AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 15 October: ಈ ರಾಶಿಯವರು ಇಂದು ಅಪವಾದವನ್ನು ಎಳೆದುಕೊಳ್ಳುವಿರಿ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಬುಧವಾರ ಸರ್ಕಾರೀ ಕಾರ್ಯಕ್ಕೆ ಪ್ರಯತ್ನ, ದುರ್ಬಲ ಹೃದಯ, ಕಳ್ಳತನ, ಸುಕೃತಫಲ, ಹೊಸ ಯೋಜನೆ, ಪಾರದರ್ಶಕತೆ, ಮಿತ್ರರೇ ಶತ್ರು. ಈದಿನ ಯಾವ ರಾಶಿಯ ಭವಿಷ್ಯ ಹೇಗಿದೆ ತಿಳಿಯಿರಿ.

Horoscope Today 15 October: ಈ ರಾಶಿಯವರು ಇಂದು ಅಪವಾದವನ್ನು ಎಳೆದುಕೊಳ್ಳುವಿರಿ
Rashi Bhavishya
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 15, 2025 | 12:02 AM

Share

ಬೆಂಗಳೂರು, ಅಕ್ಟೋಬರ್​ 15: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ವಜ್ರ, ಕರಣ : ತೈತಿಲ, ಸೂರ್ಯೋದಯ – 06 – 10 am, ಸೂರ್ಯಾಸ್ತ – 05 – 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:05 – 13:34 ಗುಳಿಕ ಕಾಲ 10:37 – 12:05 ಯಮಗಂಡ ಕಾಲ 07:40 – 09:08

ಮೇಷ ರಾಶಿ: ಅಪ್ರಯೋಜನಕಾರಿಯಾದ ರಾಜಕೀಯದ ಮಾತುಗಳನ್ನಾಡಿ ಸಮಯ ಹಾಳುಮಾಡಿಕೊಳ್ಳುವಿರಿ. ಉದ್ಯೋಗದ ಸ್ಥಳದಲ್ಲಿ ಇಂದು ನಿಮಗೆ ಒಳ್ಳೆಯವರಾಗುವುದೂ ಕಷ್ಟವೆನಿಸಬಹುದು. ನಿಮ್ಮ ಆತ್ಮೀಯವಾದ ಮಾತುಕತೆಗಳಿಂದ ಅಪರಿಚಿತರು ಆಪ್ತರಾಗುವರು. ಆಕಸ್ಮಿಕ ದ್ರವ್ಯಪ್ರಾಪ್ತಿಯು ಆಗಲಿದೆ. ಸುಲಭವಾಗಿ ಸಿಗುವುದನ್ನು ಶ್ರಮದಿಂದ ಪಡೆಯುವ ಸ್ಥಿತಿ ಬರಬಹುದು. ದಾಂಪತ್ಯದಲ್ಲಿ ಪರಸ್ಪರ ನಂಬಿಕೆಗಳು ದೃಢವಾಗುವುದು. ಕಲ್ಪನೆಗೆ ಸಿಗದ ಬದಲಾವಣೆಯನ್ನು ನೀವು ನೋಡಬಹುದು. ಸೌಂದರ್ಯದಿಂದ ನೀವು ಆಕರ್ಷಕವಾಗಿ ಕಾಣುವಿರಿ‌. ಒತ್ತಡದಿಂದ ಹೊರ ಬರಲು ವೃತ್ತಿಯಲ್ಲಿ ವಿರಾಮ ಸಮಯವನ್ನು ನಿರೀಕ್ಷಿಸುವಿರಿ. ವ್ಯಕ್ತಿಯನ್ನು ದೂರಮಾಡದೇ ವಿಷಯವನ್ನು ದೂರ ಮಾಡಿಸಿ. ಒಳ್ಳೆಯವರ ವಿಸ್ಮರಣೆಯಾಗಿ ಪಶ್ಚಾತ್ತಾಪ ಪಡುವಿರಿ. ನಿಮ್ಮ ಕಾರ್ಯಕ್ಕೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಶತ್ರುಗಳ ನಡುವೆ ಮೌನವಾಗಿ ಬದುಕಬೇಕಾದೀತು. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು.

