Horoscope Today 17 June: ಈ ರಾಶಿಯವರು ತಮ್ಮ ಬಗ್ಗೆ ಹೆಚ್ಚು ಹೇಳಿಕೊಳ್ಳುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ ಮಂಗಳವಾರ ಪ್ರೇಮ ಪ್ರಕಟ, ಸಂಗಾತಿಯ ಜೊತೆ ಕಾಲ ಹರಣ, ಅನೇಕ ವಿಚಾರಗಳ ವಿಸ್ಮರಣೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ – 06 : 05 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:48 – 17:25, ಯಮಘಂಡ ಕಾಲ 09:19 – 10:57, ಗುಳಿಕ ಕಾಲ 12:34 – 14:11
ಮೇಷ ರಾಶಿ: ಋಣ ಸಂದಾಯಕ್ಕೆ ಇಂದು ಸರಿಯಾದ ಸಮಯ. ಇಂದು ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಅದನ್ನು ಕೊಡಿ. ಸಂತೋಷದಿಂದ ಇರುತ್ತಾರೆ. ಬೆಚ್ಚಗಿನ ವಾತಾವರಣವು ನಿಮಗೆ ಇಂದು ಹಿತವಾಗಲಿದೆ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರೇಮ ಜೀವನವು ಉತ್ತಮವಾಗಿರುತ್ತದೆ. ಅತಿಯಾದ ನೋವು ಕೊಡುವುದನ್ನು ಇಟ್ಟಕೊಳ್ಳಲಾರಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಸರಿಯಾದ ಕೆಲಸವನ್ನು ಸರಿ ಇಲ್ಲ ಎಂದು ಹೇಳಿ ನಿಮ್ಮನ್ನು ಕುಗ್ಗಿಸಬಹುದು. ಇದಾವುದಕ್ಕೂ ಬಗ್ಗುವ ಅವಶ್ಯಕತೆ ಇಲ್ಲ. ಅಳಿಸಲಾಗದ ಪ್ರೇಮವನ್ನು ಯಾವುದಾದರೂ ರೀತಿಯಲ್ಲಿ ಹೊರಹಾಕುವಿರಿ. ನಿಮ್ಮ ಮಾರ್ಗದಲ್ಲಿ ನೀವಿರಿ. ಬರಹಗಾರರಿಗೆ ತಮ್ಮ ಬರಹವನ್ನು ವಿರೋಧಿಸುವವರ ಮಧ್ಯದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಸಂದರ್ಭವಿದೆ. ನ್ಯಾಯಲಯದ ವ್ಯವಹಾರಗಳಲ್ಲಿ ನಿಮಗೆ ಶುಭಸಮಾಚಾರ ಇರುತ್ತದೆ. ನಿಮ್ಮೆದುರು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ.
ವೃಷಭ ರಾಶಿ: ಅತಿಯಾದ ವಿವೇಕವೂ ನಿಮ್ಮ ಹಾದಿ ತಪ್ಪಿಸಬಹುದು. ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆ ಹೇರುವುದು ಬೇಡ. ಬಂಧುಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಪ್ರೇಮ ಜೀವನದಲ್ಲಿ ಹೊಸ ರೋಮಾಂಚಕಾರಿ ತಿರುವುಗಳು ಬರುತ್ತವೆ. ಕಳೆಯದೇ ಇಂದು ಪಡೆದುಕೊಳ್ಳುವ ಆಸೆ ಬೇಡ. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಬಲವಾಗಿರುತ್ತದೆ. ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ತಿಳಿವಳಿಕೆ ಇಲ್ಲದವರಂತೆ ವರ್ತಿಸುವುದು ಬೇಡ. ನೂತನ ವಸ್ತ್ರವನ್ನು ಖರೀದಿ ಮಾಡಲಿದ್ದೀರಿ. ಕೌಟುಂಬಿಕವಾದ ಕೆಲವು ಜವಾಬ್ದಾರಿಗಳನ್ನು ಮಕ್ಕಳಿಗೆ ಕೊಟ್ಟು ಆರಾಮಾಗಿ ಇರುವಿರಿ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ಆಗುವ ಸಾಧ್ಯತೆಗಳಿವೆ. ಧನದ ಆದಾಯವು ನಿರೀಕ್ಷೆಯನ್ನು ಪೂರ್ಣವಾಗಿ ತಲುಪದು. ಪಾಪ ಪುಣ್ಯದ ಲೆಕ್ಕಾಚಾರವನ್ನು ಮಾಡುವಿರಿ. ಸಿದ್ಧ ಉಡುಪು ತಯಾರಕರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.
ಮಿಥುನ ರಾಶಿ: ಕಲಿಕೆಯ ಹಿಂಜರಿಕೆಯನ್ನು ಪಾಲಕರು ಸಹಿಸಲಾರರು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾತುವಿಹಾರಕ್ಕೆಂದು ಹೋಗುವಿರಿ. ಮನೆಗೆ ಅತಿಥಿಗಳ ಆಗಮನವು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ವೃತ್ತಿಪರ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ನಿಮಗೆ ಇಂದು ಯಾವುದೇ ವಿಚಾರ ಅತಿ ಎಂದು ಕಂಡರೆ ಅದನ್ನು ಬಿಡಿ. ಪರಸ್ಥಳದ ವಾಸದಿಂದ ನೆಮ್ಮದಿ. ಬದಲಾಯಿಸಿ ಮತ್ತೊಂದರ ಕಡೆ ಗಮನಹರಿಸಿ. ಕ್ರೀಡಾಪಟುಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಪ್ರೀತಿ ಪ್ರೇಮದ ಸೆಳೆತಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿ ವ್ಯತ್ಯಾಸವಿಲ್ಲ. ಪ್ರಯಾಣವು ಅನಿವಾರ್ಯವಾದರೂ ಅದರಿಂದ ಶುಭ ಸುದ್ದಿಯು ನಿಮಗೆ ಇರುವುದು.
ಕರ್ಕಾಟಕ ರಾಶಿ: ಹೋಗುವವರನ್ನು ತಡೆದು ನಿಲ್ಲಿಸಬೇಡಿ. ನೀವು ವಿದ್ಯಾಭ್ಯಾಸಕ್ಕಾಗಿ ಉತ್ತಮವಾದ ವಿದ್ಯಾಕೇಂದ್ರವನ್ನು ಹುಡುಕುವಿರಿ. ಸಾಮಾಜಿಕ ಕಾರ್ಯದ ಬಗ್ಗೆ ಆಸಕ್ತಿ ಬರುವುದು. ಕಹಿ ಅನುಭವ, ಕಹಿ ಮಾತು ಇವುಗಳನ್ನು ಸಹಿಸಲಾಗದು. ವಿದ್ಯುತ್ ಉಪಕರಣಗಳಿಂದ ಹಣವು ಖರ್ಚಾಗಬಹುದು. ಉದ್ಯಮಿಗಳು ಹೊಸ ಸ್ಥಳದಲ್ಲಿ ವ್ಯವಹಾರ ಪ್ರಾರಂಭಿಸಲು ಹಣವನ್ನು ಪಡೆಯಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವುದು ಸಾಧ್ಯ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಶ್ರಮಕ್ಕೆ ಯೋಗ್ಯ ಫಲಿತಾಂಶ ಸಿಗದೇ ಇರಬಹುದು. ನಿಮ್ಮ ಚಾಣಾಕ್ಷದ ನಿರ್ಧಾರಗಳು ನಿಮ್ಮನ್ನು ಗುಂಪಿನಲ್ಲಿ ತೂಕದ ವ್ಯಕ್ತಿಯನ್ನಾಗಿಸುತ್ತದೆ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು.
