Daily Horoscope 21 November 2024:ಗುರುವಾರದ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?

Daily Horoscope 20 November 2024: ನವೆಂಬರ್ 21, 2024ರ ಗುರುವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 21 November 2024:ಗುರುವಾರದ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Nov 21, 2024 | 1:36 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಶುಕ್ಲ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 13:44 ರಿಂದ 15:09ರವರೆಗೆ, ಯಮಘಂಡ ಕಾಲ ಬೆಳಗ್ಗೆ 06:38 ರಿಂದ ಬೆಳಗ್ಗೆ 08:03ರವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ ಬೆಳಗ್ಗೆ 10:53 ರವರೆಗೆ.

ಮೇಷ ರಾಶಿ :ಹೆಚ್ಚು ನಿರೀಕ್ಷೆಯನ್ನು ಬಂಧುಗಳಿಂದ ಮಾಡುವುದು ಬೇಡ. ಇಂದು ನೀವು ಸಂಗಾತಿಯ ವಿಚಾರಕ್ಕೆ ಖರ್ಚು ಮಾಡಬೇಕಾಗುವುದು. ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ಆಸೆಯನ್ನು ಈಡೇರಿಸಿಕೊಂಡು ಸಂತೋಷಪಡುವಿರಿ. ದಾನದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವಿರಿ. ನಿಮ್ಮ ಬಗ್ಗೆ ಒಳ್ಳೆಯ ಭಾವವು ಬರಬಹುದು. ಸಂಗಾತಿಯ ಇಂದಿನ ಮಾತುಕತೆಗಳು ವಾಗ್ವಾದಕ್ಕೆ ತಿರುಗಬಹುದು. ಕಷ್ಟದ ಮೆಲುಕು ಹಾಕುವ ಸಂದರ್ಭ ಬರಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಬಹಳ‌ ದಿನಗಳ ಸ್ನೇಹಿತರ ಜೊತೆ ಪ್ರಯಾಣ ಸಾಧ್ಯ. ಗೊಂದಲದಿಂಸ ತೀರ್ಮಾನ ಮಾಡುವುದು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಆರಂಭವೇ ಸರಿಯಾಗದೇ ಇರುವುದರಿಂದ ಗುರಿಯೂ ತಪ್ಪಬಹುದು. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರುವುದು. ನೀವು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಇಂದು ಆಗದು.

ವೃಷಭ ರಾಶಿ :ಒಟ್ಟಾಗಿ ಇದ್ದರೆ ಮಾತ್ರ ಕಾರ್ಯವನ್ನು ಸಾಧಿಸಲು ಸಾಧ್ಯ. ನಿಮ್ಮ ಯಶಸ್ಸಿಗೆ ಯಾರಾದರೂ ಕಪ್ಪುಚುಕ್ಕೆ ಇಡಬಹುದು. ಇಂದು ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡುವ ಸಂದರ್ಭವು ಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ಪುಣ್ಯಸ್ಥಳಗಳ ಭೇಟಿ ಮಾಡವಿರಿ. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಇಂದಿನ‌ ದುಡಿಮೆ ಇಂದಿಗಾದೀತು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು. ಆಸ್ತಿಯನ್ನು ಮಾರಾಟ‌ ಮಾಡಲು ಇಚ್ಛೆ ಇರುವುದು. ಕೆಲವು ಪೆಟ್ಟುಗಳು ನಿಮ್ಮನ್ನು ರೂಪಿಸುವುದು.

