ಹೊಸ ಹೂಡಿಕೆ ಯೋಚನೆಗೆ ಅನುಕೂಲಕರ ಕಾಲ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ ಮಂಗಳವಾರ ದಾಖಲೆಗಳ ಪರಿಶೀಲನೆ, ರೋಗಬಾಧೆ, ವ್ಯಾಪಾರ ಸುಗಮ, ಪ್ರೇಮಿಗಳ ಭೇಟಿ, ಗುರಿಯ ಕಡೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 51 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:44 – 17:18, ಗುಳಿಕ ಕಾಲ 12:36 – 14:10 ಯಮಗಂಡ ಕಾಲ 09:28 – 11:02
ಮೇಷ ರಾಶಿ: ಹಿಂದೆ ಕೊಟ್ಟ ಮಾತನ ಅವಧಿ ಮುಕ್ತಾಯವಾಗಿದ್ದು, ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಕಠಿಣ ಸಂದರ್ಭದಲ್ಲಿ ನಿಮ್ಮ ವರ್ತನೆಯೂ ಲೆಕ್ಕಕ್ಕೆ ಬರಲಿದೆ. ನಿಮ್ಮ ಕೆಲಸಗಳು ನಿಮ್ಮನ್ನು ಯಾರೆಂದು ಹೇಳುವುದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ನಿಮ್ಮ ಮನಸ್ಸು ತೆರೆದುಕೊಳ್ಳಬಹುದು. ದಾನದಲ್ಲಿ ಇಂದು ಹೆಚ್ಚಿನ ಖುಷಿಯನ್ನು ಕಾಣುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬೇರೆಯವರ ಮೇಲೆ ಒತ್ತಡ ತರುವುದು ಬೇಡ. ನಿಮ್ಮ ಲಾಭದ ಚಿಂತನೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಆರ್ಥಿಕವಾಗಿ ಉತ್ತಮ ದಿನ. ಕುಟುಂಬದಲ್ಲಿ ಸಂತೋಷದ ಕ್ಷಣ. ಸ್ನೇಹಿತರ ಬೆಂಬಲ ಲಭಿಸುತ್ತದೆ. ಅಧಿಕಾರಿಗಳ ವಿಚಾರದಲ್ಲಿ ನೀವು ಭಯ ಪಡುವುದು ಬೇಡ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಿ. ವಹಿಸಿಕೊಂಡ ಕಾರ್ಯವನ್ನು ಸಕಾಲಕ್ಕೆ ಮುಗಿಸಿ ನಿಶ್ಚಿಂತರಾಗುವಿರಿ. ಮನೆಗೆ ಬಂದ ಬಂಧುಗಳನ್ನು ಸರಿಯಾಗಿ ಮಾತನಾಡಿಸಿ. ನಿಮ್ಮ ಲಘುವಾದ ಮಾತುಗಳು ಬೇಸರ ತರಿಸೀತು. ವಿವಾಹದ ಮಾತುಕತೆ ನಡೆಯಬಹುದು.
ವೃಷಭ ರಾಶಿ: ಇಂದು ನಿಮ್ಮ ಭೂಮಿಯ ಖರೀದಿಗೆ ಯಾರಾದರೂ ಬರಬಹುದು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಆತಂಕ ಇರುವಿರಿ. ನಿಮಗೆ ಬೇಕಾದುದನ್ನು ನೀವು ಪಡೆಯುವಿರಿ. ಅನ್ಯರು ನಿಮ್ಮನ್ನು ಗೇಲಿ ಮಾಡಿಯಾರು. ಕಛೇರಿಯ ಕಾರ್ಯಗಳು ಕೆಲವು ನಿಧಾನವಾಗಿ ಸಾಗುವುದು. ಪತ್ನಿಯೊಂದಿಗೆ ಭಾವನಾತ್ಮಕ ಸಂಬಂಧ ಗಾಢವಾಗುತ್ತದೆ. ಸ್ನೇಹಿತರೊಂದಿಗೆ ಸಂತೋಷದ ಕ್ಷಣ. ಹೊಸ ಸಂಪರ್ಕಗಳಿಂದ ಲಾಭ. ಪ್ರವಾಸಕ್ಕೆ ಅವಕಾಶ. ದಿನದ ಕೊನೆಯಲ್ಲಿ ಯಶಸ್ಸು. ಆತ್ಮೀಯರು ನಿಮ್ಮನ್ನು ಭೇಟಿ ಮಾಡುವರು. ಬಂದಿರುವ ಅವಕಾಶವನ್ನು ಬಿಟ್ಟು ದುಃಖಪಡುವ ಅವಶ್ಯಕತೆ ಇಲ್ಲ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವಿರಿ. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ನಿಮಗೇ ಸರಿ ಎನಿಸದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟವಾದೀತು. ಅವ್ಯವಹಾರದ ಬಗ್ಗೆ ಗಮನ ಬೇಡ. ಅನಾರೋಗ್ಯದ ನಿವಾರಣೆಗೆ ದೈವದ ಮೊರೆಹೋಗುವುದು ಉಚಿತ.
