ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:16 ರಿಂದ 13:43ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:57 ರಿಂದ ಬೆಳಿಗ್ಗೆ 09:24ರವರೆಗೆ, ಗುಳಿಕ ಕಾಲ ಮಧ್ಯಾಹ್ನ ಬೆಳಿಗ್ಗೆ 10:50ರಿಂದ ಮಧ್ಯಾಹ್ನ12:16 ರವರೆಗೆ.
ಮೇಷ ರಾಶಿ : ಅಪಕ್ವವಾದ ಮಾತುಗಳಿಗೆ ಅವಕಾಶ ಕೊಡಬೇಡಿ. ಹೇಳಿಕೊಳ್ಳುವ ಸಾಧನೆ ಅಲ್ಲದಿದ್ದರೂ ಒಮ್ಮೊಮ್ಮೆ ಹೇಳಿಕೊಳ್ಳಬೇಕಾಗುತ್ತದೆ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಇಂದಿನ ಕೆಲಸದಲ್ಲಿ ಮಂದಗತಿ ಇರಲಿದೆ. ಇತರರಿಂದ ಗೌರವ ಪ್ರಾಪ್ತವಾಗಬಹುದು. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ ಇರಲಿದೆ. ನಿರಂತರ ಘಾಸಿಯಿಂದ ಶಿಲೆಯಂತೆ ಸ್ಥಾಯಿಯಾಗಲು ಸಾಕು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ. ತಂದೆಯ ಜೊತೆ ಅಪರೂಪದ ಸಮಾರಂಭಕ್ಕೆ ಹೋಗುವಿರಿ. ಖರೀದಿಯಲ್ಲಿ ನೀವು ಸ್ಥೂಲವಾಗಿ ಖರ್ಚನ್ನು ಅಂದಾಜಿಸಿಕೊಳ್ಳಿ. ಮಕ್ಕಳು ನಿಮ್ಮ ಬಳಿ ಹೊಸತನ್ನು ತಿಳಿದುಕೊಳ್ಳಲು ಬಯಸುವರು. ಇಂದು ನೀವು ನಿಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಸಿಕ್ಕ ಅಧಿಕಾರದ ಬಗ್ಗೆ ಕೀಳರಿಮೆ ಬೇಡ.
ವೃಷಭ ರಾಶಿ :ವಿಭಿನ್ನವಾಗಿ ಯಾವುದನ್ನಾದರೂ ಮಾಡಬಹುದು. ಆದರೆ ಅದು ಸ್ವೀಕಾರ್ಯವೇ ಎಂಬುದೂ ಮುಖ್ಯ. ಯಾವುದನ್ನೂ ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇರದು. ವಾಸಸ್ಥಳವನ್ನು ನೀವು ಇಂದು ಬದಲಿಸುವ ಆಲೋಚನೆ ಮಾಡುವಿರಿ. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಆಭರಣ ಖರೀದಿ ಜೋರಾಗಿ ನಡೆಯವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ನಿಮಗೆ ಅವಿವಾಹಿತನಾಗಿದ್ದೇನೆ ಎಂಬ ಕೊರಗು ಕಾಡಬಹುದು. ನಿಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿಯು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಗೆಳೆತನವಾಗಬಹುದು. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳುವುದು ಬೇಡ. ಯಾರನ್ನೂ ಉಪಯೋಗಿಸಿಕೊಳ್ಳಲು ಹೋಗಬೇಡಿ. ಉದ್ಯೋಗದಲ್ಲಿ ಯಾವುದಾದರೊಂದು ರೀತಿಯಲ್ಲಿ ಪ್ರಗತಿಯನ್ನು ಸಾಧಿಸಲು ಹೆಜ್ಜೆ ಇಡಿ.
ಮಿಥುನ ರಾಶಿ :ಇಂದು ಮಾಡುವ ಕಾರ್ಯವನ್ನು ಮುಂದೂಡುವುದು ಬೇಡ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ಎಲ್ಲರಿಗೂ ಬೈಯುತ್ತ ಇರುವಿರಿ. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಟವಿರುವುದು. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಉದ್ಯಮವು ಒಂದೊಂದೇ ಹೆಜ್ಜೆ ಬೆಳೆಯುತ್ತಿರುವುದು ಸಂತೋಷ ಕೊಡುವುದು. ನಿಮ್ಮ ಕೆಲಸಕ್ಕೆ ಇಂದೇ ಫಲಬೇಕು ಎನ್ನುವುದು ಮುರ್ಖತನವಾದೀತು. ಅಪರಿಚಿತರಿಗೆ ನೀವು ಹಣವನ್ನು ಕೊಡುವಿರಿ. ಮೈಮರೆತು ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ. ಅಸಹಜ ವರ್ತನೆಯಿಂದ ಸಂಗಾತಿಗೆ ಅನುಮಾನ ಬರಲಿದೆ. ಮನೆಯ ಹಿರಿಯರನ್ನು ಅನಾದರದಿಂದ ನೋಡುವುದು ಉಚಿತವಲ್ಲ. ಆತುರವು ಕಡಿಮೆ ಆದರೆ ಕೆಲಸವೂ ಸುಲಲಿತವಾದಂತೆ. ನಿಮ್ಮ ಕಛೇರಿಯಲ್ಲಿ ಉಂಟಾದ ಅಸಮಾಧಾನವನ್ನು ಆಪ್ತರ ಜೊತೆ ಹಂಚಿಕೊಳ್ಳಿ. ಇಂದು ನೀವು ಬಹಳ ಸಿಟ್ಟಗೊಂಡರೂ ಬೇಗ ಶಾಂತರಾಗುವಿರಿ. ಸ್ವಾವಲಂಬನೆ ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು.
ಕರ್ಕಾಟಕ ರಾಶಿ : ಒಳ್ಳೆಯ ಗುಣಗಳೇ ನಿಮಗೆ ಸತ್ಫಲವನ್ನು ಕೊಡುವುದು. ಉದ್ಯೋಗದ ಕಾರಣದಿಂದ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಭೂಮಿಯಿಂದ ಅಧಿಕ ಲಾಭ ಪಡೆಯಲು ಚರ್ಚೋಪಚರ್ಚೆಗಳು ಆಗಬಹುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸಂಬಂಧದ ವಿಚಾರದಲ್ಲಿ ದೃಷ್ಟಿ ಬದಲಾದರೆ ಸಾಕು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಕೃಷಿಯ ಚಟುವಟಿಕೆಯಲ್ಲಿ ಹೆಚ್ಚು ತೊಡಗುವಿರಿ. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ. ಕೆಲವು ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುವುದೇ ಉತ್ತಮ. ಇಂದು ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ಇನ್ನೊಬ್ಬರ ವಸ್ತುಗಳನ್ನು ನೀವು ಹಾಳು ಮಾಡುವಿರಿ. ವಿದ್ಯಾಭ್ಯಾಸದ ಸಾಲವನ್ನು ನೀವು ತೀರಿಸುವಿರಿ. ಹಿರಿಯರ ಬಳಿ ಮಾತನಾಡುವಾಗ ವಿನಯವಿರಲಿ.
ಸಿಂಹ ರಾಶಿ :ಇಂದು ಯಾರ ಮಾತನ್ನೂ ಎದುರಿಸುವ ಸಾಮರ್ಥ ಇರದು. ತಂದೆಯ ಮನಸ್ಸನ್ನು ಅರಿತು ಅವರ ಜೊತೆ ವ್ಯವಹರಿಸಿ. ಇಂದು ನಿಮ್ಮ ಹಿತಶತ್ರುಗಳಿಂದ ತೊಂದರೆ ಕೊಡಬಹುದು. ನಾಯಕತ್ವದ ಗುಣವನ್ನು ಹೆಚ್ಚು ಮಾಡಿಕೊಳ್ಳಬೇಕು. ಮನೆಗೆ ಸಹಕಾರವನ್ನು ನೀವು ನೀಡಲಿದ್ದು ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ರಾಜಕೀಯದ ಒಡನಾಟ ನಿಮ್ಮಲ್ಲಿ ನಕಾರಾತ್ಮಕ ಅಂಶವನ್ನು ಹೆಚ್ಚಿಸಬಹುದು. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ಹೂಡಿಕೆಯನ್ನು ಬಹಳ ಮುತುವರ್ಜಿಯಿಂದ ಮಾಡಬೇಕಾದೀತು. ಅಪರಿಚಿತರ ಹಸಿವನ್ನು ನೀಗಿಸುವಿರಿ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡಲಾಗದು.
