AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ದಿನ ಭವಿಷ್ಯ
ರಾಶಿಭವಿಷ್ಯ
ವಿವೇಕ ಬಿರಾದಾರ
|

Updated on: Mar 27, 2023 | 6:00 AM

Share

ಸೋಮವಾರ ಶುಭದಿನ. ಬಿಲ್ವಪತ್ರಿ ಪ್ರಿಯ ಶಂಭೋ ಶಂಕರನ ದಿನವಾಗಿದ್ದು, ಶಿವನ ಆರಾಧನೆಗೆ ಬಹಳ ಯೋಗ್ಯವಾಗಿದೆ. ಓಂ ನಮಃ ಶಿವಾಯ ಎಂಬ ಮಂತ್ರವು ಬಹಳ ಶೇಷ್ಠವಾಗಿದೆ. ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ಸಿಂಹ: ಬಲವಂತದ ಪ್ರೇಮ ಎಲ್ಲಿಯವರೆಗೆ ಇದ್ದೀತು? ನಿಮಗಿಷ್ಟವಾದವರ ಜೊತೆ ನಿಮ್ಮ ಸಮಸ್ಯೆ ಹಾಗೂ ಸಂತೋಷವನ್ನು ಹಂಚಿಕೊಳ್ಳಿ. ಇಂದು ಬಾಯಿ ಚಪಲಕ್ಕೆ ಅಹಿತಕರಚಮವಾದ ಆಹಾರವನ್ನು ಸೇವಿಸುವಿರಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟಿಕೊಂಡಿದ್ದೀರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಮಗೆ ಹಳೆಯ ಘಟನೆಯೊಂದು ಪುನರಾವರ್ತಿತವಾಗಿ ಬಹಳ ಕಾಡಬಹುದು. ಆರೋಗ್ಯದ ಬಗ್ಗೆ ಗಮನಿರಲಿ. ಬೆಳಗ್ಗೆ ಸೂರ್ಯನಿಗೆ ನಮಸ್ಕರಿಸಿ.

ಕನ್ಯಾ: ಉದ್ಯೋಗದ ಸ್ಥಳದಲ್ಲಿ ಮಾತನಾಡುವಾಗ ಯೋಚಿಸಿ. ನಿಮ್ಮ ಮಾತುಗಳು ವೃತ್ತಿಗೆ ಕಂಟಕವನ್ನು ತರಬಹುದು. ಮಹತ್ತ್ವಪೂರ್ಣಗ್ರಂಥವನ್ನು ರಚಿಸಲು ಇಂದು ಮುಂದಾಗಬಹುದು‌. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ಉದ್ಯೋಗವನ್ನು ಬದಲಿಸುವ ನಿರೀಕ್ಷೆಯಲ್ಲಿರುವಿರಿ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ಆಹಾರದ ವ್ಯತ್ಯಾಸದಿಂದ ರೋಗಗಳು ಬರಬಹುದು. ಸಮಯವನ್ನು ದುರುಪಯೋಗ ಮಾಡಿಕೊಳ್ಳಿದ್ದೀರಿ.

ತುಲಾ: ಹಲವಾರು ದಿನಗಳಿಂದ ವಾಹನ ಖರೀದಯ ಆಸೆಯನ್ನು ಇಟ್ಟುಕೊಂಡವರಾಗಿದ್ದೀರಿ. ನಿಮ್ಮ ಆಸೆಯು ಪೂರ್ಣಗೊಳ್ಳವು ಸಾಧ್ಯತೆ ಇದೆ. ವಿನಾಕಾರಣ ವಾಗ್ವಾದಗಳು ನಡೆಯಬಹುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ಭೂಮಿಗೆ ಸಂಬಂಧಿಸಿದಂತೆ ಸಣ್ಣ ಕಲಹಗಳು ಆಗಬಹುದು. ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡುವಿರಿ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ.

ವೃಶ್ಚಿಕ: ನೀವಿಂದು ಹೊಸ ಉದ್ಯೋಗವನ್ನು ಅರಸುತ್ತ ಇದ್ದರೆ ನಿಮ್ಮ ಪಾಲಿಗೆ ಉತ್ತಮ ಉದ್ಯೋಗವು ಸಿಗಲಿದೆ. ಅಥವಾ ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ಇನ್ನೊಬ್ಬರಿಂದ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ವಿನಾಕಾರಣ ಸಂತೋಷವಾಗಿ ಇರುವಿರಿ. ಕೆಲಸವು ನಿಧಾನವಾದುದರಿಂದ ನಿಮಗೆ ನಿರಾಸೆಯಾಗಬಹುದು. ವಿನಾಕಾರಣ ಮನೆಯವರನ್ನು ದೂರುತ್ತ ಕುಳಿತುಕೊಳ್ಳಬೇಡಿ. ನಿಮ್ಮ ಕರ್ತವ್ಯವೇನು ಎಂಬುದು ನೀವೇ ನೆನಪಿಗೆ ತಂದುಕೊಂಡು ಮಾಡಿ. ಕುಕ್ಕೆ ಸುಬ್ರಹ್ಮಣ್ಯನನ್ನು ಪಾರ್ಥಿಸಿ.

-ಲೋಹಿತಶರ್ಮಾ ಇಡುವಾಣಿ