ಮಿಥುನ ರಾಶಿ :ನಿಮ್ಮ‌ ಯೋಚನೆಗೆ ತಕ್ಕ ಫಲ ಸಿಗುವುದು. ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗವುದು. ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ಆರ್ಥಿಕದಿಂದ ನೀವು ಬಲವಾಗುವಿರಿ. ಧನವು ನಷ್ಟವಾದ ಕಾರಣ ಹತಾಶೆಯು ನಿಮ್ಮಲ್ಲಿ ಬರಬಹುದು. ಬೇಡವೆಂದರೂ ನಿಮಗೆ ಧನಸಹಾಯ ಬರುವುದು. ವ್ಯವಹಾರದಲ್ಲಿ ಪಾರದರ್ಶಕತೆ ಕಾಣಿಸುವುದು. ಸಹೋದರಿಗೆ ಉಡುಗೊರೆ ನೀಡಿ ಖುಷಿಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಗೊಂದಲು ಇರಲಿದೆ. ಇಂದು ಎಲ್ಲರಿಂದ ಪ್ರತ್ಯೇಕವಾಗಿ ಇರಲು ಇಷ್ಟಪಡುವಿರಿ. ಸಂಗಾತಿಯ ಮನೋಭಾವಕ್ಕೆ ವಿರುದ್ಧವಗಿರುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಿಂದ ತಿಳಿದು ಖುಷಿಯಾಗುವುದು. ರಾಜಕೀಯದಲ್ಲಿ ಮುಂದುವರಿಯುವುದು ಕಷ್ಟವೆನಿಸಬಹುದು. ಪರಿಚಿತರು ನಿಮ್ಮಿಂದ ಆಗುವ ಕೆಲಸವನ್ನು ಬೆಂಬಿಡದೇ ಮಾಡಿಸಿಕೊಳ್ಳುವರು.

ಕರ್ಕಾಟಕ ರಾಶಿ :ಸುಪ್ತಾವಸ್ಥೆಯಲ್ಲಿ ಇರುವ ನಿಮ್ಮ ಕಾರ್ಯಕ್ಕೆ ಜಾಗರೂಕತೆ ಉಂಟಾದೀತು. ಸರ್ಕಾರಕ್ಕೆ ಕೊಡಬೇಕಾದ ಹಣವನ್ನು ಇಂದು ಕೊಡಲಿದ್ದೀರಿ. ಪ್ರಭಾವೀ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭವು ಬರಬಹುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಹಿಂದೇಟು ಹಾಕುವಿರಿ. ನೀವು ಯಾರಿಗೋ ಗುರಿಯಿಟ್ಟು ಬಿಟ್ಟ ಬಾಣ ಮತ್ಯಾರನ್ನೋ ತಲುಪಬಹುದು. ನಟರ ನಿರೀಕ್ಷೆಯು ಸತ್ಯವಾಗುವುದು. ಸಂಬಂಧಗಳ ನಡುವೆ ಪರಸ್ಪರ ಸೌಹಾರ್ದವು ಇರಲಿದೆ. ಸಾಹಸಕ್ಕೆ ಕಾರ್ಯಕ್ಕೆ ಹೋದಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಮಾರ್ಗವನ್ನು ಬದಲಾಯಿಸುವುದು. ಮಕ್ಕಳ ಮೇಲೆ ನಿಮ್ಮ ಅನುಕಂಪವು ಹೆಚ್ಚಾಗುವುದು. ಖಾಲಿಯಾದರೆ ಮಾತ್ರ ತುಂಬಲು ಸಾಧ್ಯ.

ಸಿಂಹ ರಾಶಿ :ಖದೀರಿ ಮಾಡಿದ ನಿವೇಶನವನ್ನು ಹೊಂದಾಣಿಕೆಯ ಕೊರತೆಯಿಂದ ಮಾರಾಟ ಮಾಡುವಿರಿ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಬರುವ ಪ್ರಶಂಸೆಯ ಮಾತನ್ನು ಅಲ್ಲಗಳೆಯುವಿರಿ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯ ಉಂಟಾದೀತು. ಬರಬೇಕಾದ ಹಣವನ್ನು ಪಡೆದರೂ ಖರ್ಚಿಗೆ ದಾರಿ ತೆರೆದುಕೊಂಡು ಇರುವುದು. ಆಸ್ತಿಯ ಕಲಹವನ್ನು ಮನೆಯಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ. ಕಲಾವಿದರಿಗೆ ಅವಕಾಶವು ಬರುವುದು. ವಿದೇಶದ ವ್ಯವಹಾರಕ್ಕೆ ಮತ್ತಷ್ಟು ಬಲ ಬರಬಹುದು. ಉನ್ನತ ಸ್ಥಾನವು ನಿಮ್ಮನ್ನು ಕರೆಯಬಹುದು. ಗೃಹನಿರ್ಮಾಣದ ರೂಪವನ್ನು ನಿರ್ಧರಿಸಿಕೊಳ್ಳುವಿರಿ. ಸಮಯೋಚಿತ ಪ್ರಜ್ಞೆಯಿಂದ ಆಪತ್ತಿನ್ನು ದೂರಮಾಡಿಕೊಳ್ಳುವಿರಿ. ಪ್ರಯಾಣಕ್ಕೆ ಮನಸ್ಸು ಇರದು. ಯಾರದ್ದಾದರೂ ಪ್ರಭಾವವನ್ನು ಬಳಸಿಕೊಂಡು ಅಧಿಕಾರವನ್ನು ಪಡೆಯುವಿರಿ.