ಕನ್ಯಾ ರಾಶಿ :ದೈವಾನುಗ್ರಹಕ್ಕೆ ಬೇಕಾದ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಮಕ್ಕಳ ಮೇಲಿನ ಮೋಹಕ್ಕೆ ಅವರ ತಪ್ಪನ್ನು ತಿದ್ದಲಾರಿರಿ. ಸ್ನೇಹಿತರಿಂದ ಇಂದು ಮನೆ ತುಂಬಲಿದೆ. ಸಾಮೂಹಿಕ ವ್ಯವಸ್ಥೆಯನ್ನು ತೂಗಿಸಲು ಆಗದು. ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಡಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಸಾಲದ ಹೊರೆಯನ್ನು ಸ್ವಲ್ಪ ಇಳಿಸಲು ಸಾಧ್ಯವಾಗುವುದು. ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಬಗ್ಗೆ ಹೆಚ್ಚು ಕರುಣೆ ಬರಬಹುದು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ.
ತುಲಾ ರಾಶಿ : ನ್ಯಾಯಕ್ಕೆ ಬೇಕಾದ ಸೂಕ್ತ ಸಾಕ್ಷಿಯ ಕೊರತೆ ಇರುವುದು. ಸರ್ಕಾರದ ಕೆಲಸದಲ್ಲಿ ಗೊತ್ತಿಲ್ಲದೇ ತಪ್ಪುಗಳು ಆಗಬಹುದು. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಮಂಗಲಕರವಾದ ವಸ್ತುಗಳಿಂದ ಖರೀದಿ ಮಾಡುವಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಕುಟಂಬದವರು ಸೇರಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುವಿರು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಪೂರ್ಣ ಚಿತ್ರಣವು ಸಿಗದು. ಹಿರಿಯರ ಎದುರು ಸಭ್ಯತೆಯಿಂದ ನಡೆದುಕೊಳ್ಳಿ. ಎದುರಾಳಿಗಳ ಬಗ್ಗೆ ಭಯವಿರವುದು. ಕೋಪವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಕೊಳ್ಳಿ. ಏಕಾಗ್ರತೆಯ ಕೊರತೆಯನ್ನು ಸರಿ ಮಾಡಿಕೊಳ್ಳಿ. ನಿಮ್ಮ ಯೋಜನೆಗೆ ಸರಿಯಾದ ಚೌಕಟ್ಟು ಬೇಕು.
ವೃಶ್ಚಿಕ ರಾಶಿ :ನೋವನ್ನು ಮರೆಯುವ ಪ್ರಯತ್ನವು ಬೇರೆ ರೀತಿಯಲ್ಲಿ ನಡೆಯುವುದು. ಐಷಾರಾಮಿಯಾಗಿ ಬದುಕಲು ನಿಮ್ಮ ಹಣವನ್ನೇ ಖರ್ಚುಮಾಡುವಿರಿ. ವಿದ್ಯಾರ್ಥಿಗಳಿಗೆ ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಭೋಗಕ್ಕೆ ಬೇಕಾದ ಹಣವು ನಿಮ್ಮ ಕೈ ಸೇರಲಿದೆ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳುವಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಸಣ್ಣ ವಿಚಾರವನ್ನು ನೀವೇ ದೊಡ್ಡ ಮಾಡಿಕೊಳ್ಳುವಿರಿ. ವ್ಯವಸ್ಥೆಯ ಸಣ್ಣ ಕೊರತೆಗಳು ಮುಖ್ಯವಾಗಬಾರದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕಾಣಿಸದು.
