Horoscope Today 05 November: ಈ ರಾಶಿಯವರು ತಮ್ಮ ಮಾತಿನಿಂದಲೇ ಎಲ್ಲರನ್ನು ಗೆಲ್ಲುವರು
ದಿನ ಭವಿಷ್ಯ: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ, ಬುಧವಾರ, ಭರಣೀ ನಿತ್ಯನಕ್ಷತ್ರ, ನಿಃಸ್ವಾರ್ಥ, ಹೊಸ ಕಾರ್ಯಕ್ಕೆ ಶುಭ ನಿಮಿತ್ತ, ಸಂಗಾತಿಯಿಂದ ವಿಚಾರಣೆ, ಒಪ್ಪಿತ ಕಾರ್ಯದಲ್ಲಿ ಪ್ರೀತಿ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಭರಣೀ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ – 06 – 15 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:03 – 13:30, ಗುಳಿಕ ಕಾಲ 10:36 – 12:03, ಯಮಗಂಡ ಕಾಲ 07:42 – 09:09.
ಮೇಷ ರಾಶಿ: ನಿಮ್ಮ ಅನುಭವಕ್ಕೇ ಬರದೇ ಇರುವಂತೆ ಪ್ರಗತಿ ಸಾಗುವುದು. ಸಾಲದ ಬಾಧೆಯಿಂದ ಸ್ವಲ್ಪ ಮುಕ್ತಿ ಸಿಗಲಿದೆ. ನಿಮ್ಮ ಪಾಲಿಗೆ ಬರಬೇಕಾದುದು ಬಂದೇಬರುತ್ತದೆ. ಇಂದು ನೀವು ವಿವಾದಗಳಿಗೆ ಆತಂಕಪಡುವಿರಿ. ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲುವಿರಿ. ನಿಮ್ಮನ್ನು ನೌಕರರು ಹೋಗಳುವರು. ನಿಮ್ಮ ವೇಗಕ್ಕೆ ಸಹೋದ್ಯೋಗಿಗಳು ಬಾರದೇ ಇರಬಹುದು. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಷ್ಟ. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ಕುಲದೇವರ ಆರಾಧನೆಯನ್ನು ನೀವು ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡುವುದು. ಕಠಿಣ ಸವಾಲನ್ನು ಎದುರಿಸಲು ಪ್ರಯತ್ನಶೀಲರಾಗವಿರಿ. ಯಾರನ್ನೋ ಬೀಳಿಸಲು ಹೋಗಿ ನೀವೇ ಬೀಳುವಿರಿ. ಮಕ್ಕಳ ಸಂತೋಷಕ್ಕಾಗಿ ಹಣವನ್ನು ವ್ಯಯಿಸುವಿರಿ. ಅದೃಷ್ಟವನ್ನು ಮಾತ್ರ ನಂಬಿ ಕೆಲಸವನ್ನು ಮಾಡಬೇಡಿ.
ವೃಷಭ ರಾಶಿ: ಪರರ ಪ್ರಣಯವನ್ನು ನೀವು ಸಹಿಸಲಾರಿರಿ. ನಿಃಸ್ವಾರ್ಥತೆಯನ್ನು ಕಡೆಗಣಿಸಬಹುದು. ದುಡುಕಿ ಮಾತನಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಒಂದು ಮಟ್ಟಿನ ಸೌಖ್ಯವು ಇರಲಿದೆ. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ವಾಹನದ ಖರೀದಿಗೆ ಬೆಂಬಲವು ಸಿಗಬಹುದು. ಒಂದೇ ದಿನ ಹಲವು ಕಾರ್ಯಗಳಿಗೆ ಭಾಗಿಯಾಗುವಿರಿ. ನಿಮ್ಮ ಕೆಲಸಕ್ಕೆ ಅಧಿಕಾರಿಗಳು ಪ್ರಶಂಸಿಸುವರು. ವೇಗವಾಗಿ ಆಗುವ ಕಾರ್ಯವನ್ನು ನಿಧಾನವಾಗಿ ಮಾಡುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಕುಟುಂಬದ ಸ್ಥಿರಾಸ್ತಿಯನ್ನು ಪಡೆಯಲು ಪ್ರೇರಣೆ ಪಡೆಯುವುರಿ. ಬರಬೇಕಾದ ಹಣವು ಬಾರದೇ ಇರುವುದು ಚಿಂತೆಗೊಳಿಸುವುದು. ಅತಿಯಾದ ಆಸೆಯಿಂದ ನಿಮಗೆ ಬುದ್ಧಿಗೆ ಮಂಕು ಕವಿಯಬಹುದು. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ.