ಮಿಥುನ ರಾಶಿ: ಇಂದು ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ಅತಿಥಿಗಳಿಗೆ ನಿಮ್ಮಿಂದ ಅನಾದರ ಸಿಗುವ ಸಾಧ್ಯತೆ ಇದೆ. ಒಂದು ಗುಣದಿಂದ ಅವರ ಸ್ವಭಾವವನ್ನು ಅಳೆಯುವುದು ಸರಿಯಲ್ಲ. ಸ್ವಲ್ಪ ದಿನ ಕಾದುನೋಡುವುದು ಒಳ್ಳೆಯದು. ಆತುರದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಬಹುದು. ಆರ್ಥಿಕ ಲಾಭದ ಸಾಧ್ಯತೆ ಇದೆ. ಆತ್ಮೀಯರಿಂದ ನಿಮಗೆ ಇಷ್ಟವಾದುದು ಸಿಗಬಹುದು. ಆಪ್ತರನ್ನು ದೂರ ಮಾಡಿಕೊಳ್ಳಬೇಕಾದ ಸಂದರ್ಭವು ಬರಬಹುದು. ಮುಖಕ್ಕೆ ಸಂಬಂಧಿಸಿದ ರೋಗವು ಬರಬಹುದು. ಉತ್ತಮ ಚಿಕಿತ್ಸೆ ಪಡೆದು ಸರಿ ಮಾಡಿಕೊಳ್ಳಿ. ಯಾವುದಕ್ಕೂ ಅಳುಕುವ ಅವಶ್ಯಕತೆ ಇಲ್ಲ. ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಇಂದಿನ ಒತ್ತಡವನ್ನು ಸಹಿಸಿಕೊಂಡು ಇರುವುದು ಕಷ್ಟವಾದೀತು. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.
ಕರ್ಕಾಟಕ ರಾಶಿ: ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಸಿಗಲಿದೆ. ನಿಮಗೂ ಆತ್ಮತೃಪ್ತಿ. ಮನೆಯ ಕೆಲಸದಲ್ಲಿ ಆಸಕ್ತಿ ಹೆಚ್ಚಿರುವುದು. ಮನಸ್ತಾಪಗಳನ್ನು ಹೊರಹಾಕುವಲ್ಲಿ ಹಾಕಿ ಮತ್ತು ಅದಕ್ಕೆ ರೀತಿಯೂ ಇರಲಿ. ನಿಮ್ಮ ಉತ್ಸಾಹವು ಸಂಜೆಯ ಸಮಯಕ್ಕೆ ಅತಿಯಾಗಿ ಇರುವುದು. ಕುಟುಂಬದಲ್ಲಿ ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಸ್ನೇಹಿತರ ಬೆಂಬಲ ಲಭಿಸುತ್ತದೆ. ಹೊಸ ಹೂಡಿಕೆ ಯೋಚನೆಗೆ ಅನುಕೂಲಕರ ಕಾಲ. ದಿನದ ಕೊನೆಯಲ್ಲಿ ಮನಸ್ಸು ತೃಪ್ತಿಯಾಗುತ್ತದೆ. ಅಲ್ಲಿನ ವಾತಾವರಣ ನಿಮಗೆ ಅನುಕೂಲವಾಗದೆಯೂ ಇರಬಹುದು. ನಿಮ್ಮವರೇ ಕಣ್ಮರೆಯಾಗಿ ಆತಂಕ ಸೃಷ್ಟಿಯಾಗುವುದು. ಸಮಯವನ್ನು ವ್ಯರ್ಥಮಾಡದೇ ಸದ್ವಿನಿಯೋಗ ಮಾಡಿಕೊಳ್ಳುವುದು ಉತ್ತಮ. ಕೃಷಿಯನ್ನು ನಂಬಿದವರಿಗೆ ಸ್ವಲ್ಪ ಕಷ್ಟವಾಗಲಿದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಕಣ್ತಪ್ಪಿನಿಂದ ಆದ ಸಣ್ಣ ಅನಾಹುತವೂ ದೊಡ್ಡ ರೂಪವನ್ನು ಪಡೆಯಬಹುದು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.