ಧನು ರಾಶಿ :ವಿದೇಶದ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗುವುದು. ನಿಮ್ಮ ವರ್ತನೆಗಳೇ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುವುದು. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ಅಸ್ಥಾನದಲ್ಲಿ ಇಂದು ಒಲವು ಹುಟ್ಟಿಕೊಳ್ಳಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಯಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ಆಗಬಹುದು. ಸುಮ್ಮನೇ ಆಡಿದ ಮಾತು ಸತ್ಯವಾಗಬಹುದು. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನದಿಂದ ಲಾಭವು ಸಿಗುವುದು.
ಮಕರ ರಾಶಿ :ನಿಮಗೆ ನೆಮ್ಮದಿ ಬೇಕಾದರೆ ಸುತ್ತಲಿನವರ ಜೊತೆ ಸೌಹಾರ್ದತೆ ಮುಖ್ಯ. ನಿಮ್ಮ ಸುರಕ್ಷತೆಯ ಬಗ್ಗೆ ಮೊದಲು ಗಮನವಿರಲಿ. ಅನಂತರ ಉಳಿದುದರ ರಕ್ಷಣೆ. ಹಣವು ವ್ಯಯವಾಗಬಹುದು. ಕಳ್ಳರ ಭೀತಿಯು ಇರಲಿದೆ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಮೇಲ್ನೋಟಕ್ಕೆ ಶಾಂತಸ್ವಭಾವದಂತೆ ಕಾಣಿಸುವುದು.ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಇಂದಿನ ಎಲ್ಲ ಕಾರ್ಯಗಳಲ್ಲಿ ಏಕಾಗ್ರತೆಯ ಕೊರತೆ ಕಾಣಿಸುವುದು. ತಾಯಿಯ ಕಡೆಯವರಿಂಸ ಧನಸಹಾಯವು ಸಿಗಬಹುದು. ಕೆಲಸದಲ್ಲಿ ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ. ಯಾರೇ ಏನೇ ಹೇಳಿದರೂ ಕೇಳಿಕೊಳ್ಳುವ ತಾಳ್ಮೆ ಅಗತ್ಯವಾಗಿ ಬೇಕು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.
ಕುಂಭ ರಾಶಿ : ಇಂದು ನಿಮ್ಮ ತಂತ್ರಗಾರಿಕೆಯು ವಿಫಲವಾಗಬಹುದು. ನಿಮಗಿರುವ ಸ್ಥಾನಮಾನದ ಬಗ್ಗೆ ಆತಂಕ ಬರಬಹುದು. ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳುವುದು ಉತ್ತಮ. ಅಧಿಕಾರಿಗಳು ನಿಮಗೆ ಅಪಮಾನ ಮಾಡಬಹುದು. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಿಗಬೇಕಾದ ಲಾಭದಿಂದ ವಂಚಿತರಾಗಲಿದ್ದೀರಿ. ನಿಮ್ಮನ್ನು ಸಹಜವಾಗಿ ತೋರಿಸಿಕೊಳ್ಳಿ. ಕೃತಕತೆಯಿಂದ ತೊಂದರೆಯಾಗುವುದು. ಸಾಮಾಜಿಕ ಕಾರ್ಯಕ್ಕೆ ಇಂದು ಸಮಯವು ಸಿಗದು. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಸ್ಥಿತಿ ತಪ್ಪಬಹುದು.
ಮೀನ ರಾಶಿ : ರಾಜಕಾರಣದಿಂದ ಕಿರಿಕಿರಿ ಸೃಷ್ಟಿಯಾಗಬಹುದು. ಆಸ್ತಿಯ ಆಧಾರದ ಮೇಲೆ ನೀವು ಸಾಲವನ್ನು ಪಡೆಯಬೇಕಾಗಬಹುದು. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ನಿಮ್ಮ ಆಸ್ತಿಗಳನ್ನು ಸ್ವಾಧೀನ ಮಾಡಿಕೊಳ್ಳಬಹುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾದರಿ ಬೇಡ. ಇಂದಿನ ಕೆಲವು ಸಂದರ್ಭದಲ್ಲಿ ಮೌನವಾಗಿ ಇರುವಿರಿ. ವಿದೇಶದ ಸಂಪರ್ಕವು ಇಂದು ಸಿಗಬಹುದು. ನಿಮ್ಮ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)