ಮಿಥುನ ರಾಶಿ: ಸಹೋದರರ ಬಗ್ಗೆ ನಕಾರಾತ್ಮಕ ಮಾತುಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗಲಿದೆ. ವ್ಯಾವಹಾರಿಕ ಸ್ಪರ್ಧೆಯಲ್ಲಿ ಪೈಪೋಟಿ ಕೊಡಲು ಸಾಧ್ಯವಾಗದು. ಭೂಮಿಯ ವ್ಯವಹಾರವನ್ನು ಯಾವುದೋ ತೊಂದರೆಯಿಲ್ಲದೇ ಮಾಡಲಾಗದು ಎಂಬ ಮನೋಭಾವ ಬದಲಾಗುವುದು. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಬಂಧುಗಳ ಮುಂದೆ ತಲೆ ಎತ್ತಿ ನಡೆಯುವುದು ಮುಖ್ಯ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಂಡು ಕೂಗಾಡಬಹುದು. ಆರಾಮಾಗಿ ಇರುವ ನಿಮಗೆ ಚಿಂತೆ ಉಂಟಾಗುವಂತೆ ಸಂಗಾತಿ ಪೀಡಿಸಬಹುದು. ಗುರುಹಿರಿಯರ ಸೇವೆಗೆ ಅವಕಾಶ ಅನಿರೀಕ್ಷಿತವಾಗಿ ದೊರೆಯುವುದು. ಸಾಹಸ ಕಾರ್ಯಗಳನ್ನು ಮಾಡಲು ನಿಮಗೆ ಉತ್ಸಾಹವು ಬರಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಶುಭಸೂಚನೆಯು ಸಿಗುವುದು. ನಿಮ್ಮ ಆಲೋಚನೆಯ ದಿಕ್ಕು ಬದಲಾಗಬಹುದು. ವ್ಯಾಪಾರದ ನಷ್ಟದಿಂದ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಪರೂಪದ ಬಂಧುಗಳ ಆಗಮನವು ನಿಮಗೆ ಕಷ್ಟವಾದೀತು.
ಕರ್ಕಾಟಕ ರಾಶಿ: ಅಪರಿಚಿತ ಪ್ರದೇಶದಲ್ಲಿ ಪ್ರೇಯಸಿಯ ಮನಸ್ಸು ಬಂದಂತೆ ಸುತ್ತಾಡಲು ಮುಜುಗರ. ಪಾಲುದಾರಿಕೆಯಲ್ಲಿ ಹೊಂದಾಣಿಕೆ ಅತಿಮುಖ್ಯ. ಒಳ್ಳೆಯ ಸಂಬಂಧಗಳು ನಿಮಗೆ ಪಥ್ಯವಾಗದೇ ಇರಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸುವಿರಿ. ನಿಮ್ಮವರು ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವರು. ಇಂದಿನ ಖರ್ಚು ವೆಚ್ಚಗಳನ್ನು ಸರಿಯಾಗಿ ಲೆಕ್ಕಿಸುವಿರಿ. ಹಿತಶತ್ರುಗಳ ಬಗ್ಗೆ ನಿಮ್ಮ ಜಾಗರೂಕತೆಯು ಸಾಕಾಗದು. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಸಮಸ್ಯೆ ಎದ್ದಲ್ಲಿಯೇ ಪರಿಹಾರವೂ ಇರಲಿದ್ದು, ಸ್ವಲ್ಪ ಕದಕಬೇಕು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲಬೇಕಾಗುವುದು. ಅಪಾತ್ರರಿಗೆ ದಾನ ಮಾಡಿ ಬೇಸರಗೊಳ್ಳುವಿರಿ. ನಿಮ್ಮ ಗುರಿಯನ್ನು ತಲುಪಲು ಬೇರೆ ಮಾರ್ಗವನ್ನೂ ಅನುಸರಿಸಬೇಕಾದೀತು. ಉದ್ಯೋಗದಲ್ಲಿ ಸ್ತ್ರೀಯರಿಗೆ ಸಹಕಾರ ಮಾಡುವಿರಿ. ಮನೆಯವರ ಜೊತೆ ಸಂತೋಷವನ್ನು ಹಂಚಿಕೊಳ್ಳಿ.
