Astrology: ಆಪ್ತರು ನಿಮ್ಮಿಂದ ದೂರವಾಗಬಹುದು, ನಿಮ್ಮನ್ನು ವಿಚಲಿತ ಗೊಳಿಸಬಹುದು
ರಾಶಿ ಭವಿಷ್ಯ ಶನಿವಾರ(ಆ. 31): ನಿಮ್ಮ ಬಳಿ ಆಗದೇ ಇರುವ ಕಾರ್ಯಕ್ಕೆ ಮರಳಿ ಯತ್ನವ ಮಾಡುವಿರಿ. ನೀವು ಯಾರನ್ನಾದರೂ ಬಹಳ ಇಷ್ಟಪಡುವಿರಿ. ಮನೆಯಿಂದ ದೂರವಿರಲು ನೀವು ಬಯಸುವಿರಿ. ಉದ್ಯೋಗದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಹಾಗಾದರೆ ಆಗಸ್ಟ್ 31ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:43 ಗಂಟೆ, ರಾಹು ಕಾಲ ಬೆಳಿಗ್ಗೆ 09:27 ರಿಂದ 10:59, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ.
ಧನು ರಾಶಿ: ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ತಪ್ಪನ್ನು ನೀವೇ ಒಪ್ಪಿಕೊಂಡರೆ ದಂಡನೆಯಲ್ಲಿಯೂ ವಿನಾಯಿತಿ ಸಿಗಬಹುದು. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಅಧಿಕ ಒತ್ತಡದಿಂದ ಕೆಲಸವು ನಿಮಗೆ ಸೂಚಿಸದೇ ಹೋಗಬಹುದು. ಸಜ್ಜನರ ಸಹವಾಸದಿಂದ ನಿಮ್ಮಲ್ಲಿ ಸಣ್ಣ ಬದಲಾವಣೆ ಆಗಲಿದೆ. ವಿದ್ಯಾಭ್ಯಾಸದ ಕೊರತೆಯಿಂದ ಕಾರ್ಯದ ಸ್ಥಳದಲ್ಲಿ ಅಪಮಾನವಗುವುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಬರಬಹುದು. ಸಿಗಬೇಕಾದವರು ನಿಮ್ಮಿಂದ ದೂರವಾಗಬಹುದು. ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯವನ್ನು ಕೊಡಿ. ವಿದ್ಯಾಭ್ಯಾಸದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿಯನ್ನು ಕೊಟ್ಟೀತು. ಹಿರಿಯರ ಕೋಪಕ್ಕೆ ತುತ್ತಾಗುವಿರಿ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.
ಮಕರ ರಾಶಿ: ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ಏನನ್ನಾದರೂ ಕೇಳಿ ಬಂದವರಿಗೆ ಇಲ್ಲವೆನದೇ ನೀಡಿ. ಅವರ ಸಂತೋಷದಲ್ಲಿ ಭಾಗಿಯಾಗುವಿರಿ. ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಬಹುದು. ಪ್ರೀತಿಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಶೀಲರಾಗುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ಕ್ರಮವು ಬಹಳ ಚೆನ್ನಾಗಿರುವುದು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಬೇಡ. ತಾಳ್ಮೆಯ ಪರೀಕ್ಷೆ ಇಂದು ಆಗಬಹುದು. ಕಛೇರಿಯ ಒತ್ತಡದಿಂದ ನಿಮಗೆ ಸ್ವಂತ ಕಾರ್ಯವು ಮರೆಯುವುದು. ದೈವಭಕ್ತಿಯು ಕಡಿಮೆ ಆಗಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ಎತ್ತರದ ಪ್ರದೇಶವನ್ನು ಏರುವುದು ಬೇಡ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು.
ಕುಂಭ ರಾಶಿ: ಬರುವ ಕಷ್ಟಗಳು ನಿಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ವ್ಯವಹಾರದ ದೃಷ್ಟಿಯಿಂದ ನಿಮಗೆ ಸೋಲಾಗುವುದು. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ನಿಮಗೆ ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವಿರಿ. ಪ್ರೀತಿಯನ್ನು ಒಡೆಯಲು ನೀವು ಬಹಳ ಹಾತೊರೆಯುವಿರಿ. ಸಣ್ಣ ವ್ಯಾಪರವು ಲಾಭದಾಯಕವಾಗಲಿದೆ. ಭಾವ ಬಲದಿಂದ ಗೆಲ್ಲಲು ಪ್ರಯತ್ನಿಸಿ. ಕೊಟ್ಟ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಮಾಡುವಿರಿ. ನಿಮಗೆ ಭವಿಷ್ಯವನ್ನು ನಿರ್ಧರಿಸಲು ಕಷ್ಟವಾದೀತು. ಇಂದಿನ ನಿಮ್ಮ ಸಮಯವು ಸದುಪತೋಗವಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸತನ್ನು ಮಾಡಲು ಯತ್ನಿಸುವಿರಿ. ಯವುದನ್ನೋ ಇನ್ನಾವುದಕ್ಕೋ ತಳಕುಹಾಕುವಿರಿ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಇಂದು ಕುಟುಂಬದ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸ್ವತಂತ್ರವಾಗಿ ಇರಲು ನಿಮ್ಮ ಚಿಂತನೆ ಇರುವುದು.
ಮೀನ ರಾಶಿ; ನಿಮ್ಮನ್ನು ಗುಪ್ತವಾಗಿ ಗಮನಿಸುವಂತೆ ತಿಳಿದೀತು. ಸ್ವಂತಿಕೆಯನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ಅಡ್ಡಿಗಳು ಬರಬಹುದು. ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ಆಪ್ತರು ನಿಮ್ಮಿಂದ ದೂರವಾಗಬಹುದು. ಇದು ನಿಮ್ಮನ್ನು ವಿಚಲಿತ ಗೊಳಿಸಬಹುದು. ನಿಮ್ಮ ಬಳಿ ಆಗದೇ ಇರುವ ಕಾರ್ಯಕ್ಕೆ ಮರಳಿ ಯತ್ನವ ಮಾಡುವಿರಿ. ನೀವು ಯಾರನ್ನಾದರೂ ಬಹಳ ಇಷ್ಟಪಡುವಿರಿ. ಮನೆಯಿಂದ ದೂರವಿರಲು ನೀವು ಬಯಸುವಿರಿ. ಉದ್ಯೋಗದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಮನೆಯ ಚಿಂತೆಯೂ ನಿಮ್ಮನ್ನು ಕಾಡಬಹುದು. ಕೆಲಸದ ವಿಚಾರದಲ್ಲಿ ಉಭಯ ಸಂಕಟವಾಗಬಹುದು. ಒತ್ತಾಯದಿಂದ ಒಲಿಸಿಕೊಂಡಿದ್ದು ನಿಮಗೆ ಸಿಗದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು.