ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಹುಣ್ಣಿಮೆ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ 05:21 ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:07ರ ವರೆಗೆ, ಗುಳಿಕ ಕಾಲ ಬೆಳಗ್ಗೆ 03:44 ರಿಂದ 05:21ರ ವರೆಗೆ.
ಮೇಷ: ನೀವು ನಿಮ್ಮ ಘನತೆಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ. ಸಮಯಕ್ಕೆ ಸರಿಯಾಗಿ ನಿಮಗೆ ಅವಶ್ಯಕತೆ ಇರುವುದು ಬಂದು ಒದಗಬಹುದು. ಏಕಾಂತದಿಂದ ನಿಮಗೆ ನೆಮ್ಮದಿಯು ಸಿಗಬಹುದು. ಆಪ್ತರನ್ನು ನೀವು ಭೇಟಿಯಾಗಲಿದ್ದೀರಿ. ಗುಟ್ಟನ್ನು ಸಮಯ ನೋಡಿ ಹೇಳಿ. ನಿಮಗೆ ಗೊತ್ತಿಲ್ಲದೇ ಮೋಜಿನಲ್ಲಿ ಸೇರಿ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಬಾರದೇ ಇರುವುದರ ಬಗ್ಗೆ ಯೋಚಿಸದೇ ಸಿಕ್ಕಿದ್ದರ ಬಗ್ಗೆ ಖುಷಿ ಪಡಿ. ಧನಾಗಮನವು ಆಗಬಹುದು. ಬೇಕಾದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಿ.
ವೃಷಭ: ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಕುಟುಂಬದಲ್ಲಿ ವಾದಗಳು ಆಗಬಹುದು. ಉದ್ಯೋಗವನ್ನು ನೀವು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು. ಸಂಗಾತಿಯನ್ನು ನೀವು ದೂಷಿಸುವಿರಿ. ಜೀವನೋಪಾಯಕ್ಕೆ ಯಾವುದಾದರೊಂದು ವೃತ್ತಿಯನ್ನು ಆಶ್ರಯಿಸುವುದು ಉತ್ತಮ. ವಿವಾದಗಳು ಶಾಂತವಾಗಿವಂತೆ ನೋಡಿಕೊಳ್ಳಿ. ಇಲ್ಲವಾದರೆ ಅದರ ಪರಿಣಾಮವು ಭಯಂಕರವಾದೀತು. ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ಸಂಪರ್ಕ ಮಾಡಿಯಾರು. ಎಚ್ಚರವಾಗಿರಿ.
ಮಿಥುನ: ನಿಮ್ಮ ಪ್ರಯಾಣವನ್ನು ಮುಂದೂಡಿ. ಸ್ನೇಹಿತರಿಂದ ನೀವು ದೂರವಿರುವ ಯೋಚನೆ ಮಾಡುವಿರಿ. ನಿಮಗೆ ಬೆಂಬಲವನ್ನು ಕುಟುಂಬದವರು ಕೊಡುವರು. ವ್ಯವಹಾರವನ್ನು ಶುದ್ಧವಾಗಿ ಮಾಡುವುದು ನಿಮಗೆ ಬಹಳ ಪ್ರಿಯವಾದ ಸಂಗತಿಯಾಗಲಿದೆ. ನಿಮ್ಮ ವ್ಯವಹಾರವನ್ನು ಪ್ರಶಂಸಿಸುವರು. ಅನಗತ್ಯ ಓಡಾಟದಿಂದ ನೀವು ಸಿಟ್ಟಗೊಳ್ಳಬಹುದು. ಯಾರೋ ಮಾಡಿದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾದೀತು. ಸ್ತ್ರೀಯರ ಜೊತೆ ಅತಿಯಾದ ಸಲುಗೆ ಬೇಡ. ನಿಮ್ಮ ಕಾಯುವಿಕೆಗೆ ಹೆಚ್ಚು ಫಲವು ಸಿಗಲಿದೆ.
ಕರ್ಕ: ಎಲ್ಲರೊಂದಿಗೆ ಬೆರೆಯುವ ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋದೀತು. ನಿಮ್ಮ ಕೆಲಸವನ್ನು ನೀವೇ ಮಾಡಲು ಇಷ್ಟಪಡುವಿರಿ. ನೇರವಾದ ಮಾತು ಕೆಲವರಿಗೆ ಅಸಹ್ಯವಾದೀತು. ನಿಮ್ಮ ನುಡಿಗಳ ಮೇಲೆ ನಿಗಾ ಇರಲಿ. ಅಪರೂಪದ ಬಂಧುಗಳನ್ನು ಭೇಟಿಯಾಗುವಿರಿ. ಇದು ಸಂತೋಷವನ್ನು ನಿಮಗೂ ಅವರಿಗೂ ಕೊಡುವುದು. ಕೋಪವನ್ನು ಕಳೆದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುವುದು ಉತ್ತಮ. ಆಧಿಕೃತವಾಗಿ ನಿಮ್ಮದನ್ನು ಇಟ್ಟುಕೊಳ್ಳಿ. ಇಲ್ಲವಾದರೆ ಅಧಿಕಾರವು ಬೇರೆಯದಾದೀತು. ನಿಮ್ಮನ್ನು ಕೆಲವರ ಮಾತು ಕೆರಳಿಸೀತು. ತಾಳ್ಮೆ ಬೇಕಾದೀತು.