ಸಿಂಹ ರಾಶಿ: ದೊಡ್ಡ ಉದ್ಯಮದವರಿಗೆ ಇಂದು ಅಧಿಕ ಹೂಡಿಕೆ ಬರಲಿದೆ. ನೀವು ಇಂದು ಯಾರ ವಿರೋಧವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾರಿರಿ. ಒಳ್ಳೆಯ ವಿಚಾರಗಳನ್ನು ಪ್ರಚಾರ ಮಾಡುವ ಬಗ್ಗೆ ಚಿಂತಿಸಿ. ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಹಲವು ಯೋಜನೆಯನ್ನು ಆರ್ಥಿಕ ಲಾಭಕ್ಕಾಗಿ ಪಡೆದುಕೊಳ್ಳುವಿರಿ. ಶತ್ರುಗಳಿಂದ ಆಗಿದ್ದು ನಿಮಗೆ ಪೂರಕವೇ ಆಗಬಹುದು. ದಾಂಪತ್ಯದಲ್ಲಿನ ವೈಮನಸ್ಯವು ಹಿರಿಯರ ಭೇಟಿಯಿಂದ ಸರಿಯಾಗುವುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ. ಇಂದಿನ ಓಡಾಟದಿಂದ ಶರೀರವು ದಣಿಯಬಹುದು. ಸ್ನೇಹಸಂಧಾನವು ವಿಫಲವಾಗಬಹುದು.
ಕನ್ಯಾ ರಾಶಿ: ತೋರಿಕೆಗೆ ಮಾಡಿದ ಎಲ್ಲವೂ ಬಟ್ಟಾಬಯಲಾಗಲಿದೆ. ಇದರಿಂದ ನೀವು ಇಂದು ಇಬ್ಬಂದಿಯಾಗುವ ಸಾಧ್ಯತೆಯೇ ಅಧಿಕ. ಒಬ್ಬರನ್ನೇ ನಂಬಿ ಕುಳಿತರೆ ನಿಮಗೆ ಆಗಬೇಕಾದುದು ಸಕಾಲಕ್ಕೆ ಆಗದು. ನೀವು ಅಧಿಕಾರವನ್ನು ಪಡೆಯಲು ಮಾರ್ಗವನ್ನು ಬದಲಿಸುವಿರಿ. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ಇಷ್ಟಪಟ್ಟವರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳುವಿರಿ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಅಪೇಕ್ಷಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗುವಿರಿ. ನಿಮ್ಮ ಸ್ವಲ್ಪ ಸಹಾಯವನ್ನು ಮಾಡಿ. ವಿರೋಧಿಗಳಿಗೆ ನಿಮ್ಮ ಬಲವನ್ನು ತೋರಿಸುವಿರಿ. ಹೆಚ್ಚು ಆದಾಯ ಸಿಗುವ ಕೆಲಸವನ್ನು ಹುಡುಕಲು ಬಯಸುವಿರಿ. ಯಾರ ಸಹಾಯವೂ ಇಲ್ಲದೇ ವಿನ್ಯಾಸದ ಹೊಸ ಉದ್ಯಮಕ್ಕೆ ಆರಂಭ ಅಡಿಯಿಡುವಿರಿ. ಮರಳಿ ಯತ್ನವ ಮಾಡಿದರೆ ಯಾವುದಾದರೂ ಒಂದು ಸಿದ್ಧವಾಗುವುದು. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುವಿರಿ. ಸ್ನೇಹಿತರಿಂದ ಉದ್ಯೋಗವನ್ನು ನೀವು ನಿರೀಕ್ಷಿಸುವಿರಿ. ಇಂದು ಸ್ತ್ರೀಯರ ಮಾತಿನ ಮೇಲೆ ನಿಮಗೆ ನಂಬಿಕೆ ಹೋಗಬಹುದು.
