Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜೂನ್ 4ರಿಂದ 10ರ ತನಕ ವಾರಭವಿಷ್ಯ

ಜೂನ್ 4ರಿಂದ 10ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜೂನ್ 4ರಿಂದ 10ರ ತನಕ ವಾರಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Digi Tech Desk

Updated on:Jun 06, 2023 | 12:52 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜೂನ್ 4ರಿಂದ 10ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಸ್ತುಗಳ ನಷ್ಟ, ಮುಖ್ಯವಾದ ಕಾಗದ ಪತ್ರಗಳನ್ನು ಒಮದೆಡೆ ಇಟ್ಟು, ಇನ್ನೊಂದು ಕಡೆ ಹುಡುಕಿ ಆತಂಕಗೊಳ್ಳುವುದು, ಇನ್ನೇನು ಕೆಲಸ ಮುಗಿದು, ಹಣ ಬಂದು ಬಿಡುತ್ತದೆ ಅಂದುಕೊಂಡಿದ್ದು ಬಾರದೇ ಇರುವುದು ಈ ರೀತಿಯಲ್ಲಿ ನಾನಾ ಬಗೆಯಲ್ಲಿ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಇಷ್ಟು ಸಮಯ ನಿಮ್ಮಲ್ಲಿ ಆತ್ಮವಿಶ್ವಾಸ ಇದ್ದಲ್ಲಿ ಅದು ಕರಗುತ್ತಾ ಸಾಗುತ್ತದೆ. ನೀವು ಅಂದುಕೊಂಡಂತೆ ಬೆಳವಣಿಗೆಗಳು ನಡೆಯದೆ ನಿಮ್ಮ ನಿರ್ಧಾರಗನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ ಎಂಬಂತಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವಂಥವರು ಜಮೀನಿನಲ್ಲಿ ಹಾಕಿರುವ ವಿದ್ಯುತ್ ಲೈನ್ ಸರಿಯಾಗಿ ಕೆಲಸ ಮಾಡುತ್ತಿದೆಯಾ ಎಂಬುದನ್ನು ಗಮನಿಸಿಕೊಳ್ಳಿ. ಒಂದು ವೇಳೆ ಗಾಳಿ- ಮಳೆಗೆ ಸಿಲುಕಿ ದುರ್ಬಲವಾಗಿರುವಂಥ ತಂತಿ, ವೈಯರ್ ಗಳು ಇದ್ದಲ್ಲಿ ಅವುಗಳನ್ನು ಬದಲಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಇಲ್ಲದಿದ್ದಲ್ಲಿ ಶಾರ್ಟ್ ಸರ್ಕೀಟ್ ಆಗಿ ಭಾರೀ ನಷ್ಟ ಆಗಬಹುದು, ಅಗ್ನಿ ಅವಘಡಗಳು ಸಂಭವಿಸಬಹುದು. ಇನ್ನು ವೃತ್ತಿನಿರತರಿಗೆ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ನಡೆಸುತ್ತಿದ್ದಲ್ಲಿ ಬಹಳ ಆಪ್ತರ ಜತೆಗೆ ಮನಸ್ತಾಪಗಳು ಆಗುತ್ತವೆ. ಮುಖ್ಯವಾಗಿ ಭೂ ವ್ಯಾಜ್ಯಗಳು ಎದುರಾಗುತ್ತವೆ. ನಿಮಗೇನೋ ಕಷ್ಟ ಅಂತಲೋ ಅಥವಾ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಬೇಕೋ ಅಂತಲೋ ಭೂ ಮಾರಾಟಕ್ಕೆ ಪ್ರಯತ್ನಿಸಿದಲ್ಲಿ ಅದರಲ್ಲಿ ನಾನಾ ಎಡರು ತೊಡರುಗಳನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಸಹಪಾಠಿಗಳಿಂದಲೇ ಅವಮಾನಗಳು ಎದುರಾಗಲಿವೆ. ಮಹಿಳೆಯರು ತಮ್ಮದೇ ಹೆಸರಿನಲ್ಲಿ ಉಳಿತಾಯ, ಹೂಡಿಕೆಗಳನ್ನು ಶುರು ಮಾಡುವುದಕ್ಕೆ ಆಲೋಚಿಸಲಿದ್ದಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮಲ್ಲಿ ಕೆಲವರು ಈಗಾಗಲೇ ಸ್ವಂತ ಮನೆಯನ್ನು ಕಟ್ಟಿಸಿಯಾಗಿದೆ, ಇಂಟಿರೀಯರ್ ಡೆಕೊರೇಷನ್ ಮಾಡಿಸಬೇಕು ಅಂತಿದ್ದೀನಿ ಎನ್ನುವವರು, ಮನೆಯ ನವೀಕರಣ, ದುರಸ್ತಿ ಮಾಡಬೇಕು ಎಂದಿರುವವರು, ಇನ್ನು ಸೌಂದರ್ಯ ವರ್ಧಕ ಚಿಕಿತ್ಸೆಗಳನ್ನು ಪಡೆಯಬೇಕು ಎಂದಿರುವವರು, ತೂಕ ಕಡಿಮೆ ಮಾಡಿಕೊಳ್ಳಬೇಕು, ಅದಕ್ಕೋಸ್ಕರ ಕೆಲವು ಚಿಕಿತ್ಸೆ ಪಡೆಯಬೇಕು ಎಂದಿರುವವರು ಒಂದಕ್ಕೆ ಹತ್ತು ಬಾರಿ ಆಲೋಚನೆಯನ್ನು ಮಾಡಿ. ಇದಕ್ಕಾಗಿ ಕೈ ಹಾಕಿದ ಮೇಲೆ ನಿಮ್ಮ ಅಂದಾಜು ಮೀರಿದ ಖರ್ಚು ಬರಲಿದೆ. ಅಥವಾ ಆರಂಭದಲ್ಲಿ ಒಂದು ಮೊತ್ತವನ್ನು ಹೇಳಿ, ಆ ನಂತರ ಬೇರೆ ಹೇಳುವಂಥ ಸಾಧ್ಯತೆಗಳಿವೆ. ಕೃಷಿಕರು ಮಾರುಕಟ್ಟೆಗೆ ತೆರಳುವಾಗ ಅಥವಾ ಬ್ಯಾಂಕ್ ಅಥವಾ ಮತ್ತಿತರ ವ್ಯವಹಾರಗಳನ್ನು ಮಾಡುವಾಗ ಹಣಕಾಸು ಕಡೆಗೆ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯವನ್ನು ವಹಿಸಬೇಕಾಗುತ್ತದೆ. ಇತರರನ್ನು ನಂಬಿ, ಬೆಲೆ ಬಾಳುವ ವಸ್ತುಗಳನ್ನು ನೀಡಬೇಡಿ. ವೃತ್ತಿನಿರತರಿಗೆ ವೈಯಕ್ತಿಕ ಬದುಕು ಆದ್ಯತೆ ಪಡೆದುಕೊಳ್ಳುತ್ತದೆ. ಮಕ್ಕಳ ಶಿಕ್ಷಣದ ವಿಚಾರಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಇದರಲ್ಲಿ ಹೆಸರು, ಕೀರ್ತಿಯನ್ನು ಪಡೆಯುವ ಯೋಗ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ನಿಮ್ಮ ಕೆಲಸದಲ್ಲಿ ಯಾರು ರೇಟಿಂಗ್ ನೀಡಬೇಕೋ ಅಥವಾ ಬಡ್ತಿ ಇತ್ಯಾದಿಗಳನ್ನು ನಿರ್ಧಾರ ಮಾಡಬೇಕೋ ಅಂಥವರ ಜತೆಗೆ ಮಾತುಕತೆ ಆಡುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ನಿಮಗೆ ಈ ಬಾರಿ ಏನೇ ಕೊಟ್ಟರೂ ಕೊಡದಿದ್ದರೂ ನಷ್ಟವೇ. ಕೊಟ್ಟರೆ ಒಂದು ರೀತಿಯಲ್ಲಿ ಸಮಸ್ಯೆ, ಕೊಡದಿದ್ದರೆ ಇನ್ನೊಂದು ರೀತಿಯಲ್ಲಿ ಸಮಸ್ಯೆ ನಿಶ್ಚಿತ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮಗೆ ಹಲವು ಬಗೆಯಲ್ಲಿ ಲಾಭ ದೊರೆಯುವಂತಹ ಸಾಧ್ಯತೆಗಳನ್ನು ಸೂಚಿಸುತ್ತಿದೆ. ಇಷ್ಟು ಸಮಯ ನೀವು ಪಟ್ಟ ಶ್ರಮಕ್ಕೆ ಫಲಿತಾಂಶ ದೊರೆಯುವುದಕ್ಕೆ ಶುರು