ಕನ್ಯಾ ರಾಶಿ :ಎತ್ತರದ ಮಾತು ನಿಮ್ಮ ವ್ಯಕ್ತಿತ್ವವನ್ನೂ ಎತ್ತರಿಸುವುದು. ಇಂದು ಇನ್ನೊಬ್ಬರಿಗೆ ಬರುವ ಧನಕ್ಕೆ ಸಹಾಯ ಮಾಡುವಿರಿ. ನಿಮ್ಮ ಅಪರೂಪದ ವಸ್ತುವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ಯಾರಾದರೂ ಅಂದುಕೊಂಡಾರು ಎನ್ನುವ ಹಿಂಜರಿಕೆಯು ಇರಲಿದೆ‌. ವಿದೇಶದ ಹೂಡಿಕೆಗೆ ಗಟ್ಟಿಯಾದ ಮನಸ್ಸು ಮಾಡುವಿರಿ. ಸಂಗಾತಿಯ ಮಾತಿನಿಂದ ಬೇಸರವಾಗಲಿದೆ. ಸಮಯ ಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ವೃತ್ತಿಯನ್ನು ಉತ್ಸಾಹದಿಂದ ಮಾಡುವಿರಿ. ಸಂಗಾತಿಯು ನಿಮಗೆ ಕೆಲವು ಉಪಯುಕ್ತ ಮಾತುಗಳನ್ನು ಹೇಳಬಹುದು. ಒತ್ತಡವನ್ನು ನಿವಾರಿಸಿಕೊಳ್ಳಲು ಕೆಲವು ವಿಧಾನಗಳು ಇರಲಿದೆ. ಹಳೆಯ ವಾಹನವನ್ನು ಮಾರಾಟ ಮಾಡುವಿರಿ. ಸಂಬಂಧವು ಇಂದು ಉಪಯೋಗಕ್ಕೆ ಬರುವುದು. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು. ವಂಚನೆಯಿಂದ ಸಣ್ಣ ಅಂತರದಲ್ಲಿ ತಪ್ಪಿಸಿಕೊಳ್ಳುವಿರಿ.

ತುಲಾ ರಾಶಿ :ಉದ್ಯೋಗದಲ್ಲಿ ಕೆಲವು ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ನೀವು ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ಶತ್ರುಗಳ ಹುಡುಕಾಟದಲ್ಲಿ ಸಫಲರಾಗುವುದಿಲ್ಲ. ಕೆತ್ತನೆಯ ಕಲಾವಿದರಿಗೆ ಹೆಚ್ಚು ಬೇಡಿಕೆ ಬರಬಹುದು. ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ಸ್ಪರ್ಧೆಯಲ್ಲಿ ಸೋಲಾಗದಿದ್ದರೂ ಹಿನ್ನೆಲೆ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ಪರೀಕ್ಷೆಯ ವಿದ್ಯಾರ್ಥಿಗಳು ನಿರ್ಧರಿಸಿ. ಭೂಮಿಯ ವ್ಯವಹಾರವು ಗೊಂದಲಮಯ ಆಗಬಹುದು. ಪ್ರೀತಿಯನ್ನು ದೂರಮಾಡಿಕೊಳ್ಳಲಿದ್ದೀರಿ. ನಿಮ್ಮ ಮೇಲೆ ಅಸಂಬದ್ಧ ಮಾತುಗಳು ಕೇಳಿಬರುವುದು. ಪ್ರಗತಿಯನ್ನು ಗೌರವಿಸುವಿರಿ. ನೀವು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಕೊಳ್ಳುವ ಹಾಗೆ ಆಗಬಹುದು. ವಿದೇಶದಲ್ಲಿ ಇದ್ದವರಿಗೆ ಕಾನೂನು ಸಂಘರ್ಷವು ಬರಬಹುದು. ಯಾರನ್ನೋ ಹೆದರಿಸಿ ಕೆಲಸ ಮಾಡಿಸಿಕೊಳ್ಳುವ ವಿಚಾರಕ್ಕೆ ಹೋಗುವುದು ಬೇಡ.

