AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 3) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
| Updated By: Digi Tech Desk|

Updated on:Jun 05, 2023 | 10:29 AM

Share

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ.

ಮೇಷ: ನಿಮಗೆ ಬೇಕಾದವರು ಇಂದು ನಿಮ್ಮಿಂದ ದೂರವಾಗಬಹುದು.‌ ಸಹೋದರರು ನಿಮ್ಮ ಮಾತನ್ನು ಮೀರಿ ವರ್ತಿಸುವರು. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ವ್ಯಾಪಾರದಿಂದ ನಿಮಗೆ ಸ್ವಲ್ಪ ನಷ್ಟವಾಗಿ ಅನಂತರ ಸ್ವಲ್ಪ ಲಾಭವಾಗಬಹುದು. ನಿಮ್ಮ ವಾಹನ ಚಲಾವಣೆಯಲ್ಲಿ ಜಾಗರೂಕತೆ ಇರಲಿ. ಸಂತೋಷದ ವಾತಾವರಣವು ಪ್ರಕ್ಷುಬ್ಧವಾಗಬಹುದು. ನಿಯಮಗಳನ್ನು ಪಾಲಿಸಲು ನಿಮಗೆ ಕಷ್ಟವಾದೀತು. ನಿದ್ರೆಯ ಕಷ್ಟವನ್ನು ನೀವು ಅನುಭವಿಸುವಿರಿ.‌ ಅನಾರೋಗ್ಯದಿಂದ ಸ್ವಲ್ಪ ಆರಾಮೆನಿಸಬಹುದು.

ವೃಷಭ: ಬದುಕಿನ ಬಂಡಿಯು ನಿಧಾನವಾಗಿ ಸಾಗುವಂತೆ ಕಾಣುತ್ತದೆ. ವಿವಾದಗಳು ಸುಮ್ಮನೇ ಸಮಯವನ್ನು ವ್ಯರ್ಥ ಮಾಡುವುವು. ಕಷ್ಟಗಳಿಗೆ ಮೈಯೊಡ್ಡುವ ನಿಮ್ಮ ಸ್ವಭಾವಕ್ಕೆ ಇಂದಿನ ಕಷ್ಟವು ಯಾವ ಲೆಕ್ಕದ್ದೂ ಆಗಿರದು. ಆಧಿಕಾರದ ಮಾತ್ರ ನಿಮ್ಮ ವರ್ತನೆಯನ್ನು ಬದಲಿಸಬೇಕೆಂದಿಲ್ಲ. ನಗು ಮೊಗವು ನಿಮಗೆ ಭೂಷಣವಾದೀತು. ಏಕಾಂತವನ್ನು ನೀವು ಇಷ್ಟಪಡುವಿರಿ. ವಾದಿಸಿದ ಮಾತ್ರಕ್ಕೆ ಸುಳ್ಳು ಸತ್ಯವಾಗದು. ಇನ್ನೊಬ್ಬರ ಕೋಪವನ್ನು ನಿವಾರಿಸುವ ಕಲೆ ನಿಮಗೆ ಗೊತ್ತಿದೆ. ನಿಮ್ಮವರು ನಿಮಗೆ ಇಂದು ಬೇಕಾದ ಸಹಾಯವನ್ನು ಮಾಡುವರು.

ಮಿಥುನ: ಅಕಾರಣವಾಗಿ ನೀವು ಉತ್ಸಾಹವನ್ನು ಕಳೆದುಕೊಳ್ಳುವುದು ಸರಿಯಲ್ಲ. ಉನ್ನತ ಅಧಿಕಾರಿಗಳ ಸಹಾಯವನ್ನು ನೀವು ಅನಿವಾರ್ಯವಾಗಿ ಕೇಳಬೇಕಾದೀತು. ಕಾರ್ಯದಲ್ಲಿ ಒತ್ತಡವಿಲ್ಲದಿದ್ದರೂ ಕೆಲಸವು ನಿಧಾನವಾದೀತು. ಯಂತ್ರದಂತೆ ಬದುಕುವುದು ನಿಮಗೆ ಸಾಕೆನಿಸಿ ಸ್ವಲ್ಪ ಹೊರಗೆ ಸುತ್ತುವ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ‌ವಾದ ನಂಬಿಕೆಯನ್ನು ನೀವು ಬಿಡುವುದಿಲ್ಲ. ದೈವಾನುಕೂಲಕ್ಕೆ ನಿಮ್ಮ ಪ್ರಯತ್ನವೂ ಇರಲಿ. ಸಿಕ್ಕಿದ್ದನ್ನು ಅನುಭವಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ. ದ್ವೇಷವನ್ನು ಬೆಳೆಸಿಕೊಳ್ಳುವುದು ಅವಾಸ್ತವವೆನಿಸಬಹುದು ನಿಮಗೆ.

ಕರ್ಕ: ಇಂದು ನೀವು ಬಹಳ ದಿನಗಳಿಂದ ವಾಸವಾಗಿದ್ದ ಮನೆಯನ್ನು ಬದಲಾಯಿಸುವ ಯೋಚನೆ ಮಾಡುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ನೀವು ನಿರಾಕರಿಸುವಿರಿ.‌ ಪ್ರೇಮ ವ್ಯವಹಾರವನ್ನು ಮನೆಯವರಲ್ಲಿ ಹೇಳಲು ನೀವು ಹಿಂದೇಟು ಹಾಕುವಿರಿ. ನಿಮಗೆ ಬೇಕಾಗಿರುವವರಿಗೆ ನೀವು ನಿಮ್ಮ ವಸ್ತುವನ್ನು ಕೊಡುವಿರಿ. ನಿಮ್ಮ ಸಹಾಯವನ್ನು ಮರೆತಿರುವವರ ಮೇಲೆ ಬೇರಗೊಳ್ಳುವಿರಿ. ಸಂಗಾತಿಯ ನಡುವೆ ಹಣದ ವಿಚಾರಕ್ಕೆ ಕಲಹವಾಗಬಹುದು. ನಿಮ್ಮ ಪ್ರತ್ಯುತ್ತರವು ನಿಮಗೆ ಇನ್ನಷ್ಟು ಕೋಪವನ್ನು ತರಿಸಬಹುದು. ದುರಾಲೋಚನೆಯಿಂದ‌ ಮನಸ್ಸು ಕುಗ್ಗಲಿದೆ. ನಿಮ್ಮ ಆಸೆಗಳನ್ನು ನೀವು ಇಂದು ನಿಯಂತ್ರಣದಲ್ಲಿ ಇರಿಸಿಕೊಳ್ಳಿ.

Published On - 12:10 am, Sat, 3 June 23

ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