ವೃಷಭ ರಾಶಿ: ಗುಣಮಟ್ಟವನ್ನು ಕಾಯ್ದುಕೊಳ್ಳುವ ಚಿಂತೆ ಆರಂಭವಾಗಲಿದೆ. ನಿಮ್ಮ ಸಾಲ ಕೊಟ್ಟವರು ಪೀಡಿಸುವ ಸಾಧ್ಯತೆ ಇದೆ. ಯಾರ ಮೇಲೇ ಇಡುವ ವಿಶ್ವಾಸವೂ ನಿಮಗೆ ಸಮಾಧಾನವಾಗದು. ನಿಮ್ಮ ಪಾಲುದಾರಿಕೆಯ ಒಪ್ಪಂದವನ್ನು ಪುನಃ ಮಾಡಿಕೊಳ್ಳುವ ಸನ್ನಿವೇಶಗಳು ಬರಲಿದ್ದು ಆಲೋಚಿಸಿ ಒಪ್ಪಿಗೆ ನೀಡಿ. ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗಿದೆ. ನಗರದಲ್ಲಿ ಇರುವವರಿಗೆ ಸಂಚಾರ ದುಸ್ತರವೆನಿಸುವುದು. ದುರಭ್ಯಾಸಕ್ಕೆ ನೀವು ದಂಡವನ್ನು ಕೊಡಬೇಕಾಗುವುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವು ಕಡಿಮೆ ಆಗುವುದು. ನಿಮ್ಮೊಳಗೆ ಯಾರೂ ಸಾಧಿಸದ್ದನ್ನು ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಇರಲಿದೆ‌. ಮುಕ್ತಾಯವಾಗದ ಕಾರ್ಯದಿಂದ ನಿಮಗೆ ಬೇಸರವಾಗಬಹುದು. ಬರಬೇಕಾದ ಹಣದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಇಂದಿನ ನಿಮ್ಮ ವೈಯಕ್ತಿಕ ಕೆಲಸ ನಡುವೆ ಕಛೇರಿಯ ಕೆಲಸಗಳು ಹಿಂದೆ ಉಳಿಯುವುದು. ನಿಮ್ಮ ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗಬಹುದು.

ಮಿಥುನ ರಾಶಿ: ಸ್ಪರ್ಧೆಗೆ ಹೋಗುವ ತುಡಿತವಿದ್ದರೂ ನಿಯಮಗಳು ನಿಮ್ಮನ್ನು ಅಡ್ಡಗಟ್ಟುವುವು. ದಾಂಪತ್ಯದ ಕಲಹಕ್ಕೆ ಬೇಕೆಂದು ಮಾಡದಿದ್ದರೂ ನಿಮ್ಮ ಮೇಲೆ‌ ಕೆಲವು ಆರೋಪಗಳು ಬರುವುದು. ಅಪ್ರಸಿದ್ಧ ಸಂಸ್ಥೆಗೆ ಹಣ ಹೂಡಿಕೆ ಮಾಡಿ ನಿಮ್ಮ ಹಣವನ್ನು ಕಳೆದುಕೊಳ್ಳುವಿರಿ. ಕರಕುಶವ್ಯಾಪಾರಿಗಳು ಅಧಿಕ ಲಾಭವನ್ನು ಪಡೆಯುವರು. ಸರ್ಕಾರಿ‌ ಕೆಲಸಕ್ಕೆ ಪ್ರಯತ್ನಿಸಿದರೂ ಸುಲಭವಾಗಿ ಸಿಗದು. ನಿಮ್ಮ ಆಸ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡಲು ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುವುದು. ತಂತ್ರಜ್ಞರಿಗೆ ಸುಲಭವಾಗಿ ಕೆಲಸವು ಸಿಗದು. ಆರ್ಥಿಕತೆಯ ಗೌಪ್ಯತೆಯನ್ನು ಮೈಮರೆತು ಹೊರಹಾಕುವಿರಿ. ಅನಂತರ ತುರ್ತಾಗಿ ಮಾಡಬೇಕಾದ ವ್ಯವಸ್ಥೆ ಮಾಡಿಕೊಳ್ಳುವಿರಿ. ಎಲ್ಲರನ್ನೂ ಮೆಚ್ಚಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಲು ಸಾಧ್ಯವಾಗದು. ಗೌರವದ ಅಪೇಕ್ಷೆಯು ಇಲ್ಲದಿದ್ದರೂ ನಿಮಗೆ ಸುಕೃತದಿಂದ ಸಿಗುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಗಬೇಕಾದ ಕಾರ್ಯಗಳ ಬಗ್ಗೆ ನಿಮಗೆ ಗಮನವು ಕಡಿಮೆ‌ ಇರುವುದು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು.