ಸಿಂಹ ರಾಶಿ: ಕೂಡುವುದು ದುಃಖವನ್ನು ಕಳೆಯಲೆಂದು. ದುಃಖವನ್ನು ತಂದುಕೊಳ್ಳುವುದು ಬೇಡ. ನೀವು ಅಧಿಕಾರವನ್ನು ಅನ್ಯ ಕಾರಣಕ್ಕೆ ಬಳಸಿಕೊಂಡು ಸಿಕ್ಕಿಬೀಳುವಿರಿ. ಪ್ರಭಾವಿಗಳ ಸಹಾಯವನ್ನು ಉದ್ಯೋಗಕ್ಕೆ ಬಳಸಿಕೊಳ್ಳುವಿರಿ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗಲಿದೆ. ಗುರಿಗಳನ್ನು ಸಾಧಿಸಲು ನೀವು ಪ್ರೇರೇಪಿಸಲ್ಪಡುತ್ತೀರಿ. ಆಸ್ತಿಯನ್ನು ಖರೀದಿಸಲು ಇಂದು ಉತ್ತಮ ದಿನವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕೃಷಿ ಭೂಮಿ ವಿಸ್ತರಣೆಯನ್ನು ಮಾಡುವ ಕಾರ್ಯಕ್ಕೆ ಈಗ ಮುಂದಾಗುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿದೆ. ನಿಮ್ಮ ಮೇಲೆ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.
ಕನ್ಯಾ ರಾಶಿ: ಪಕ್ವತೆಯಿಂದ ವ್ಯವಹರಿಸಿ. ಮಿತಿ ಮೀರಿದ ಕಾರ್ಯಗಳಿಂದ ದೇಹ ಮನಸ್ಸಿಗೆ ಹೆಚ್ಚು ಆಯಾಸ. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ಕಾಲಕ್ಷೇಪಕ್ಕೆ ಯಾವುದಾದರೂ ಉತ್ತಮವರ ಸಂಗ ಸಿಗಲಿದೆ. ನಿಮಗೆ ಹೊಸ ಸುವರ್ಣ ಅವಕಾಶಗಳು ಸಿಗುತ್ತವೆ. ನಿಮ್ಮ ಕುಟುಂಬದಲ್ಲಿ ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ಉಳಿಯುತ್ತೀರಿ. ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಉದ್ವೇಗಕ್ಕೆ ಸಿಲುಕುವಿರಿ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಬೇಸರಿಸದೇ ನೀವೇ ಮಾತನಾಡಿಸಿ.
ತುಲಾ ರಾಶಿ: ಸಾಂಸಾರಿಕ ಬಿಕ್ಕಟ್ಟಿಗೆ ಮತ್ತೊಂದು ದಾರಿ ಮಾಡಿಕೊಬೇಡಿ. ಇಂದು ಬೇಕೆಂದೇ ಹಿತತ್ರುಗಳು ನಿಮ್ಮ ಸಂಪತ್ತನ್ನು ಕೇಳುವರು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲವನ್ನು ಮಾಡಬೇಕಾಗುವುದು. ತಪ್ಪಿಸಿಕೊಳ್ಳಲು ಅಸತ್ಯವನ್ನು ಹೇಳಬೇಕಾಗುವುದು. ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ನೀವು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಕೆಲವರು ಸಾಲದಿಂದ ಮುಕ್ತರಾಗುತ್ತಾರೆ. ವ್ಯವಹಾರ ಪರಿಸ್ಥಿತಿ ಬಲವಾಗಿರುತ್ತದೆ. ಇಲ್ಲದಿದ್ದರೆ ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರಬಹುದು. ಮಾರಾಟದಲ್ಲಿ ಚುರುಕುತನ ಅವಶ್ಯಕ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಆರೋಗ್ಯದ ಏರಿಳಿತವನ್ನು ಯಾರ ಬಳಿಯಾದರೂ ಹೇಳಿ.