ತುಲಾ ರಾಶಿ: ಇನ್ನೊಬ್ಬರ ವ್ಯಾಪಾರದಲ್ಲಿ ಮಧ್ಯಪ್ರವೇಶ ಮಾಡಿ ವಹಿವಾಟನ್ನು ಅಸ್ತವ್ಯಸ್ತ ಮಾಡುವಿರಿ. ಮೂರನೇ ವ್ಯಕ್ತಿಗಳಿಂದ ಉದ್ಯೋಗದ ಸುಳಿವು ಸಿಗುವ ಸಾಧ್ಯತೆ ಇದೆ. ನಿಮ್ಮ ತಪ್ಪಿಗೆ ಯಾವುದೋ ಒಂದು ರೀತಿಯಲ್ಲಿ ಪ್ರಾಯಶ್ಚಿತ್ತವಾಗಲಿದೆ. ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ಮಾತಿನಲ್ಲಿ ಹಿಡಿತವಿಲ್ಲದೇ ಮನ ಬಂದಂತೆ ಮಾತನಾಡುವಿರಿ. ದಾಖಲೆಗಳ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ನಿಮ್ಮ ಬಗ್ಗೆ ಪ್ರೀತಿಯುಳ್ಳವರು ನಿಮ್ಮನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ಎಲ್ಲಿ ಯಾವುದಕ್ಕೆ ಬೆಲೆ ಎಂಬ ಸಣ್ಣ ಜ್ಞಾನವೂ ಇಲ್ಲದೇ ಆಡಳಿತದ ಭಾಗವಾಗಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ. ಏನಾದರೂ ಸಾಧಿಸಲು ಸ್ವಲ್ಪ ರಾಜಕಾರಣ ಮಾಡಬೇಕಾಗಬಹುದು. ಮಾಡಬೇಕಾಗುತ್ತದೆ. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ನಿಮ್ಮ ಮಾತಿನಿಂದ ನೀವು ಹಗುರಾಗುವಿರಿ.
ವೃಶ್ಚಿಕ ರಾಶಿ: ಉಪಕರಣವನ್ನು ಬಳಸುವುದರ ಮೇಲೆ ನಿರ್ಧಾರವಾಗುವುದು ಒಳ್ಳೆಯದೇ ಕೆಟ್ಟದ್ದೋ ಎಂದು. ಸಾಹಿತ್ಯ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ಸಾಗುವುದು. ವ್ಯವಸ್ಥೆಯನ್ನು ಸರಿ ಮಾಡುವ ಉದ್ದೇಶವೇ ನಿಮ್ಮಲ್ಲಿ ಇರುವುದು. ನಿಮಗೆ ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಇದರಿಂದ ಸಿಟ್ಟುಗೊಳ್ಳುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ದೂರದಲ್ಲಿರುವ ನಿಮ್ಮ ಮಕ್ಕಳ ಬಗ್ಗೆ ಚಿಂತೆಯಾಗುವುದು. ನಿಮ್ಮ ಚಾಣಾಕ್ಷತೆಯು ಜೊತೆಗಾರರಿಗೆ ಗೊತ್ತಾಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡವನ್ನು ಹೇಳಬಹುದು. ದೂರಾದ ಪ್ರೇಯಸಿಯಿಂದ ಖರ್ಚು ಮಾಡಿದ ಹಣವನ್ನು ಕೇಳುವ ಧೈರ್ಯ ಬರಲಿದೆ. ನಿಮ್ಮ ಸ್ನೇಹ ಬಳಗವು ದೊಡ್ಡದಾಗುವುದು. ಭೂಮಿಯ ಖರೀದಿಗೆ ಇಂದು ಸ್ಥಳವನ್ನು ಪರಿಶೀಲಿಸುವಿರಿ. ಪ್ರಮುಖ ದಾಖಲೆಗಳು ಕಣ್ಮರೆಯಾದೀತು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವಿರಿ.