ಆಗುತ್ತದೆ. ನಿಮ್ಮದೇ ವೃತ್ತಿಯಲ್ಲಿ ಇರುವಂಥವರು ಪ್ರತಿಭೆಯನ್ನು ಮೆಚ್ಚಿಕೊಳ್ಳಲಿದ್ದಾರೆ. ತಾಂತ್ರಿಕ ಜ್ಞಾನವನ್ನು ಇತರರು ಬೆರಗಿನಿಂದ ನೋಡುವಂತಾಗುತ್ತದೆ. ಉದ್ಯೋಗದ ನಿಮಿತ್ತವಾಗಿ ಕೆಲ ಕಾಲ ದೂರ ಪ್ರದೇಶಗಳಿಗೆ ತೆರಳುವಂತೆ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಆರಂಭದಲ್ಲಿಯೇ ಹೇಳಿದಂತೆ ಸ್ಥಾನ ಲಾಭ, ಧನ ಲಾಭ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳಿವೆ. ಕೃಷಿಕರಿಗೆ ಭೂಮಿ ಅಥವಾ ಜಾನುವಾರು ಖರೀದಿ ಮಾಡುವಂತೆ ಕೆಲವರು ಕೇಳಿಕೊಳ್ಳಬಹುದು. ಅನಿರೀಕ್ಷಿತವಾಗಿ ಹಣಕಾಸಿನ ಅನುಕೂಲ ಒದಗಿಬಂದು, ಖರೀದಿ ಮಾಡಿಯೂ ಬಿಡುವಂಥ ಯೋಗಗಳಿವೆ. ಆಹಾರ ಪಥ್ಯದ ವಿಚಾರದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ, ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೃತ್ತಿನಿರತರಿಗೆ ಸಂಗಾತಿಗೆ ಬರುವ ಅನುಕೂಲದ ಬಹುಪಾಲು ಪ್ರಯೋಜನ ನಿಮಗೇ ಆಗಲಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಸ್ಥಾನ- ಮಾನಗಳು ಈಗಾಗದಲೇ ಇದ್ದಲ್ಲಿ ಪದೋನ್ನತಿ ಆಗಬಹುದು. ಕಂಪನಿಗಳಲ್ಲಿ ಷೇರು, ಲಾಭದ ಪಾಲು ಇತ್ಯಾದಿ ದೊರೆಯುವಂತಾಗುತ್ತದೆ. ಈ ಹಿಂದೆ ನೀವು ಆರಂಭಿಸಿದ್ದ ವ್ಯವಹಾರ, ಮಾಡಿದ್ದ ಹೂಡಿಕೆ, ಪಟ್ಟ ಶ್ರಮ ಫಲ ನೀಡುವುದಕ್ಕೆ ಆರಂಭಿಸುತ್ತದೆ. ವಿದೇಶ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಇದೆ. ಮಹಿಳೆಯರಿಗೆ ಅನಿರೀಕ್ಷಿತವಾಗಿ ಆದಾಯದ ಮೂಲಗಳಲ್ಲಿ ಜಾಸ್ತಿ ಆಗಲಿದೆ. ಈ ಅವಧಿಯಲ್ಲಿ ಸಾಂಸಾರಿಕವಾಗಿಯೂ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಈ ಕಾರಣಕ್ಕೆ ಇತರ ಕೆಲಸಗಳನ್ನು ಹೆಚ್ಚು ಆಸಕ್ತಿ, ಪರಿಣಾಮಕಾರಿಯಾಗಿ ಮಾಡಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಸ್ವಾತಂತ್ರ್ಯವನ್ನು ಇತರರು ಕಸಿಯುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ. ನಿಮ್ಮಲ್ಲಿ ಕೆಲವರು ಕೆಲಸ ಬಿಟ್ಟು ಸ್ವಂತ ಉದ್ಯಮ, ವ್ಯವಹಾರ ಮಾಡುವ ಕುರಿತಾಗಿ ಗಂಭೀರ ಚಿಂತನೆಯನ್ನು ನಡೆಸಲಿದ್ದೀರಿ. ಇಷ್ಟು ದೂರಕ್ಕೆ ಆಲೋಚನೆ ಹೋಗುವುದಕ್ಕೆ ಕಾರಣ ಆಗುವ ಅಂಶ ಏನೆಂದರೆ, ನಿಮಗೆ ಉದ್ಯೋಗ ಸ್ಥಳದಲ್ಲಿ ಹೆಸರು ಬಂದು ಹಾಗೂ ಅದೇ ವೇಳೆ ಆಪಾದನೆ ಎರಡನ್ನೂ ಅನುಭವಿಸಬೇಕಾಗುತ್ತದೆ. ನಿಮಗೆ ಆಪ್ತರಾದವರು ದೂರವಾಗುವಂಥ ಯೋಗ ಇದೆ. ಕೃಷಿಕರಾದವರಿಗೆ ಪ್ರಯಾಣಗಳನ್ನು ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾದ ದಾಖಲೆ- ಪತ್ರಗಳು, ಮೊಬೈಲ್- ಗ್ಯಾಜೆಟ್ ಗಳು, ಲಗ್ಗೇಜ್ ಕಳೆದುಕೊಂಡು ನಷ್ಟವನ್ನು ಅನುಭವಿಸುತ್ತೀರಿ. ನಿಮಗೆ ಕೆಲಸ ಮಾಡಿಕೊಡುತ್ತೇನೆಂದು ಭರವಸೆ ನೀಡಿದವರು ಅಥವಾ ಈಗಾಗಲೇ ಹಣವನ್ನು ಪಡೆದುಕೊಂಡವರು ಕೊನೆ ಕ್ಷಣದಲ್ಲಿ ಕೆಲಸ ಮಾಡಿಕೊಡುವುದಕ್ಕೆ ಆಗುವುದಿಲ್ಲ ಎಂದುಬಿಡುವ ಸಾಧ್ಯತೆಗಳಿವೆ. ವೃತ್ತಿನಿರತರಾಗಿದ್ದು, ಯಾವುದಾದರೂ ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸುತ್ತಾ ಸರ್ಕಾರಿ ಕೆಲಸಗಳನ್ನು ಮಾಡುವವರು ಕೊನೆ ದಿನಾಂಕದ ತನಕ ಕಾಯದೆ ಮುಂಚಿತವಾಗಿಯೇ ಕೆಲಸ ಮುಗಿಸಿ. ಇಲ್ಲದಿದ್ದಲ್ಲಿ ದಂಡವನ್ನು ಪಾವತಿಸಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಜತೆಗೆ ನೀವು ಬೇಜವಾಬ್ದಾರರು ಎಂಬ ಹಣೆಪಟ್ಟಿ ಅಂಟಿಸುತ್ತಾರೆ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಜಾಸ್ತಿ ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿದಲ್ಲಿ ಉತ್ತಮ. ಈ ಸಂದರ್ಭದಲ್ಲಿ ನಾನಾ ಬಗೆಯಲ್ಲಿ ಸಮಯ ವ್ಯರ್ಥ ಆಗುವಂಥ ಘಟನೆಗಳು ನಡೆಯುತ್ತವೆ. ಆ ಕಡೆಗೆ ಲಕ್ಷ್ಯ ನೀಡಿ. ಇನ್ನು ಮಹಿಳೆಯರು ಹೊಸದಾಗಿ ಕೆಲಸ ಹುಡುಕುತ್ತಿರುವವರಾಗಿದ್ದಲ್ಲಿ ಅಥವಾ ಇರುವ ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರು ಗುರುವಾರದಂದು ಸಾಯಿಬಾಬ ಮಂದಿರಕ್ಕೆ ತೆರಳಿ ದರ್ಶನ ಪಡೆದುಕೊಳ್ಳಿ. ಆ ನಂತರ ನಿಮ್ಮ ಪ್ರಯತ್ನವನ್ನು ಮುಂದುವರಿಸಿರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ವಾರದಲ್ಲಿ ನಿಮಗೆ ಅದೃಷ್ಟದ ಬಲ ಇರುತ್ತದೆ. ಒಂದು ವೇಳೆ ಇಂಟರ್ ವ್ಯೂಗಳನ್ನು ಈಗಾಗಲೇ ನೀಡಿ ಆಗಿದೆ ಎಂದಾದಲ್ಲಿ ಶುಭ ಸುದ್ದಿ ಕೇಳಿಸಿಕೊಳ್ಳುವಂಥ ಯೋಗ ಇದೆ. ಜತೆಗೆ ವೇತನ ಹಾಗೂ ಮತ್ತಿತರ ಸವಲತ್ತುಗಳು ದೊರೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಸಮಾಜದಲ್ಲಿ ಗೌರವ, ಮನ್ನಣೆ ಹಾಗೂ ಸನ್ಮಾನಗಳು ದೊರೆಯಲಿವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರಿಂದ ನಿಮಗೆ ಈ ವಾರದಲ್ಲಿ ಅಗತ್ಯ ಇರುವಾಗ ಸಹಾಯ ದೊರೆಯಲಿದೆ. ನೀವು ಪಡುವ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ಕೃಷಿಕರಿಗೆ ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಅದು ಬಗೆಹರಿಸಿಕೊಳ್ಳುವ ಮಾರ್ಗ ದೊರೆಯುತ್ತದೆ. ಕೋರ್ಟ್- ಕಚೇರಿಯಲ್ಲಿನ ವ್ಯಾಜ್ಯಗಳು ಸಂಧಾನದ ಮೂಲಕವಾಗಿ, ಮಾತುಕತೆಯ ಮೂಲಕವಾಗಿ ನಿಮಗೆ ಸಾಧಕವಾಗುವಂತೆ ಮುಗಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಹೌಸಿಂಗ್ ಸೊಸೈಟಿಗಳಲ್ಲಿ, ಸರ್ಕಾರದ ಮೂಲಕವಾಗಿ ಮನೆ- ಸೈಟು ವಿತರಣೆಗಾಗಿ ಅರ್ಜಿ ಹಾಕಿಕೊಂಡು, ಕಾಯುತ್ತಿದ್ದಲ್ಲಿ ಅದು ವಿತರಣೆ ಆಗುವ ಅವಕಾಶ ಇದೆ. ವೃತ್ತಿನಿರತರು ಸ್ವಂತ ಕಚೇರಿಗೆ ತೆರಳುವಂಥ ಅವಕಾಶಗಳಿವೆ. ನಿರಂತರವಾಗಿ ಆದಾಯ ತರುವಂಥ ಕ್ಲೈಂಟ್ ಗಳು ದೊರೆಯಲಿದ್ದಾರೆ. ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಹಾಗೂ ಜತೆಗೆ ಉದ್ಯೋಗ ಮಾಡಬೇಕು ಎಂದು ಪ್ರಯತ್ನಗಳು ಮಾಡುತ್ತಿದ್ದು, ಅಡೆತಡೆಗಳು ಎದುರಾಗಿದ್ದಲ್ಲಿ ಅವುಗಳು ನಿವಾರಣೆ ಆಗುತ್ತವೆ. ಮಹಿಳೆಯರು ಷೇರು- ಮ್ಯೂಚುವಲ್ ಫಂಡ್ ಗಳು ಅಥವಾ ಇನ್ಯಾವುದಾದರೂ ಹೂಡಿಕೆ ಮಾಡಿದ್ದಲ್ಲಿ, ಅವುಗಳು ಈಗ ಲಾಭ ತಂದುಕೊಡಲಿವೆ. ಸಂತಾನ ಅಪೇಕ್ಷಿತರು ಈ ಅವಧಿಯಲ್ಲಿ ಶುಭ ಸುದ್ದಿಯನ್ನು ನಿರೀಕ್ಷೆ ಮಾಡಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ವಾರದಲ್ಲಿ ನೀವು ಕೈ ಹಾಕುವ ಕೆಲಸಗಳಲ್ಲಿ ನಾನಾ ವಿಘ್ನಗಳು ಎದುರಾಗುತ್ತವೆ. ಯಾರ ಜತೆಗೆ ವ್ಯವಹಾರ ಅಥವಾ ಕೆಲಸ ಮಾಡಬಾರದು ಎಂದುಕೊಂಡಿದ್ದಿರೋ ಅವರ ಜತೆಗೇ ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದಾಗಿ ನಿಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕೆಲವು ಆತುರದ ತೀರ್ಮಾನದಿಂದ ಹಣವನ್ನು ಕಳೆದುಕೊಳ್ಳಲಿದ್ದೀರಿ. ಈ ವಾರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊಸ ವ್ಯವಹಾರಗಳನ್ನು ಶುರು ಮಾಡಿದ್ದಲ್ಲಿ ಆಗಬೇಕಾದ ಅಥವಾ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ. ಆದ್ದರಿಂದ ಲೆಕ್ಕಾಚಾರ ಹಾಗೂ ಬಜೆಟ್ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಕೃಷಿಕರು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸರ್ಕಾರದ ಮಟ್ಟದಲ್ಲಿ ನಿಮ್ಮ ಕೆಲಸಗಳು ಆಗಬೇಕಾಗಿದ್ದಲ್ಲಿ ಅದು ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಸ್ಥಾನ- ಮಾನಗಳು ಸಹ ದೊರೆಯುವಂಥ ಸಾಧ್ಯತೆಗಳಿವೆ. ಸಂಗಾತಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಹೆಚ್ಚಿನ ಅನುಕೂಲಕಗಳು ಒದಗಿಬರಲಿವೆ. ವೃತ್ತಿನಿರತರಿಗೆ ತಾಂತ್ರಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅಥವಾ ವಿವಿಧ ಬಗೆಯಲ್ಲಿ ನಿಮ್ಮ ಸೇವೆಯನ್ನು ಅಪ್ ಗ್ರೇಡ್ ಮಾಡುವ ನಿಟ್ಟಿನಲ್ಲಿ ಹಣವನ್ನು ಹೂಡಿಕೆ ಮಾಡುವಂಥ ಯೋಗ ಇದೆ. ಹೊಸದಾಗಿ ಶಾಖೆಗಳನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದಕ್ಕೆ ಸೂಕ್ತ ಬೆಂಬಲ ಕೂಡ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾರೀ ಉತ್ತೇಜನ ದೊರೆಯಲಿದೆ. ಯುವತಿಯರು ಅಥವಾ ಉದ್ಯೋಗಸ್ಥ ಮಹಿಳೆರ ಮೇಲೆ ಕೆಲವು ಆರೋಪಗಳನ್ನು ಹೊರೆಸುವಂಥ ಸಾಧ್ಯತೆ ಇದೆ. ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ವಾರ ದಂಪತಿ ಮಧ್ಯೆ ಇರುವಂಥ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬಹಳ ಒಳ್ಳೆ ಸಮಯ. ಒಂದು ವೇಳೆ ಪ್ರೇಮಿಗಳಾಗಿದ್ದು, ಇದಕ್ಕಿಂತ ಮುಂಚೆ ಮನಸ್ತಾಪಗಳು, ಅಭಿಪ್ರಾಯ ಭೇದಗಳು ಮೂಡಿ ದೂರವಾಗಿದ್ದಲ್ಲಿ ಈ ವಾರ ಒಗ್ಗೂಡುವಂಥ, ಸಂತೋಷವಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಇನ್ನು ಯಾರು ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅಂಥವರಿಗೆ ಆದಾಯದಲ್ಲಿ ಸ್ಥಿರತೆ ಕಂಡುಬರಲಿದೆ. ಕೃಷಿಕರಿಗೆ ಯಾವುದೇ ವಿಚಾರಗಳಲ್ಲಿ ಒಮ್ಮತ ಈ ತನಕ ಆಗಿಲ್ಲ ಎಂದಾದರೆ ಈಗ ಮೂಡಿಬರಲಿದೆ. ಜಮೀನು- ಮನೆಯಲ್ಲಿನ ಪಾಲು ವಿಚಾರಕ್ಕೆ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಸುವಂಥ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಸೋದರ ಸಂಬಂಧಿಗಳು ನಿಮ್ಮಿಂದ ನೆರವು ಕೇಳಿಕೊಂಡು ಬರಲಿದ್ದಾರೆ. ಒಂದು ವೇಳೆ ವೃತ್ತಿನಿರತರಾಗಿದ್ದು, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೂಡಿ ಒಂದು ವ್ಯವಹಾರಕ್ಕೆ ಅಂತ ಕೈ ಹಾಕಿದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ. ಇನ್ನು