ಕರ್ಕಾಟಕ ರಾಶಿ: ಸಂಗಾತಿಯ ಆರೋಗ್ಯದಲ್ಲಿ ಅತಿಶಯವಾದ ಏರಿಳಿತ ಕಾಣಿಸುವುದು. ಇಂದು ನಿಮ್ಮ ಉದ್ಯೋಗವನ್ನು ನಿರ್ವಹಣೆ ಮಾಡುವುದು ಕಷ್ಟವಾದೀತು. ಯಾರಾದರೂ ನಿಮ್ಮನ್ನೇ ಗುರಿ ಮಾಡಿಕೊಂಡು ಇರಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿಯು ಇಂದು ಸಿಗಲಿದೆ. ನಿಮ್ಮ ಧಾರ್ಮಿಕ ಶ್ರದ್ಧೆಗೆ ಫಲ ದೊರೆತಂತಾಗುವುದು. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹಿಂದೇಟು ಹಾಕುವಿರಿ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿಕೊಳ್ಳುವಿರಿ. ದೈಹಿಕ ಕಸರತ್ತನ್ನು ಅತಿಯಾಗಿ ಮಾಡಲು ಹೋಗುವುದು ಬೇಡ. ಶ್ರೇಷ್ಠ ವಾಗ್ಮಿಗಳ ಸಮ್ಮುಖದಲ್ಲಿ ವಿಷಯ ಪ್ರಸ್ತುತಿ ಮಾಡಲಿದ್ದು, ಪ್ರಶಂಸೆ ಸಿಗುವುದು. ಅತಿಯಾದ ಆಪ್ತತೆಯು ನಿಮಗೆ ಮುಳುವಾಗಬಹುದು. ಸುಖವಾಗಿರಲು ಮಾರ್ಗವನ್ನು ಹುಡುಕುವಿರಿ. ಅತಿಯಾದ ಲೋಭವು ನಿಮಗೆ ಮಾರಕವಾದೀತು. ಒಂದು ಕ್ಷಣವೂ ಒಂದು ಕಡೆ ಕುಳಿತಿರಲಾರಿರಿ. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ.