ಸಿಂಹ ರಾಶಿ: ಅಧಿಕಾರದ ಹಿಡಿತ ತಪ್ಪಿಹೋಗಲಿದ್ದು, ಯಾರದೋ ಮೂಲಕ ಪ್ರಯತ್ನಿಸುವಿರಿ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಸಂದರ್ಭಕ್ಕೆ ತಕ್ಕಹಾಗೆ ನಿಮ್ಮನ್ನು ಪರಿವರ್ತನೆ ಮಾಡಿಕೊಂಡರೆ ಯಾವುದೂ ಕಷ್ಟವಾಗದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ಎದುರಾಗಬಹುದು. ಆರೋಗ್ಯದಲ್ಲಿ ದಣಿವು ಮತ್ತು ಒತ್ತಡ ಕಾಡಬಹುದು. ಮನೆಯಲ್ಲಿ ಸಣ್ಣ ಗೊಂದಲ ಮೂಡುವ ಸಾಧ್ಯತೆ. ಹಿರಿಯರ ಸಲಹೆ ಪಾಲಿಸಿದರೆ ಲಾಭ. ಇಂದು ನಿಮ್ಮ ಮಾತಿನ ಹರಿತ ಮುಂದಿನವರನ್ನು ಘಾಸಿ ಮಾಡೀತು. ಬಾಲಿಶ ಆಲೋಚನೆಯನ್ನು ಬಿಡುವುದು ಉತ್ತಮ. ಬೆಂಕಿಯಿಂದ ಸುಡಲೂಬಹುದು, ದೀಪವನ್ನೂ ಬೆಳಗಬಹುದು. ನಿರ್ಧಾರಗಳು ನಿಮ್ಮ ಕೈಯಲ್ಲಿ ಇರುವುದು. ನಿಮ್ಮ ದೃಷ್ಟಿ ವಿಶಾಲವಾಗಿ ಇರಲಿ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು. ಅದಕ್ಕೆ ಏನನ್ನಾದರೂ ಹೇಳಬೇಡಿ. ಗೆಲುವಿಗಾಗಿ ಅಧಿಕ ಶ್ರಮದ ಅವಶ್ಯಕತೆ ಇರಲಿದೆ.
ಕನ್ಯಾ ರಾಶಿ: ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ವ್ಯಾಮೋಹದಿಂದ ಕೆಲವನ್ನು ನೀವು ಬಿಡುವುದು ಕಷ್ಟವಾದೀತು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರಾದರೂ ಅವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ಸಾಲವನ್ನು ತೀರಿಸಲು ಕೆಲವು ದಿನದ ಸಮಯಾವಕಾಶ ಕೇಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆರೋಗ್ಯದಲ್ಲಿ ಸಾಮಾನ್ಯ ಚುರುಕುತನ ಕಂಡುಬರುತ್ತದೆ. ಸಂಗಾತಿಯೊಂದಿಗೆ ಸಿಹಿ ಕ್ಷಣ ಕಳೆಯುವಿರಿ. ಸ್ನೇಹಿತರೊಂದಿಗೆ ಸುಖಕರ ಮಾತುಕತೆ. ಏಕಾಗ್ರತೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ತಂದೆಯಿಂದ ನಿಮಗೆ ಶುಭವಾರ್ತೆ ಸಿಗಬಹುದು. ನಿಮ್ಮ ಕೈಲಾಗುವ ಕೆಲಸವನ್ನಷ್ಟೇ ಮಾಡಿ. ನಿಮ್ಮನ್ನು ಮೀರಿದ ಕೆಲಸವನ್ನು ಮಾಡುವುದು ಬೇಡ. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿಮ್ಮ ಬಳಿ ಬಂದವರಿಗೆ ಸಾಂತ್ವನದ ಸುಖವು ಬೇಕಾಗಿರಬಹುದು.




