ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 29 ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸಿದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 04:37 ರಿಂದ 06:05 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:16 ರಿಂದ 01:43 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:10 ರಿಂದ 04:37ರ ವರೆಗೆ.
ಮೇಷ ರಾಶಿ: ಅವಿವಾಹಿತರಿಗೆ ವಿವಾಹದ ಸಂತೋಷವು ಇರಲಿದೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಸಣ್ಣ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ. ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಹೂಡಿಕೆ ಯಾರಾದರೂ ಒತ್ತಾಯ ಮಾಡಬಹುದು. ಇಂದು ನಿಮಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡಿ. ಬೇರೆಯವರ ಬಗ್ಗೆ ಚಿಂತೆ ಬೇಡ.
ವೃಷಭ ರಾಶಿ: ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಅಹಿತಕರ ಆಹಾರದಿಂದ ಆರೋಗ್ಯವು ಕೆಡಬಹುದು. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ಯಾರಾದರೂ ನಿಮಗೆ ಬೇಜಾರು ಮಾಡಿಸುವರು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ. ಇಬ್ಬಗೆಯ ಮಾನಸಿಕತೆಯು ಬೇಡ. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ಸ್ವಲ್ಪ ನೆಮ್ಮದಿ ಸಿಗಲಿದೆ.
ಮಿಥುನ ರಾಶಿ: ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮಕ್ಕಳ ಬಗ್ಗೆ ಕನಿಕರ ಬರಬಹುದು. ಹೊರಗಿನ ಆಹಾರದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದುಕೊಳ್ಳುವಿರಿ. ನಿಮ್ಮ ಚೌಕಟ್ಟಿನಲ್ಲಿ ಕೆಲಸವನ್ನು ಮಾಡಿ. ಮರೆತ ವಿಷಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ.
ಕಟಕ ರಾಶಿ: ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಹೊಂದಾಣಿಕೆಯ ಮನೋಭಾವವು ನಿಮ್ಮಲ್ಲಿ ಇರದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ. ವೃತ್ತಿಯಲ್ಲಿ ನಿಮಗೆ ಬೇಕಾದ ಸಹಕಾರವು ಸಿಗದು. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೇ ವಹಿಸಿಕೊಂಡು ಯಾವುದನ್ನೂ ಮಾಡಲಾರಿರಿ. ಪ್ರಯಾಣದಲ್ಲಿ ನಿಮಗೆ ಜಾಗರೂಕತೆ ಇರಲಿ.