ಧನು ರಾಶಿ: ಸಂಗಾತಿಗೆ ನಿಮ್ಮ ವಿಚಾರಗಳನ್ನು ತಾಳ್ಮೆಯಿಂದ ತಿಳಿಸಿ. ನೀವೂ ಉದ್ವೇಗಿಗಳಾಗಿ ಅವರನ್ನು ಉದ್ವೇಗದಲ್ಲಿ ಸಿಕ್ಕಿಹಾಕಿಸಬೇಡಿ. ಅಧಿಕಾರಿಗಳು ಸಹನೆಯನ್ನು ಇಟ್ಟುಕೊಳ್ಳಬೇಕಾಗುವುದು. ಹಿರಿಯರಿಗೆ ನಿಮ್ಮ ಮೇಲೆ ಸದಭಿಪ್ರಾಯ ಮೂಡದೇ ಇರಬಹುದು. ನಿಮ್ಮ ಸಹೋದರರಿಂದ ನಿಮಗೆ ಆಕಸ್ಮಿಕವಾಗಿ ಸಹಾಯ ಸಿಗಬಹುದು. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಪೂರ್ವಪ್ರಜ್ಞೆಯಿಂದಲೇ ತಪ್ಪುಗಳನ್ನು ಮಾಡಿಬಿಡುವಿರಿ. ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿ. ಮೇಲಧಿಕಾರಿಗಳು ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಪಾಲುದಾರಿಕೆಯಲ್ಲಿ ನಿಮ್ಮ ನಿಮಗೆ ವ್ಯಥೆಯು ಇರಲಿದೆ. ಆಡಂಬರವು ನಿಮಗೆ ಖುಷಿಕೊಡುಬುದು. ಉಪಕರಿಸಿದವರ ಮೇಲೆ ನಿಮಗೆ ಸ್ಮರಣೆ ಇರಲಿ.
ಮಕರ ರಾಶಿ: ಮಧುರವಾದ ವಿವಿಧ ಆಹಾರಸೇವನೆಗೆ ಹಣವನ್ನು ಖರ್ಚುಮಾಡಿಕೊಳ್ಳುವಿರಿ. ಸ್ನೇಹಿತರ ಸಹಕಾರದಿಂದ ಕೌಟುಂಬಿಕ ಸಮಸ್ಯೆಯನ್ನು ಸರಿಮಾಡಿಕೊಳ್ಳಬಹುದು. ಯಾರದ್ದಾರೂ ಮಾತು ನಿಮಗೆ ಖುಷಿಕೊಡುವುದಾದರೆ ಅಂತಹುದನ್ನು ಕೇಳಿ. ಇಂದು ನೀವು ಬೇರೆಯವರ ಕಷ್ಟಕ್ಕೆ ನೆರವಾಗುವಿರಿ. ನೀವು ಮಾಡಿಕೊಂಡ ತಪ್ಪು ಕಾರ್ಯಗಳೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ದ್ರವ ಪದಾರ್ಥಗಳ ಮಾರಾಟವನ್ನು ನೀವು ಮಾಡುವಿರಿ. ನಿಮ್ಮ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದೂರ ಹೋಗುವ ಮನಸ್ಸು ಮಾಡುವಿರಿ. ಸುಲಭವಾದ ಮಾರ್ಗವನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ದೈವಭಕ್ತಿಯು ನಿಮ್ಮನ್ನು ವಿಭಿನ್ನ ಮಾನಸಿಕತೆಗೆ ಏರಿಸುವುದು. ಇಂದು ಸಂಯಮವು ಮುಖ್ಯ. ಹಿರಿಯರ ಮಾತಿಗೆ ಬೆಲೆ ಇರಲಿ. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಆದಾಯಕ್ಕೆ ಹೊಸ ಯೋಜನೆಯನ್ನು ರೂಪಿಸುವಿರಿ.