ವೃಶ್ಚಿಕ ರಾಶಿ :ಅಪ್ರಯೋಜಕ ಕೆಲಸದಿಂದ ಬೇಸರವಾಗಬಹುದು. ಯಾವ ವೈಯಕ್ತಿಕ ಜೀವನವನ್ನು ಸುಮ್ಮನೆ ಪ್ರವೇಶಿಸವುದು ಬೇಡ. ದೂರದ ಬಂಧುಗಳ ಆಗಮನವು ಆಗಲಿದೆ. ಹಳೆಯ ಘಟನೆಗಳು ವಿಸ್ಮರಣೆಯಾಗಬಹುದು. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಸಕಾಲಕ್ಕೆ ಯಾವದೂ ಆಗದೇ ಎಲ್ಲವೂ ಅಸ್ತವ್ಯಸ್ತವಾಗಲಿದೆ. ಬೆಲ್ಲದ ಮಾತುಗಳು ಕೇಳಲಷ್ಟೇ ಹಿತ. ನಿಮ್ಮ ಇರುವಿಕೆಯನ್ನು ತೋರಿಸುವ ಪ್ರಯತ್ನ ಮಾಡುವಿರಿ. ನೌಕರರ ವಿಷಯದಲ್ಲಿ ಕೋಪಗೊಳ್ಳುವ ಸನ್ನಿವೇಶ ಬರಬಹುದು. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ.‌ ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು‌. ಕಪಟತೆಯು ನಿಮಗೆ ಗೊತ್ತಾಗದೇ ನಡೆಯುವುದು. ನಿಮ್ಮ ಸಮಯೋಚಿತ ಉತ್ತರಗಳು ಧನಾತ್ಮಕ ಅಂಶಗಳನ್ನು ತಂದುಕೊಡುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಗೃಹನಿರ್ಮಾಣದಲ್ಲಿ ಗೊಂದಲವು ಬರಬಹುದು. ದಿನದ ಕೊನೆಯಲ್ಲಿ ಅಶುಭ ಸಮಾಚಾರ ಬರಬಹುದು.

ಧನು ರಾಶಿ :ಮಹಿಳಾ ಉದ್ಯಮವು ಬಹಳ ವೇಗವಾಗಿ ಪ್ರಚಾರಕ್ಕೆ ಬರಬಹುದು. ಆದರೆ ಆದಾಯ ಕಡಿಮೆ. ನಿಮ್ಮ ಕೆಲಸಕ್ಕೆ ಹಣ ದೊರಕುವುದು ಎಂಬ ನಿರೀಕ್ಷೆಯು ಇರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಉತ್ಪಾದನೆಯ ಹಂತದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ. ನಿಮ್ಮ‌ ಮಾತುಗಳಿಗೆ ನೌಕರರು ಬೆಲೆಕೊಡದೇ ಹೋಗಬಹುದು. ಸಂಬಂಧವನ್ನು ಆತ್ಮೀಯಗೊಳಿಸಲು ಪ್ರಯತ್ನಪಡುವಿರಿ. ಉದ್ಯೋಗದ ಸ್ಥಳದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಮಾತನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾಗಿ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಮಾತಿನಿಂದಲೇ ಸರಿಮಾಡಿಕೊಳ್ಳಿ. ನಿಮ್ಮ ಬಂಡವಾಳಕ್ಕೆ ತಕ್ಕ ಮನೆಯು ಸಿಗಲಿದೆ.