ವೃಶ್ಚಿಕ ರಾಶಿ: ಗಂಭೀರ ವಿಚಾರವನ್ನು ಲಘುವಾಗಿ ಕಾಣುವಿರಿ. ಇಂದು ನೀವು ಸಿಟ್ಟಿನಿಂದ ಸನ್ನಿವೇಶ ಕೈ ಮೀರದಂತೆ ನೋಡಿಕೊಳ್ಳಿ. ಕಲಾವಿದರಿಗೆ ಗಲಿಬಿಲಿಯ ಸಂದರ್ಭ ಬರಬಹುದು. ದೈನಂದಿನ ಸಂಪಾದನೆಯನ್ನು ಮಾಡುವವರಿಗೆ ಕಷ್ಟವಾಗುವುದು. ಜೀವನದಲ್ಲಿ ಎಲ್ಲಾ ಕೆಲಸಗಳ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ಲಾಭಕ್ಕಾಗಿ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ವೃತ್ತಿ ಅಡೆತಡೆಗಳು ದೂರವಾಗುತ್ತವೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಇಂದು ಸೇವಿಸುವ ಆಹಾರದಿಂದ ಅನಾರೋಗ್ಯ ಉಂಟಾಗಬಹುದು. ವ್ಯವಹಾರವನ್ನು ವ್ಯವಹಾರವಾಗಿಯೇ ಮಾಡಿ. ಆಗ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬಂದೀತು. ಹೂಡಿಕೆಯು ದ್ವಿಗುಣವಾಗಬಹುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ನೌಕರರು ನಿಮ್ಮಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ.
ಧನು ರಾಶಿ: ಬಹಳ ದಿನಗಳ ಅನಂತರ ಬಾಂಧವರ ಸಮಾಗಮವಾಗಲಿದೆ. ಉಡುಗೊರೆಯಾಗಿ ಸಿಕ್ಕಿದ ಹೊಸ ವಸ್ತುಗಳ ಮೇಲೆ ಪ್ರೀತಿ ಹೆಚ್ಚು. ಬಹಳ ಜತನದಿಂದ ನೋಡಿಕೊಳ್ಳುವಿರಿ. ವಿವಾಹವು ವಿಳಂಬವೆಂದು ಅನ್ನಿಸಬಹುದು. ಚಿಂತೆಗೆ ಅವಕಾಶ ಕೊಡದೇ ಗುರಿಯ ಕಡೆ ಗಮನವಿರಲಿ. ಜೀವನದಲ್ಲಿ ಎಲ್ಲಾ ಕೆಲಸಗಳ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ಲಾಭಕ್ಕಾಗಿ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ವೃತ್ತಿ ಅಡೆತಡೆಗಳು ದೂರವಾಗುತ್ತವೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಕೆಲಸಗಾರರ ಜೊತೆ ಅತಿ ಕೋಪ ಬೇಡ. ಹುಸಿ ಮುನಿಸಲ್ಲೇ ಕಾರ್ಯವನ್ನು ಮಾಡಿಸಿ. ಹಿತವಚನದಿಂದ ಕೆಲಸವನ್ನು ಮಾಡಿಕೊಳ್ಳಿ. ಇಂದಿನ ಆರ್ಥಿಕಲಾಭವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಬಹುದು. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ವಯಸ್ಕರಿಗೆ ವಿವಾಹ ಸಂಬಂಧವು ಒದಗಿ ಬರಬಹುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಪ್ರೇಮ ವಿವಾಹವು ನಿಮಗೆ ಖುಷಿಕೊಡದು.
ಮಕರ ರಾಶಿ: ವೃತ್ತಿಯಲ್ಲಿ ಭರವಸೆಯ ಬೆಳಕು ಕಾಣಿಸುವುದು. ಇಂದು ಕಾನೂನಾತ್ಮಕ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರುವಿರಿ. ನಿಮ್ಮ ಸಕಾರಾತ್ಮಕತೆಯು ಹೆಚ್ಚು ಬಲವುಳ್ಳದ್ದಾಗಲಿದೆ. ಆಗಾಗ ಕಾಣಿಸಿಕೊಳ್ಳುವ ನೋವುಗಳು ನಿಮ್ಮನ್ನು ಪೀಡಿಸಿ ಮಾನಸಿಕವಾಗಿ ಕುಗ್ಗುಸುವುದು. ಕಚೇರಿಯಲ್ಲಿ ಪ್ರಮುಖ ಕೆಲಸದ ಜವಾಬ್ದಾರಿ ಸಿಗಬಹುದು. ಮನೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭ ಇರುತ್ತದೆ. ತಾಯಿಯ ಆಶೀರ್ವಾದವನ್ನು ಪಡೆದು ಶುಭಕಾರ್ಯಕ್ಕೆ ಮನೆಯಿಂದ ಹೊರಡಿ. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದಲೇ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು. ಮಕ್ಕಳ ಏಳಿಗೆಯು ಮಂದಗತಿಯಲ್ಲಿ ಇರಲಿದೆ. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರನ್ನು ಅನುಸರಿಸುವ ಅವಶ್ಯಕತೆ ಇಲ್ಲ.