ಕುಂಭ ರಾಶಿ: ಎಷ್ಟೇ ಮಾಡಿದರೂ ಮುಗಿಯದ ಕೆಲಸದಿಂದ ಬೇಸತ್ತು ಹೋಗಬಹುದು. ಒತ್ತಾಯದ ಮೇರೆಗೆ ಇಷ್ಟವಿಲ್ಲದ ಉದ್ಯೋಗಕ್ಕೆ ಸೇರಿಕೊಳ್ಳಬೇಕಾಗುವುದು. ಸಾಲಕೂಪವೂ ದಿನದಿಂದ ದಿನಕ್ಕೆ ಹೆಚ್ಚಾದಂತೆ ತೋರುತ್ತದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇರುವುದು. ಇಂದು ಕುಟುಂಬದಲ್ಲಿ ಆತಂಕವು ಇರಲಿದ್ದು ದೈವದ ಮೊರೆ ಹೋಗುವಿರಿ. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ಸಮಸ್ಯೆಯನ್ನು ದೊಡ್ಡದು ಅಂದುಕೊಳ್ಳುವುದಕ್ಕಿಂತ ಪರಿಹರಿಸಲು ದಾರಿಯನ್ನು ಕಂಡುಕೊಳ್ಳಿ. ಉದ್ಯೋಗ ಕೊಡಿಸಿದವರಿಗೂ ಕೊಟ್ಟವರಿಗೂ ಕೃತಜ್ಞತೆಯಿಂದ ಇರಿ. ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವ್ಯಾಪಾರವು ಮಧ್ಯಮ ಲಾಭವನ್ನು ಗಳಿಸಬಹುದು. ವಿನಾಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು.
ಮೀನ ರಾಶಿ: ಮನಸ್ಸು ವಿಮುಖವಾಗುವುದರೊಳಗೆ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ. ಅದೃಷ್ಟ ಬದಲಾದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳಬಹುದು. ಆದರೆ ಅದನ್ನು ನಿಮ್ಮಿಂದ ಬದಲಿಸಲು ಆಗದು. ನಿಮ್ಮ ಹಣವು ಒಳ್ಳೆಯ ಕಾರ್ಯಕ್ಕೆ ಉಪಯೋಗವಾದರೆ ಖುಷಿಪಡಿ. ಸಂಕಟಪಟ್ಟುಕೊಂಡು ಬರುವ ಪುಣ್ಯವನ್ನೂ ಕಳೆದುಕೊಳ್ಳಬೇಡಿ. ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸರ್ಕಾರದ ಕಾರ್ಯಕ್ಕೆ ತಡೆಗಳು ಹೆಚ್ಚು. ನಿಮ್ಮ ಮನೆ ಚಟುವಟಿಕೆಯಿಂದ ತುಂಬಿರಲಿದೆ. ಅತಿಥಿಗಳು ಆಗಮನವೇ ಇದಕ್ಕೆ ಕಾರಣವಾಗುವುದು. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು. ನೀವು ಇಂದು ಪ್ರೀತಿಯನ್ನು ಹೇಳಿಕೊಳ್ಳುವಿರಿ. ಸಂಬಂಧವಿಲ್ಲದ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಖರ್ಚು ಮಾಡುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)




