Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯImage Credit source: freepik
Follow us
ಗಂಗಾಧರ​ ಬ. ಸಾಬೋಜಿ
|

Updated on: May 28, 2023 | 12:15 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ 05:17 ರಿಂದ 6:58ರ ವರೆಗೆ, ಯಮಘಂಡ ಕಾಲ 12:30 ರಿಂದ 02:06ರ ವರೆಗೆ, ಗುಳಿಕ ಕಾಲ 03:43 ರಿಂದ 05:19ರ ವರೆಗೆ.

ಮೇಷ: ನೀವು ಇಂದು ನಿಯಮಕ್ಕೆ ಬದ್ಧರಾಗಿ ಕಾರ್ಯವನ್ನು ಮಾಡುವಿರಿ. ಸ್ವತಂತ್ರ ಆಲೋಚನೆಗಳು ನಿಮಗೆ ಖುಷಿ ಕೊಟ್ಟೀತು. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹಿರಿಯರ ಚಿಂತನೆ ನಡೆಸುವಿರಿ. ಬಂಧುಗಳ ಸಹಯೋಗದಿಂದ‌ ವಾಹನವನ್ನು ಪಡೆಯುವಿರಿ. ಸಂಗಾತಿಯನ್ನು ಪ್ರೀತಿಸುವ ಮನಸ್ಸು ಇದ್ದರೂ ಅನಿರೀಕ್ಷಿತ ಕಾರ್ಯಗಳು ಅದನ್ನು ಬಿಟ್ಟುಕೊಡುವುದಿಲ್ಲ. ಕಲಹದ ಸನ್ನಿವೇಶಗಳು ಬಂದಾಗ ಅದನ್ನು ತಪ್ಪಿಸಿ ಶಾಂತಗೊಳಿಸುವಿರಿ. ನಿಮ್ಮ ಜೊತೆ ಮಾತನಾಡಲು ಮನೆಯಲ್ಲಿ ಭಯಪಟ್ಟಾರು. ತಾಳ್ಮೆಯಿಂದ ಕುಟುಂಬವನ್ನು ನಡೆಸುವ ಕಲೆ ಒಲಿದಿದೆ.

ವೃಷಭ: ನಿಮಗೆ ನಿಮ್ಮ ದಿನ ನಿತ್ಯದ ಕೆಲಸಗಳೇ ಮುಖ್ಯವಾಗಿ ಉಳಿದವು ನಗಣ್ಯವೆನಿಸೀತು. ಮೋಜಿನಲ್ಲಿ ಹಣವನ್ನು ಕಳೆದುಕೊಳ್ಳುವಿರಿ. ವೃತ್ತಿಯನ್ನು ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ.‌ ಸಹೋದರನಿಂದ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದ ಸಹಾಯವಾಗಲಿದೆ. ಹಣದ ಉಳಿತಾಯದ ಬಗ್ಗೆ ಗಮನವಿರಲಿ. ಅನಿವಾರ್ಯವಾಗಿ ಖರ್ಚಿಗೆ ದಾರಿಗಳು ತೆರೆದುಕೊಳ್ಳುವುದು. ನಿಮಗೆ ಸಿಗುವ ಸೂಚನೆಗಳನ್ನು ಅರಿತು ಮುನ್ನಡೆಯಿರಿ. ಬಂದಿದ್ದನ್ನು ನೀವು ಸ್ವೀಕರಿಸುವುದು ಸ್ವಭಾವವಾಗಿಸಿಕೊಂಡಿರುವಿರಿ.

ಮಿಥುನ: ಹಣದಿಂದ ಎಲ್ಲವೂ ಅಸಾಧ್ಯ ಎಂದು ತಿಳಿದು ಹಣದ ಮೋಹವು ಕಡಿಮೆ ಆದೀತು. ಉದ್ವೇಗದಲ್ಲಿ ಏನ್ನಾದರೂ ಹೇಳಿ ಬಿಡುವಿರಿ. ಅನ್ಯರನ್ನು ಹಾಸ್ಯ ಮಾಡಬಹುದು. ನಿಮ್ಮ ಕುಂದುಕೊರೆತಗಳ ಬಗ್ಗೆ ಲಕ್ಷ್ಯ ವಹಿಸಿ. ನೀರಿನ ವಿಚಾರದಲ್ಲಿ ಹುಡುಗಾಟ ಬೇಡ. ಅವಸರ ವಾಹನ ಸಂಚಾರದಿಂದ ಹೊರಬರುವದು ಒಳ್ಳೆಯದು. ಅಲ್ಪ ಕಾಲದ ಶ್ರದ್ಧೆಯು ನಿಮಗೆ ಏನನ್ನೂ ತಂದುಕೊಡದು. ಪ್ರೀತಿಯಿಂದ ಮನೆಯ ಕೆಲಸವನ್ನು ಮಾಡಿ. ನಿಮ್ಮ ವ್ಯಕ್ತಿತ್ವವನ್ನು ಇಂದು ನೋಡಿಕೊಳ್ಳುವ ಮನಸ್ಸಾದೀತು.

ಕಟಕ: ವಾತಕ್ಕೆ ಸಂಬಂಧಿಸಿದ ರೋಗವು ಹೆಚ್ಚಾಗಲಿದ್ದು ನಿರ್ಲಕ್ಷ್ಯ ಮಾಡದೇ ಔಷಧವನ್ನು ಮಾಡಿ. ಹಳೆಯ ಪ್ರೇಮವು ನಿಮ್ಮನ್ನು ಕಾಡಬಹುದು. ಮಕ್ಕಳ ಒತ್ತಾಯಕ್ಕೆ ಅವರ ಜೊತೆ ವಿದೇಶಕ್ಕೆ ಹೋಗಲಿದ್ದೀರಿ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಅದರ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮ್ಮ ವಿದ್ಯಾಭ್ಯಾಸದ ಕುರಿತು ಅಚ್ಚರಿ ಪಡಬಹುದು. ಆಲಸ್ಯದಿಂದ ನಿಮಗೆ ಅವಕಾಶಗಳು ಸಿಗದಾದೀತು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿಯನ್ನು ಹೊಂದುವರು. ಸಂಗಾತಿಯನ್ನು ಪ್ರೀತಿಸುವಿರಿ.

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?