Horoscope: ಈ ರಾಶಿಯವರು ತಮ್ಮ ಆತ್ಮಗೌರವಕ್ಕೆ ತೊಂದರೆ ಆಗುವ ಕಡೆ ಹೋಗಲಾರರು
ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 13 ರವಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಸಂಜೆ 05:21 ರಿಂದ 06:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:37 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:46 ರಿಂದ 05:21ರ ವರೆಗೆ.
ಮೇಷ ರಾಶಿ: ಸ್ತ್ರೀಯರಿಂದ ಅಪಮಾನವಾಗಬಹುದು. ವಿಳಂಬವಾಗಿ ಬರುತ್ತದೆ ಎಂದುಕೊಂಡ ಧನವು ಬೇಗ ಬರುವುದು. ಇಂದು ನೀವು ನಿಮ್ಮ ವೃತ್ತಿಯನ್ನು ನಿರ್ಧರಿಸುವಿರಿ. ಸ್ವಾಭಿಮಾನವನ್ನು ಬಿಡಲು ನಿಮಗೆ ಆಗದು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ತಾಯಿಯ ಜೊತೆ ವಾಗ್ವಾದ ಮಾಡಬಹುದು. ಧಾರ್ಮಿಕ ಶ್ರದ್ಧೆಯಿಂದ ದೇವತಾರಾಧನೆಯನ್ನು ಮಾಡುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಭಕ್ತಿಗಾಗಿ ಮೀಸಲಿಡುವಿರಿ. ಆದಾಯದ ಮೂಲವನ್ನು ಹುಡುಕುವಿರಿ. ನೆಮ್ಮದಿಯು ನಿಮ್ಮ ಪಾಲಿಗೆ ಇರಲಿದೆ.
ವೃಷಭ ರಾಶಿ: ಮಿತ್ರರ ಜೊತೆ ನೀವು ಪಾಲುದಾರಿಕೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಇರದು. ಸಂಬಂಧದಲ್ಲಿ ವ್ಯವಹಾರವು ಬೇಡ. ನಿಮ್ಮ ಶತ್ರುಗಳು ನಿಮ್ಮಿಂದ ಇಂದು ಅಪ್ರತ್ಯಕ್ಷವಾಗಿ ಪ್ರಯೋಜನವನ್ನು ಪಡೆವರು. ವೃತ್ತಿಯ ಸಂಕಟವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸಲು ಹೋಗಿ ಇನ್ಯಾವುಕ್ಕೋ ಹಣವು ಖಾಲಿಯಾಗುಬಹುದು. ಸಂಗಾತಿಯ ಮಾತುಗಳಿಗೆ ನಿಮ್ಮ ವಿರೋಧವು ಉಚಿತವಾಗಿರುವುದು.
ಮಿಥುನ ರಾಶಿ: ಕಲಾವಿದರು ತಮ್ಮ ಇಂದಿನ ದಿನವನ್ನು ಸಂತೋಷದಿಂದ ಕಳೆಯುವರು. ಆರ್ಥಿಕಲಾಭವು ಇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕೃಷಿಯಲ್ಲಿ ಹೆಚ್ಚು ಆಸಕ್ತಿಯು ಇದ್ದು ಇಂದು ಅದರ ಕಡೆ ಹೆಚ್ಚು ಗಮನವನ್ನು ಕೊಡುವಿರಿ. ವಾಹನಚಾಲನೆಯಲ್ಲಿ ಜಾಗರೂಕತೆ ಇರಲಿ. ಸಂಗಾತಿಯನ್ನು ನೀವು ಹೊರಗೆ ಕರೆದುಕೊಂಡು ಹೋಗಿ ಖುಷಿಪಡಿಸುವಿರಿ. ಉತ್ಸಾಹವು ಇಂದು ಹೆಚ್ಚಿರಲಿದೆ. ಸುಳ್ಳಾಡಲು ಹೋಗಿ ಸಿಕ್ಕಿಕೊಳ್ಳುವಿರಿ. ಪ್ರಾಮಾಣಿಕತೆಯು ನಿಮಗೆ ವರವಾಗಲಿದೆ.
ಕಟಕ ರಾಶಿ: ನಿಮ್ಮ ಆತ್ಮಗೌರವಕ್ಕೆ ತೊಂದರೆ ಆಗುವ ಕಡೆ ನೀವು ಹೋಗಲಾರಿರಿ. ನಿಮಗೆ ನಿಶ್ಚಯಾತ್ಮಕ ಬುದ್ಧಿಯು ಇಂದು ಇರಲಾರದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮನಸ್ಸಿಡಲು ಕಷ್ಟವಾದೀತು. ದೇಹಕ್ಕೆ ಹೆಚ್ಚು ಶ್ರಮವನ್ನು ಕೊಡುವಿರಿ. ಸಾಮಾಜಿಕ ಮನ್ನಣೆಯನ್ನು ಪಡೆಯಲು ಬಯಸುವಿರಿ. ವಿದೇಶದಲ್ಲಿ ಇರುವವರಿಗೆ ಮನೆಯವರ ನೆನಪಾಗುವುದು. ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಂಡು ಸಂಕಟಪಡುವಿರಿ. ಯಂತ್ರೋಪಕರಣಕ್ಕೆ ಹಣವನ್ನು ಖರ್ಚುಮಾಡುವಿರಿ. ಹಿರಿಯರ ಮೇಲೆ ಗೌರವ ಇರಲಿ.