Daily Horoscope: ಈ ರಾಶಿಯವರಿಗೆ ಮಕ್ಕಳ ವಿವಾಹನದ ಚಿಂತೆ ಕಾಡಬಹುದು

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರಿಗೆ ಮಕ್ಕಳ ವಿವಾಹನದ ಚಿಂತೆ ಕಾಡಬಹುದು
ಪ್ರಾತಿನಿಧಿಕ ಚಿತ್ರImage Credit source: istock
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 04, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 04 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ:ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಐಂದ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:50 ರಿಂದ 05:27 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 ರಿಂದ 10:59 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:14 ರ ವರೆಗೆ.

ಮೇಷ: ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ‌ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರಪಡಬೇಕಾದೀತು. ಧಾರ್ಮಿಕ ಸ್ಥಳಗಳಿಗೆ ಹೋಗುವ ಹುನ್ನಾರ ನಡೆಸುವಿರಿ. ತಾಯಿಯ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಾಯಿಯ ಕಡೆಯವರು ನಿಮಗೆ ಸಹಾಯ ಮಾಡುವರು. ಸುಖದಲ್ಲಿ‌ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ.‌ ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ.

ವೃಷಭ: ಇಂದು ಜೀವನವು ತಿರುವನ್ನು ಪಡೆದುಕೊಳ್ಳಲಿದೆ. ಹೊಸ ವ್ಯಕ್ತಿಗಳು, ವಿಚಾರಗಳು ನಿಮಗೆ ಗೊತ್ತಾಗಬಹುದು. ಬಾಂಧವ್ಯವು ಗಟ್ಟಿಯಾಗಬಹುದು. ಸಂಗಾತಿಯಿಂದ ಉತ್ತಮ‌ ಸಲಹೆಯನ್ನು ಪಡೆಯುವಿರಿ. ನಿಮ್ಮ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಕಾನೂನಿನ ಸಮರದಲ್ಲಿ ನಿಮಗೆ ಜಯವಾಗಬಹುದು. ಒತ್ತಡದಿಂದ ಹೊರಬಂದ ಕಾರಣ ನಿರಾಳವೆನಿಸಬಹುದು. ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಮಿಥುನ: ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡಲಿದೆ. ಹಿರಿಯರನ್ನು ಗೌರವಿಸುವಿರಿ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವಿರಿ. ನಿಮ್ಮವರ ಬಳಿ ಸಹಾಯವನ್ನು ಕೇಳುವಿರಿ. ಇಂದು ನಿದ್ರೆಯು ಬಾರದೇ ಮನಸ್ಸು ಸರಿ ಇರದು. ಅನವಶ್ಯಕ ಮಾತುಗಳಿಂದ ವಿವಾದವು ಸೃಷ್ಟಿಯಾಗುವುದು. ಎಲ್ಲ ಕೆಲಸವನ್ನು ನೀವೇ ಮಾಡಲಾಗದು. ಹಂಚಿಕೊಂಡು ಕೆಲಸವನ್ನು ಮಾಡಿ ಮುಗಿಸಿ. ಹೊಸ ಸ್ಥಾನವು ನಿಮಗೆ ಸಿಗಲಿದ್ದು ನಿರ್ವಹಣೆಯನ್ನು ಮಾಡಲು ಕಷ್ಟವಾದೀತು. ಸಹೋದರನಿಂದ ಸಹಕಾರವು ನಿಮಗೆ ಸಿಗಬಹುದು. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ.

ಕಟಕ: ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ. ನಿಮ್ಮ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ತಿಂದರೆ ಇಲ್ಲ. ಸರಿಯಾಗಿರಲಿ. ಮೋಸ ಹೋಗಬೇಕಾದೀತು. ನಿಮಗೆ ಇಂದು ನಿಮ್ಮ ಸಹೋದ್ಯೋಗಿಗಳ ವರ್ತನೆಯಲ್ಲಿ ಅನುಮಾನ ಕಾಣಬಹುದು. ಅವರಿಂದ ದೂರವಿರುವುದು ಉತ್ತಮ. ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಶಂಸೆ ಸಿಗಲಿದೆ. ಅನಿರೀಕ್ಷಿತ ವಿಚಾರಕ್ಕೆ ನೀವು ಗಟ್ಟಿಯಾದ ಮನಸ್ಸನ್ನು ಮಾಡುವಿರಿ. ಹಣಕ್ಕಾಗಿ ತಲೆ ಕೆಡಸಿಕೊಳ್ಳುವುದಿಲ್ಲ.‌ ಬೇಕಾಗಿದ್ದನ್ನು ಪಡೆಯುವಿರಿ. ಸೇವಾ ಮನೋಭಾವವನ್ನು ಇಟ್ಟುಕೊಳ್ಳುವಿರಿ.

ಸಿಂಹ: ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು. ಉದ್ಯೋಗದಲ್ಲಿ ಅಸಹಾಯಕರಾಗಿ ಕೆಲಸವನ್ನು ಪೂರ್ಣಮಾಡುವಿರಿ‌. ಅವಕಾಶಗಳು ಪಡೆಯಲು ತಂತ್ರವನ್ನು ಹೂಡುವಿರಿ. ಮಾತಿನಲ್ಲಿ ಸತ್ಯತೆ ಇದ್ದರೂ ಸ್ಪಷ್ಟತೆ ಇರಲಿ. ಉದ್ಯೋಗದ ನಿಮಿತ್ತ ದೂರ ಹೋದವರಿಗೆ ತೊಂದರೆ ಆಗಬಹುದು. ಇಂದು ನಿಮ್ಮ ಅರಿವಿನ ಹಂತವು ನಿಮಗೆ ಗೊತ್ತಾಗುವುದು. ನಿಮ್ಮ ವರ್ತನೆಯನ್ನು ಕಂಡು ಗುಂಪಿನಿಂದ ಹೊರಗಿಡಲು ಯತ್ನಿಸುವರು. ಇಂದು ನಿಮಗೆ ಸಿಕ್ಕಿದ್ದರಲ್ಲಿ ಸಂತೋಷಿಸಿ. ಭೋಜನದ ಸಮಯವು ವ್ಯತ್ಯಾಸವಾಗಬಹುದು. ಅಧಿಕಾರಿಗಳ ಕರುಣೆಯ ಕಾರಣ ಆಪತ್ತಿನಿಂದ ಹೊರಬರುವಿರಿ.

ಕನ್ಯಾ: ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳು ಲಭ್ಯವಾಗುವುದು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಬಹುದು. ನಿಮ್ಮ ಇಂದಿನ ಕಾರ್ಯಕ್ಕೆ ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಅವಶ್ಯಕ. ಭವಿಷ್ಯದ ಕಲ್ಪನೆಯನ್ನು ಕುಟುಂಬದವರ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನವು ದೂರವಾಗಲು ಕಾರಣವಾಗಬಹುದು. ನಿಮ್ಮ ಹೇಳಿಕೆಗಳು ಸ್ಪಷ್ಟವಾಗಿರಲಿ. ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಪಶ್ಚಾತ್ತಾಪ ಪಡುವುದು ಬೇಡ. ಮಕ್ಕಳ ವಿವಾಹಕ್ಕಾಗಿ ಓಡಾಡುವಿರಿ. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸಿರಿ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