ಮಕರ ರಾಶಿ :ಅತಿಥಿ ಸತ್ಕಾರದಿಂದ ನಿಮ್ಮ ಸಂತೋಷ ಇಮ್ಮಡಿಸಬಹುದು. ನೀವು ವಿಶ್ವಾಸ ಯೋಗ್ಯರ ಜೊತೆ ಹೆಚ್ಚು ಬೆರೆಯುವಿರಿ. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಬೇಡದ ಸಲಹೆಯನ್ನು ಕೊಡಬಹುದು. ಆರ್ಥಿಕ ವಿಚಾರದಲ್ಲಿ ತಂದೆ‌ ಮಕ್ಕಳ ನಡುವೆ ಮಾತಿನ ಚಕಮಕಿ‌ ಏಳುವುದು. ವಿವಾಹದಲ್ಲಿ ನಿರಾಸಕ್ತಿಯು ಬರಬಹುದು. ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಆರ್ಥಿಕತೆಯ ಮೇಲೆ ಹೆಚ್ಚು ಒಲವು ಉಂಟಾಗುವುದು. ಸ್ತ್ರೀಯರಿಂದ ಕೆಲವು ಸಹಾಯವು ಸಿಗುವುದು. ಮಕ್ಕಳನ್ನು‌ ಮನೆಯಿಂದ ಹೊರಗೆ ಕಳುಹಿಸಿ ಓದಿಸುವುದು ಸೂಕ್ತವಾದೀತು.‌ ಮಾತಿನಲ್ಲಿ ನಿಖರತೆ ಇರಲಿ. ಪ್ರತಿ ಕ್ಷಣವೂ ಅಮೂಲ್ಯ ಎನ್ನಿಸುವಂತೆ ಕಾರ್ಯವಿರುವುದು.‌ ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ.

ಕುಂಭ ರಾಶಿ :ಸ್ವಯಾರ್ಜಿತ ಧನದಿಂದ ನಿಮಗೆ ಹೆಮ್ಮೆಯಾಗಲಿದೆ. ಕಳೆದ ಕಷ್ಟದ ದಿನಗಳು ನಿಮಗೆ ಇಂದು ಖುಷಿ ಎನಿಸಬಹುದು. ಅತಿಯಾದ ಬಂಧನವು ನಿಮಗೆ ಕಿರಿಕಿರಿ ತರಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ಸರ್ಕಾರದ ಕಡೆಯಿಂದ ನಿಮಗೆ ಆಗಬೇಕಾದ ಕಾರ್ಯವು ವಿಳಂಬ. ನಿಮ್ಮ ನಂಬಿಕೆಗೆ ತೊಂದರೆಯಾಗುವುದು.‌ ಸಂಗಾತಿಯ ಕಹಿಯಾದ ಮಾತುಗಳು ನಿಮಗೆ ಜೀರ್ಣವಾಗದು. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯ ಅಗತ್ಯ. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು.‌ ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರ್ಕಾರದ ಕೆಲಸಕ್ಕಾಗಿ ಓಡಾಡುವುದು ನಿಮಗೆ ಬೇಸರ ತಂದೀತು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ನಿಮ್ಮ ಊರ್ಜಿತವನ್ನು ನೀವೇ‌ಮಾಡಿಕೊಳ್ಳಬೇಕು.

ಮೀನ ರಾಶಿ :ನಿಯಮ‌ ಬಾಹಿರದಿಂದ‌ ಸಿಕ್ಕಿಕೊಳ್ಳುವ ಸಾಧ್ಯತೆ‌ ಇದೆ. ನೀವು ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಬಹುದು. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ವಾಹನ ಸಂಚಾರಕ್ಕೆ ತೊಂದರೆ ಬರಬಹುದು. ಉತ್ತಮ‌ ಕುಲದ ಸಂಬಂಧವು ವಿವಾಹಕ್ಕೆ ನಿಮಗೆ ಸಿಗಲಿದೆ. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲವು ಸಂಗತಿಯನ್ನು ಅನುಭವಿಸದೇ ಇರಲಾಗದು. ಕಾರಣವಿಲ್ಲದೇ ಕೋಪವು ಬರುವುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು. ಬಹು ದಿನಗಳ ಅನಂತರ ಮನೆಯವರ ಜೊತೆ ಕಾಲ ಕಳೆಯುವ ಅವಕಾಶ ಸಿಗುವುದು.‌ ದಾಂಪತ್ಯದಲ್ಲಿ ಪರಸ್ಪರ ಕಾದಾಟವು ಮಿತಿಮೀರಬಹುದು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಖುಷಿಪಡಿಸುವಿರಿ. ಗೆಳೆತನದಲ್ಲಿ ಮಿತಿ ಇರಲಿ. ವಿಜ್ಞಾನಿಗಳ ಭೇಟಿಯಾಗುವ ಸನ್ನಿವೇಶವು ಬರಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚಾಗುವುದು.

-ಲೋಹಿತ ಹೆಬ್ಬಾರ್-8762924271 (what’s app only)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