Daily Horoscope: ಅತಿಯಾದ ನಿರೀಕ್ಷೆ ನೋವಿಗೆ ಕಾರಣವಾಗಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2023 | 12:10 AM

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಅತಿಯಾದ ನಿರೀಕ್ಷೆ ನೋವಿಗೆ ಕಾರಣವಾಗಬಹುದು
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 14 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶೂಲ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:28 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:49 ರಿಂದ 09:25ರ ವರೆಗೆ.

ಮೇಷ: ಸಹೋದ್ಯೋಗಿಗಳ ಜೊತೆ ಸಾಮರಸ್ಯದ ಕೊರತೆ ಇರಲಿದೆ. ನಿಮ್ಮ ಕೆಲಸವನ್ನು ಬೇರೆಯವರು ಅಲ್ಪ ಕಾಲದಲ್ಲಿ ಮುಗಿಸಿ ನಿಮಗೆ ಅಪಮಾನವಾಗುವಂತೆ ಮಾಡುವರು. ಹಣವನ್ನು ಸಂಪಾದಿಸುವ ಭರದಲ್ಲಿ ನಿಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗಲಿದ್ದು ಕೆಲವು ಸಮಯವನ್ನು ಅವರ ಜೊತೆ ಕಳೆಯುವಿರಿ. ನಿಮ್ಮ ಬದುಕನ್ನು ಇನ್ನೊಬ್ಬರ ಬಳಿ ಹೇಳುವಿರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ್ದನ್ನು ಮಾಡಲು ಹೋಗಿ‌ ಮುಖಭಂಗವಾಗಬಹುದು. ಸ್ತ್ರೀಯರಿಂದ ಸಂತೋಷವನ್ನು ಪಡೆಯುವಿರಿ.

ವೃಷಭ: ಇಂದು ನಿಮ್ಮ‌ ಪ್ರಮುಖವಾದ ಅಂಶಗಳು ದೂರವಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬಹಬಹುದು. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಅಸಫಲರಾಗುವಿರಿ. ನಿಮ್ಮವರ ಮಾತು ನಿಮಗೆ ಅಸಮಾಧಾನವನ್ನು ತರಿಸಬಹುದು. ಕಂಡಿದ್ದನ್ನು ಹೇಳಿ ಕೆಂಗಣ್ಣಿಗೆ ಗುರಿಯಾಗಬಹುದು. ಸಮಾಜಸೇವೆ ನಿಮಗೆ ಸಾಕೆನಿಸಬಹುದು. ಸೋಲಿನಲ್ಲಿ ಸುಖವನ್ನು ಕಾಣುವಿರಿ. ಕೆಲವರ ಮಾತು ನಿಮ್ಮ ಉತ್ಸಾಹವನ್ನು ಕಡಿತ ಮಾಡೀತು. ಸಮ್ಮಾನದ ಅಪೇಕ್ಷೆ ಇರಲಿದೆ.

ಮಿಥುನ: ಗೌಪ್ಯತೆಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡುವಿರಿ. ಸುಗ್ರಾಸಭೋಜನವು ನಿಮಗೆ ಸಿಗಲಿದೆ. ನಿಮ್ಮ ಸಾಧನೆಯನ್ನು ಇನ್ನೊಬ್ಬರು ಹೇಳುವರು. ಸಹಜ ಸೌಂದರ್ಯಕ್ಕೆ ನೀವು ಮಾರುಹೋಗಬಹುದು. ಮನೆಯ ನಿರ್ಮಾಣಕ್ಕೆ ಮಕ್ಕಳಿಂದ ಹಣವನ್ನು ಪಡೆಯುವಿರಿ. ನಿಮ್ಮ ಆಲೋಚನೆಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ಕಲಾಸಕ್ತಿಯು ಮೂಡಬಹುದು. ಲೋಭಕ್ಕೆ ಸಿಕ್ಕಿ ನೀವು ಇಂದು ಅತೃಪ್ತರಂತೆ ಇರುವಿರಿ. ಕಾರ್ಯದಲ್ಲಿ ಮಗ್ನರಾಗಿ ಎಲ್ಲ ಕೆಲಸಗಳನ್ನು ಮುಗಿಸುವಿರಿ. ಸಹೋದ್ಯೋಗಿಗಳ ಜೊತೆ ಮಾಡುವ ತಮಾಷೆಯು ಜಗಳವಾಗಿ ಪರ್ಯವಸಾನ ಹೊಂದಬಹುದು.

ಕರ್ಕ: ವಿದೇಶೀ ವಿನಿಮಯವನ್ನು ನೀವು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಅಜ್ಞಾನದ ಪ್ರದರ್ಶನ ನೀವೇ ಮಾಡಿಕೊಳ್ಳುವಿರಿ. ಸಾಮರಸ್ಯದ ಜೊತೆ ಜೀವಿಸಲು ಇಷ್ಟಪಡುವಿರಿ. ತಮ್ಮವರು ಎನ್ನುವ ಮಮಕಾರವು ಹೆಚ್ಚಾಗಲಿದೆ. ನೀವು ಇಂದು ಯಾರ ಜೊತೆಯೂ ಸೇರಿಕೊಳ್ಳಲು ಇಷ್ಟಪಡುವುದಿಲ್ಲ. ತಪ್ಪನ್ನು ಇನ್ನೊಬ್ಬರಿಂದ ಕೇಳಿ ನೀವು ಸಿಟ್ಟಾಗುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಬರುವಂತೆ ಮಾತನಾಡುವಿರಿ. ಸಂಗಾತಿಯ ಮಾತನ್ನು ಸ್ವೀಕರಿಸುವ ಮನೋಭಾವವನ್ನು ಇಟ್ಟಕೊಳ್ಳುವುದು ಉತ್ತಮ. ಹರಟೆಯಲ್ಲಿ ಸಮಯವನ್ನು ಕಳೆಯುವಿರಿ. ಉದ್ವೇಗವು ನಿಮ್ಮ ನಿಯಂತ್ರಣವನ್ನು ತಪ್ಪಿಸಬಹುದು.

ಸಿಂಹ: ಉದ್ಯೋಗದ ಬದಲಾವಣೆಗೆ ಮನೆಯಿಂದಲೇ ಒತ್ತಡವು ಇರಲಿದೆ. ಬೇಡವೆಂದರೂ ಅಸಂಬದ್ಧ ಆಲೋಚನೆಗಳು ಬರಬಹುದು. ಶ್ರಮಕ್ಕೆ ಸ್ವಲ್ಪ ಫಲವು ಸಿಗಬಹುದು. ಕೆಲಸದಲ್ಲಿ ಆಸಕ್ತಿಯು ಕುಂದಬಹುದು. ನಿಮ್ಮ ಕಾರ್ಯಕ್ಕೆ ವಿರೋಧವು ಇರಲಿದೆ. ಹಳೆಯ ಪ್ರೇಯಸಿಯನ್ನು ಕಂಡು ಸಂಕಟಪಟ್ಟುಕೊಳ್ಳುವಿರಿ. ಉಸಿರಾಟ ತೊಂದರೆ ಬರಬಹುದು. ಭೋಜನವನ್ನು ಸಕಾಲಕ್ಕೆ ಮಾಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಮಾತುಗಳು ಸಂದರ್ಭಕ್ಕೆ ತಕ್ಕಂತೆ ಇರಲಿ. ಸಾಹಿತ್ಯಾಸಕ್ತರಿಗೆ ಸ್ವಲ್ಪ ಬಿಡುವು ಸಿಗಬಹುದು. ನಿಮಗೆ ಹಿಡಿಸದ ವಿಚಾರದ ಬಗ್ಗೆ ಮೌನವಹಿಸುವಿರಿ.

ಕನ್ಯಾ: ಕೆಟ್ಟವರ ಸಹವಾಸವು ಸಿಗಬಹುದು. ಸಮಯವನ್ನು ವ್ಯರ್ಥಮಾಡಿಕೊಂಡು ನೀವು ದುಃಖಿಸಬಹುದು.‌ ನಿಮ್ಮ‌ ಸಹಜತೆಯು ಅಸಹಜತೆಯಂತೆ ಕಾಣಲಿದೆ. ಗುತ್ತಿಗೆ ಕೆಲಸಗಳು ನಿಮಗೆ ಸಾಕೆನಿಸಬಹುದು. ಇಂದು ಅವ್ಯಕ್ತ ಭಯವು ನಿಮ್ಮನ್ನು ಕಾಡಬಹುದು. ಕೃಷಿಕರಿಗೆ ಆದಾಯದ ಮೂಲವು ಗೊತ್ತಾಗಬಹುದು. ಭೂಮಿಯ ಸ್ವಲ್ಪ ಭಾಗವನ್ನು ನಿರ್ಲಕ್ಷ್ಯದಿಂದ ಕಳೆದುಕೊಳ್ಳುವಿರಿ. ಬಂಧುವರ್ಗದಿಂದ ನೀವು ಧನಸಹಾಯವನ್ನು ಅಪೇಕ್ಷಿಸುವಿರಿ. ಅಂದುಕೊಂಡ ಕೆಲಸವು ಆಗದೇ ನಿಮಗೆ ಹತಾಶೆ ಆಗಬಹುದು. ಶ್ರೀಮಂತರ ಸ್ನೇಹವು ಲಭಿಸುವುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸುವಿರಿ.