Horoscope Today 18 December 2024: ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

18 ಡಿಸೆಂಬರ್​​ 2024 ದಿನ ಭವಿಷ್ಯ: ಈ ಲೇಖನವು ಶಾಲಿವಾಹನ ಶಕೆ 1947ರ ನಿತ್ಯ ಪಂಚಾಂಗದ ವಿವರಗಳನ್ನು ಮತ್ತು 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿ ರಾಶಿಯವರ ಆರ್ಥಿಕ, ವೃತ್ತಿಪರ, ಆರೋಗ್ಯ ಮತ್ತು ಕುಟುಂಬ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಈ ಲೇಖನ ಜ್ಯೋತಿಷ್ಯದಲ್ಲಿ ಆಸಕ್ತಿ ಹೊಂದಿರುವವರಿಗೆ ಉಪಯುಕ್ತವಾಗಲಿದೆ.

Horoscope Today 18 December 2024: ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Dec 18, 2024 | 1:31 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತೃತೀಯಾ​​, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಐಂದ್ರ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 13:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:17 ರಿಂದ 09:41 ರವರೆಗೆ, ಗುಳಿಕ ಕಾಲ ಬೆಳಗ್ಗೆ 11:05 ರಿಂದ ಮಧ್ಯಾಹ್ನ 12:30ರ ವರೆಗೆ.

ಮೇಷ ರಾಶಿ :ಅಪಾಯದ ಮನಸ್ಸೂಚನೆ ನಿಮಗೆ ಸಿಗಲಿದೆ. ಗಟ್ಟಿಯಾದ ನಿಮ್ಮ ಮನಸ್ಸು ಇಂದು ಕರಗುವ ಸಂದರ್ಭವು ಬರುವುದು.‌ ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಕಟುವಾಗಿ ತಿರಸ್ಕರಿಸದೇ ಮೆಲ್ಲನೆ ಮಾತನಾಡಿ. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಗಾವಣೆಯ ಭೀತಿ ಕಾಡಲಿದೆ. ಮನೋರಂಜನೆಯ ಬಗ್ಗೆ ಆಸಕ್ತಿ ಕೆದರುವುದು. ನಿಮ್ಮ ಇತರ ಚಟುವಟಿಕೆಗಳು ಬೆಳಕಿಗೆ ಬರಬಹುದು. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ದಂಪತಿಗಳ ನಡುವೆ ಪ್ರೀತಿಯು ಹೆಚ್ಚಾಗುವುದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ.

ವೃಷಭ ರಾಶಿ :ಉದ್ಯೋಗಕ್ಕಾಗಿ ಅನೇಕ ಕರೆಗಳು ಬಂದು ನಿಮಗೆ ಕಿರಿಕಿರಿ ಮಾಡಬಹುದು. ಏನಾದರೂ ಹೊಸ ಉತ್ಪನ್ನಗಳನ್ನು ನಿರ್ಮಾಣ‌ಮಾಡುವ ಆಸೆ ಬರುವುದು. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ಮೊದಲು ಪ್ರಯಾಣವು ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು. ಭೂಮಿಯಲ್ಲಿ ನಿಮಗೆ ಅಕಸ್ಮಾತ್ ಅಮೂಲ್ಯ ವಸ್ತು ಸಿಗಬಹುದು. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವ ಕಾರಣ ಮೌನವಾಗಿರುವಿರಿ. ಸಂಗಾತಿಯ ಮಾತುಗಳಿಗೆ ಸಿಟ್ಟಾಗುವುದು ಬೇಡ. ತಕ್ಷಣದ ಪ್ರತಿಕ್ರಿಯೆಯೂ ಬೇಡ. ಸಮಯದ ಸದುಪಯೋಗವಾಗುವಂತೆ ನೋಡಿಕೊಳ್ಳಿ. ಬೇಕಾದಾಗ ಬಳಸಿಕೊಳ್ಳುವ ಸಂಬಂಧದಿಂದ ದೂರವಿರುವಿರಿ.

ಮಿಥುನ ರಾಶಿ :ಅಲ್ಪ ಹಣವಾದರೂ ಕೈ ಸೇರಿದರೆ ಖುಷಿಪಡಿ. ಪುರುಷರ ಜೊತೆ ಸಹೋದರ ಭಾವವನ್ನು ಇಟ್ಟುಕೊಂಡು ವರ್ತಿಸುವಿರಿ. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ಕುಂಟುವ ಕಾರ್ಯದಿಂದ ಬೇಸರವಾಗಬಹುದು. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಇನ್ನೊಬ್ಬರ ದೋಷವನ್ನೇ ಗುರುತಿಸುವ ಸ್ವಭಾವವು ಬೇಡ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವಾಗುವುದು. ಸಮಾರಂಭಗಳಿಗೆ ಹೋಗುವ ಅವಕಾಶವು ಸಿಗುವುದು. ಎಲ್ಲ ಕಾರ್ಯಗಳನ್ನು ಭಯದಿಂದ ಮಾಡುವಿರಿ.

ಕರ್ಕಾಟಕ ರಾಶಿ :ಯಾರಮೇಲಾದರೂ ಒಡೆತನ ಇಟ್ಟುಕೊಳ್ಳುವ ಹಂಬಲವಿರುವುದು. ಆಕಸ್ಮಿಕ ತೊಂದರೆಗಳನ್ನು ಎದುರಿಸುವ ಎದೆಗಾರಿಕೆ ಬೇಕು. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಧಾರ್ಮಿಕ ಆಸಕ್ತಿಯು ಇಂದು ಅಧಿಕವಾಗಿ ಇದ್ದು ಹೆಚ್ಚಿನ ಸಮಯವನ್ನು ದೇವರ ಸನ್ನಿಧಿಯಲ್ಲಿ ಕಳೆಯುವಿರಿ. ಮಿತ್ರರ ಕಾರಣದಿಂದ ನಿಮ್ಮ ಸಮಯವು ವ್ಯರ್ಥವಾಗಬಹುದು. ರಾಜಕೀಯದಲ್ಲಿ ಚಾಣಾಕ್ಷತನದಿಂದ ಎಲ್ಲವು ನಿಭಾಯಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ಸಂಗಾತಿಯ ಜೊತೆ ಖರೀದಿಗೆ ಹೋಗಬೇಕಾಗುವುದು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ.

ಸಿಂಹ ರಾಶಿ :ಸಿಟ್ಟನ್ನು ನಿಮ್ಮ ಕೈಗೆ ತೆಗೆದುಕೊಳ್ಳಬಹುದು. ಇಂದಿನ ದಿನವನ್ನು ಒಳ್ಳೆಯ ದಿನವನ್ನಾಗಿ ಮಾಡಿಕೊಳ್ಳಬಹುದು. ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುತ್ತ ಇರುವುದು ಬೇಡ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ಸಣ್ಣ ವಿಚಾರಕ್ಕೆ ಕೋಪಗೊಳ್ಳುವಿರಿ. ವೈವಾಹಿಕ ಜೀವನವನ್ನು ಅನಂದಿಸುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರುವಿರಿ. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು. ಉದ್ಯೋಗಕ್ಕಾಗಿ ಖಾಸಗಿ ಸಂಸ್ಥೆಯನ್ನು ಅಲೆಯಬೇಕಾಗುವುದು. ನಿಮ್ಮ ಇಂದಿನ ವರ್ತನೆಯು ಅಸಹಜದಂತೆ ತೋರುವುದು. ಸಕಾರಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳುವುದು ಉತ್ತಮ. ನಿಮ್ಮ ಮನಸ್ಸು ಇಂದು ನಿಮ್ಮನ್ನು ಒಂದೆಡೆ ಕುಳಿತುಕೊಳ್ಳಲು ಬಿಡದು.

ಕನ್ಯಾ ರಾಶಿ :ಸುಂದರೀಕರಣದಲ್ಲಿ ಸಹಭಾಗಿತ್ವವನ್ನು ಕೊಡುವಿರಿ. ಸಕಾರಾತ್ಮಕ ಯೋಚನೆಯೇ ಬಂಧನವನ್ನು ಗಟ್ಟಿಯಾಗಿಸುವುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಅಭಿಮಾನಿಗಳ ಬಗ್ಗೆ ಸದಭಿಪ್ರಾಯವಿದ್ದರೂ ಪ್ರಕಟಿಸಲಾರಿರಿ. ಕಛೇರಿಯಲ್ಲಿ ಕೆಲಸವು ತುರ್ತು ಸಭೆಗಳ ಕಾರಣ ಹಿಂದುಳಿಯುವುದು. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಿಕೊಳ್ಳಬಹುದು. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು. ಸ್ತ್ರೀಯರ ಜೊತೆ ಇಂದು ನಿಮ್ಮ ವ್ಯವಹಾರವು ಬೇಡ. ಮೇಲಧಿಕಾರಿಗಳಿಂದ ನಿಮಗೆ ಕಿರಿಕಿರಿ ಆಗುವ ಸಾಧ್ಯತೆ ಇದೆ. ಸರ್ಕಾರದ ಕಾರ್ಯದಲ್ಲಿ ಹಿನ್ನಡೆ ಅಧಿಕವಾಗಿ ಕಾಣಿಸುವುದು. ಪ್ರಭಾವೀ ವ್ಯಕ್ತಿಗಳನ್ನು ನೀವು ಬಳಸಿಕೊಳ್ಳುವಿರಿ. ವಾಹನ ಖರೀದಿಯಿಂದ ನಿಮಗೆ ಚಿಂತೆ ಆರಂಭವಾಗುವುದು.

ತುಲಾ ರಾಶಿ :ಇಂದು ನೀವು ಯಾರಿಗಾದರೂ ಸಮಾನವಾಗಿ ನಿಲ್ಲುತ್ತೇನೆ ಎಂಬ ನಿಲುವು ಬೇಡ. ನಿಮ್ಮ ಸಹಾಯವು ಕೆಲವರ‌ ಸಂತೋಷಕ್ಕೆ ಕಾರಣವಾಗುವುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ಸಂಗಾತಿಯಿಂದ ಪ್ರತಿಜ್ಞೆ ಭಂಗವಾಗಬಹುದು. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಆಸ್ತಿಯ ವಿಚಾರದಲ್ಲಿ ಜಗಳವು ತಾರಕಕ್ಕೆ ಹೋಗಬಹುದು. ನಿಮಗೆ ಗೊತ್ತಿಲ್ಲದ ಕಾರ್ಯವನ್ನು ಕಛೇರಿಯಲ್ಲಿ ನಿಭಾಯಿಸಬೇಕಾಗುವುದು. ಮನೋರಂಜನೆಯ ಕೊರತೆಯು ಅಧಿಕವಾಗಿ ಕಾಡುವುದು. ವಿರಾಮವನ್ನು ತೆಗದುಕೊಳ್ಳುವ ಮನಸ್ಸಾದೀತು. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಪ್ರಿಯವಾದ ವಸ್ತುವನ್ನು ಪಡೆಯಲು ಹಣದ ಅಭಾವವಿರುವುದು.

ವೃಶ್ಚಿಕ ರಾಶಿ :ಯಾರಾದರೂ ನಿಮ್ಮನ್ನು ತಪ್ಪಾಗಿ ಗ್ರಹಿಸಿ ಅಪವಾದ ಹೇಳಬಹುದು. ಒಳ್ಳೆಯ ಕಾರ್ಯಗಳು ನಿಮ್ಮನ್ನು ಕಾಪಾಡಬಹುದು. ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಉತ್ಸಾಹವನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸ್ವಲ್ಪ ಹೊಸ ವಾತಾವರಣವನ್ನು ಕಾಣುವಿರಿ. ಜವಾಬ್ದಾರಿಯ ಕಾರಣಕ್ಕೆ ನಿಮ್ಮ ವರ್ತನೆಯಲ್ಲಿ ಭಿನ್ನತೆ ಕಾಣುವುದು. ನಿಮಗೆ ಬರಬೇಕಾದ ಹಣವನ್ನು ಬೇರೆಯವರ ಮೂಲಕ ತೀರಿಸಿಕೊಳ್ಳುವಿರಿ. ನಿಮ್ಮ ನೌಕರರ ಬಗ್ಗೆ ನಿಮಗೆ ಸಮಾಧಾನ ಇರಲಿದೆ. ಕಾರ್ಯಗಳಿಗೆ ನಿಗದಿತ ಸಮಯವನ್ನು ಇಟ್ಟುಕೊಳ್ಳುವುದು ಮುಖ್ಯ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ಕೊಡಲಿದ್ದೀರಿ. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರಬೇಕಾಗುವುದು.

ಧನು ರಾಶಿ :ಹಣವನ್ನು ನಿಮ್ಮ ಕೈಯಲ್ಲಿ ಇರಿಸಿಕೊಳ್ಳುವುದು ಬೇಡ. ಹೇಗಾದರೂ ಖರ್ಚಾಗಬಹುದು. ಹಿರಿತನವನ್ನು ಉಳಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯವಾಗಿರಲಿ. ಮನೆಯಲ್ಲಿ ಬದಲಾಯಿಸುವ ಸಂದರ್ಭವು ಬರಬಹುದು. ದೈಹಿಕ ಶ್ರಮವನ್ನು ನೀವು ಹೆಚ್ಚು ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಭಾವವು ತೋರುವುದು. ಕೋಪದಲ್ಲಿ ಹಿಡಿತವನ್ನು ಕಳೆದುಕೊಂಡು ಏನನ್ನಾದರೂ ಹೇಳಿಬಿಡುವಿರಿ.

ಮಕರ ರಾಶಿ :ನಿಮ್ಮಿಂದ ತಪ್ಪಾದರೆ ಮತ್ತೆಲ್ಲರೂ ಅದನ್ನೇ ಅನುಸರಿಸುವರು. ಇಂದಿನ ನಿಮ್ಮ‌ ತೀರ್ಮಾನವು ಯೋಗ್ಯವಾಗಿ ಇರುವುದು. ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಹೊಸ ಕಾರ್ಯಗಳ ಆರಂಭಕ್ಕೆ ಅನೇಕರ ಸಲಹೆ ಪಡೆಯುವಿರಿ. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ. ನಿಮ್ಮ ಗುರಿಯನ್ನು ಬದಲಿಸುವುದು ಬೇಡ. ಸಮಯವನ್ನು ಹೆಚ್ಚು ತೆಗೆದುಕೊಳ್ಳಿ. ಪ್ರಾಮಾಣಿಕತೆಗೆ ಪ್ರಶಂಸೆಯು ಎಲ್ಲರಿಂದ‌ ಸಿಗುವುದು. ಸಂಗಾತಿಯ ಬಣ್ಣದ ಮಾತಿಗೆ ಮರುಳಾಗಬಹುದು.

ಕುಂಭ ರಾಶಿ :ದೇಹವು ಉತ್ಸಾಹದ ಕಾರ್ಯಕ್ಕೆ ಮುಂದಾಗದು. ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಇಂದು ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ನಿಮಗೆ ವಹಿಸಿದ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಾಗಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತೆ ಪಡುವುದು ಬೇಡ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಕಾರಣಾಂತರಗಳಿಂದ ಬೇರೆ ಕಡೆ ವಾಸ ಮಾಡುವ ಸಂದರ್ಭವು ಬರಬಹುದು. ಮಾತಿನಲ್ಲಿ ಅಂತಸ್ಸಾರವಿರದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ‌ ಇರಲಿದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಇಚ್ಛೆಯು ಜಾಗರೂಕವಾಗಲಿದೆ. ನಿಮ್ಮ ಬಗ್ಗೆ ಮಾತನಾಡುವವರನ್ನು ನೀವು ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ಕರ್ತವ್ಯದ ದೃಷ್ಟಿಯಿಂದ ನೀವು ಕೆಲಸವನ್ನು ಮಾಡುವಿರಿ.

ಮೀನ ರಾಶಿ :ಕೆಲವನ್ನು ಸಹಿಸಿಕೊಳ್ಳುವುದೊಂದೇ ಮಾರ್ಗವಾಗಬಹುದು. ನಿಮ್ಮ ದಕ್ಷತೆಗೆ ಗೌರವ ಸಿಗಲಿದೆ. ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ನಿಮ್ಮ ಪ್ರಾಮುಖ್ಯ ಕಡಿಮೆಯಾಗಿದ್ದು ಅರಿಯಬಹುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ಹಳೆಯ ಘಟನೆಗಳು ನಿಮಗೆ ಮತ್ತೆ ಮತ್ತೆ ಪ್ರಚೋದನೆಯನ್ನು ಕೊಡುವುವು. ನಿಮ್ಮ ಮನೋಬಲವನ್ನು ಕುಗ್ಗಿಸುಲು ಸಹೋದ್ಯೋಗಿಗಳ ಪ್ರಯತ್ನ‌ ಇರಲಿದೆ. ನಿಮ್ಮ ಬಗ್ಗೆ‌ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಉನ್ನತ ಹುದ್ದೆಗೆ ಅವಕಾಶವು ಸಿಗಲಿದ್ದು ಸ್ಥಳ ಬದಲಾವಣೆಯ ಚಿಂತೆ‌ ಕಾಡಬಹುದು. ಇಂದು ನಿಮಗೆ ಪರ ಊರಿನಲ್ಲಿ ಇಂದು ವಾಸವಾಗುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಪವಿತ್ರಾ ಬದುಕಲ್ಲಿ ನಾನಿಲ್ಲ, ನನ್ನ ಬದುಕಲ್ಲಿ ಅವರಿದ್ದಾರೆ: ಸಂಜಯ ಸಿಂಗ್
ಪವಿತ್ರಾ ಬದುಕಲ್ಲಿ ನಾನಿಲ್ಲ, ನನ್ನ ಬದುಕಲ್ಲಿ ಅವರಿದ್ದಾರೆ: ಸಂಜಯ ಸಿಂಗ್
ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ
ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