ವೃತ್ತಿಯಲ್ಲಿ ಇರುವಂಥ ಅವಿವಾಹಿತರಿಗೆ ಅದೇ ವೃತ್ತಿಯಲ್ಲಿ ಇರುವಂಥ ವಧು/ವರರ ಸೂಕ್ತವಾದ ವಿವಾಹ ಸಂಬಂಧಗಳು ದೊರೆಯುವಂಥ ಅವಕಾಶಗಳಿವೆ. ಹೊಸ ವಾಹನಗಳ ಖರೀದಿ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳ ಜತೆಗೆ ಸ್ನೇಹಿತರ ಜತೆಗೆ ಉತ್ತಮ ಸಮಯವನ್ನು ಕಳೆಯುವಂಥ ಯೋಗ ಇದೆ. ಪ್ರವಾಸಕ್ಕೆ ತೆರಳಲಿದ್ದೀರಿ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳಿ. ಚೂಪಾದ ವಸ್ತುಗಳ ಬಳಸುವಾಗ ಜಾಗ್ರತೆ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ವಾರ ಉದ್ಯೋಗ ಸ್ಥಳದಲ್ಲಿ ವಿರೋಧಿಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಆರೋಗ್ಯ ಸಮಸ್ಯೆಗಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೈನಂದಿನ ದಿನಚರಿ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹೊಸ ಉದ್ಯೋಗಾವಕಾಶಗಳು, ಬಡ್ತಿಗಳು ಅಥವಾ ಮಾಡುವ ಕೆಲಸದಲ್ಲಿ ಹಾಕುವ ಪ್ರಯತ್ನಗಳಿಗೆ ನಿರೀಕ್ಷಿತವಾದ ಫಲಿತಾಂಶ ದೊರೆಯುವುದು ಕಷ್ಟ. ಕೃಷಿಕರು ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳುವ ಕಡೆಗೆ ನಿಗಾ ಕೊಡಬೇಕು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಬಾಕಿ ಬರಬೇಕಾದ ಹಣ ಇದ್ದಲ್ಲಿ ಅದು ಬರುವಂಥ ಅವಕಾಶಗಳಿವೆ. ಆದರೆ ಅದಕ್ಕಾಗಿ ಬಲವಾದ ಪ್ರಯತ್ನ ಹಾಕಬೇಕು. ವೃತ್ತಿನಿರತರಿಗೆ ತಮ್ಮ ಜತೆಗೆ ಕೆಲಸ ಮಾಡುವವರ ಜತೆಗೆ ಘರ್ಷಣೆಗಳು ಏರ್ಪಡುವ ಸಾಧ್ಯತೆ ಇದೆ ಹೀಗಾಗದಂತೆ ಎಚ್ಚರಿಕೆಯನ್ನು ವಹಿಸುವುದು ಮುಖ್ಯ. ವ್ಯವಹಾರ ವಿಸ್ತರಣೆಗಾಗಿ ಪ್ರಯತ್ನ ಮಾಡುವುದಿದ್ದಲ್ಲಿ ಸಾಲ ಪಡೆಯುವುದು, ಸಾಲ ನೀಡುವುದು ಎರಡರಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳು ಎಜುಕೇಶನ್ ಲೋನ್ ಗಾಗಿ ಬ್ಯಾಂಕ್ ಗಳಲ್ಲಿ ಪ್ರಯತ್ನ ಪಡುತ್ತಿದ್ದಲ್ಲಿ ಅದರಲ್ಲಿ ಯಶ ಕಾಣಲಿದ್ದೀರಿ. ಉನ್ನತ ಹುದ್ದೆಯಲ್ಲಿ ಇರುವಂಥವರು ನಿಮ್ಮ ನೆರವಿಗೆ ಬರಲಿದ್ದಾರೆ. ಮಹಿಳೆಯರು ರಾಜಕಾರಣದಲ್ಲಿ ಇರುವಂಥವರಾಗಿದ್ದರೆ ಸ್ಥಾನ- ಮಾನಗಳು ಹೆಚ್ಚಾಗಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗಲಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈ ವಾರ ಫಲ ದೊರೆಯಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅನುಕೂಲಕರ ವಾತಾವರಣ ಸೃಷ್ಟಿ ಆಗಲಿದೆ. ನಿಮ್ಮ ಕ್ರಿಯೇಟಿವ್ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶಗಳಿವೆ ಮತ್ತು ಈ ಹಿಂದಿಗಿಂತಲೂ ಈಗ ಆತ್ಮವಿಶ್ವಾಸ, ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ನಿಮ್ಮ ಪ್ರತಿಭೆ ಮತ್ತು ಕೌಶಲವನ್ನು ಪ್ರದರ್ಶಿಸುವುದಕ್ಕೆ ವೇದಿಕೆಗಳು ದೊರೆಯಲಿವೆ. ಇಷ್ಟು ಸಮಯ ಹವ್ಯಾಸವಾಗಿ ಇರುವಂಥದ್ದು ಈಗ ಆದಾಯ ತರುವಂಥದ್ದಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ. ಕೃಷಿಕರಾಗಿದ್ದಲ್ಲಿ ಹಳೆಯ ವೈಫಲ್ಯಗಳನ್ನು ಮರೆತು, ಮುಂದಕ್ಕೆ ಹೆಜ್ಜೆ ಇಡುವ ಕಡೆಗೆ ಗಮನವನ್ನು ನೀಡಿ. ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಆದ್ದರಿಂದ ಕೈಗೆತ್ತಿಕೊಳ್ಳುವ ಯೋಜನೆಗಳು, ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಿದ್ದೀರಿ. ಮಕ್ಕಳ ಏಳ್ಗೆಯಿಂದ ಸಮಾಧಾನ ದೊರೆಯಲಿದೆ. ಕೃಷಿಕ ವೃತ್ತಿಯಲ್ಲಿದ್ದು, ವಿವಾಹಕ್ಕೆ ಮಾತುಕತೆಗಳು ನಡೆಯುತ್ತಿದೆ ಎಂದಾದಲ್ಲಿ ಪ್ರೀತಿ- ಪ್ರೇಮ ಸಂಗತಿಗಳಲ್ಲಿ ಸಂತೋಷವಿದೆ. ಮನೆಯಲ್ಲಿ ಈ ವಿಚಾರ ಪ್ರಸ್ತಾವ ಮಾಡಿದಲ್ಲಿ ಅಂದುಕೊಂಡಂತೆ ಉತ್ತಮ ಬೆಳವಣಿಗೆಗಳು ಆಗಲಿವೆ. ವೃತ್ತಿ ನಿರತರಿಗೆ ದೂರ ಪ್ರಯಾಣ ಮಾಡುವಂಥ ಯೋಗಗಳಿವೆ. ಬಹಳ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಕೆಲಸಗಳನ್ನು ಮಾಡುವುದಕ್ಕೆ ಉತ್ತಮವಾದ ಸಮಯ ಇದು. ನಿಮ್ಮ ಮಾತಲ್ಲಿ ಇತರರಿಗೆ ನಂಬಿಕೆ ಮೂಡಲಿದೆ. ಹೂಡಿಕೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದೊರೆಯುವಂಥ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಮಾಡುವ ಸಾಧನೆಯಿಂದಾಗಿ ಹಲವರ ಮೆಚ್ಚುಗೆ ಗಳಿಸಲಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮಹಿಳೆಯರಿಗೆ ವಸ್ತ್ರಾಭರಣಗಳನ್ನು ಖರೀದಿಸುವಂಥ ಯೋಗ ಇದೆ. ತವರು ಮನೆಯಲ್ಲಿನ ಶುಭ ಕಾರ್ಯಗಳಲ್ಲಿ ಭಾಗೀ ಆಗಲಿದ್ದೀರಿ.

ಲೇಖನ- ಎನ್.ಕೆ. ಸ್ವಾತಿ

Published On - 1:02 am, Sun, 4 June 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