ಸಿಂಹ ರಾಶಿ: ನೆಮ್ಮದಿಯನ್ನು ಹುಡುಕಿ ಎಲ್ಲಿಗೇ ಹೋದರೂ ಅಲ್ಲಿಯೂ ಅಪವಾದವೋ ಸಂಲಟವೋ ಅಂಟಿಕೊಳ್ಳುವುದು. ನಿರಂತರ ಪ್ರಯತ್ನಕ್ಕೆ ಫಲವು ಸಿಗುವುದು. ಇಂದಿನ ತಪ್ಪು ಕಾರ್ಯಗಳಿಗೆ ಆತ್ಮ ಸಾಕ್ಷಿ ಅಡ್ಡ ಬರಬಹುದು. ಸಹೋದ್ಯೋಗಿಗಳ ಕಿರಿಕಿರಿಯಿಂದ ನಿಮ್ಮ‌ ಸ್ಥಾನವನ್ನು ಬಿಟ್ಟಕೊಡಬೇಕಾಗಿ ಬರಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಆಗಬಹುದು. ಮಕ್ಕಳ‌ ಬಗ್ಗೆ ಸರಿಯಾದ ಗಮನಬೇಕು. ಹಳೆಯ ಘಟನೆಗಳೆಲ್ಲವೂ ನಿಮ್ಮ ಸ್ಮರಣೆಗೆ ಬಂದು ಹೋಗಬಹುದು. ಆಕಸ್ಮಿಕವಾಗಿ ಏನ್ನಾದರೂ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಹುಸಿಯಾಗುವುದು. ತಂದೆಯಿಂದ ಅಥವಾ ತಂದೆಯ ಸಮಾನರಿಂದ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಭಾವವು ನಡೆಯುವುದು. ದೇವತಾ ಕಾರ್ಯಕ್ಕೆ ಸಮಯವನ್ನು ಮಾಡಿಕೊಳ್ಳುವುದು ಉತ್ತಮ. ಪಿತೃಕಾರ್ಯದಿಂದ ಮಹತ್ಕಾರ್ಯದ ವಿಘ್ನಕ್ಕೆ ತೆರೆ. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮ್ಮನ್ನು ಕಾಡಬಹುದು. ಮಕ್ಕಳಿಂದ ಅನಾದರವಾಗಬಹುದು. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು.

ಕನ್ಯಾ ರಾಶಿ: ಧಾರ್ಮಿಕ ಕಾರ್ಯಕ್ಕೆ ಭಾಗವಹಿಸುವುದು ಸುಕೃತವೆಂದು ಭಾವಿಸಿ. ಭಕ್ತಿಯಿಂದ ಪಾಲ್ಗೊಳ್ಳಿ. ಸಂಕಟದ ಮುಕ್ತಿಗೆ ಇದೇ ದಾರಿ ಮಾಡಿಕೊಡುವುದು. ಹಣಕಾಸಿನ ವ್ಯವಹಾರದಿಂದ ನಿಮಗೆ ಶುಭವಾಗಲಿದೆ. ಹೊಸ ಯೋಜನೆಗಳು ನಿಮ್ಮನ್ನು ಹುಡುಕಿ ಬರಬಹುದು. ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಹೇಳಿ. ಸುಮ್ನೇ ಸುತ್ತಿ ಬಳಸಿ ಮಾತನಾಡಿ ಎದುರಿನವರ ಮತ್ತು ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವುದು ಬೇಡ. ವ್ಯಾಪಾರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ತೇಜನವನ್ನು ಕೊಡುವುದು. ಸ್ವಯಂಕೃತ ಅಪರಾಧದಿಂದ ಪಶ್ಚಾತ್ತಾಪವಾಗುವುದು. ಹಣದ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹ. ಇಂದು ಕೆಲವು ಸಂದರ್ಭಗಳನ್ನು ನಡುವೆ ಭಾಯಿಸಲು ನೀವು ಕಲಿಯಬೇಕಾಗಬಹುದು. ನಿಮ್ಮ ಮೇಲೆ ಯಾವುದೋ ಶಕ್ತಿಯ ಪ್ರಭಾವವಿದೆ ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇದ್ದಷ್ಟು ಉತ್ತಮ.