ಕುಂಭ ರಾಶಿ: ಹೊಸ ದಿರಿಸಿನಿಂದ ಸುಂದರವಾಗಿ ಶೋಭಿಸುವಿರಿ. ನಿಮ್ಮ ಪಾಲುದಾರಿಕೆಯಲ್ಲಿ ಹೊಂದಾಣಿಕೆ ಕಷ್ಟವಾದೀತು. ಯಾವುದಾದರೂ ರೀತಿಯಲ್ಲಿ ಸರಿಮಾಡಿಕೊಳ್ಳಿ. ಮನೆಯಿಂದ ದೂರದಲ್ಲಿ ವಾಸಿಸುವ ನೀವು ಇಂದು ಪೋಷಕರಿಗೆ ಖುಷಿಯಾಗುವುದು. ಕಚೇರಿಯಲ್ಲಿ ಪ್ರಮುಖ ಕೆಲಸದ ಜವಾಬ್ದಾರಿ ಸಿಗಬಹುದು. ಮನೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭ ಇರುತ್ತದೆ. ನಿಮಗಾಗದವರನ್ನು ನಿಂದಿಸಿ ಅವರಿಂದ ಅಪಮಾನಕ್ಕೆ ಒಳಗಾಗುವಿರಿ. ಆರ್ಥಿಕವಾಗಿ ಸ್ಥಿರತೆ ಇದ್ಷರೂ ಚರ್ಚನ್ನು ನಿಭಾಯಿಸುವ ಚಾಣಾಕ್ಷತನ ಬೇಕಿದೆ. ನಿಮ್ಮ ವ್ಯಕ್ತಿತ್ವಕ್ಕೆ ಸರಿಸಾಟಿಯಾದ ವ್ಯಕ್ತಿಯ ಗೆಳೆತನವಾಗಲಿದೆ. ಅಹಂಕಾರ ಪಡದೇ ಅವಶ್ಯಕತೆ ಇರುವಲ್ಲಿ ವಿನೀತತೆ ಇರಲಿ. ಅನ್ಯರ ತಪ್ಪಿನಿಂದ ಅಪಘಾತವು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಏನನ್ನಾದರೂ ಮಾಡಬೇಕು ಎಂಬ ಮಹತ್ತರವಾದ ಯೋಜನೆಯನ್ನು ಮುಂದೂಡುವಿರಿ.
ಮೀನ ರಾಶಿ: ವಿಪುಲವಾದ ಪ್ರಯತ್ನವೂ ವಿಫಲವಾಗಬಹುದು. ಇಂದು ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನವನ್ನು ಮೆಚ್ಚುವರು. ಹಣವನ್ನು ಉಳಿಸಲು ಯತ್ನದಲ್ಲಿ ಸೋಲಾಗುವುದು. ಪ್ರತಿಯೊಂದು ಕೆಲಸದ ಅಪೇಕ್ಷಿತ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ವ್ಯವಹಾರವು ವಿಸ್ತರಿಸುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಸಾಧ್ಯತೆಗಳಿವೆ. ನೀವೇ ವಿವಿಧ ಮೂಲಗಲಕಿಂದ ಮಾಹಿತಿಯನ್ನು ಒಡೆದು ಸರಿಮಾಡಿಕೊಳ್ಳಿ. ಪತಿ, ಪತ್ನಿಯರು ಅನ್ಯೋನ್ಯತೆಗೆ ದೃಷ್ಟಿ ಬೀಳಬಹುದು. ಮುಖದಲ್ಲಿ ಮಂದಹಾಸವಿರಲಿ. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.
-ಲೋಹಿತ ಹೆಬ್ಬಾರ್ – 8762924271 (what’s app only)




