲಿದೆ. ಅದಕ್ಕಾಗಿ ನೀವು ಏನನ್ನಾದರೂ ಆದಾಯದ ಮೂಲವನ್ನು ಪಡೆದುಕೊಳ್ಳಬೇಕಾಗುವುದು. ಹಾಗಾದರೆ ಆಗಸ್ಟ್ 31ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:43 ಗಂಟೆ, ರಾಹು ಕಾಲ ಬೆಳಿಗ್ಗೆ 09:27 ರಿಂದ 10:59, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ.
ಸಿಂಹ ರಾಶಿ: ಇನ್ನೊಬ್ಬರಿಗಾಗಿ ನೀವು ನಿಮ್ಮ ತುರ್ತಿನ ಕಾರ್ಯವನ್ನು ಬಿಡಬೇಕಾದೀತು. ಇಂದು ಮನೆಯ ನಿರ್ಮಾಣದ ಕಾರ್ಯಕ್ಕೆ ನಿಮ್ಮವರಿಂದ ತೊಂದರೆ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ರಮ್ಯವಾದ ಸ್ಥಳಗಳನ್ನು ನೋಡುವ ಬಯಕೆ ಇರುವುದು. ಸಂಕೋಚದ ಸ್ವಭಾವವು ನಿಮ್ಮ ಅನೇಕ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತದೆ. ಸಂಬಂಧಗಳನ್ನು ನೀವು ಇಂದು ಬಿಡಲು ಪ್ರಯತ್ನಿಸುವಿರಿ. ವಾಹನ ಸಂಚಾರಕ್ಕೆ ನಿಮಗೆ ತೊಂದರೆಯಾಗಬಹುದು. ಸ್ತ್ರೀಯರ ಉದ್ಯಮಕ್ಕೆ ತೊಂದರೆಯಾಗುವುದು. ಶುಭ ಸುದ್ದಿಯು ನಿಮಗೆ ಸ್ವಲ್ಪ ಸಂತೋಷವನ್ನು ತರಬಹುದು. ಮಕ್ಕಳ ಜೊತೆ ಇರುವಿರಿ. ಒಂದಿಷ್ಟು ಬದಲಾವಣೆಗಳು ಆಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ.
ಕನ್ಯಾ ರಾಶಿ: ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು. ಇಂದು ನಿಮಗೆ ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ. ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತಯಲ್ಲಿ ಇರುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಖರೀದಿಗೆಂದು ತೆಗೆದಿಡುವಿರಿ. ನಿಮಗೆ ಅಂಟಿದ ಅಪವಾದವು ನಿರಾಧಾರ ಎಂದು ಸಾಬೀತಾಗಬಹುದು. ಸಹೋದರರ ಮೇಲಿನ ಬೇಸರವನ್ನು ಹೊರಹಾಕುವಿರಿ. ಸಮಯಸ್ಫೂರ್ತಿಯಿಂದ ತೊಂದರೆಯ ಸನ್ನಿವೇಶವನ್ನು ದಾಟುವಿರಿ. ಸುಮ್ಮನೇ ಅನುಮಾನದಿಂದ ಸ್ನೇಹವನ್ನು ಹಾಳುಮಾಡಿಕೊಳ್ಳಬಹುದು. ಸಿಗಬೇಕಾದ ಸಮಯಕ್ಕೆ ಗೌರವವು ಸಿಗಲಿದೆ. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ನೇರವಾದ ಮಾತುಗಳು ನಿಮಗೆ ಒಪ್ಪಿಗೆ ಆಗದೇಹೋಗಬಹುದು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.
ತುಲಾ ರಾಶಿ: ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವ ಸಾಧ್ಯತೆ ಇದೆ. ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು. ವೃತ್ತಿಯ ಅನ್ವೇಷಣೆ ಬಹಳ ವೇಗದಿಂದ ಸಾಗುವುದು. ಹೆಚ್ಚು ಪರಿಶ್ರಮದಿಂದ ಕೆಲಸವನ್ನು ಮಾಡುವಿರಿ. ಯಾರ ಸಹಕಾರವನ್ನೂ ಬಯಸದೇ ನಿಮ್ಮ ಜವಾಬ್ದಾರಿಯಲ್ಲಿ ನೀವು ಇರುವಿರಿ. ಸಮಯವನ್ನು ವ್ಯರ್ಥ ಮಾಡಿ ಸಂಕಟಪಡುವಿರಿ. ದಾನ ಮಾಡುವ ಮನಸ್ಸು ನಿಮಗೆ ಇರದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. ವೃತ್ತಿಗಾಗಿ ಅಪರಿಚಿತರು ಹಣವನ್ನು ಕೇಳಬಹುದು. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು.
ವೃಶ್ಚಿಕ ರಾಶಿ: ಇಂದು ನೀವು ಯಾರಿಗೂ ನೋವಾಗದಂತೆ ವರ್ತಿಸುವ ಯೋಚನೆ ಮಾಡುವಿರಿ. ನಿಮ್ಮ ಎಲ್ಲ ಆಸೆಗಳೂ ಪೂರ್ಣಗೊಳ್ಳದು. ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ವಾಹನವನ್ನು ಯಾರದೋ ಕಾರ್ಯಕ್ಕೆ ಕೊಡಬೇಕಾಗುವುದು. ನಿಮಗೆ ಹೆಚ್ಚಿನ ಆದಾಯದ ಅವಶ್ಯಕತೆ ಇರಲಿದೆ. ಅದಕ್ಕಾಗಿ ನೀವು ಏನನ್ನಾದರೂ ಆದಾಯದ ಮೂಲವನ್ನು ಪಡೆದುಕೊಳ್ಳಬೇಕಾಗುವುದು. ಹೊಸತನ್ನು ಯೋಚಿಸಿ ಅದನ್ನು ಕ್ರಿಯಾರೂಪಕ್ಕೆ ತೆಗೆದುಕೊಂಡು ಬನ್ನಿ. ಅಧಿಕೃತವಲ್ಲದ ಕಾರ್ಯಕ್ಕೆ ನಿಮ್ಮ ಸಹಾಯವು ಸಿಗದು. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು. ಹೊಸ ವಸ್ತುಗಳನ್ನು ನೀವು ಯಾರದೋ ಮೂಲಕ ಪಡೆದುಕೊಳ್ಳುವಿರಿ. ಗೌರವವನ್ನು ಕೇಳಿಪಡೆಯಬೇಕಾಗುವುದು. ಧಾರ್ಮಿಕ ಕಾರ್ಯದಲ್ಲಿ ಅಶ್ರದ್ಧೆಯನ್ನು ತೋರಿಸುವುದು ಬೇಡ.