ತುಲಾ ರಾಶಿ: ಸಂಘ ಸಂಸ್ಥೆಗಳನ್ನು ಸೇರಿ ಅಪವಾದವನ್ನು ಎಳೆದುಕೊಳ್ಳುವಿರಿ. ಹಳೆಯ ವಸ್ತುಗಳನ್ನು ಮಾರಾಟ ಮಾಡುವಿರಿ. ಮನೆಯ ಖರೀದಿ ವ್ಯವಹಾರದಲ್ಲಿ ಗೊಂದಲವಾಗುವುದು.‌ ಕಾರ್ಯದಲ್ಲಿ ಉಂಟಾದ ಅಡೆತಡೆಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ಕೊಡುವಿರಿ. ನಿಮ್ಮ ಒಳ್ಳೆತನದಿಂದ ನಿಮಗೆ ತೊಂದರೆಯಾಗಬಹುದು. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡಬೇಕಾಗಿಬರಬಹುದು. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡಬೇಕಾಗಿಬರಬಹುದು. ಹಸಿದವರಿಗೆ ಕಿಂಚಿತ್ ಆಹಾರವನ್ನು ಕೊಡುವ ಮನಸ್ಸು ಮಾಡಿ. ನಿಮ್ಮ ಮಾತನ್ನು ಕೇಳದೇ ಇರುವುದು ನಿಮಗೆ ಸಿಟ್ಟನ್ನು ತರಿಸಬಹುದು. ಮನಸ್ಸಿನಲ್ಲಿಯೇ ಕುದಿಯುವಿರಿ. ಅನಾರೋಗ್ಯದ ಕಾರಣ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಕು ಬರುವುದು. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಒಡನಾಡಬೇಕಾಗಿಬರಬಹುದು. ಬಹಳ ಕಷ್ಟಪಟ್ಟು ನಿಮ್ಮ ಈ ಜವಾಬ್ದಾರಿಯನ್ನು ಮುಗಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ: ನಿಮ್ಮ ನೇರದಿಂದ ಸರಿಕಂಡ ಕಾರ್ಯವು ಇನ್ನೊಂದು ನೇರದಿಂದ ದೋಷಪೂರಿತವಾಗಿರುವುದು. ನ್ಯಾಯಾಲಯದಲ್ಲಿ ಗೆಲವು ಸಾಧ್ಯ. ನಿಮ್ಮ ವಿವಾಹಕ್ಕೆ‌ ಮನೆಯವರಿಂದ ಒತ್ತಡ ಹೆಚ್ಚಾಗುವುದು. ಮಕ್ಕಳ ವಿಚಾರದಲ್ಲಿ ನೀವು ಅನಾದರ ತೋರುವುದು ಸರಿಯಲ್ಲ. ಅವರ ಸ್ವಭಾವವು ಮುಂದುವರಿಯಬಹುದು. ಅಧ್ಯಾತ್ಮದಲ್ಲಿ ಇರಬೇಕಾಗಿ ಮನಸ್ಸು ತುಡಿಯಬಹುದು. ನಿಮ್ಮ ಬಗ್ಗೆ ನಿಮಗೇ ಹಿಂಜರಿಕೆಯ ಭಾವನೆ ಉಂಟಾಗಬಹುದು. ಮೇಲಿನ ವರ್ಗದವರು ನಿಮ್ಮನ್ನು ಓಡಾಡಿಸಬಹುದು. ನೇರ ಮಾತು ಎಲ್ಲ ಸಂದರ್ಭಗಳಲ್ಲಿಯೂ ಪ್ರಯೋಜನಕ್ಕೆ ಬರದು, ಪ್ರಶಂಸೆಯೂ ಸಿಗದು. ಮಕ್ಕಳ ಕ್ಷಣಕಾಲದ ಕಣ್ಮರೆಯಿಂದ ಆತಂಕಗೊಳ್ಳುವಿರಿ. ದಾಂಪತ್ಯದಲ್ಲಿ ಬರುವ ವೈಮನಸ್ಸನ್ನು ಸಾವಧಾನವಾಗಿ ನಿರ್ವಹಿಸಬೇಕು. ಇನ್ನೊಬ್ಬರ ಬುದ್ಧಿಮಾತನ್ನು ಒಂದನ್ನೇ ನಂಬಿ ನೀವು ಕಾರ್ಯಪ್ರವೃತ್ತರಾದರೆ ಅಪಮಾನವನ್ನು ಎದುರಿಸಬೇಕಾದೀತು. ಇಂದು ನೀವು ಅಂದುಕೊಂಡಷ್ಟು ಸುಲಭದಲ್ಲಿ ಯಾವುದೂ ದಕ್ಕದು. ಮಕ್ಕಳ ಕೆಟ್ಟ ಸ್ವಭಾವವನ್ನು ಈಗಲೇ ತೆಗೆದುಹಾಕಿ.

ಧನು ರಾಶಿ: ಅಧಿಕಾರದ ಆಮಿಷಕ್ಕೆ ಒಳಗಾಗುವ ಸಾಧ್ಯತೆ. ಆಳ ನೋಡಲು ಯಾರಾದರೂ ನಿಮ್ಮನ್ನೇ ಬಿಡಬಹುದು. ಬಂಧುಗಳ ಒರಟುತನ ನಿಮಗೆ ಇಷ್ಟವಾಗದು. ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ಸಾಮಾಜಿಕ ಗೌರವವನ್ನು ಪಡೆಯುವ ಅವಕಾಶಗಳು ಇದ್ದರೂ ಕಾರಾಣಾಂತರಗಳಿಂದ ಅದು ಸಾಧ್ಯವಾಗದು. ಅಜೀರ್ಣವೇನಿಸಿದರೂ ಆಹಾರವನ್ನು ತಿಂದು ಆರೋಗ್ಯವನ್ನು ಪೂರ್ಣವಾಗಿ ಕೆಡಿಸಿಕೊಳ್ಳುವಿರಿ. ಕುಟುಂಬದ ನಿರ್ವಹಣೆಯನ್ನು ಹಂತವಾಗಿ ಪಡೆಯುವುದು ಉತ್ತಮ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಉದ್ವೇಗಕ್ಕೆ ಒಳಗಾಗಬೇಕಾದೀತು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಇಂದು ಕಡಿಮೆ ಇರುವುದು. ಸಂಗಾತಿಯ ಸಂತೋಷಕ್ಕೆ ಏನಾದರೂ ಉಡುಗೊರೆಯನ್ನು ನೀಡುವಿರಿ. ಜವಾಬ್ದಾರಿಯುತ ಸ್ಥಾನವು ನಿಮಗೆ ಸಿಗಲಿದೆ. ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ.

ಮಕರ ರಾಶಿ; ನಿಮ್ಮನ್ನು ಇಷ್ಟಪಟ್ಟವರೇ ಶತ್ರುಸ್ಥಾನದಲ್ಲಿ ನೋಡಬೇಕಾಗುವುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ಸಾಹವನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಕಷ್ಟವಾಗುವುದು. ಕಛೇರಿಯಲ್ಲಿ ಇಂದು ಮೇಲಿನವರು ಹೇಳಿದ್ದಷ್ಟನ್ನೇ ಮಾಡುವುದು ಒಳ್ಳೆಯದು. ನಿಮ್ಮ ಯೋಚನೆಯನ್ನೂ ಸೇರಿಸುವುದರಿಂದ ವ್ಯತ್ಯಾಸವಾಗಿ ನಿಮ್ಮ ಮೇಲೆ ಅಪವಾದವು ಬರಬಹುದು. ನಿಯತಕಾಲಿಕ ಉದ್ಯೋಗಿಗಳಿಗೆ ಶುಭ ಸುದ್ದಿ ಬರುವ ದಿನ. ಯೋಗದಿಂದ ಸಿಕ್ಕಿರುವುದನ್ನು ಅಸಡ್ಡೆ ಮಾಡದೇ ಉಳಿಸಿಕೊಳ್ಳಿ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ಸಂಗಾತಿಗೆ ನಿಮ್ಮ ಮೇಲೂ ವಿಷಯದ ಮೇಲೂ ಜಿಗುಪ್ಸೆ ಬರುವಂತೆ ಮಾಡುವಿರಿ. ಆರ್ಥಿಕ ವಿಚಾರವನ್ನು ನೀವು ಆಳವಾಗಿ ಆಲೋಚಿಸುವಿರಿ. ಪ್ರೀತಿಯನ್ನು ನೀವು ನಿರ್ವಹಿಸುವ ಬಗೆಯನ್ನು ತಿಳಿಯುವಿರಿ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.

ಕುಂಭ ರಾಶಿ: ಯಾವುದೇ ವೈಮನಸ್ಯ ಬರುವುದರೊಳಗೆ ಆಸ್ತಿಯನ್ನು ಹಂಚಿಕೊಳ್ಳಿ. ಶಸ್ತ್ರಗಳಿಂದ ದೇಹಕ್ಕೆ ಘಾಸಿಯಾಗಬಹುದು. ಒಳ್ಳೆಯದನ್ನು ಬಿಟ್ಟು ಇರುವುದು ನಿಮಗೆ ಸರಿ ಕಾಣಿಸದು. ದೀರ್ಘಕಾಲದ ಸ್ನೇಹವು ಇಂದು ಮಾತಿನಿಂದ ಒಡೆದುಹೋಗುವುದು. ಅದಕ್ಕಾಗಿ ನೀವು ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೋಗುವುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟವಾದೀತು. ಬಾಡಿಗೆ ಮನೆಯನ್ನು ತುರ್ತು ಬದಲಿಸಬೇಕಾಗುವುದು. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವಿರಿ. ಸಹೋರರು ನಿಮ್ಮ ಕಾರಣಕ್ಕೆ ಪಶ್ಚಾತ್ತಾಪ ಪಡಬಹುದು. ವಿದೇಶದಲ್ಲಿ ಇರುವವರಿಗೆ ಉನ್ಮತ್ತತೆ ಲಕ್ಷಣ ಕಾಣಿಸಬಹುದು. ಆರೋಗ್ಯದ ಸ್ಥಿತಿಯು ಯಥಾಪ್ರಕಾರವಾಗಿ ಬಲಿಷ್ಠವಾಗಿಯೇ ಇರುವುದು. ಮೇಲಧಿಕಾರಿಗಳನ್ನು ತೃಪ್ತಿಪಡಿಸುವಿರಿ. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ.

ಮೀನ ರಾಶಿ: ನಿಮ್ಮ ಅದೃಷ್ಟ ಯಾವುದಾದರೂ ರೂಪದಲ್ಲಿ ಸಹಾಯ ಮಾಡಲಿದೆ. ನಿಮಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬಂದಿರುವುದು ಕುಟುಂಬದಲ್ಲಿ ಅಚ್ಚರಿ ತರಿಸುವುದು. ಇಂದು ನಿಮಗೆ ಭೂಮಿಯ ಉತ್ಪನ್ನದಿಂದ ಆದಾಯ ಕಡಿಮೆ ಆಗುವುದು. ಇರುವ ಸಂಪತ್ತನ್ನು ಉಳಿಸಿಕೊಳ್ಳಲು ಯೋಜನೆಯನ್ನು ರೂಪಿಸಿ. ಅನಿರೀಕ್ಷಿತ ಹಣದ ಕಲ್ಪನೆಯನ್ನು ನೀವು ಬಿಡುವುದು ಉತ್ತಮ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಕಲಹವಾಗಬಹುದು. ಸ್ಥಿರಾಸ್ತಿಯ ಮೇಲೆ ಅಲ್ಪ ಸಾಲ ಮಾಡಬೇಕಾಗುವುದು. ನಿಮ್ಮ ಬಂಧುಗಳು ಭೇಟಿ ಮಾಡಿ ನಿಮ್ಮ ಸಮಯವನ್ನು ಹಾಳುಮಾಡಬಹುದು. ಪರಿಚಯ ಪತ್ರಕ್ಕೆ ವಿಶೇಷ ಅಂಶವನ್ನು ತೋರಿಸುವರು. ಹಿರಿಯರ ಮೇಲಿದ್ದ ನಿಮ್ಮ ಪೂರ್ವಾಗ್ರಹವು ಬದಲಾಗಬಹುದು. ಹೊಸ ಉದ್ಯೋಗಕ್ಕೆ ಅವಕಾಶಗಳು ಹುಡುಕಿಕೊಂಡುಬರಬಹುದು. ನಿಮ್ಮ ವಿವೇಚನಾ ಶಕ್ತಿಯಿಂದ ಅದನ್ನು ಸರಿಯಾಗಿ ತೀರ್ಮಾನಿಸಿ. ಗೊಂದಲವನ್ನು ಇಟ್ಟುಕೊಂಡು ಮುಂದುವರಿಯುವುದು ಬೇಡ. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಳ್ಳುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